ವಿಷಯಕ್ಕೆ ಹೋಗು

ಗದುಗಿನ ಭಾರತ ಪದಕೋಶ -ವ,

ವಿಕಿಸೋರ್ಸ್ದಿಂದ

<ಗದುಗಿನ ಭಾರತ ಪದಕೋಶ

  • 1. ವಂಕ, ಭಾಗ, ಗದಾ ಪರ್ವ,4,18, ,
  • 2. ವಂಕಿ, ಮೀನು ಹಿಡಿಯುವ ಗಾಳ, ಆದಿ ಪರ್ವ,8,76
  • 3. ವಂಗಡ, ಬೇರೆÀ, ಶಲ್ಯ ಪರ್ವ,3,51
  • 4. ವಂಗಡ, ಪಕ್ಷ, ದ್ರೋಣ ಪರ್ವ,15,31
  • 5. ವಂಗಡ, ಗುಂಪು., ಶಲ್ಯ ಪರ್ವ,3,7
  • 6. ವಂಗರ ಮುರಿದು, ವಂಗರನ್ನು ಸೋಲಿಸಿ, ಸಭಾ ಪರ್ವ,3,27
  • 7. ವಂಚಿಸು, ಮೋಸಗೊಳಿಸು, ಗದಾ ಪರ್ವ,6,21
  • 8. ವಂದಿ, ಸ್ತುತಿಪಾಠಕ, ಆದಿ ಪರ್ವ,7,17
  • 9. ವಂದಿ, ಸ್ತುತಿಪಾಠಕರು, ಆದಿ ಪರ್ವ,15,29
  • 10. ವಂದಿ, ಹೊಗಳುಭಟ್ಟರು (ಈ ಪದಗಳ ವಿವರಣೆಗೆ ಇದೇ ಪರ್ವದ 8ನೆಯ ಸಂಧಿಯ 42ನೆಂi, ಗದಾ ಪರ್ವ,9,41
  • 11. ವಂದಿಜನ ಜಲಧಿ, ಹೊಗಳುಭಟ್ಟರೆಂಬ ಸಮುದ್ರದಷ್ಟು ದೊಡ್ಡ ಸಂಖ್ಯೆಯ ಜನ, ಶಲ್ಯ ಪರ್ವ,3,30
  • 12. ವಂದ್ಯ, ಗೌರವಾರ್ಹನಾದ, ಆದಿ ಪರ್ವ,18,22
  • 13. ವಕ್ತ, ವಾಗ್ಮಿ, ಉದ್ಯೋಗ ಪರ್ವ,4,45
  • 14. ವಕ್ತ್ರ್, ಬಾಯಿ, ಉದ್ಯೋಗ ಪರ್ವ,3,13
  • 15. ವಕ್ಷಸ್ಥಳ, ಎದೆಯ ಪ್ರದೇಶ, ಉದ್ಯೋಗ ಪರ್ವ,4,62
  • 16. ವಚನವಿನ್ಯಾಸ, ಮಾತಿನ ರಚನೆ, ಆದಿ ಪರ್ವ,17,14
  • 17. ವಚನವಿರಾಗ, ಮಾತಿನ ವೈರಾಗ್ಯ, ಗದಾ ಪರ್ವ,8,62
  • 18. ವಚನಾನುರಾಗ, ಪ್ರೀತಿಯ ಮಾತುಗಳು, ಆದಿ ಪರ್ವ,6,33
  • 19. ವಚೋನಿಧಿ, ಸತ್ಯವಾದಿ, ದ್ರೋಣ ಪರ್ವ,18,62
  • 20. ವಚೋವಿನ್ಯಾಸ, ಮಾತಿನಧಾಟಿ , ಗದಾ ಪರ್ವ,11,52, ,
  • 21. ವಚೋವಿಸ್ತರ, ವಿವರವಾಗಿ ಹೇಳುವಿಕೆ, ಆದಿ ಪರ್ವ,18,23
  • 22. ವಜ್ರಕವಚ, ಭೇದಿಸಲಾಗದ ಕವಚ, ಗದಾ ಪರ್ವ,5,52
  • 23. ವಜ್ರದ ಜೋಡು, ವಜ್ರಕವಚ., ಭೀಷ್ಮ ಪರ್ವ,7,19
  • 24. ವಜ್ರಪಂಜರ, ಸರ್ವತೋಭದ್ರ ರಕ್ಷಣೆ, ಭೀಷ್ಮ ಪರ್ವ,1,53
  • 25. ವಜ್ರಭಿತ್ತಿಗಳ, ವಜ್ರಖಚಿತವಾದ ಗೋಡೆಗಳ, ಸಭಾ ಪರ್ವ,5,29
  • 26. ವಜ್ರಾಂಗಿ, ವಜ್ರ ಕವಚ, ಕರ್ಣ ಪರ್ವ,16,4
  • 27. ವಜ್ರಾಂಗಿ, ವಜ್ರದಷ್ಟು ಕಠಿಣವಾದ ಲೋಹದ ಕವಚ, ಗದಾ ಪರ್ವ,5,41
  • 28. ವಜ್ರಾಂಗಿ, ಅಭೇದ್ಯ ಕವಚ., ಭೀಷ್ಮ ಪರ್ವ,9,40
  • 29. ವಜ್ರಾಯತ, ವಜ್ರಕಠಿಣವಾದ, ಗದಾ ಪರ್ವ,11,39
  • 30. ವಜ್ರಾಯುಧ, ಇಂದ್ರ, ದ್ರೋಣ ಪರ್ವ,5,24
  • 31. ವಜ್ರಿಸುತ, ವಜ್ರಾಯಧಧಾರಿ ಇಂದ್ರನ ಮಗ ಅರ್ಜುನ, ಭೀಷ್ಮ ಪರ್ವ,3,25
  • 32. ವಟ, ಆಲ, ಆದಿ ಪರ್ವ,20,48
  • 33. ವಟಕುಜ, ವಟವೃಕ್ಷ, ವಿರಾಟ ಪರ್ವ,1,2
  • 34. ವಟಪತ್ರ, ಆಲದ ಮರ, ಅರಣ್ಯ ಪರ್ವ,14,26
  • 35. ವಟ್ಟಿ, ಪಟ್ಟಿ, ಗದಾ ಪರ್ವ,7,22
  • 36. ವಡಬ, ಪ್ರಳಯಕಾಲದಲ್ಲಿ ಸಮುದ್ರದಲ್ಲಿ ಉದ್ಭವಿಸುವ ಕಿಚ್ಚು, ಗದಾ ಪರ್ವ,2,32
  • 37. ವಡಬ, ಬಡಬಾನಲ (ಸಮುದ್ರದ ಬೆಂಕಿ), ಭೀಷ್ಮ ಪರ್ವ,3,23
  • 38. ವಡಬಗೆ, ಬಡಬಾಗ್ನಿಗೆ, ದ್ರೋಣ ಪರ್ವ,6,19
  • 39. ವಡಬಾನಲ, ಪ್ರಳಯಕಾಲದ ಅಗ್ನಿ, ಗದಾ ಪರ್ವ,5,34
  • 40. ವಡಮುಖ, ಉತ್ತರ ದಿಕ್ಕಿನ ಕಡೆಗೆ ಮುಖ, ವಿರಾಟ ಪರ್ವ,8,49
  • 41. ವಡ್ಡಂತಿ, < ವರ್ಧಂತಿ ಹುಟ್ಟಿದ ಹಬ್ಬ, ವಿರಾಟ ಪರ್ವ,7,13
  • 42. ವಣಿಜ, ವಾಣಿಜ್ಯ, ಗದಾ ಪರ್ವ,11,16
  • 43. ವದನ, ಮೋರೆ/ಮುಖ, ಉದ್ಯೋಗ ಪರ್ವ,9,15
  • 44. ವದನಾಂಜಳಿಪುಟದ ತಾಡನ, ಎರಡೂ ಕೈಗಳಿಂದ ಹಣೆಯನ್ನು ಹೊಡೆz, ಗದಾ ಪರ್ವ,10,12
  • 45. ವದಾನ್ಯ, ದಾನಶೀಲ, ಸಭಾ ಪರ್ವ,1,29
  • 46. ವದಾನ್ಯಭಟ್ಟನು, ಮಾತುಗಾರ, ಸಭಾ ಪರ್ವ,8,24
  • 47. ವಧುಗಳು, ಹೆಂಡತಿಯರು, ಗದಾ ಪರ್ವ,12,10
  • 48. ವಧ್ಯರು, ಕೊಲೆಯಾಗಲು ಅರ್ಹರು, ಗದಾ ಪರ್ವ,5,6
  • 49. ವನಕಳಭ, ಕಾಡಿನಾನೆಮರಿ, ಭೀಷ್ಮ ಪರ್ವ,8,32
  • 50. ವನಗತಿಕ, ಅರಣ್ಯಕ್ಕೆ ಹೋಗುವ, ಗದಾ ಪರ್ವ,11,24
  • 51. ವನಜಮುಖಿ, ತಾವರೆಯ ಮುಖದವಳು, ವಿರಾಟ ಪರ್ವ,3,83
  • 52. ವನದಾವ, ಕಾಡುಕಿಚ್ಚು, ಉದ್ಯೋಗ ಪರ್ವ,8,52
  • 53. ವನವಳಯ, ಕಾಡಿನ ಪ್ರದೇಶ, ಸಭಾ ಪರ್ವ,1,63
  • 54. ವನವಾಸಾಯತ, ದೀರ್ಘವಾದ ಅರಣ್ಯವಾಸದ ಅವಧಿ, ವಿರಾಟ ಪರ್ವ,1,168
  • 55. ವನಸಂಕುಲ, ವನಸಮೂಹ, ಉದ್ಯೋಗ ಪರ್ವ,4,115
  • 56. ವನಸಿರಿ, ವನಲಕ್ಷ್ಮಿ, ಆದಿ ಪರ್ವ,20,50
  • 57. ವನಾಂತರ, ಅರಣ್ಯದ ನಡುವಿನ ಭಾಗ, ಆದಿ ಪರ್ವ,8,0
  • 58. ವನಾಲಯ, ಕಾಡಿನ ಮನೆ, ವಿರಾಟ ಪರ್ವ,1,225
  • 59. ವನಿತೆ, ಹೆಂಗಸು, ಆದಿ ಪರ್ವ,16,7
  • 60. ವರ, ಅಭೀಷ್ಟ, ಆದಿ ಪರ್ವ,2,4
  • 61. ವರಣ, ವರಿಸುವುದು, ವಿರಾಟ ಪರ್ವ,10,76
  • 62. ವರಮಹೀಸುರವರ್ಗ, ಶ್ರೇಷ್ಠ ಬ್ರಾಹ್ಮಣ ವರ್ಗ, ಭೀಷ್ಮ ಪರ್ವ,8,8
  • 63. ವರಲೆ, ಹೆಣ್ಣು ಹಂಸ ಪಕ್ಷಿ, ಆದಿ ಪರ್ವ,20,53
  • 64. ವರಾಂಗನೆ, ಶ್ರೇಷ್ಠಸ್ತ್ರೀ, ಆದಿ ಪರ್ವ,18,28
  • 65. ವರಾರ್ಧ ತನುಯುತೆ, ಅರ್ಧಶರೀರದಲ್ಲಿ ನೆಲೆ ನಿಂತವಳು, ವಿರಾಟ ಪರ್ವ,1,11
  • 66. ವರಾಸನ, ಶ್ರೇಷ್ಠವಾದ ಆಸನ, ಆದಿ ಪರ್ವ,14,26
  • 67. ವರಿಸು, ಅಪೇಕ್ಷಿಸು, ಆದಿ ಪರ್ವ,20,14
  • 68. ವರಿಸು, ಇಷ್ಟಪಡು, ಗದಾ ಪರ್ವ,5,48
  • 69. ವರುಣ, ಪಶ್ಚಿಮ ದಿಕ್ಕಿನ ಒಡೆಯ, ದ್ರೋಣ ಪರ್ವ,10,14
  • 70. ವರುಷತತಿ, ವರುಷಗಳ ಗುಂಪು, ವಿರಾಟ ಪರ್ವ,4,23
  • 71. ವರೂಥ, ರಥ. ತ್ರಿವೇಣುಕ, ಕರ್ಣ ಪರ್ವ,7,4
  • 72. ವರ್ಜಿಸು, ತ್ಯಜಿಸು, ಆದಿ ಪರ್ವ,8,43
  • 73. ವರ್ಜಿಸು, ತೊರೆ, ಉದ್ಯೋಗ ಪರ್ವ,4,47
  • 74. ವರ್ತಿಸಿತು, ನಡೆಯಿತು, ಗದಾ ಪರ್ವ,4,29
  • 75. ವರ್ಧನ, ಬೆಳಸು, ಆದಿ ಪರ್ವ,16,24
  • 76. ಮರ್ಮ, ರಹಸ್ಯ, ಅರಣ್ಯ ಪರ್ವ,2,26
  • 77. ವರ್ಷಾಕಾಲ, ಮಳೆಗಾಲ, ಆದಿ ಪರ್ವ,19,22
  • 78. ವಲಯ, ಬಳೆ, ಕರ್ಣ ಪರ್ವ,7,22
  • 79. ವಲಯ, ಅವರಣ, ಆದಿ ಪರ್ವ,12,4
  • 80. ವಲ್ಮೀಕ, ಹಾವಿನ ಹುತ್ತ, ಗದಾ ಪರ್ವ,5,28
  • 81. ವಲ್ಲಭ, ಗಂಡ, ಆದಿ ಪರ್ವ,9,16
  • 82. ವಲ್ಲಭರು, ಪತಿಗಳು, ವಿರಾಟ ಪರ್ವ,2,14
  • 83. ವಲ್ಲಭೆ, ಹೆಂಡತಿ, ಆದಿ ಪರ್ವ,9,24
  • 84. ವಶ್ಯ, ಆಕರ್ಷಿಸುವ, ಆದಿ ಪರ್ವ,13,2
  • 85. ವಸತಿ, ವಾಸಿಸುವಸ್ಥಳ , ಗದಾ ಪರ್ವ,5,24
  • 86. ವಸುಧಾಂಗನೆ, ಭೂಮಿಯೆಂಬ ಹೆಣ್ಣು (ಬೆಲೆವೆಣ್ಣು ಎಂದು ಭೂಮಿಯನ್ನು ಹೀಯಾಳಿಸುವ ಅರ್ಥದಲ್ಲಿ), ಗದಾ ಪರ್ವ,1,66
  • 87. ವಸುಧೆ, ಭೂಮಿ, ವಿರಾಟ ಪರ್ವ,10,67
  • 88. ವಸುಧೆ, ಭೂಮಿ/ನೆಲ, ಉದ್ಯೋಗ ಪರ್ವ,4,111
  • 89. ವಸುಮತೀವಧುಗೆ, ಭೂಮಿಯೆಂಬ (ರಾಜ್ಯವೆಂಬ) ಕನ್ಯೆಗೆ, ಸಭಾ ಪರ್ವ,1,27
  • 90. ವಸ್ತೂತ್ಕರ, ಪದಾರ್ಥಗಳ ರಾಶಿ, ಆದಿ ಪರ್ವ,10,18
  • 91. ವಸ್ತ್ರಾಕರುಷಣ, ಸೀರೆಯನ್ನು ಸೆಳೆಯುವಿಕೆ, ವಿರಾಟ ಪರ್ವ,3,5
  • 92. ವಹಿ, ಲೆಕ್ಕ, ಕರ್ಣ ಪರ್ವ,14,28
  • 93. ವಹಿಲ, ಶೀಘ್ರವಾಗಿ, ಗದಾ ಪರ್ವ,4,26
  • 94. ವಹಿಲದಲ್ಲಿ, ಅತಿವೇಗದಲ್ಲಿ, ಭೀಷ್ಮ ಪರ್ವ,9,44
  • 95. ವಹ್ನಿ ಸೂಕ್ತ, ಅಗ್ನಿ ಸ್ತೋತ್ರ, ಆದಿ ಪರ್ವ,20,66
  • 96. ವಹ್ನಿಯ, ಬೆಂಕಿಯ, ದ್ರೋಣ ಪರ್ವ,6,26
  • 97. ವಳಯ, ಸುತ್ತು, ದ್ರೋಣ ಪರ್ವ,9,21
  • 98. ವಳಯ, ವರ್ತುಲಾಕಾರ, ಆದಿ ಪರ್ವ,12,17
  • 99. ವಳಿತ, ಪ್ರದೇಶ, ವಿರಾಟ ಪರ್ವ,6,26
  • 100. ವಳಿತ, ಪ್ರದೇಶ, ಕರ್ಣ ಪರ್ವ,8,36
  • 101. ವಳಿತ, ವಲಿತ, ವಿರಾಟ ಪರ್ವ,1,4, ,
  • 102. ವಳಿತ, ಅಧಿಕಾರಕ್ಕೆ ಸೇರಿದ ಪ್ರದೇಶ, ಆದಿ ಪರ್ವ,19,2
  • 103. ವಾಂಛಿತ, ಬಯಸಿದ್ದು, ಭೀಷ್ಮ ಪರ್ವ,8,67
  • 104. ವಾಗ್ವನಿತೆ, ವಾಣಿ, ಆದಿ ಪರ್ವ,20,46
  • 105. ವಾಘೆ, ಲಗಾಮ, ಭೀಷ್ಮ ಪರ್ವ,4,96
  • 106. ವಾಘೆ, ಲಗಾಮು. ನೇಣು, ಗದಾ ಪರ್ವ,8,49
  • 107. ವಾಘೆ, ಕುದುರೆಯ ಲಗಾಮು, ಗದಾ ಪರ್ವ,2,13
  • 108. ವಾಚಾಟ, ಮಾತುಗಾರ, ಸಭಾ ಪರ್ವ,13,47
  • 109. ವಾಚಾಟ, ವಾಚಾಳಿ , ಗದಾ ಪರ್ವ,6,16
  • 110. ವಾಚಾಲಕ, ಮಾತಾಳಿ, ಆದಿ ಪರ್ವ,12,23
  • 111. ವಾಚಿಸದೆ, ಓದದೆ, ಉದ್ಯೋಗ ಪರ್ವ,4,98
  • 112. ವಾಚಿಸಿತು, ವಿವರಿಸಿ ಹೇಳಿತು, ಆದಿ ಪರ್ವ,11,15
  • 113. ವಾಜನಿಕ, ಯಜ್ಞಕ್ಕೆ ಸಂಬಂಧಿಸಿದ (ಕ, ಸಭಾ ಪರ್ವ,14,75
  • 114. ವಾಜಪೇಯಿ, ಒಂದು ಬಗೆಯ ಯಾಗ ಮಾಡಿದವನು, ಭೀಷ್ಮ ಪರ್ವ,4,6
  • 115. ವಾಜಿವ್ರಜ, ಕುದುರೆ ಹಿಂಡು, ಉದ್ಯೋಗ ಪರ್ವ,11,41
  • 116. ವಾಜಿವ್ರಜ, ಕುದುರೆಗಳ, ಶಲ್ಯ ಪರ್ವ,2,4
  • 117. ವಾಡಬ, ಬಡಬಾನಲ, ಭೀಷ್ಮ ಪರ್ವ,4,17
  • 118. ವಾಡಬಾನಲ, ಬಾಡಬಾಗ್ನಿ, ವಿರಾಟ ಪರ್ವ,8,4
  • 119. ವಾಣಿಜ್ಯ, ವ್ಯಾಪಾರ, ಗದಾ ಪರ್ವ,4,11
  • 120. ವಾಣಿಯ, ವ್ಯಾಪಾರ, ಸಭಾ ಪರ್ವ,15,37
  • 121. ವಾತಜ, ವಾಯುವಿನ ಪುತ್ರ, ಗದಾ ಪರ್ವ,5,53
  • 122. ವಾತಾಯನಿತ, ಬೆಳಕಿಂಡಿಗಳಿಂದ ಕೂಡಿದ., ದ್ರೋಣ ಪರ್ವ,12,22
  • 123. ವಾದೋತ್ತರ, ವಾದ ಮತ್ತು ಉತ್ತರ, ಗದಾ ಪರ್ವ,4,43
  • 124. ವಾದ್ಯವಿತಾನ, ವಾದ್ಯ ಸಮೂಹ, ವಿರಾಟ ಪರ್ವ,9,24
  • 125. ವಾನಾಯುಜ, (ವಾಯವ್ಯ ದಿಕ್ಕಿನಲ್ಲಿರುವ ವಾನಾಯ ದೇಶದಲ್ಲಿ ಹುಟ್ಟಿದ) ಕುದುರೆ., ಕರ್ಣ ಪರ್ವ,11,22
  • 126. ವಾಮದುಡಿಕೆ, ಎಡಭಾಗ ಅದುರುವುದು, ಸಭಾ ಪರ್ವ,13,2
  • 127. ವಾಮನ, ಕುಬ್ಜ, ಆದಿ ಪರ್ವ,12,21
  • 128. ವಾಮಪಾದ, ಎಡಗಾಲು., ಗದಾ ಪರ್ವ,9,28
  • 129. ವಾಮಭುಜಾಕ್ಷಿ, ಎಡಭುಜ ಮತ್ತು ಎಡಕಣ್ಣು, ಗದಾ ಪರ್ವ,8,6
  • 130. ವಾಮಲೋಚನೆ, ಸುಂದರವಾದ ಕಣ್ಣುಳ್ಳವಳು, ಆದಿ ಪರ್ವ,18,11
  • 131. ವಾಮಹಸ್ತ, ಎಡಗೈ, ಗದಾ ಪರ್ವ,7,32
  • 132. ವಾಮಾಂಕ, ಎಡಪಕ್ಕ, ಆದಿ ಪರ್ವ,17,11
  • 133. ವಾಮಾಂಗ, ಎಡಗಾಲು, ಗದಾ ಪರ್ವ,8,13
  • 134. ವಾಮಾಂಗ, ದೇಹದ ಎಡಭಾಗ, ಗದಾ ಪರ್ವ,7,9
  • 135. ವಾಯ, ನಿಷ್ಪ್ರಯೋಜನ, ಆದಿ ಪರ್ವ,6,42
  • 136. ವಾಯ, ಮೋಸ , ಗದಾ ಪರ್ವ,8,12
  • 137. ವಾಯ, ಮೋಸ, ದ್ರೋಣ ಪರ್ವ,19,37
  • 138. ವಾಯುಸುತ, ಭೀಮಸೇನ, ಆದಿ ಪರ್ವ,7,51
  • 139. ವಾರಕ, ಉಡುಗೊರೆ, ಅರಣ್ಯ ಪರ್ವ,17,28
  • 140. ವಾರಣದ ಮೋಹರ, ಆನೆ ಸೇನೆ, ಭೀಷ್ಮ ಪರ್ವ,4,74
  • 141. ವಾರಣಪ್ರತತಿ, ಆನೆಗಳ ಸಮೂಹ, ಆದಿ ಪರ್ವ,18,6
  • 142. ವಾರಣಾಖ್ಯಾನ, ವಾರಣಾಸಿಯೆಂಬ ಪ್ರಸಿದ್ಧ ಕ್ಷೇತ್ರ, ಗದಾ ಪರ್ವ,6,11
  • 143. ವಾರತೆ, ವಾರ್ತೆ , ಅರಣ್ಯ ಪರ್ವ,9,3
  • 144. ವಾರಸ್ತ್ರೀ, ವೇಶ್ಯೆ, ಆದಿ ಪರ್ವ,8,38
  • 145. ವಾರಿಜಾನನೆ, ತಾವರೆಯಂತೆ ಅರಳಿದ ಕಣ್ಣುಳ್ಳವಳು, ವಿರಾಟ ಪರ್ವ,3,96
  • 146. ವಾರಿಡುವ, ಪ್ರವಾಹವಾಗಿ ಹರಿಯುವ, ಭೀಷ್ಮ ಪರ್ವ,4,9
  • 147. ವಾರಿದತರು, ಮಳೆಮರ, ಭೀಷ್ಮ ಪರ್ವ,4,16
  • 148. ವಾರಿಧಿ, ಕಡಲು, ಉದ್ಯೋಗ ಪರ್ವ,8,71
  • 149. ವಾರುವ, ಕುದುರೆ., ಆದಿ ಪರ್ವ,18,6
  • 150. ವಾರುವದ ಮಂದಿರ, ಕುದುರೆÉ ಲಾಯ, ವಿರಾಟ ಪರ್ವ,5,43
  • 151. ವಾರ್ತೆ, ಸಮಾಚಾರ, ಆದಿ ಪರ್ವ,17,1
  • 152. ವಾರ್ಧಿಕ ರಚಿತ ನುಡಿಯನು, ದೀರ್ಘಕಾಲದ ಅನುಭವದ ಮಾತನ್ನು, ಭೀಷ್ಮ ಪರ್ವ,1,25
  • 153. ವಾರ್‍ಧುಷಿಕ, ವಾರ್ಧುಷಿಕ, ಉದ್ಯೋಗ ಪರ್ವ,4,48
  • 154. ವಾಲಧಿ, ಬಾಲ, ಗದಾ ಪರ್ವ,1,58
  • 155. ವಾಸನೆ, ಸಂಸ್ಕಾರ, ಕರ್ಣ ಪರ್ವ,17,22
  • 156. ವಾಸರ, ದಿನ, ಆದಿ ಪರ್ವ,11,19
  • 157. ವಾಸವಸುತ, ಇಂದ್ರನಮಗ, ಗದಾ ಪರ್ವ,11,42
  • 158. ವಾಸಿ, ಭಾಷೆ, ಆದಿ ಪರ್ವ,15,40
  • 159. ವಾಸಿ, ಸ್ಪರ್ಧೆ, ದ್ರೋಣ ಪರ್ವ,13,10
  • 160. ವಾಸಿ, ಶ್ರೇಷ್ಠತೆ (ಇಲ್ಲಿ, ಶಲ್ಯ ಪರ್ವ,1,35
  • 161. ವಾಸಿ, ಪ್ರತಿಜ್ಞೆ, ಕರ್ಣ ಪರ್ವ,13,3
  • 162. ವಾಸಿ, ಪಂಥ, ಕರ್ಣ ಪರ್ವ,20,25
  • 163. ವಾಸಿ, ಪಣ, ಸಭಾ ಪರ್ವ,14,14
  • 164. ವಾಸಿ, ಸ್ಥಿತಿ, ಕರ್ಣ ಪರ್ವ,22,39
  • 165. ವಾಸಿ, ಮೇಲ್ಮೆ, ಗದಾ ಪರ್ವ,8,41
  • 166. ವಾಸಿ, ಮೇಲು ಕೀಳು, ಗದಾ ಪರ್ವ,10,25
  • 167. ವಾಸಿ, ಛಲ, ವಿರಾಟ ಪರ್ವ,7,20
  • 168. ವಾಸಿ, ಹೆಚ್ಚುಗಾರಿಕೆ, ಗದಾ ಪರ್ವ,10,7
  • 169. ವಾಸುಕಿ, ಸರ್ಪರಾಜ , ಕರ್ಣ ಪರ್ವ,22,7
  • 170. ವಾಸ್ತುವಿಧೇಯ, ವಾಸ್ತುಶಾಸ್ತ್ರಕ್ಕೆ ಅನುಗುಣವಾಗಿ, ಆದಿ ಪರ್ವ,7,13
  • 171. ವಾಹಿನಿ, ಸೈನ್ಯ ವಸನ, ಉದ್ಯೋಗ ಪರ್ವ,3,108
  • 172. ವಿ, ಷ್ವಕ್ಸೇನ, ಉದ್ಯೋಗ ಪರ್ವ,4,24
  • 173. ವಿಕಟ, ಭೀಕರ, ಅರಣ್ಯ ಪರ್ವ,8,22
  • 174. ವಿಕಟತೆ, ವಿಪರ್ಯಾಸ, ಆದಿ ಪರ್ವ,8,89
  • 175. ವಿಕರ್ಮ, ಕೆಟ್ಟ ಕೆಲಸ, ವಿರಾಟ ಪರ್ವ,3,2
  • 176. ವಿಕಳ, ಅಲ್ಪ, ಆದಿ ಪರ್ವ,8,58
  • 177. ವಿಕಳ, ಧೈರ್ಯಗುಂದಿದ , ಗದಾ ಪರ್ವ,1,64
  • 178. ವಿಕಳತೆ, ಹೊಲಸು, ಉದ್ಯೋಗ ಪರ್ವ,3,137
  • 179. ವಿಕಳರ್, ಹೇಡಿಗಳು, ಕರ್ಣ ಪರ್ವ,20,16
  • 180. ವಿಕಾರ, ಉದ್ವೇಗ, ಆದಿ ಪರ್ವ,18,6
  • 181. ವಿಕಾರ, ಕೆಟ್ಟಸ್ವರೂಪ, ಗದಾ ಪರ್ವ,9,21
  • 182. ವಿಕಾರಿತನ, ವಿಕೃತಮನದಿಂದ ವರ್ತಿಸುವುದು., ಭೀಷ್ಮ ಪರ್ವ,9,42
  • 183. ವಿಕಾಳಿಸಿತು, ವ್ಯಾಪಿಸಿತು, ಆದಿ ಪರ್ವ,19,41
  • 184. ವಿಕಾಳಿಸು, ಘೋರವಾಗು, ಸಭಾ ಪರ್ವ,12,47
  • 185. ವಿಕೃತವಿಳಾಸ, ಸಹಜವಲ್ಲದ ನಡವಳಿಕೆ, ಗದಾ ಪರ್ವ,11,29
  • 186. ವಿಕ್ರಮ, ಪ್ರತಾಪ, ಗದಾ ಪರ್ವ,7,14
  • 187. ವಿಕ್ರಮ, ಪರಾಕ್ರಮ ಬಲ ಒಡೆಮುರಿಚು... ಈ ಶಬ್ದಕ್ಕೆ ಒಡೆಯುವಂತೆ ಹಿಂದಿರುಗಿಸು ಎಂಬ ಅರ್ಥವನ್ನು ಕನ್ನಡ ಕನ್ನಡ ನಿಘಂಟಿನಲ್ಲಿ ಮತ್ತು ಕೃಷ್ಣಜೋಯಿಸರ ವಿರಾಟ ಪರ್ವ 10, ವಿರಾಟ ಪರ್ವ,9,30
  • 188. ವಿಕ್ರಮ ವಹ್ನಿ, ಸಾಹಸಾಗ್ನಿ, ಭೀಷ್ಮ ಪರ್ವ,10,17
  • 189. ವಿಕ್ರಮ ಹೀನರು, ಶೌರ್ಯವಿಲ್ಲದವರು, ಭೀಷ್ಮ ಪರ್ವ,7,20
  • 190. ವಿಕ್ರಮದ ವಿವರಣ ವಿದ್ಯೆ ಫಲಿಸುವುದೆ, ಪರಾಕ್ರಮ ತೋರುವ ವಿದ್ಯೆ ಫಲಿಸುವದೆಎ, ವಿರಾಟ ಪರ್ವ,8,53
  • 191. ವಿಕ್ರಮದರಿದ್ರ, ಹೇಡಿ, ದ್ರೋಣ ಪರ್ವ,1,70
  • 192. ವಿಕ್ರಮದುದಧಿ, ಪರಾಕ್ರಮ ಸಮುದ್ರ, ಗದಾ ಪರ್ವ,3,29
  • 193. ವಿಕ್ರಮಾನಲ, ಸಾಹಸವೆಂಬ ಅಗ್ನೀ, ಭೀಷ್ಮ ಪರ್ವ,8,0
  • 194. ವಿಖ್ಯಾತ, ಹೆಸರಾದ, ಆದಿ ಪರ್ವ,13,51
  • 195. ವಿಗಡ, ಭಯಂಕರ , ಆದಿ ಪರ್ವ,8,30
  • 196. ವಿಗಡ, ಶೂರ ಮೈವಳಿ, ಸಭಾ ಪರ್ವ,2,109
  • 197. ವಿಗಡ, ಶ್ರೇಷ್ಠನಾದ., ಗದಾ ಪರ್ವ,3,7
  • 198. ವಿಗಡ, ಪ್ರಬುದ್ಧ, ಉದ್ಯೋಗ ಪರ್ವ,8,70
  • 199. ವಿಗಡ, ಮಹಾ ಪ್ರತಾಪಶಾಲಿ, ವಿರಾಟ ಪರ್ವ,1,14
  • 200. ವಿಗಡ, ಉದ್ಧಟ, ಸಭಾ ಪರ್ವ,2,19
  • 201. ವಿಗಡ, ಕ್ರೂರ, ಆದಿ ಪರ್ವ,20,64
  • 202. ವಿಗಡ, ದುಷ್ಕರ, ಸಭಾ ಪರ್ವ,2,34
  • 203. ವಿಗಡ, ದೊಡ್ಡ, ಆದಿ ಪರ್ವ,7,73
  • 204. ವಿಗಡ ವಿಗ್ರಹ, ಘೋರಸಮರ, ಭೀಷ್ಮ ಪರ್ವ,6,3
  • 205. ವಿಗಡತನ, ಶೌರ್ಯ, ಭೀಷ್ಮ ಪರ್ವ,7,12
  • 206. ವಿಗಡತನ, ನೀಚತನ, ದ್ರೋಣ ಪರ್ವ,6,34
  • 207. ವಿಗಡತನ, ಹಠ, ಉದ್ಯೋಗ ಪರ್ವ,10,31
  • 208. ವಿಗಡತನ, ಕ್ರೌರ್ಯ, ಸಭಾ ಪರ್ವ,15,47
  • 209. ವಿಗಡತನ, ಕ್ರೌರ್ಯ, ಕರ್ಣ ಪರ್ವ,24,21
  • 210. ವಿಗಡವಿಕಾರನು, ಮಾರ್ಪಾಡನ್ನು ಹೊಂದದವನು, ಭೀಷ್ಮ ಪರ್ವ,3,43
  • 211. ವಿಗಡಿಸಲು, ವಿರೋಧಿಸÀಲು, ಭೀಷ್ಮ ಪರ್ವ,1,21
  • 212. ವಿಗಡಿಸು, ಹೆದರಿಸು, ಆದಿ ಪರ್ವ,15,10
  • 213. ವಿಗಡಿಸು, ತೊಂದರೆಗೀಡುಮಾಡು, ಅರಣ್ಯ ಪರ್ವ,5,11
  • 214. ವಿಗತಲೋಚನ, ಕಣ್ಣಿಲ್ಲದವನು ಧೃತರಾಷ್ಟ್ರ, ಗದಾ ಪರ್ವ,11,72
  • 215. ವಿಗತವೈರ, ವೈರವಿಲ್ಲದ, ಗದಾ ಪರ್ವ,5,2
  • 216. ವಿಗತಾನಂದ, ಸಂತೋಷ ಕುಂದಿದ, ಭೀಷ್ಮ ಪರ್ವ,10,18
  • 217. ವಿಗಾಹನ, ನದಿಯಲ್ಲಿ ಮುಳುಗುವುದು (ಸ್ನಾನ ಮಾಡುವುದು), ಅರಣ್ಯ ಪರ್ವ,1,8
  • 218. ವಿಗುರ್ವಣೆ, ಭಯಾನಕತೆ, ಅರಣ್ಯ ಪರ್ವ,12,23
  • 219. ವಿಗ್ರಹ, ಮೂರ್ತಿ, ಆದಿ ಪರ್ವ,19,10
  • 220. ವಿಗ್ರಹ, ಯುದ್ದ, ಗದಾ ಪರ್ವ,10,0
  • 221. ವಿಗ್ರಹ, ಕಲಹ, ಆದಿ ಪರ್ವ,18,26
  • 222. ವಿಗ್ರಹ, ಕಾಳಗ, ಉದ್ಯೋಗ ಪರ್ವ,3,79
  • 223. ವಿಗ್ರಹ, ದೇಹ, ಉದ್ಯೋಗ ಪರ್ವ,4,39
  • 224. ವಿಘಳಿಗೆ, (ಸಂ: ವಿಘಟಿಕಾ), ಕರ್ಣ ಪರ್ವ,15,23
  • 225. ವಿಘಾತ, ಹೊಡೆತ , ಗದಾ ಪರ್ವ,5,33, , , ಆಘಾತ.
  • 226. ವಿಘಾತಕ, ಕೊಲೆಗಾರ, ದ್ರೋಣ ಪರ್ವ,19,25
  • 227. ವಿಘಾತದಲಿ, ಈ ಪೆಟ್ಟಿನ ದೆಸೆಯಿಂದ, ಸಭಾ ಪರ್ವ,2,81
  • 228. ವಿಘಾತಿ, ವಿನಾಶ, ಶಲ್ಯ ಪರ್ವ,3,56
  • 229. ವಿಘಾತಿ, ವಿರೋಧ, ಗದಾ ಪರ್ವ,8,27
  • 230. ವಿಘಾತಿ, ಹಾನಿ, ಕರ್ಣ ಪರ್ವ,13,1
  • 231. ವಿಘಾತಿ, ಹೊಡೆತ, ಗದಾ ಪರ್ವ,7,33
  • 232. ವಿಘಾತಿ, ಕಷ್ಟ , ಗದಾ ಪರ್ವ,1,45
  • 233. ವಿಘಾತಿ, ಕೇಡು, ಉದ್ಯೋಗ ಪರ್ವ,3,122
  • 234. ವಿಘಾತಿಸಿ, ಗಾಯಗೊಳಿಸಿ, ಭೀಷ್ಮ ಪರ್ವ,4,79
  • 235. ವಿಘಾಯ, ಕ್ರೂರ, ಆದಿ ಪರ್ವ,7,0
  • 236. ವಿಘ್ನಶತ, ನೂರು ವಿಘ್ನಗಳು, ಗದಾ ಪರ್ವ,9,11
  • 237. ವಿಜಯ, ಅರ್ಜುನನ ದಶನಾಮಗಳಲ್ಲಿ ಒಂದು, ಆದಿ ಪರ್ವ,20,63
  • 238. ವಿಜಯಾಂಗನೋಪಕ್ಷೀಣ ಮಾನಸರು, ವಿಜಯಲಕ್ಷ್ಮಿಯು ತಿರಸ್ಕರಿಸಿದ ಮನುಷ್ಯರು., ಶಲ್ಯ ಪರ್ವ,1,26
  • 239. ವಿಜಯಾತ್ಮಕ, ಅರ್ಜುನನ ಮಗ, ದ್ರೋಣ ಪರ್ವ,5,1
  • 240. ವಿಜಿತ, ಗೆಲ್ಲಲ್ಪಟ್ಟವನು , ಶಲ್ಯ ಪರ್ವ,3,47
  • 241. ವಿಟ, ಕಾಮುಕ, ಆದಿ ಪರ್ವ,13,42
  • 242. ವಿಟಪ, ಮರದಕೊಂಬೆ, ಗದಾ ಪರ್ವ,9,1
  • 243. ವಿಟಾಳ, ಮಾಲಿನ್ಯ , ಅರಣ್ಯ ಪರ್ವ,18,10
  • 244. ವಿಟಾಳ, ಅಪವಿತ್ರ, ಕರ್ಣ ಪರ್ವ,9,20
  • 245. ವಿಟಾಳವಿಲ್ಲದೆ, ಯಾವ ಮನೋವಿಕಾರವೂ ಇಲ್ಲದೆ, ಸಭಾ ಪರ್ವ,16,42
  • 246. ವಿಟಾಳಿಸು, ಹೊಲಸಾಗು, ಸಭಾ ಪರ್ವ,12,47
  • 247. ವಿಡಂಬ, ವೈಭವÀ, ಗದಾ ಪರ್ವ,2,33
  • 248. ವಿಡಂಬದ, ಅವಹೇಳನದ, ಗದಾ ಪರ್ವ,11,63
  • 249. ವಿಡಂಬನ, ಸೋಗು, ಗದಾ ಪರ್ವ,5,5, ,
  • 250. ವಿಡಂಬನೆ, ಅಪಹಾಸ್ಯ, ಗದಾ ಪರ್ವ,1,22
  • 251. ವಿಡಂಬಿಸುವ, ಮೋಸಮಾಡುವ, ಗದಾ ಪರ್ವ,11,50
  • 252. ವಿಡಾಯಿ, ಬಲ, ದ್ರೋಣ ಪರ್ವ,2,59
  • 253. ವಿಡಾಯಿ, ಆಡಂಬರ, ಉದ್ಯೋಗ ಪರ್ವ,8,46
  • 254. ವಿಡಾಯಿಗೆಟ್ಟನು, ಶಕ್ತಿಗುಂದಿದನು, ದ್ರೋಣ ಪರ್ವ,2,59
  • 255. ವಿಡಾಯ್ಲತನ, ಆಡಂಬರ , ಗದಾ ಪರ್ವ,1,48
  • 256. ವಿಡಾಳ, ವಿಡಾಯ? ವಿಢಾಳ?, ಕರ್ಣ ಪರ್ವ,14,29
  • 257. ವಿತತ, ಶ್ರೇಷ್ಠವಾದ , ಆದಿ ಪರ್ವ,2,9
  • 258. ವಿತರ್ಜೆ, ಹೆದರಿಕೆ, ಉದ್ಯೋಗ ಪರ್ವ,4,20
  • 259. ವಿತಳ, ಭೂಲೋಕದ ಕೆಳಗಿರುವ 7 ಲೋಕಗಳಲ್ಲಿ 2ನೆಯದು (ಅತಳ , ಭೀಷ್ಮ ಪರ್ವ,6,27, , , ತಲಾತಲಾ, ಮಹಾತಲ , ಪಾತಾಳ),
  • 260. ವಿತಳ, ಸಪ್ತ ಅಧೋ ಲೋಕಗಳಲ್ಲಿ ಒಂದು. ಅತಲ , ವಿರಾಟ ಪರ್ವ,4,2, , , ಸುತಲ , ತಲಾತಲ, ಮಹಾತಲ , ಪಾತಾಳ,
  • 261. ವಿತಳ, ಪಾತಾಳ, ವಿರಾಟ ಪರ್ವ,8,25
  • 262. ವಿತಾನ, ಸಾಮ್ರಾಜ್ಯ, ಉದ್ಯೋಗ ಪರ್ವ,4,74
  • 263. ವಿತಾನ, ಅಂಚುತೋರಣ , ಗದಾ ಪರ್ವ,1,48, ,
  • 264. ವಿತಾಳ, ಅಪಾಯ, ಕರ್ಣ ಪರ್ವ,25,1
  • 265. ವಿತಾಳವಾಗದೆ, ತಾಳ ತಪ್ಪಿ ಹೋಗುವುದಿಲ್ಲವೇ ? ಕೆಟ್ಟು ಹೋಗುವುದಿಲ್ಲವೇ ?, ಸಭಾ ಪರ್ವ,12,62
  • 266. ವಿತಾಳಿಸಿ, ತಳಮಳಗೊಂಡು, ಭೀಷ್ಮ ಪರ್ವ,6,21
  • 267. ವಿತಾಳಿಸು, ಮೀರು, ಉದ್ಯೋಗ ಪರ್ವ,3,29
  • 268. ವಿತಾಳಿಸು, ತಪ್ಪಿಹೋಗು, ಆದಿ ಪರ್ವ,17,15
  • 269. ವಿತ್ತ, ಧನ, ವಿರಾಟ ಪರ್ವ,10,80
  • 270. ವಿತ್ಪನ್ನ, ಕಾರಣರಾದವರು, ಅರಣ್ಯ ಪರ್ವ,19,9
  • 271. ವಿದ, ತಿಳಿದ, ಉದ್ಯೋಗ ಪರ್ವ,3,85
  • 272. ವಿದಗ್ಧ, ವಿದ್ಯಾವಂತ, ಉದ್ಯೋಗ ಪರ್ವ,3,38
  • 273. ವಿದಗ್ಧೆ, ಪ್ರೌಢೆ, ಆದಿ ಪರ್ವ,13,42
  • 274. ವಿದಾರಣ, ಸೀಳುವಿಕೆ (ನಿವಾರಣವಿದು ಎಂಬ ಪಾಠವೂ ಇದೆ), ವಿರಾಟ ಪರ್ವ,8,57
  • 275. ವಿದಾರಿಸು, ಸೀಳು, ಗದಾ ಪರ್ವ,9,32
  • 276. ವಿದಿತ, ನಿಜ, ಆದಿ ಪರ್ವ,15,22
  • 277. ವಿದಿತ, ಪ್ರಸಿದ್ಧವಾದ, ಆದಿ ಪರ್ವ,2,18
  • 278. ವಿದಿತ, ತಿಳಿದಿದೆ, ವಿರಾಟ ಪರ್ವ,8,31
  • 279. ವಿದೂರ, ಅತಿದೂರ, ಆದಿ ಪರ್ವ,7,3
  • 280. ವಿದೇಶ, ಪರದೇಶ, ಆದಿ ಪರ್ವ,19,1
  • 281. ವಿದ್ಯಾ, ಬ್ರಹ್ಮವಿದ್ಯೆ, ಉದ್ಯೋಗ ಪರ್ವ,4,8
  • 282. ವಿದ್ಯಾಧರ, ಇವರು ಆಕಾಶ ಮಾರ್ಗದಲ್ಲಿ ಸಂಚರಿಸುವವರು , ಗದಾ ಪರ್ವ,7,38
  • 283. ವಿದ್ರಾವಣ, ಓಡಿಸುವಿಕೆ, ದ್ರೋಣ ಪರ್ವ,10,27
  • 284. ವಿದ್ರಾವಣ, ಕರಗಿಸು, ಕರ್ಣ ಪರ್ವ,18,5
  • 285. ವಿದ್ರುಮ, ಹವಳ, ಸಭಾ ಪರ್ವ,13,25
  • 286. ವಿಧಾಯಕ, ನಿರ್ಣಯ, ಗದಾ ಪರ್ವ,4,52,
  • 287. ವಿಧಾವಂತ, ನಿರ್ವಾಹಕÀ, ಅರಣ್ಯ ಪರ್ವ,17,37
  • 288. ವಿಧಾವಂತನಲಿ, ಆತುರಗಾರನಲ್ಲಿ, ಸಭಾ ಪರ್ವ,1,40
  • 289. ವಿಧಿ, ವಿಧಾನ., ಗದಾ ಪರ್ವ,5,5
  • 290. ವಿಧಿ, ನಿಯಮ, ಆದಿ ಪರ್ವ,18,32
  • 291. ವಿಧಿ, ಪಾಡು, ಆದಿ ಪರ್ವ,8,92
  • 292. ವಿಧಿ, ಅವಸ್ಥೆ, ಆದಿ ಪರ್ವ,14,17
  • 293. ವಿಧಿವಿಹಿತ, ಶಾಸ್ತ್ರಗಳು ವಿಧಿಸಿರುವಂತಹ, ಗದಾ ಪರ್ವ,12,24
  • 294. ವಿಧುಂತುದ, ರಾಹು, ದ್ರೋಣ ಪರ್ವ,4,58
  • 295. ವಿಧೂತ, ನಡುಗಿಸುವ, ದ್ರೋಣ ಪರ್ವ,3,62
  • 296. ವಿಧೂತ, ನಿವಾರಿಸಲ್ಪಟ್ಟ, ಆದಿ ಪರ್ವ,2,15
  • 297. ವಿಧೂತ, ಅಲುಗಾಡಿಸಲ್ಪಟ್ಟ, ಗದಾ ಪರ್ವ,3,15
  • 298. ವಿಧೂತ, ಹೋಗಲಾಡಿಸಲ್ಪಟ್ಟ, ಆದಿ ಪರ್ವ,4,24
  • 299. ವಿಧೂತ, ತೊಳೆಯಲ್ಪಟ್ಟ, ಆದಿ ಪರ್ವ,16,10
  • 300. ವಿಧೂತರಿಪು, ವಿರೋಧಿಗಳ ಶತ್ರು, ಗದಾ ಪರ್ವ,3,33
  • 301. ವಿನತ, ಬಾಗಿದ, ಆದಿ ಪರ್ವ,15,37
  • 302. ವಿನಯ, ನಮ್ರತೆ, ಉದ್ಯೋಗ ಪರ್ವ,4,109
  • 303. ವಿನಿಯೋಗಿ, ಅಧಿಕಾರಿ, ಆದಿ ಪರ್ವ,8,51
  • 304. ವಿನಿರ್ಮಿತ, ರಚಿಸಿದ, ಆದಿ ಪರ್ವ,18,5
  • 305. ವಿನೀತ, ಸರಳ/ನಿರಾಡಂಬರ, ಉದ್ಯೋಗ ಪರ್ವ,3,91
  • 306. ವಿನೀತ, ನಮ್ರ, ಉದ್ಯೋಗ ಪರ್ವ,3,87
  • 307. ವಿನುತ, ಹೊಗಳಲ್ಪಡುವ/ಸ್ತುತಿಗೊಂಡ, ಉದ್ಯೋಗ ಪರ್ವ,3,91
  • 308. ವಿನೋದದಿ, ತಮಾಷೆಯಿಂದ, ದ್ರೋಣ ಪರ್ವ,3,40
  • 309. ವಿನ್ಯಸ್ತ, ರಚಿಸಿದ, ಗದಾ ಪರ್ವ,3,19
  • 310. ವಿನ್ಯಾಸ, ವಿಧಾನ, ಆದಿ ಪರ್ವ,16,29
  • 311. ವಿಪತ್ತು, ಆಪತ್ತು , ಆದಿ ಪರ್ವ,2,24
  • 312. ವಿಪತ್ತು, ಆಪತ್ತು , ಆದಿ ಪರ್ವ,4,14
  • 313. ವಿಪತ್ತು, ಕೆಟ್ಟಪರಿಣಾಮಗಳು, ಗದಾ ಪರ್ವ,11,12
  • 314. ವಿಪತ್ಸರಂಪರೆ, ಸಂಕಟಗಳ ಸಾಲು, ಉದ್ಯೋಗ ಪರ್ವ,3,135
  • 315. ವಿಪನ್ನ, ಕಷ್ಟಕ್ಕೆ ಗುರಿಯಾದವನು, ಆದಿ ಪರ್ವ,16,43
  • 316. ವಿಪರೀತ, ತಿರುಗು ಮುರುಗು, ವಿರಾಟ ಪರ್ವ,7,3
  • 317. ವಿಪಾಕದೊಳು, ಪಕ್ವವಾದ ಮೇಲೆ , ಸಭಾ ಪರ್ವ,12,89
  • 318. ವಿಪಿನಾಂತರ, ಕಾಡಿನ ಮಧ್ಯಭಾಗ, ಆದಿ ಪರ್ವ,17,8
  • 319. ವಿಪಿನಾಂತರ, ಕಾಡಿನಿಂದ ದೂರ, ಆದಿ ಪರ್ವ,9,13
  • 320. ವಿಪಿನಾಂತರ ಪರಿಕ್ರಮ, ಕಾಡನಲ್ಲಿ ಸಂಚಾರ, ಅರಣ್ಯ ಪರ್ವ,14,13
  • 321. ವಿಪಿನೋಪಕಂಠ, ಕಾಡಿನ ಅಂಚು, ಅರಣ್ಯ ಪರ್ವ,22,6
  • 322. ವಿಪುಳ, ವಿಶೇಷವಾದ, ಆದಿ ಪರ್ವ,4,8
  • 323. ವಿಪ್ರವೇಷಚ್ಛನ್ನ, ಬ್ರಾಹ್ಮಣ ವೇಷದಿಂದ ಮರೆಸಿಕೊಂಡವನು, ಆದಿ ಪರ್ವ,15,16
  • 324. ವಿಪ್ರಾವಳಿ, ಬ್ರಾಹ್ಮಣ ಸಮೂಹ, ಗದಾ ಪರ್ವ,9,41
  • 325. ವಿಬಂಧ, ವಿಶೇಷವಾದ ಬಂಧ, ಆದಿ ಪರ್ವ,7,49
  • 326. ವಿಬುಧರು, ಪಂಡಿತರು, ಉದ್ಯೋಗ ಪರ್ವ,8,69
  • 327. ವಿಭಾಗಿಸು, ತುಂಡು ಮಾಡು, ಗದಾ ಪರ್ವ,9,5
  • 328. ವಿಭಾಡಿಸಿ, ಎದುರಿಸಿ, ಗದಾ ಪರ್ವ,5,7
  • 329. ವಿಭಾಡಿಸು, ಭಂಗಿಸು, ಗದಾ ಪರ್ವ,8,32
  • 330. ವಿಭಾಡಿಸು, ಭೇದಿಸು, ಆದಿ ಪರ್ವ,14,2
  • 331. ವಿಭಾಡಿಸು, ಸೋಲಿಸು, ಶಲ್ಯ ಪರ್ವ,3,75
  • 332. ವಿಭಾಡಿಸು, ಸೋಲಿಸು, ಗದಾ ಪರ್ವ,2,4
  • 333. ವಿಭಾಡಿಸು, ಧಿಕ್ಕರಿಸು, ದ್ರೋಣ ಪರ್ವ,15,9
  • 334. ವಿಭಾಡಿಸು, ಧಿಕ್ಕರಿಸು , ಗದಾ ಪರ್ವ,1,43, ,
  • 335. ವಿಭಾಡಿಸು, ನಿಂದಿಸು, ಉದ್ಯೋಗ ಪರ್ವ,3,41
  • 336. ವಿಭಾಡಿಸು, ಪರಾಜಯಗೊಳ್ಳು, ಆದಿ ಪರ್ವ,17,3
  • 337. ವಿಭಾಡಿಸು, ಆಹುತಿಯಾಗಿಕೊಡು, ಆದಿ ಪರ್ವ,10,13
  • 338. ವಿಭಾಡಿಸು, ಆಕ್ರಮಿಸು , ಅರಣ್ಯ ಪರ್ವ,12,61
  • 339. ವಿಭಾಡಿಸುವುದು, ಹೀಯಾಳಿಸುವುದು, ಭೀಷ್ಮ ಪರ್ವ,9,36
  • 340. ವಿಭು, ಪಾಲಕ , ವಿರಾಟ ಪರ್ವ,10,78
  • 341. ವಿಭುಗಳು, ಅರಸರು, ಭೀಷ್ಮ ಪರ್ವ,5,0
  • 342. ವಿಭುಗಳು, ದೇವರು, ಉದ್ಯೋಗ ಪರ್ವ,8,38
  • 343. ವಿಭೇದ, ಒಡೆಯುವಿಕೆ, ಆದಿ ಪರ್ವ,2,12
  • 344. ವಿಭ್ರಮ, ಭ್ರಮೆ, ಆದಿ ಪರ್ವ,8,36
  • 345. ವಿಭ್ರಮ, ಅಲೆದಾಟ, ಆದಿ ಪರ್ವ,19,22
  • 346. ವಿಮಲ, ಶುದ್ಧವಾದ, ಗದಾ ಪರ್ವ,5,56
  • 347. ವಿಮಾನ, ಅಪಮಾನ, ಉದ್ಯೋಗ ಪರ್ವ,3,44
  • 348. ವಿಮಾನ, ರಾಜಗೃಹ , ಅರಣ್ಯ ಪರ್ವ,7,74
  • 349. ವಿಯೋಗ, ಯೋಗ ಘಟಿಸದ, ವಿರಾಟ ಪರ್ವ,2,51
  • 350. ವಿರಚಿಸು, ನಿರ್ಮಿಸು, ಆದಿ ಪರ್ವ,8,69
  • 351. ವಿರಚಿಸು, ರಚಿಸು, ಗದಾ ಪರ್ವ,8,54
  • 352. ವಿರಡ, ವಿರಾಟ, ಆದಿ ಪರ್ವ,1,18
  • 353. ವಿರಥ, ರಥವಿಲ್ಲದವ, ಆದಿ ಪರ್ವ,2,36
  • 354. ವಿರಥ, ರಥವಿಲ್ಲದಂತಾಗುವುದು, ದ್ರೋಣ ಪರ್ವ,6,21
  • 355. ವಿರಥನ ಮಾಡು, ರಥವನ್ನು ನಾಶಮಾಡು, ಭೀಷ್ಮ ಪರ್ವ,5,24
  • 356. ವಿರಸ, ಪೀಡೆ, ಆದಿ ಪರ್ವ,8,47
  • 357. ವಿರಹ, ಅಗಲಿಕೆಯ ತಾಪ, ವಿರಾಟ ಪರ್ವ,3,0
  • 358. ವಿರಹಿತ, ಇಲ್ಲದ, ಉದ್ಯೋಗ ಪರ್ವ,4,105
  • 359. ವಿರಾಗ, ವೈರಾಗ್ಯ, ಗದಾ ಪರ್ವ,11,24
  • 360. ವಿರಾಟಜ, ವಿರಾಟನಮಗ, ಗದಾ ಪರ್ವ,5,18
  • 361. ವಿರಾಮ, ಅಂತ್ಯ, ಉದ್ಯೋಗ ಪರ್ವ,9,5
  • 362. ವಿರಾಮ, ಕೊನೆ, ಆದಿ ಪರ್ವ,16,35
  • 363. ವಿರಾಮವಾಗದೆ, (ನಿಮ್ಮ ಅಣ್ಣಧರ್ಮರಾಯನ ಆಜ್ಞೆಗೆ) ಕುಂದಿಲ್ಲದಂತೆ, ವಿರಾಟ ಪರ್ವ,3,65
  • 364. ವಿರಿಂಚಸೃಷ್ಟಿ, ಬ್ರಹ್ಮನ ಸೃಷ್ಟಿ, ಭೀಷ್ಮ ಪರ್ವ,1,49
  • 365. ವಿರಿಂಚಿಪ್ರಭವ, ಬ್ರಹ್ಮನ ಮಾನಸಪುತ್ರ , ಸಭಾ ಪರ್ವ,1,0
  • 366. ವಿರೂಪನ, ರೂಪರಹಿತನಾದನವನ್ನು, ಭೀಷ್ಮ ಪರ್ವ,3,66
  • 367. ವಿರೋಧ, ವೈರ, ಆದಿ ಪರ್ವ,17,18
  • 368. ವಿರೋಧಿಸಂತತಿ, ಶತ್ರುಗಳ ಬಳಗ, ಗದಾ ಪರ್ವ,9,2
  • 369. ವಿಲಂಬ, ವಿಳಂಬ, ಗದಾ ಪರ್ವ,2,22
  • 370. ವಿಲಂಬಿತ, ಅವಲಂಬಿತವಾದ, ಆದಿ ಪರ್ವ,18,5
  • 371. ವಿಲಗ, ವಿರೋಧ, ಅರಣ್ಯ ಪರ್ವ,6,16
  • 372. ವಿಲಗ, ತೊಂದರೆ , ಸಭಾ ಪರ್ವ,1,2
  • 373. ವಿಲಗ, ತೊಂದರೆ, ದ್ರೋಣ ಪರ್ವ,9,45
  • 374. ವಿಲಗಿಗ, ಹಂಗಿಗ, ದ್ರೋಣ ಪರ್ವ,9,32
  • 375. ವಿಲಯ ಕೃತಾಂತ, ಪ್ರಳಯ ಕಾಲದ ಯಮ, ಭೀಷ್ಮ ಪರ್ವ,5,10
  • 376. ವಿಲಯ ಮಹೋಗ್ರ ಸನ್ನಿಭ, ಮಹಾ ಉಗ್ರವಾದ ಪ್ರಳಯಕ್ಕೆ ಸಮಾನನಾದ (ಭೀಮ), ವಿರಾಟ ಪರ್ವ,4,57
  • 377. ವಿಲಯಕೃತಾಂತ, ಪ್ರಳಯಕಾಲದ ಯಮ, ಗದಾ ಪರ್ವ,7,29
  • 378. ವಿಲಯದ ಮಳೆ, ಪ್ರಳಯಕಾಲದ ಮಳೆ, ಭೀಷ್ಮ ಪರ್ವ,4,9
  • 379. ವಿಲಯಶಿವ, ಪ್ರಳಯರುದ್ರ, ಭೀಷ್ಮ ಪರ್ವ,10,5
  • 380. ವಿಲಯಹರ, ವಿನಾಶಕಾರಿಯಾದ ರುದ್ರ, ವಿರಾಟ ಪರ್ವ,6,0
  • 381. ವಿಲಸ, ವಿಲಾಸ, ಆದಿ ಪರ್ವ,13,23
  • 382. ವಿಲಸ, ಕಾಂತಿಯುತ, ಆದಿ ಪರ್ವ,20,13
  • 383. ವಿಲಸತ್, ಪವಿತ್ರವಾದ, ದ್ರೋಣ ಪರ್ವ,3,66
  • 384. ವಿಲಸತ್, ಹೊಳೆಯುತ್ತಿದ್ದ, ಸಭಾ ಪರ್ವ,1,20
  • 385. ವಿಲಸತ್ ಕೇಳಿ, ವಿನೋದ ಕ್ರೀಡೆ, ಭೀಷ್ಮ ಪರ್ವ,5,15
  • 386. ವಿಲಾಸ, ಲಾವಣ್ಯ , ಶಲ್ಯ ಪರ್ವ,3,64, , , ವಿನೋದ,
  • 387. ವಿಲಾಸ, ಸೌಂದರ್ಯ, ಆದಿ ಪರ್ವ,18,11
  • 388. ವಿಲಾಸ, ವಿಹಾರ, ಆದಿ ಪರ್ವ,19,24
  • 389. ವಿಲಾಸ, ಒಯ್ಯಾರ, ಆದಿ ಪರ್ವ,5,11
  • 390. ವಿಲಾಸ, ಚೆಲುವು, ಆದಿ ಪರ್ವ,15,25
  • 391. ವಿಲಾಸಿನಿ, ವೇಶ್ಯೆ, ಆದಿ ಪರ್ವ,15,41
  • 392. ವಿಲಾಸಿನಿಯರು, ಬೆಡಗಿಯರು (ಚೆಲುವೆಯರು), ಉದ್ಯೋಗ ಪರ್ವ,7,28
  • 393. ವಿಲೋಕನ, ನೋಡುವಿಕೆ, ಆದಿ ಪರ್ವ,19,8
  • 394. ವಿಲೋಕನ, ನೋಡುವ, ಆದಿ ಪರ್ವ,12,22
  • 395. ವಿಲೋಮ, ಪ್ರತಿಕೂಲಕ್ರಮ, ಆದಿ ಪರ್ವ,15,2
  • 396. ವಿವರಣ, ಬೇರೆಮಾಡುವುದು, ಆದಿ ಪರ್ವ,18,18
  • 397. ವಿವಿಧವಿಭವ, ನಾನಾ ಬಗೆಯ ಆಡಂಬರ, ಉದ್ಯೋಗ ಪರ್ವ,7,20
  • 398. ವಿವೇಕಶೂನ್ಯ, ವಿವೇಕವಿಲ್ಲದ, ಗದಾ ಪರ್ವ,10,11
  • 399. ವಿಶಾಪ, ಶಾಪದಿಂದ ಮುಕ್ತಿ ಪಡೆಯುವುದು, ಅರಣ್ಯ ಪರ್ವ,14,12
  • 400. ವಿಶಿಖ, ಬಾಣ., ಕರ್ಣ ಪರ್ವ,24,56
  • 401. ವಿಶಿಖವ್ರಾತ, ಬಾಣ ಸಮೂಹ, ಭೀಷ್ಮ ಪರ್ವ,6,15
  • 402. ವಿಶಿಷ್ಟ, ವಿಶೇಷ/ಶ್ರೇಷ್ಠ, ಉದ್ಯೋಗ ಪರ್ವ,4,71
  • 403. ವಿಶುದ್ಧೆ, ಪವಿತ್ರಳು, ಆದಿ ಪರ್ವ,19,11
  • 404. ವಿಶ್ರಮ, ಶ್ರಮ, ಗದಾ ಪರ್ವ,4,55
  • 405. ವಿಶ್ರಮ, ಶ್ರಮವನ್ನು ನೀಗಲು, ಗದಾ ಪರ್ವ,9,1
  • 406. ವಿಶ್ರಮವಿಲ್ಲ ನಿಮಿಷದಲಿ, ನಿವಿ, ಸಭಾ ಪರ್ವ,2,112
  • 407. ವಿಶ್ರಮಿಸು, ವಿಶ್ರಾಂತಿ, ಆದಿ ಪರ್ವ,9,5
  • 408. ವಿಶ್ವಂಭರ, ಜಗತ್ತನ್ನು ಕಾಪಾಡುವವ ಪರಮಾತ್ಮ (ಇಲ್ಲಿ, ಗದಾ ಪರ್ವ,5,7
  • 409. ವಿಶ್ವಕರ್ಮ, ದೇವತೆಗಳ ಶಿಲ್ಪಿ, ಗದಾ ಪರ್ವ,11,36
  • 410. ವಿಶ್ವರೂಪಿ, ಅನಂತರೂಪಿ, ಭೀಷ್ಮ ಪರ್ವ,3,86
  • 411. ವಿಶ್ವವಿಕರ್ಣ, ವಿಶ್ವವಿಖ್ಯಾತ., ದ್ರೋಣ ಪರ್ವ,1,17
  • 412. ವಿಶ್ವಾಮರ, ಜಗತ್ತಿನ ದೇವತೆ, ಕರ್ಣ ಪರ್ವ,6,21
  • 413. ವಿಷಕನ್ನಿಕೆ, ತನ್ನ ಸ್ಪರ್ಶದಿಂದ ಇತರರಿಗೆ ಸಾವುಂಟುಮಾಡುವ ಹೆಂಗಸು, ಆದಿ ಪರ್ವ,5,17
  • 414. ವಿಷದ್ರುಮ, ವಿಷವೃಕ್ಷ, ಶಲ್ಯ ಪರ್ವ,1,4
  • 415. ವಿಷಧರಪತಿ, ವಿಷವನ್ನುಳ್ಳ ಸರ್ಪಗಳ ರಾಜ, ಗದಾ ಪರ್ವ,9,17
  • 416. ವಿಷಮ, ವಿರೋಧ, ಗದಾ ಪರ್ವ,9,4
  • 417. ವಿಷಮ, ಯುದ್ಧದಲ್ಲಿನ ವಿವಿಧ ಭಂಗಿಗಳು, ಗದಾ ಪರ್ವ,6,13
  • 418. ವಿಷಮ, ಉಗ್ರ , ಭೀಷ್ಮ ಪರ್ವ,4,48
  • 419. ವಿಷಮ, ಕಠಿಣ , ಗದಾ ಪರ್ವ,7,1,
  • 420. ವಿಷಮ, ತೀಕ್ಷ್ಣ, ದ್ರೋಣ ಪರ್ವ,5,25
  • 421. ವಿಷಮಾವಗ್ರಹ, ?, ಸಭಾ ಪರ್ವ,16,52
  • 422. ವಿಷಯಸ್ತೋಮ, ಶಬ್ದ, ಆದಿ ಪರ್ವ,16,35, , , ರಸ , ಗಂಧ , ವಿಷಯಗಳು,
  • 423. ವಿಷಾದಭರ, ಕೋಪಾವೇಶ, ಗದಾ ಪರ್ವ,7,27
  • 424. ವಿಷಾದವಹ್ನಿ, ಕೋಪಾಗ್ನಿ, ಗದಾ ಪರ್ವ,13,6
  • 425. ವಿಷ್ಠೆ, ಹೊಲಸು, ಉದ್ಯೋಗ ಪರ್ವ,4,93
  • 426. ವಿಸಂಚಿಸಿ, ಪುಡಿಪುಡಿಮಾಡಿ, ಭೀಷ್ಮ ಪರ್ವ,8,28
  • 427. ವಿಸಂಚಿಸು, ಪುಡಿ ಮಾಡು, ವಿರಾಟ ಪರ್ವ,8,58
  • 428. ವಿಸಂಚಿಸು, ಕೇಡು, ಉದ್ಯೋಗ ಪರ್ವ,9,39
  • 429. ವಿಸಂಚಿಸು, ತುಂಡಾಗು, ಶಲ್ಯ ಪರ್ವ,3,55
  • 430. ವಿಸಂಚಿಸು, ಚೂರುಚೂರಾಗು, ವಿರಾಟ ಪರ್ವ,8,88
  • 431. ವಿಸಂಧಿ, ಒಪ್ಪಂದ ಮುರಿಯುವಿಕೆ, ಕರ್ಣ ಪರ್ವ,14,16
  • 432. ವಿಸಂಸ್ಥುಲ, ಸ್ಥಿರತೆಗೆಟ್ಟ, ಸಭಾ ಪರ್ವ,10,50
  • 433. ವಿಸಟಂಬರಿವ, ಹರಡುವ/ಉಬ್ಬುವ, ಉದ್ಯೋಗ ಪರ್ವ,2,4
  • 434. ವಿಸಟಂಬರಿದು, ಸುತ್ತಾಡಿ, ದ್ರೋಣ ಪರ್ವ,6,31
  • 435. ವಿಸಟಂಬರಿಯನು, ಸುತ್ತಾಟವನ್ನು, ದ್ರೋಣ ಪರ್ವ,3,48
  • 436. ವಿಸಟವರಿ, ವಿಸ್ತಾರವಾಗು, ಕರ್ಣ ಪರ್ವ,19,84
  • 437. ವಿಸ್ತರಣ, ವಿವರಣೆ, ಆದಿ ಪರ್ವ,10,17
  • 438. ವಿಸ್ತರದ, ಅಲಂಕೃತ, ಆದಿ ಪರ್ವ,1,3
  • 439. ವಿಸ್ಫುಲಿಂಗ, ಬೆಂಕಿಯ ಕಿಡಿ, ಆದಿ ಪರ್ವ,20,42
  • 440. ವಿಸ್ಫುಲಿಂಗ, ಕಿಡಿಗಳು, ಭೀಷ್ಮ ಪರ್ವ,6,28
  • 441. ವಿಹಂಗತತಿ, ಹಕ್ಕಿಗಳ ಗುಂಪು, ಭೀಷ್ಮ ಪರ್ವ,4,84
  • 442. ವಿಹಗಸಂತತಿ, ಪಕ್ಷಿ ಸಂಕುಲ, ಭೀಷ್ಮ ಪರ್ವ,4,16
  • 443. ವಿಹರಣ, ವಿಹಾರ, ಆದಿ ಪರ್ವ,8,41
  • 444. ವಿಹರಣ, ಚಲನವಲನ, ಸಭಾ ಪರ್ವ,1,38
  • 445. ವಿಹಿತ, ಉಚಿತ, ಆದಿ ಪರ್ವ,16,14
  • 446. ವಿಹಿತ, ಉಚಿತವಾದ, ಆದಿ ಪರ್ವ,10,3
  • 447. ವಿಹೀನರಲಿ, ಬುದ್ಧಿಯಿಲ್ಲದವರಲ್ಲಿ, ಸಭಾ ಪರ್ವ,1,40
  • 448. ವಿಹೃತಿ, ವಿಕಾರ, ಆದಿ ಪರ್ವ,15,19
  • 449. ವಿಹ್ವಲ, ವ್ಯಾಕುಲ, ಶಲ್ಯ ಪರ್ವ,1,34
  • 450. ವಿಹ್ವಿಲಿತ, ಗೊಂದಲಗೊಂಡ, ವಿರಾಟ ಪರ್ವ,8,82
  • 451. ವಿಳಯರುದ್ರ, ಪ್ರಳಯಕಾಲದರುದ್ರ, ಗದಾ ಪರ್ವ,9,29
  • 452. ವಿಳಯವಾರ್ತಾವ್ಯಾಳವಿಷ, ವಿನಾ±ವಾರ್ತೆಯೆಂಬ ಹಾವಿನ ವಿಷ, ಗದಾ ಪರ್ವ,11,1
  • 453. ವಿಳಸಿತೆ, ಭೂಷಿತೆ, ಗದಾ ಪರ್ವ,11,57
  • 454. ವಿಳಾಸವಳಿದಿದೆ, ಶೋಭೆ ಮಂಕಾಗಿದೆ, ವಿರಾಟ ಪರ್ವ,3,28
  • 455. ವಿಳಾಸಿನೀಜನ, ಅರಮನೆಯ ಸುಂದರಿಯರು, ವಿರಾಟ ಪರ್ವ,10,19
  • 456. ವೀಕ್ಷಿಸು, (ಸೂಕ್ಷ್ಮವಾಗಿ) ನೋಡು, ವಿರಾಟ ಪರ್ವ,6,15
  • 457. ವೀಚುಗೆಡುವರು, ನಾಶವಾಗು, ಸಭಾ ಪರ್ವ,9,34
  • 458. ವೀತರಾಗದ್ವೇóಷ, ರಾಗ, ಅರಣ್ಯ ಪರ್ವ,6,26
  • 459. ವೀರ ಪೂತು, ಶಹಬ್ಬಾಸ್!, ಗದಾ ಪರ್ವ,2,30
  • 460. ವೀರಪಣ, ವೀರಾವೇಶದ ಮಾತು, ಗದಾ ಪರ್ವ,10,25
  • 461. ವೀರರಂಗ, ವೀರರ ರೀತಿ, ದ್ರೋಣ ಪರ್ವ,5,38
  • 462. ವೀರರಸಾಬ್ಧಿ, ವೀರರಸದ ಸಮುದ್ರ, ಶಲ್ಯ ಪರ್ವ,1,25
  • 463. ವೀರಸಿರಿ, ಶೌರ್ಯದ ಸಂಪತ್ತು, ಸಭಾ ಪರ್ವ,1,50
  • 464. ವೀಸಬಡ್ಡಿ, ಒಂದು ವೀಸದಷ್ಟು ಪ್ರಮಾಣದ ಬಡ್ಡಿ, ವಿರಾಟ ಪರ್ವ,3,70
  • 465. ವೀಳಯ, ಎಲೆ, ವಿರಾಟ ಪರ್ವ,3,83
  • 466. ವೀಳೆಯ, ಆಹ್ವಾನ, ದ್ರೋಣ ಪರ್ವ,17,23
  • 467. ವೀಳೆಯ, ತಾಂಬೂಲ, ಉದ್ಯೋಗ ಪರ್ವ,8,1
  • 468. ವೀಳೆಯವ, ಒಪ್ಪಿಗೆಯನ್ನು, ಉದ್ಯೋಗ ಪರ್ವ,1,8
  • 469. ವುಲಿ, ಹೇಳು/ಕೂಗು, ಉದ್ಯೋಗ ಪರ್ವ,11,38
  • 470. ವೃಂದ, ಹಿಂಡು, ಉದ್ಯೋಗ ಪರ್ವ,3,101
  • 471. ವೃಂದ, ಬಳಗ, ಉದ್ಯೋಗ ಪರ್ವ,5,2
  • 472. ವೃಂದಾರಕ ವಧೂವರ್ಗ, ಅಪ್ಸರೆಯರ ಗುಂಪು, ಕರ್ಣ ಪರ್ವ,12,5
  • 473. ವೃಕ, ತೋಳ, ಆದಿ ಪರ್ವ,9,9
  • 474. ವೃಕೋದರ, ತೋಳದಂತಹ ಹೊಟ್ಟೆಯಿರುವವನು, ಶಲ್ಯ ಪರ್ವ,1,17
  • 475. ವೃಕೋದರ, ತೋಳದಂತೆ ಹಸಿವುನ್ನುಳ್ಳವನು , ಗದಾ ಪರ್ವ,7,25
  • 476. ವೃಕೋದರಸೂನು, ಭೀಮನ ಮಗ, ಸಭಾ ಪರ್ವ,1,6
  • 477. ವೃತ್ತಿ, ಸ್ಥಿತಿ, ಆದಿ ಪರ್ವ,12,26
  • 478. ವೃತ್ತಿ, ಇರುವಿಕೆಯ ರೀತಿ, ಆದಿ ಪರ್ವ,11,20
  • 479. ವೃದ್ಧಿ, ಲಾಭ, ಉದ್ಯೋಗ ಪರ್ವ,9,67
  • 480. ವೃಷಸೇನ, ಕರ್ಣನ ಮಗ, ಆದಿ ಪರ್ವ,13,57
  • 481. ವೃಷಳು, ಶೂದ್ರಳು, ಉದ್ಯೋಗ ಪರ್ವ,4,48
  • 482. ವೃಷ್ಟಿ, ಮಳೆ, ಉದ್ಯೋಗ ಪರ್ವ,4,114
  • 483. ವೃಷ್ಟಿಬಿಂದು, ಮಳೆಯಹನಿ, ಉದ್ಯೋಗ ಪರ್ವ,4,52
  • 484. ವೆಂಠಣಿಸಿ, ಬಳಸಿ, ಸಭಾ ಪರ್ವ,3,46
  • 485. ವೆಂಠಣಿಸಿ, ಒಟ್ಟುಗೂಡಿಸಿ, ಭೀಷ್ಮ ಪರ್ವ,4,95
  • 486. ವೆಂಠಣಿಸು, ಸ್ಥಾನವನ್ನು ಪಡೆ., ಭೀಷ್ಮ ಪರ್ವ,7,4
  • 487. ವೆಂಠಣಿಸು, ಮುತ್ತು , ಗದಾ ಪರ್ವ,7,28, , , ಬಳಸು,
  • 488. ವೆಗ್ಗಳ, ಶ್ರೇಷ್ಠ , ಕರ್ಣ ಪರ್ವ,2,4
  • 489. ವೆಗ್ಗಳ, ಹೆಚ್ಚಳ/ಅಧಿಕ, ಉದ್ಯೋಗ ಪರ್ವ,9,9
  • 490. ವೆಗ್ಗಳಿಸು, ಹಿಗ್ಗು, ಕರ್ಣ ಪರ್ವ,12,3
  • 491. ವೆಗ್ಗಳಿಸು, ಅಧಿಕವಾಗು, ವಿರಾಟ ಪರ್ವ,2,52
  • 492. ವೆಗ್ಗಳೆ, ಹೆಚ್ಚುಗಾರಿಕೆ, ಗದಾ ಪರ್ವ,1,51
  • 493. ವೆಗ್ಗಳೆಯ, ಶ್ರೇಷ್ಠರಾದ, ದ್ರೋಣ ಪರ್ವ,2,27
  • 494. ವೆಗ್ಗಳೆಯ, ಹಿರಿತನದ , ಶಲ್ಯ ಪರ್ವ,3,26
  • 495. ವೆಗ್ಗಳೆಯ, ಹೆಚ್ಚಿನ, ದ್ರೋಣ ಪರ್ವ,3,14
  • 496. ವೆಗ್ಗಳೆಯವು, ಉತ್ತಮವಾದವು, ಅರಣ್ಯ ಪರ್ವ,14,38
  • 497. ವೇಗಾಯ್ಲ, ವೇಗಶಾಲಿ, ವಿರಾಟ ಪರ್ವ,6,52
  • 498. ವೇಗಾಯ್ಲ, ವೇಗವಾಗಿ ಸಾಗುವ, ವಿರಾಟ ಪರ್ವ,10,29
  • 499. ವೇಗಾಯ್ಲ ರೇಖೆ, ತ್ವರಿತವಾಗಿ ಚಲಿಸುವ ಅಂದ ಚೆಂದ, ಆದಿ ಪರ್ವ,7,28
  • 500. ವೇಗಾಯ್ಲತನ, ವೇಗಗಾರಿಕೆ, ಕರ್ಣ ಪರ್ವ,3,20
  • 501. ವೇಡೆ, ಬೇಲಿ, ಅರಣ್ಯ ಪರ್ವ,8,31
  • 502. ವೇಡೆಯವ, ಸುತ್ತುವರಿ, ಭೀಷ್ಮ ಪರ್ವ,3,
  • 503. ವೇಡೈಸಿ, ಸುತ್ತಮುತ್ತ, ಸಭಾ ಪರ್ವ,1,75
  • 504. ವೇಢೆ, ಸುತ್ತುಗಟ್ಟು, ಗದಾ ಪರ್ವ,1,8
  • 505. ವೇಢೆ, ಸುತ್ತು, ಆದಿ ಪರ್ವ,20,63
  • 506. ವೇಢೆ, ಮುತ್ತಿಗೆ, ಶಲ್ಯ ಪರ್ವ,3,11
  • 507. ವೇಢೆಯ, ಮುತ್ತಿಗೆ , ಶಲ್ಯ ಪರ್ವ,3,7
  • 508. ವೇಢೈಸು, ಸುತ್ತುವರಿ, ಗದಾ ಪರ್ವ,5,3, ,
  • 509. ವೇದಶಿರ, ಉಪನಿಷತ್ತು., ಆದಿ ಪರ್ವ,20,6
  • 510. ವೇದಹೀನರು, ವೇದಗಳನ್ನು ತೊರೆದವರು, ಉದ್ಯೋಗ ಪರ್ವ,4,89
  • 511. ವೇದಿ, ಯಜ್ಞಭೂಮಿ, ಆದಿ ಪರ್ವ,7,72
  • 512. ವೇದಿ, ಕಟ್ಟೆ, ಆದಿ ಪರ್ವ,8,69
  • 513. ವೇದಿ, ತಿಳಿದವ, ಉದ್ಯೋಗ ಪರ್ವ,3,45
  • 514. ವೇಧೆ, ಉಪದ್ರವ, ಉದ್ಯೋಗ ಪರ್ವ,3,47
  • 515. ವೇಲಾಯತರ, ಹೊಗಳು ಭಟ್ಟರ, ದ್ರೋಣ ಪರ್ವ,5,71
  • 516. ವೇಲೆ, ಎಲ್ಲೆ , ಅರಣ್ಯ ಪರ್ವ,18,1, ,
  • 517. ವೇಲೆ, ತೀರ, ಅರಣ್ಯ ಪರ್ವ,12,19
  • 518. ವೇಶ್ಯೆ, ವಾರಾಂಗನೆ , ಆದಿ ಪರ್ವ,4,55, ,
  • 519. ವೇಸಿ, ವೇಷಗಾರ, ಉದ್ಯೋಗ ಪರ್ವ,4,103
  • 520. ವೇಸಿಯ, ವೇಶ್ಯೆ, ಉದ್ಯೋಗ ಪರ್ವ,3,80
  • 521. ವೈಕಕ್ಷಕ, ಜನಿÀವಾರ, ಗದಾ ಪರ್ವ,9,17
  • 522. ವೈಕುಂಠ, ವಿಷ್ಣು., ಉದ್ಯೋಗ ಪರ್ವ,9,61
  • 523. ವೈಡೂರಿಯ, ವೈಡೂರ್ಯ, ಗದಾ ಪರ್ವ,4,15
  • 524. ವೈತಾಳಿಕ, ಸ್ತುತಿಪಾಠಕ, ಉದ್ಯೋಗ ಪರ್ವ,11,35
  • 525. ವೈತಾಳಿಕ, ರಾಜನನ್ನು ಎಚ್ಚರಿಸುವ ಮಂಗಳ ಪಾಠಕ, ಗದಾ ಪರ್ವ,2,16
  • 526. ವೈದಿಕ, ವೇದಕ್ಕೆ ಸಂಬಂಧಿಸಿದುದು, ಆದಿ ಪರ್ವ,15,4
  • 527. ವೈದಿಕಕ್ರಿಯೆ, ವೇದೋಕ್ತ ಕಾರ್ಯ, ಭೀಷ್ಮ ಪರ್ವ,8,3
  • 528. ವೈದಿಕಧರ್ಮ, ವೇದಗಳಲ್ಲಿ ಹೇಳಿರುವ ಧರ್ಮ, ಗದಾ ಪರ್ವ,5,8
  • 529. ವೈದಿಕವಿಧಾನ, ವೇದಗಳಲ್ಲಿ ತಿಳಿಸಿರುವ ಕ್ರಮಗಳು, ಗದಾ ಪರ್ವ,11,2
  • 530. ವೈದಿಕೋಕ್ತಿ, ವೇದ ಘೋಷ, ವಿರಾಟ ಪರ್ವ,10,76
  • 531. ವೈದೇಶಿಗರು, ಪರದೇಶಿಗಳು, ಆದಿ ಪರ್ವ,11,37
  • 532. ವೈಧವ್ಯವಿಧಿ, ವಿಧವೆಯಾಗುವ ದುರ್ದೈವ, ಗದಾ ಪರ್ವ,8,2
  • 533. ವೈನತೇಯ, ವಿನುತೆಯ ಮಗ , ಗದಾ ಪರ್ವ,10,6
  • 534. ವೈಮನಸ್ಸು, ದ್ವೇಷ, ಗದಾ ಪರ್ವ,7,26
  • 535. ವೈರ, ದ್ವೇಷ, ಆದಿ ಪರ್ವ,6,16
  • 536. ವೈರಬಂಧ, ಗಟ್ಟಿಯಾದ ಶತ್ರುತ್ವ, ಗದಾ ಪರ್ವ,11,4
  • 537. ವೈರಬಂಧ, ದ್ವೇಷ ಸಾಧನೆ, ಭೀಷ್ಮ ಪರ್ವ,9,42
  • 538. ವೈರಬಂಧ, ದ್ವೇಷದ ಸಂಬಂಧ., ಗದಾ ಪರ್ವ,8,38
  • 539. ವೈರಾಟ, ವಿರಾಟನ ಮಗ, ವಿರಾಟ ಪರ್ವ,8,26
  • 540. ವೈರಿದಲ್ಲಣ, ಶತ್ರುಗಳನ್ನು ನಡುಗಿಸುವ (ಅರ್ಜುನ), ವಿರಾಟ ಪರ್ವ,6,53
  • 541. ವೈರಿಭಟ ಸಂವರ್ತ, ಶತ್ರು ಸೈನಿಕರ ಪಾಲಿಗೆ ಬಿರುಗಾಳಿ (ಅರ್ಜುನ) ನೂತನ ಭೈರವ, ವಿರಾಟ ಪರ್ವ,5,0
  • 542. ವೈರಿಮದವೇತಂಡ, ವೈರಿಯೆಂಬ ಮದಿಸಿದ ಆನೆ, ಗದಾ ಪರ್ವ,10,3
  • 543. ವೈರಿವ್ರಾತ, ಶತ್ರುಸಮೂಹ, ವಿರಾಟ ಪರ್ವ,10,13
  • 544. ವೈರೋತ್ಕರವಿಸಂಸ್ಥುಳ, ವೈರವನ್ನು ಹೆಚ್ಚಿಸಿ ಪರಸ್ಪರ ವಿನಾಶ ಮಾಡುವ, ಗದಾ ಪರ್ವ,11,73
  • 545. ವೈವರ್ಣ, ಬಣ್ಣಗೆಟ್ಟಿತು, ಅರಣ್ಯ ಪರ್ವ,6,51
  • 546. ವೈವಾಹ, ವಿವಾಹ ಸಂದರ್ಭ, ಉದ್ಯೋಗ ಪರ್ವ,3,136
  • 547. ವೈಷ್ಣವ, ವಿಷ್ಣುವಿಗೆ ಸಂಬಂಧಿಸಿದ, ಗದಾ ಪರ್ವ,10,22
  • 548. ವೈಹಾಳಿ, ಆನೆಯ ಸವಾರಿ, ಉದ್ಯೋಗ ಪರ್ವ,3,65
  • 549. ವೈಹಾಳಿ, ಆನೆಕುದುರೆಗಳ ಏರಾಟ, ಸಭಾ ಪರ್ವ,12,25
  • 550. ವೈಹಾಳಿ, ಕುದುರೆಯ ಮೇಲೆ ಕುಳಿತು ವಿಹಾರ, ಆದಿ ಪರ್ವ,20,11
  • 551. ವ್ಯಗ್ರ, ಖಿನ್ನ, ವಿರಾಟ ಪರ್ವ,4,57
  • 552. ವ್ಯತಿಕರ, ದುರ್ಘಟನೆ, ಗದಾ ಪರ್ವ,8,22
  • 553. ವ್ಯಧಿಕರಣ, ವಿರುದ್ಧ ಮಾತು, ಆದಿ ಪರ್ವ,16,41
  • 554. ವ್ಯಪಗತ, ಶತ್ರುಗಳನ್ನು ಹಿಮ್ಮೆಟ್ಟಿಸುವವನು., ಉದ್ಯೋಗ ಪರ್ವ,11,31
  • 555. ವ್ಯಪಗಮನ, ನಾಶಹೊಂದಿದÀ, ಶಲ್ಯ ಪರ್ವ,1,34
  • 556. ವ್ಯವಧಾನ, ಸಮಯಾವಕಾಶ, ಗದಾ ಪರ್ವ,8,10
  • 557. ವ್ಯವಸಿತ, ವ್ಯವಸ್ಥೆ, ಗದಾ ಪರ್ವ,4,60
  • 558. ವ್ಯವಹೃತಿ, ವ್ಯವಹಾರ, ಆದಿ ಪರ್ವ,17,18
  • 559. ವ್ಯಸನ, ಚಟ, ಆದಿ ಪರ್ವ,4,13
  • 560. ವ್ಯಾಕರಣ, ವಿಶ್ಲೇಷಣೆ, ಆದಿ ಪರ್ವ,12,18
  • 561. ವ್ಯಾಕರಣ ಪಾಂಡಿತ್ಯ, ಒಂದು ವಿಷಯವನ್ನು ಸಂಪೂರ್ಣವಾಗಿ ತಿಳಿಯುವ ಬುದ್ಧಿವಂತಿಕೆ, ಗದಾ ಪರ್ವ,10,11
  • 562. ವ್ಯಾಜ, ನೆಪ, ಸಭಾ ಪರ್ವ,10,1
  • 563. ವ್ಯಾಧಿತ, ವ್ಯಾಧಿಗ್ರಸ್ಥ, ಗದಾ ಪರ್ವ,4,16
  • 564. ವ್ಯಾಪಕ, ಪ್ರಸಾರಕ., ಗದಾ ಪರ್ವ,8,40
  • 565. ವ್ಯಾಪಾದ, ದ್ರೋಹಚಿಂತನೆ, ಅರಣ್ಯ ಪರ್ವ,15,14
  • 566. ವ್ಯಾಪ್ತಿ, ಪ್ರಭಾವ, ಆದಿ ಪರ್ವ,16,11
  • 567. ವ್ಯಾಹೃತಿ, ಅಗ್ನಿಗೆ ಹವಿಸ್ಸನ್ನು ಕೊಡುವಾಗ, ಸಭಾ ಪರ್ವ,7,33
  • 568. ವ್ಯಾಳ, ಸೊಕ್ಕಿದ ಆನೆ. ಜಾಳಿಸು, ಗದಾ ಪರ್ವ,4,34
  • 569. ವ್ಯಾಳ, ಹಾವು , ಆದಿ ಪರ್ವ,2,6
  • 570. ವ್ಯೂಹ, ಕೈವಾಡ , ಅರಣ್ಯ ಪರ್ವ,15,19
  • 571. ವ್ರಜ, ಗೋಕುಲ, ಅರಣ್ಯ ಪರ್ವ,17,3
  • 572. ವ್ರಣ, ಗಾಯದಿಂ
  • 573. ವ್ರಣ, ಗಾಯದಿಂದಾದ ಹುಣ್ಣು, ಗದಾ ಪರ್ವ,3,13
  • 574. ವ್ರತಿ, ಯತಿ, ಆದಿ ಪರ್ವ,2,23
  • 575. ಶಂಬರರು, ಶಂಬರಾಸುರನಂಥವರು, ಸಭಾ ಪರ್ವ,12,87

[][][]

ಪರಿವಿಡಿ

[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

[ಸಂಪಾದಿಸಿ]
  1. ಕುಮಾರವ್ಯಾಸ ಕೋಶ
  2. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  3. ಸಿರಿಗನ್ನಡ ಅರ್ಥಕೋಶ