ಗದುಗಿನ ಭಾರತ ಪದಕೋಶ -ಶ,ಷ,

ವಿಕಿಸೋರ್ಸ್ದಿಂದ

<ಗದುಗಿನ ಭಾರತ ಪದಕೋಶ

ಶ,ಷ[ಸಂಪಾದಿಸಿ]

  • 1. ಶಂಬರರು, ಶಂಬರಾಸುರನಂಥವರು, ಸಭಾ ಪರ್ವ,12,87
  • 2. ಶಕ್ರ, ದೇವೆಂದ್ರ, ಸಭಾ ಪರ್ವ,2,129
  • 3. ಶಕ್ರನಂದನ, ಇಂದ್ರನ ಮಗ, ಆದಿ ಪರ್ವ,19,24
  • 4. ಶಠಾಗಮಿಕ, ವಂಚನೆಯಲ್ಲಿ ಪಾರಂಗತನಾದವನು., ಆದಿ ಪರ್ವ,14,29
  • 5. ಶತಖಂಡ, ನೂರು ತುಂಡು, ವಿರಾಟ ಪರ್ವ,4,49
  • 6. ಶತಮಖ, ನೂರು ಯಜ್ಞಗಳನ್ನು ಮಾಡಿದವನು, ಕರ್ಣ ಪರ್ವ,7,9
  • 7. ಶತಮನ್ಯು, ನೂರು ಯಾಗಗಳನ್ನು ಮಾಡಿದವನು, ಅರಣ್ಯ ಪರ್ವ,7,83
  • 8. ಶತಮನ್ಯು, ದೇವೇಂದ್ರ, ಭೀಷ್ಮ ಪರ್ವ,4,66
  • 9. ಶತಸಾವಿರ, ಲಕ್ಷ, ಆದಿ ಪರ್ವ,13,9
  • 10. ಶಫರಿ, ಮೀನು, ಆದಿ ಪರ್ವ,13,18
  • 11. ಶಮಿ, ಶಮೀವೃಕ್ಷ, ವಿರಾಟ ಪರ್ವ,6,31
  • 12. ಶರ, ಬಿಲ್ಲು ಬಾಣ, ಭೀಷ್ಮ ಪರ್ವ,6,37
  • 13. ಶರಜಾಲ, ಬಾಣಗಳಗುಂಪು, ಗದಾ ಪರ್ವ,2,7
  • 14. ಶರತಿಮಿರ, ಬಾಣ ಎಂಬ ಅಂಧಕಾರ, ವಿರಾಟ ಪರ್ವ,8,36
  • 15. ಶರಲವಣೆ, ಬಾಣಗಳ ಚಮತ್ಕಾರ, ಶಲ್ಯ ಪರ್ವ,2,21
  • 16. ಶರವಹ್ನಿ, ಬಾಣವೆಂಬ ಬೆಂಕಿ, ಗದಾ ಪರ್ವ,11,48
  • 17. ಶರವಳೆ, ಬಾಣಗಳ ಮಳೆ, ಶಲ್ಯ ಪರ್ವ,2,34
  • 18. ಶರವಿಸರ, ಬಾಣಗಳ ಸಮೂಹ., ಭೀಷ್ಮ ಪರ್ವ,9,39
  • 19. ಶರಶಯನ, ಬಾಣಗಳ ಸಜ್ಜೆ, ಭೀಷ್ಮ ಪರ್ವ,10,0
  • 20. ಶರಸಂಧಾನ, ಬಾಣ ಬಿಡುವ ವೈಖರಿ (ಹೂಡುವ, ವಿರಾಟ ಪರ್ವ,7,44
  • 21. ಶರಸನ್ಯಾಸ, ಶಸ್ತ್ರಾಸ್ತ್ರ ಹಿಡಿಯದಿರುವ ವ್ರತ, ದ್ರೋಣ ಪರ್ವ,5,42
  • 22. ಶರಸ್ತಂಭ, ಬಾಣಗಳ ಸಮೂಹ, ಆದಿ ಪರ್ವ,6,19
  • 23. ಶರಹತಿ, ಬಾಣಸಮೂಹ, ಭೀಷ್ಮ ಪರ್ವ,6,15
  • 24. ಶರಾನುಗತ ಶರಜಾಲ, ಒಂದು ಬಾಣದ ಹಿಂದೆ ಮೊತ್ತೊಂದರಂತೆ ಬರುವ ಬಾಣಗಳ ಜಾಲ, ಗದಾ ಪರ್ವ,1,48
  • 25. ಶರಾವಳಿ, ಬಾಣ ಸಮೂಹ, ಭೀಷ್ಮ ಪರ್ವ,8,56
  • 26. ಶರಾವಳಿಯ ಕೊನೆÉ, ಬಾಣಗಳ ಆಕ್ರಮಣ, ಕರ್ಣ ಪರ್ವ,20,32
  • 27. ಶರಾಸನ, ಬಾಣಕ್ಕೆ ಆಸನವಾದುದು, ಶಲ್ಯ ಪರ್ವ,3,28
  • 28. ಶರಾಳಿ, ಬಾಣ ಸಮೂಹ, ದ್ರೋಣ ಪರ್ವ,2,43
  • 29. ಶರೌಘ, ಬಾಣಗಳ ಗುಂಪು, ಗದಾ ಪರ್ವ,2,29
  • 30. ಶರೌಘದ, ಬಾಣಗಳ, ವಿರಾಟ ಪರ್ವ,6,35
  • 31. ಶರೌಘಾನಲ, ಬಾಣ ಸಮೂಹ ಎಂಬ ಬೆಂಕಿ, ವಿರಾಟ ಪರ್ವ,6,35
  • 32. ಶಲ, ಮುಳ್ಳುಹಂದಿ, ಆದಿ ಪರ್ವ,20,51
  • 33. ಶಶಿಕಾಂತ, ಚಂದ್ರಶಿಲೆ, ಉದ್ಯೋಗ ಪರ್ವ,9,45
  • 34. ಶಶಿಕಾಂತ, ಚಂದ್ರಕಾಂತ, ಆದಿ ಪರ್ವ,20,49
  • 35. ಶಶಿಕಿರಣ ಪೀಯೂಷ, ಚಂದ್ರಕಿರಣವೆಂಬ ಅಮೃತ, ದ್ರೋಣ ಪರ್ವ,18,69
  • 36. ಶಶಿಕುಲ, ಚಂದ್ರವಂಶ (ಪಾಂಡವ, ಗದಾ ಪರ್ವ,10,24
  • 37. ಶಶಿಕುಲ ಮತ್ತವಾರಣ, ಶಶಿಕುಲ ಪಾಂಡವರ ಚಂದ್ರವಂಶದ ಮತ್ತವಾರಣ, ವಿರಾಟ ಪರ್ವ,9,32
  • 38. ಶಶಿಮೌಳಿ, ಚಂದ್ರನನ್ನು ಶಿರದಲ್ಲಿ ಧರಿಸಿರುವವನು, ಗದಾ ಪರ್ವ,9,23
  • 39. ಶಶಿರುಚಿ, ಬೆಳದಿಂಗಳು, ಗದಾ ಪರ್ವ,3,20
  • 40. ಶಶಿವದನೆ, ಚಂದ, ವಿರಾಟ ಪರ್ವ,3,75
  • 41. ಶಸ್ತ್ರಚ್ಯುತಿ, ಆಯುಧವನ್ನು ಕೈಬಿಟ್ಟು, ಗದಾ ಪರ್ವ,11,24
  • 42. ಶಸ್ತ್ರಜ್ವಾಲೆ, ಆಯುಧಗಳ ಬೆಳಕು, ಕರ್ಣ ಪರ್ವ,8,7
  • 43. ಶಸ್ತ್ರಾವಳಿ, ಶಸ್ತ್ರ ಸಮೂಹ, ವಿರಾಟ ಪರ್ವ,8,36
  • 44. ಶಸ್ತ್ರೌಘದಲಿ, ಆಯುಧಗಳ ರಾಶಿಯಿಂದ, ಸಭಾ ಪರ್ವ,1,63
  • 45. ಶಾಕಾವಳಿ, ತರಕಾರಿಗಳ ಸಮೂಹ, ವಿರಾಟ ಪರ್ವ,3,36
  • 46. ಶಾಕಿನಿ, ಶಾಕಿನಿ ಡಾಕಿನಿ ಇವರು ಸ್ತ್ರೀ ಪಿಶಾಚಗಳು ಎಂಬ ಕವಿ ಸಮಯ. ಶಾಕಿನಿ ದುರ್ಗೆಯ ಪರಿಚಾರಕಿಯಲ್ಲಿ ಒಬ್ಬಳು ಕ್ಷುದ್ರದೇವತೆ. ಶಾಕಿನಿ ಡಾಕಿನಿಯರು ನರಭಕ್ಷಕಿಯರು, ವಿರಾಟ ಪರ್ವ,3,72
  • 47. ಶಾಕಿನಿ, ರಣಪಿಶಾಚಿ, ಗದಾ ಪರ್ವ,3,10
  • 48. ಶಾಕಿನಿ, ಒಂದು ಕ್ಷುದ್ರದೇವತೆ, ಉದ್ಯೋಗ ಪರ್ವ,6,30
  • 49. ಶಾಕಿನಿ, ಕ್ಷುದ್ರ ರಾಕ್ಷಸಿ, ವಿರಾಟ ಪರ್ವ,9,35
  • 50. ಶಾಕಿನಿಯರು, ರಕ್ತಪಾನ ಮಾಡುವ ಕ್ಷುದ್ರ ದೇವತೆಯರು, ಭೀಷ್ಮ ಪರ್ವ,8,46
  • 51. ಶಾಕಿನೀ ನಿವಹ, ಪಿಶಾಚ ಪರಿವಾರ, ಭೀಷ್ಮ ಪರ್ವ,4,82
  • 52. ಶಾತಕುಂಭಾಸನ, ಸ್ವರ್ಣಪೀಠ, ಆದಿ ಪರ್ವ,7,54
  • 53. ಶಾಪಾರುಹ, ಶಾಪಕ್ಕೆ ಅರ್ಹನಾದವ, ಗದಾ ಪರ್ವ,11,64
  • 54. ಶಾಬರ, ಬೇಟೆಗಾರ ಉಡುಪು, ಅರಣ್ಯ ಪರ್ವ,5,29
  • 55. ಶಾಬರ, ಬೇಟೆಗಾರರ. ಶಬರರ, ಅರಣ್ಯ ಪರ್ವ,15,22
  • 56. ಶಾಲಿವನ, ಬತ್ತದ ಗದ್ದೆ, ಕರ್ಣ ಪರ್ವ,1,11
  • 57. ಶಾಲೀ, ಭತ್ತ, ಸಭಾ ಪರ್ವ,2,57
  • 58. ಶಾಲೆ, ಕಟ್ಟಡ, ಆದಿ ಪರ್ವ,12,6
  • 59. ಶಾಸನ, ದಾಖಲೆ, ಆದಿ ಪರ್ವ,19,14
  • 60. ಶಾಸ್ತ್ರೌಘ, ಶಾಸ್ತ್ರಸಮೂಹ, ಗದಾ ಪರ್ವ,8,30
  • 61. ಶಾಳಿವನ, ಬತ್ತದ ಗದ್ದೆ, ಗದಾ ಪರ್ವ,3,28
  • 62. ಶಾಳೀವನ, ಬತ್ತದ ಗದ್ದೆ, ದ್ರೋಣ ಪರ್ವ,18,4
  • 63. ಶಿಂಶುಮಾರ, ಒಂದು ನಕ್ಷತ್ರಪುಂಜ, ಅರಣ್ಯ ಪರ್ವ,7,68
  • 64. ಶಿಕ್ಷಾ, ಶಿಕ್ಷಣ, ಆದಿ ಪರ್ವ,7,42
  • 65. ಶಿಖಂಡಿ, ಮೊದಲು ಸ್ತ್ರೀತ್ವ ಹೊಂದಿ ಆಮೇಲೆ ಪುರುಷತ್ವ ಪಡೆದಿರುವನು. ಹೆಣ್ಗಂಡು, ಭೀಷ್ಮ ಪರ್ವ,9,51
  • 66. ಶಿಥಿಲ, ಸಡಿಲಾದ , ಗದಾ ಪರ್ವ,10,2
  • 67. ಶಿಥಿಲ, ಕೃಶವಾದ, ಉದ್ಯೋಗ ಪರ್ವ,2,3
  • 68. ಶಿರ, ಪರ್ವತದ ಶೃಂಗ, ವಿರಾಟ ಪರ್ವ,2,56
  • 69. ಶಿರವ ಒಲೆದ, ತಲೆದೂಗಿದನು , ಭೀಷ್ಮ ಪರ್ವ,6,46
  • 70. ಶಿರೋವಕುಂಠನ, ತಲೆಮುಸುಕು., ಶಲ್ಯ ಪರ್ವ,1,14
  • 71. ಶಿಲಾಳಿಯಲಿ, ಕೆತ್ತನೆಗೆ ಬೇಕಾದ ಕಲ್ಲಿನ ರಾಶಿಯಿಂದ, ಸಭಾ ಪರ್ವ,1,63
  • 72. ಶಿಲೋಚ್ಛಯ, ಕಲ್ಲುಗಳಿಂದ ಕೂಡಿದುದು, ಆದಿ ಪರ್ವ,17,2
  • 73. ಶಿಲ್ಪಜನ, ಶಿಲ್ಪದ ಕೆಲಸ ಮಾಡುವವರು, ಗದಾ ಪರ್ವ,11,16
  • 74. ಶಿವ (ದಕ್ಷನ ಯಜ್ಞವನ್ನು ಶಿವ ನಾಶಮಾಡಿದ) ಸಮಜೋಳಿ, ಸಮ ಜೋಡಿ, ಗದಾ ಪರ್ವ,9,9
  • 75. ಶಿವ. ಬಾಹಿರ, ಬಹಿಷ್ಕøತ, ಆದಿ ಪರ್ವ,16,50
  • 76. ಶಿವÀಮಯ, ಮಂಗಳಮಯ., ಗದಾ ಪರ್ವ,1,21
  • 77. ಶಿಶುತನ, ಬಾಲ್ಯ, ಭೀಷ್ಮ ಪರ್ವ,7,23
  • 78. ಶಿಷ್ಟ, ಸಭ್ಯ, ಉದ್ಯೋಗ ಪರ್ವ,5,14
  • 79. ಶಿಷ್ಟರು, ಸಜ್ಜನರು, ಉದ್ಯೋಗ ಪರ್ವ,1,5
  • 80. ಶಿಳೀಮುಖ, ಬಾಣ ಈಸು, ಕರ್ಣ ಪರ್ವ,14,18
  • 81. ಶೀತಳ, ತಂಪು, ಉದ್ಯೋಗ ಪರ್ವ,6,11
  • 82. ಶುಂಡಾಲಘಟೆ, ಆನೆಗಳ ಸಮೂಹ, ಕರ್ಣ ಪರ್ವ,11,16
  • 83. ಶುಕ, ಗಿಣಿ, ಆದಿ ಪರ್ವ,20,52
  • 84. ಶುಕಚಯ, ಗಿಳಿಯಹಿಂಡು, ಉದ್ಯೋಗ ಪರ್ವ,7,27
  • 85. ಶುದ್ಧ, ಬರಿಯ, ಆದಿ ಪರ್ವ,15,13
  • 86. ಶುಭಗ್ರಹದೃಷ್ಟಿ, ಶುಭಗ್ರಹ ದೃಷ್ಟಿಯೂ, ಸಭಾ ಪರ್ವ,3,14
  • 87. ಶುಭೌಘ, ಶುಭ ಸಮಾಚಾರಗಳ ಸಮೂಹ, ವಿರಾಟ ಪರ್ವ,10,79
  • 88. ಶುಶ್ರೂಷೆ, ಉಪಚಾರ, ಆದಿ ಪರ್ವ,19,31
  • 89. ಶೂದ್ರತೆಗೆ, ಮೈಲಿಗೆಗೆ, ಭೀಷ್ಮ ಪರ್ವ,4,6
  • 90. ಶೂನ್ಯ ಶಿಬಿರ, ಖಾಲಿಯಾಗಿರುವ ಶಿಬಿರ, ಗದಾ ಪರ್ವ,8,46
  • 91. ಶೂರ, ಧೀರ, ಆದಿ ಪರ್ವ,15,4
  • 92. ಶೂಲ, ತ್ರಿಶೂಲ, ಭೀಷ್ಮ ಪರ್ವ,10,5
  • 93. ಶೂಲ ಮರುಮೊನೆಗೊಳ್, ಎದೆಗೆ ನೆಟ್ಟ ಶೂಲವು ಬೆನ್ನಿಂದ ಆಚೆ ಬಂದ ಹಾಗೆ., ವಿರಾಟ ಪರ್ವ,3,54
  • 94. ಶೃಂಖಳಿತ, ಕಟ್ಟಿಹಾಕಲ್ಪಟ್ಟ, ಗದಾ ಪರ್ವ,5,8
  • 95. ಶೃಂಗ, ಜೀರ್ಕೊಳವೆ, ಆದಿ ಪರ್ವ,12,16
  • 96. ಶೃಂಗಾರ, ಭೂಷಣಪ್ರಾಯ, ಭೀಷ್ಮ ಪರ್ವ,3,22
  • 97. ಶೃಂಗಿ, ಕೊಂಬಿರುವ ಪ್ರಾಣಿ, ಸಭಾ ಪರ್ವ,1,59
  • 98. ಶೇಷ, ಉಳಿದಿರುವುದು., ಶಲ್ಯ ಪರ್ವ,2,8
  • 99. ಶೇಷ, ಉಳಿದ, ಆದಿ ಪರ್ವ,8,27
  • 100. ಶೇಷ, ಉಚ್ಚಿಷ್ಟ, ಆದಿ ಪರ್ವ,16,45
  • 101. ಶೇಷಕ್ರಿಯ, ಸತ್ತವರಿಗೆ ನಡೆಸುವ ಉತ್ತರಕ್ರಿಯೆ, ಸಭಾ ಪರ್ವ,2,128
  • 102. ಶೇಷಾನ್ನ, ಉಳಿದ ಅನ್ನ, ಆದಿ ಪರ್ವ,10,32
  • 103. ಶೈತ್ಯ ಪೂರ, ತಣ್ಣಗಿನ ವಾತಾವರಣದಲ್ಲಿ, ಗದಾ ಪರ್ವ,3,37
  • 104. ಶೈಲಾಗ್ರದಲಿ, ಗಿರಿವ್ರಜ ಬೆಟ್ಟದ ಮೇಲುಭಾಗದಲ್ಲಿ, ಸಭಾ ಪರ್ವ,2,59
  • 105. ಶೋಕ ಪನ್ನಗ ಘೋರ ವಿಷ, ಶೋಕವೆಂಬ ಭಯಂಕರವಾದ ಹಾವಿನ ವಿಷ, ಗದಾ ಪರ್ವ,11,9
  • 106. ಶೋಕಕ್ರೋಧದುಪಟಳ, ಶೋಕ ಮತ್ತು ಕೋಪದ ತೊಂದರೆ, ಗದಾ ಪರ್ವ,11,45
  • 107. ಶೋಕಜಲಧಿ, ದುಃಖದ ಸಮುದ್ರ, ಗದಾ ಪರ್ವ,8,57
  • 108. ಶೋಕವಹ್ನಿ, ಶೋಕಾಗ್ನಿ, ಗದಾ ಪರ್ವ,11,18
  • 109. ಶೋಕವಹ್ನಿ, ದುಃಖದ ಬೆಂಕಿ, ಗದಾ ಪರ್ವ,12,9
  • 110. ಶೋಕಶಿಖಿ, ಶೋಕಾಗ್ನಿ, ಶಲ್ಯ ಪರ್ವ,1,6
  • 111. ಶೋಕಾಗ್ನಿ, ಶೋಕವೆಂಬ ಅಗ್ನಿ, ಗದಾ ಪರ್ವ,11,12
  • 112. ಶೋಕಾಡÀಂಬರ, ದುಃಖದ ಪ್ರಕಟ, ಗದಾ ಪರ್ವ,4,19
  • 113. ಶೋಕಾನಳ, ಶೋಕಾಗ್ನಿ, ಗದಾ ಪರ್ವ,11,31
  • 114. ಶೋಕಾರ್ತರವ, ಶೋಕದ ನೋವಿನ ಕೂಗು, ಆದಿ ಪರ್ವ,10,8
  • 115. ಶೋಕೋತ್ತರ, ಹೆಚ್ಚಾದ ಶೋಕ, ಗದಾ ಪರ್ವ,12,8
  • 116. ಶೋಕೋದಧಿ, ದುಃಖ ಸಾಗರ, ದ್ರೋಣ ಪರ್ವ,7,37
  • 117. ಶೋಕೋದ್ರೇಕ, (ಶೋಕ+ಉದ್ರೇಕ) ದುಃಖ ಮತ್ತು ಕೋಪ, ಗದಾ ಪರ್ವ,11,48
  • 118. ಶೋಣ ಸಲಿಲ, ಕೆಂಪುನೀರು, ಭೀಷ್ಮ ಪರ್ವ,8,15
  • 119. ಶೋಣಿತ, ರಕುತ, ಭೀಷ್ಮ ಪರ್ವ,4,29
  • 120. ಶೋಣಿತದ ಸಾಗರದಿ, ರಕ್ತ ಪ್ರವಾಹದಲ್ಲಿ, ಭೀಷ್ಮ ಪರ್ವ,8,38
  • 121. ಶೋಣಿತಧಾರೆ, ರಕ್ತದ ಪ್ರವಾಹ, ಗದಾ ಪರ್ವ,7,25
  • 122. ಶೋಧಿಸು, ಹುಡುಕು, ಗದಾ ಪರ್ವ,12,0
  • 123. ಶೋಭಾ, ಅಲಂಕಾರ, ಆದಿ ಪರ್ವ,3,4
  • 124. ಶೋಭಿತ, ಅಲಂಕೃತವಾಗಿದ್ದ, ಆದಿ ಪರ್ವ,13,5
  • 125. ಶೌಚ, ಸ್ವಚ್ಛ, ಉದ್ಯೋಗ ಪರ್ವ,4,109
  • 126. ಶೌಚಾಚಮನ, ಶುದ್ಧಿಗಾಗಿ ಮಾಡುವ ವೈದಿಕ ಕ್ರಿಯೆ, ಗದಾ ಪರ್ವ,8,54
  • 127. ಶೌರಿ, ವಿಷ್ಣು, ಆದಿ ಪರ್ವ,1,5
  • 128. ಶೌರ್ಯ, ಶೂರತನ, ಆದಿ ಪರ್ವ,10,5
  • 129. ಶೌರ್ಯಪಣ, ಶೌರ್ಯಪ್ರತಿಜ್ಞೆ, ಗದಾ ಪರ್ವ,10,17
  • 130. ಶ್ರಮ, ಸಾಧನ, ಆದಿ ಪರ್ವ,7,33
  • 131. ಶ್ರಮ, ಶಸ್ತ್ರಾಭ್ಯಾಸ, ಆದಿ ಪರ್ವ,6,24
  • 132. ಶ್ರಮ, ಅಭ್ಯಾಸ, ಆದಿ ಪರ್ವ,6,42
  • 133. ಶ್ರಮ, ಆಯಾಸ., ಉದ್ಯೋಗ ಪರ್ವ,6,29
  • 134. ಶ್ರೀನಿಜ, ಮಂಗಳಕರ ಸತ್ಯ ಸ್ವರೂಪ, ಭೀಷ್ಮ ಪರ್ವ,3,64
  • 135. ಶ್ರೀಮೂರ್ತಿ, ಮಂಗಳ ಸ್ವರೂಪ, ಭೀಷ್ಮ ಪರ್ವ,3,63
  • 136. ಶ್ರೀಲತಾಂಗಿ, ಶ್ರೀಲಕ್ಷ್ಮಿ, ಉದ್ಯೋಗ ಪರ್ವ,1,1
  • 137. ಶ್ರುತಶಾಸ್ತ್ರರು, ಶಾಸ್ತ್ರವನ್ನು ತಿಳಿದವರು., ಗದಾ ಪರ್ವ,5,28
  • 138. ಶ್ರುತಿಕೋಟಿ, ಅಪಾರವಾದ ವೇದ ರಾಶಿ. ಮುರಿ, ಕರ್ಣ ಪರ್ವ,7,15
  • 139. ಶ್ರುತಿಪತ್ರ, ಕಿವಿಯೋಲೆ, ಕರ್ಣ ಪರ್ವ,21,23
  • 140. ಖೇಚರ, ಆಕಾಶಸಂಚಾರಿ, ಗದಾ ಪರ್ವ,5,25
  • 141. ಶ್ರೋತ್ರಿಯ, ವೇದವನ್ನರಿತ ಬ್ರಾಹ್ಮಣ, ಆದಿ ಪರ್ವ,15,11
  • 142. ಶ್ರೌತ, ವೇದ ಸಮ್ಮತವಾದ, ಸಭಾ ಪರ್ವ,8,15
  • 143. ಶ್ವಾನ, ನಾಯಿ, ಉದ್ಯೋಗ ಪರ್ವ,4,74
  • 144. ಶ್ವಾಸ, ಉಸಿರಾಟದ ಗಾಳಿ, ಗದಾ ಪರ್ವ,7,8
  • 145. ಶ್ವೇತಹಯ, ಅರ್ಜುನನ ಹೆಸರು, ದ್ರೋಣ ಪರ್ವ,10,8
  • 146. ಷಟ್‍ತರ್ಕ, ಸಾಂಖ್ಯ , ಭೀಷ್ಮ ಪರ್ವ,3,64, , , ವೈಶೇಷಿಕ, ಮೀಮಾಂಸ, ವೇದಾಂತವೆಂಬ 6 ಶಾಸ್ತ್ರಗಳ,
  • 147. ಷಡುರಸ, ಸಿಹಿ, ಉದ್ಯೋಗ ಪರ್ವ,8,64, , , ಹುಳಿ , ಒಗರು , ಕಹಿ,
  • 148. ಢವಣಿಸು, ಢವಣಿ ಎಂಬ ಚÀರ್ಮವಾದ್ಯವನ್ನು ಬಾರಿಸು. ಢಾಣೆ, ಕರ್ಣ ಪರ್ವ,7,13
  • 149. ಸಂಕರುಷಣ, ಬಲರಾಮ (ಒಂದು ಗರ್ಭದಿಂದ ಮತ್ತೊಂದು ಗರ್ಭಕ್ಕೆ ಸಂಕ್ರಮಿಸಿದ ಕಾರಣ ಸಂಕರ್ಷಣನೆಂದು ಹೆಸರು), ಆದಿ ಪರ್ವ,19,40

[೧][೨][೩]

ನೋಡಿ[ಸಂಪಾದಿಸಿ]

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಕುಮಾರವ್ಯಾಸ ಕೋಶ
  2. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  3. ಸಿರಿಗನ್ನಡ ಅರ್ಥಕೋಶ