ಗದುಗಿನ ಭಾರತ ಪದಕೋಶ -ಸ,

ವಿಕಿಸೋರ್ಸ್ದಿಂದ

<ಗದುಗಿನ ಭಾರತ ಪದಕೋಶ

[ಸಂಪಾದಿಸಿ]

  • 1. ಷಟ್‍ತರ್ಕ, ಸಾಂಖ್ಯ , ಭೀಷ್ಮ ಪರ್ವ,3,64, , , ವೈಶೇಷಿಕ, ಮೀಮಾಂಸ, ವೇದಾಂತವೆಂಬ 6 ಶಾಸ್ತ್ರಗಳ,
  • 2. ಷಡುರಸ, ಸಿಹಿ, ಉದ್ಯೋಗ ಪರ್ವ,8,64, , , ಹುಳಿ , ಒಗರು , ಕಹಿ,
  • 3. ಢವಣಿಸು, ಢವಣಿ ಎಂಬ ಚÀರ್ಮವಾದ್ಯವನ್ನು ಬಾರಿಸು. ಢಾಣೆ, ಕರ್ಣ ಪರ್ವ,7,13
  • 4. ಸಂಕರುಷಣ, ಬಲರಾಮ (ಒಂದು ಗರ್ಭದಿಂದ ಮತ್ತೊಂದು ಗರ್ಭಕ್ಕೆ ಸಂಕ್ರಮಿಸಿದ ಕಾರಣ ಸಂಕರ್ಷಣನೆಂದು ಹೆಸರು), ಆದಿ ಪರ್ವ,19,40
  • 5. ಸಂಕಲ, ಹಿಂಡು, ಉದ್ಯೋಗ ಪರ್ವ,4,13
  • 6. ಸಂಕಲೆ, ಸಂಕೋಲೆ, ದ್ರೋಣ ಪರ್ವ,3,2
  • 7. ಸಂಕಲೆವನೆ, ಸೆರೆಮನೆ, ಅರಣ್ಯ ಪರ್ವ,8,10
  • 8. ಸಂಕುಲ, ಹಿಂಡು/ಸಮೂಹ., ಉದ್ಯೋಗ ಪರ್ವ,4,104
  • 9. ಸಂಕೇತ, ಒಪ್ಪಂದ, ಗದಾ ಪರ್ವ,5,46
  • 10. ಸಂಕ್ರಮಿಸು, ನಡೆಸು, ಆದಿ ಪರ್ವ,11,46
  • 11. ಸಂಗ, ಸೇರಿಕೆ, ಆದಿ ಪರ್ವ,12,2
  • 12. ಸಂಗಡಿಸು, ಒಂದುಗೂಡು, ಶಲ್ಯ ಪರ್ವ,3,9
  • 13. ಸಂಗತ, ಸಂಗಮ, ಆದಿ ಪರ್ವ,19,12
  • 14. ಸಂಗತ, ಜೊತೆಯಲ್ಲಿದ್ದವನು, ಗದಾ ಪರ್ವ,5,28
  • 15. ಸಂಗತಿ, ಪ್ರಸಂಗ, ಆದಿ ಪರ್ವ,7,52
  • 16. ಸಂಗರ, ಸಂಗ್ರಾಮ(ಸಂ) ಯುದ್ಧ., ಗದಾ ಪರ್ವ,8,47
  • 17. ಸಂಗಾತ, ಜೊತೆಯಲ್ಲಿ, ಉದ್ಯೋಗ ಪರ್ವ,7,15
  • 18. ಸಂಗಿ, ಆಸಕ್ತಿ, ಉದ್ಯೋಗ ಪರ್ವ,9,70
  • 19. ಸಂಘಟನೆಗೆ, ಸೈನ್ಯವನ್ನು ಒಂದೆಡೆ ಸೇರಿಸಲು, ಶಲ್ಯ ಪರ್ವ,3,53
  • 20. ಸಂಘಟಿಸಿ, ನಿಯೋಜಿಸಿ, ಭೀಷ್ಮ ಪರ್ವ,3,3
  • 21. ಸಂಘಟಿಸು, ಉಂಟಾಗು, ಆದಿ ಪರ್ವ,19,4
  • 22. ಸಂಚಕಾರ, ಮುಂಗಡ (ಮೊದಲು ಘೋಷಿಸಿ ಅನಂತರ ಕೊಲ್ಲುವಿಕೆ), ವಿರಾಟ ಪರ್ವ,3,71
  • 23. ಸಂಚದ, ಸಂಪರ್ಕ, ವಿರಾಟ ಪರ್ವ,8,82
  • 24. ಸಂಚರಣೆ, ಸಂಚಾರ, ಆದಿ ಪರ್ವ,11,12
  • 25. ಸಂಚರಿಸಿ, ತಿರುಗಾಡಿ, ಆದಿ ಪರ್ವ,20,11
  • 26. ಸಂಚಲ, ನಡುಕ, ಭೀಷ್ಮ ಪರ್ವ,6,17
  • 27. ಸಂಚಿತ, ಸಂಗ್ರಹಿತವಾದ, ಗದಾ ಪರ್ವ,8,21
  • 28. ಸಂಚಿತ, ಕೂಡಿದ, ವಿರಾಟ ಪರ್ವ,5,48
  • 29. ಸಂಚಿಸು, ಗಳಿಸು/ಪಡೆ, ಉದ್ಯೋಗ ಪರ್ವ,9,1
  • 30. ಸಂಜನಿತ, ಹುಟ್ಟಿದುದು , ಗದಾ ಪರ್ವ,5,46
  • 31. ಸಂಜನಿಸಿ, ಉಂಟುಮಾಡಿ, ಸಭಾ ಪರ್ವ,1,40
  • 32. ಸಂಜನಿಸು, ಸೃಷ್ಟಿಸು, ಗದಾ ಪರ್ವ,11,37
  • 33. ಸಂಜನಿಸು, ಪ್ರಕಟಗೊಳ್ಳು, ಆದಿ ಪರ್ವ,8,32
  • 34. ಸಂಜನಿಸು, ಉಂಟಾಗು, ಭೀಷ್ಮ ಪರ್ವ,4,98
  • 35. ಸಂಜನಿಸು, ಹುಟ್ಟು, ಉದ್ಯೋಗ ಪರ್ವ,6,7
  • 36. ಸಂಜಾತ, ಜನಿಸಿದ, ಆದಿ ಪರ್ವ,20,10
  • 37. ಸಂಜೀವನಿ, ಸಂಜೀವನಿ ಎಂದರೆ ಬದುಕನ್ನು ಕೊಡುವ ಒಂದು ಬಳ್ಳಿ, ವಿರಾಟ ಪರ್ವ,10,35
  • 38. ಸಂತತಿ, ಪೀಳಿಗೆ, ಆದಿ ಪರ್ವ,10,13
  • 39. ಸಂತಮಸ, ಗಾಢಾಂಧಕಾರ, ಆದಿ ಪರ್ವ,20,44
  • 40. ಸಂತರ್ಪಣ, ತೃಪ್ತಿಪಡಿಸುವುದು, ಉದ್ಯೋಗ ಪರ್ವ,4,71
  • 41. ಸಂತವಿಡಿ, ಸಾಂತ್ವನಗೊಳಿಸು, ಆದಿ ಪರ್ವ,6,39
  • 42. ಸಂತವಿಡು, ಸಂತಯಿಸು, ಗದಾ ಪರ್ವ,4,7
  • 43. ಸಂತವಿಸಿ, ಸಮಾಧಾನ ಮಾಡಿ , ಸಭಾ ಪರ್ವ,5,8
  • 44. ಸಂತವಿಸು, ಸಂತೈಸು, ಗದಾ ಪರ್ವ,2,32
  • 45. ಸಂತವಿಸು, ತಡೆದುಕೋ, ವಿರಾಟ ಪರ್ವ,9,11
  • 46. ಸಂತಾನ, ಸಂತತಿ, ಆದಿ ಪರ್ವ,10,5
  • 47. ಸಂತೈಸಿ, ಸಮಾಧಾನಿಸಿ, ಗದಾ ಪರ್ವ,6,32
  • 48. ಸಂತೈಸು, ಸಂಭಾಳಿಸು, ಗದಾ ಪರ್ವ,2,22
  • 49. ಸಂತೈಸು, ಸಮಾಧಾನಪಡಿಸು., ಗದಾ ಪರ್ವ,11,72
  • 50. ಸಂದ, ಸಮ್ಮತವಾದ, ಆದಿ ಪರ್ವ,8,92
  • 51. ಸಂದ, ಪ್ರಯೋಗಿಸಿದÀ, ವಿರಾಟ ಪರ್ವ,7,40
  • 52. ಸಂದ, ಪ್ರಖ್ಯಾತ, ಆದಿ ಪರ್ವ,6,30
  • 53. ಸಂದಣಿ, ಹಿಂಡು, ಉದ್ಯೋಗ ಪರ್ವ,7,30
  • 54. ಸಂದಣಿ, ಜನಸಮೂಹ, ಗದಾ ಪರ್ವ,11,22
  • 55. ಸಂದಣಿಸಿ, ಒಟ್ಟಾಗಿ ಸೇರಿ, ಭೀಷ್ಮ ಪರ್ವ,1,3
  • 56. ಸಂದಣಿಸಿದುದು, ಸೇರಿದವು, ಉದ್ಯೋಗ ಪರ್ವ,11,38
  • 57. ಸಂದಣಿಸು, ಒಟ್ಟಾಗಿ ಬರು, ಅರಣ್ಯ ಪರ್ವ,4,18
  • 58. ಸಂದನು, ಪ್ರಸಿದ್ಧನಾದನು, ಆದಿ ಪರ್ವ,2,19
  • 59. ಸಂದನು, ಕೂಡಿಕೊಂಡನು, ಆದಿ ಪರ್ವ,8,84
  • 60. ಸಂದವು, ಕಳೆದವು, ಶಲ್ಯ ಪರ್ವ,1,34
  • 61. ಸಂದಷ್ಟ, ಕಚ್ಚಿದ, ಉದ್ಯೋಗ ಪರ್ವ,4,12
  • 62. ಸಂದಿಗ್ಧ, ಜಟಿಲ, ಆದಿ ಪರ್ವ,19,5
  • 63. ಸಂದುಗಟ್ಟು, ಸರಿಯಾದ ಕಾಲ, ಆದಿ ಪರ್ವ,8,86
  • 64. ಸಂದುದು, ಸಂಪೂರ್ಣವಾದುದು, ಗದಾ ಪರ್ವ,8,11
  • 65. ಸಂದುದು, ನಡೆಯಿತು, ಗದಾ ಪರ್ವ,13,0
  • 66. ಸಂದುದೇ, ಮುಗಿಯಿತೇ, ಗದಾ ಪರ್ವ,11,23
  • 67. ಸಂದೆಯ, ಸಂದೇಹ (ಸಂ) ಬಲುಹು, ಗದಾ ಪರ್ವ,5,51
  • 68. ಸಂಧಿವಿಗ್ರಹ, ರಾಯಭಾರ, ಉದ್ಯೋಗ ಪರ್ವ,3,89
  • 69. ಸಂಧಿಸೆನು, ಹೂಡುವುದಿಲ್ಲ., ಭೀಷ್ಮ ಪರ್ವ,1,38
  • 70. ಸಂಧ್ಯಾಭಿವಂದನ, ಸಂಧ್ಯಾವಂದನೆ, ಭೀಷ್ಮ ಪರ್ವ,8,8
  • 71. ಸಂಧ್ಯಾವಂದನೆ, ತ್ರಿಕಾಲಗಳಲ್ಲಿ ಮಾಡುವ ಸಂಧ್ಯಾ ದೇವಿಯ ವಂದನೆಯ ಕ್ರಿಯೆ, ಗದಾ ಪರ್ವ,8,54
  • 72. ಸಂಧ್ಯೋಪಾಸ್ಥೆ, ಸಂಧ್ಯಾನ, ಆದಿ ಪರ್ವ,10,6
  • 73. ಸಂನಿಧಿ, ಸಾಮೀಪ್ಯ, ಆದಿ ಪರ್ವ,16,41
  • 74. ಸಂಪದ, ಐಶ್ವರ್ಯ, ಶಲ್ಯ ಪರ್ವ,3,60
  • 75. ಸಂಪನ್ನ, ಉತ್ತಮವಾದ, ಗದಾ ಪರ್ವ,12,2
  • 76. ಸಂಪನ್ನ ಶಠ, ಶಠರÀಲ್ಲಿ, ಗದಾ ಪರ್ವ,11,3
  • 77. ಸಂಪ್ರತಿ, ಸಂಧಾನ, ಉದ್ಯೋಗ ಪರ್ವ,2,38
  • 78. ಸಂಪ್ರತಿ, ಸಂಧಾನ., ಉದ್ಯೋಗ ಪರ್ವ,6,17
  • 79. ಸಂಪ್ರತಿಥ, ಅತಿಪ್ರಸಿದ್ಧರಾದ, ದ್ರೋಣ ಪರ್ವ,17,23
  • 80. ಸಂಪ್ರಥಿತ, ಸದ್ಯದ ಪರಿಸ್ಥಿತಿ/ಪ್ರಕೃತ, ಉದ್ಯೋಗ ಪರ್ವ,2,3
  • 81. ಸಂಭಾವ, ಭಾವನೆ, ಗದಾ ಪರ್ವ,7,44
  • 82. ಸಂಭಾವಕರು, ಮನ್ನಣೆ ನೀಡುವವರು., ಶಲ್ಯ ಪರ್ವ,1,20
  • 83. ಸಂಭಾವನ, ಉಚಿತ, ಆದಿ ಪರ್ವ,15,12
  • 84. ಸಂಭಾವನೀಯ, ಗೌರವಾರ್ಹ, ಆದಿ ಪರ್ವ,11,38
  • 85. ಸಂಭಾವನೀಯರು, ಯೋಗ್ಯರಾದವರು, ಆದಿ ಪರ್ವ,10,20
  • 86. ಸಂಭಾವನೆ, ಮನ್ನಣೆ, ಭೀಷ್ಮ ಪರ್ವ,6,38
  • 87. ಸಂಭಾವನೆ, ಗೌರವ , ಗದಾ ಪರ್ವ,5,13
  • 88. ಸಂಭಾವನೆಯಲಿ, ಆಲೋಚನೆಯಲ್ಲಿ, ಭೀಷ್ಮ ಪರ್ವ,9,45
  • 89. ಸಂಭಾವಿತರು, ಬ್ರಾಹ್ಮಣ ವೇಷವನ್ನು ಕಲ್ಪಿಸಿಕೊಂಡಿರುತ್ತೇವೆ ಎಂಬರ್ಥ, ವಿರಾಟ ಪರ್ವ,1,6
  • 90. ಸಂಭಾವಿಸಿದ, ಸಂಭವಿಸಿದ , ವಿರಾಟ ಪರ್ವ,2,2
  • 91. ಸಂಭಾವಿಸು, ಸಾಂತ್ವನ ನೀಡು, ಗದಾ ಪರ್ವ,4,26
  • 92. ಸಂಭಾವಿಸು, ಸಂತೈಸು. ಶೋಕವಹ್ನಿ, ಗದಾ ಪರ್ವ,8,19
  • 93. ಸಂಭಾವಿಸುತ, ಉಗ್ಗಡಿಸುತ್ತ, ಭೀಷ್ಮ ಪರ್ವ,6,11
  • 94. ಸಂಭಾವಿಸುವುದು, ಬಂದಿರುತ್ತದೆ ಸಂಭವಿಸಿರುತ್ತದೆ., ವಿರಾಟ ಪರ್ವ,9,25
  • 95. ಸಂಭಾಳಿಸು, ಸಹಿಸು, ಕರ್ಣ ಪರ್ವ,27,1
  • 96. ಸಂಭಾಳಿಸು, ನಿರ್ವಹಿಸು, ಗದಾ ಪರ್ವ,1,33
  • 97. ಸಂಭಿನ್ನ ರೋಷ, ಉಕ್ಕಿ ಬಂದ ಕೋಪ, ಭೀಷ್ಮ ಪರ್ವ,6,43
  • 98. ಸಂಭ್ರಾಂತಚೇತನ, ಸ್ಥಿರತೆ ಕಳೆದುಕೊಂಡ ಮನಸ್ಸು, ಗದಾ ಪರ್ವ,5,37
  • 99. ಸಂಮುಖ, ಹತ್ತಿರ, ಆದಿ ಪರ್ವ,20,17
  • 100. ಸಂಮೇಳ, ಸಖ್ಯ, ಆದಿ ಪರ್ವ,17,23
  • 101. ಸಂವರಣೆ, ಸಂರಕ್ಷಣೆ , ವಿರಾಟ ಪರ್ವ,4,31
  • 102. ಸಂವರಣೆ, ಸಜ್ಜು, ಉದ್ಯೋಗ ಪರ್ವ,1,11
  • 103. ಸಂವರಿಸಿ, ಸರಿಪಡಿಸಿ, ವಿರಾಟ ಪರ್ವ,6,12
  • 104. ಸಂವರಿಸಿ, ಸಿದ್ಧಮಾಡಿ, ಗದಾ ಪರ್ವ,13,5
  • 105. ಸಂವರಿಸಿ, ತಡೆಗಟ್ಟಿ, ಭೀಷ್ಮ ಪರ್ವ,8,60
  • 106. ಸಂವರಿಸು, ಸೇರಿಸು, ಗದಾ ಪರ್ವ,9,13
  • 107. ಸಂವರಿಸು, ಸಿದ್ಧನಾಗು, ಆದಿ ಪರ್ವ,14,20
  • 108. ಸಂವರಿಸು, ಜೋಪಾನ ಮಾಡು , ಗದಾ ಪರ್ವ,4,7
  • 109. ಸಂವರಿಸು, ರಕ್ಷಿಸು, ಕರ್ಣ ಪರ್ವ,13,12
  • 110. ಸಂವರಿಸು, ಕೂಡಿಹಾಕು, ಉದ್ಯೋಗ ಪರ್ವ,4,88
  • 111. ಸಂವರಿಸು, ತಡೆದುಕೋ, ವಿರಾಟ ಪರ್ವ,8,47
  • 112. ಸಂವರಿಸುವುದು, ಹೊಂದುವುದು, ಉದ್ಯೋಗ ಪರ್ವ,4,112
  • 113. ಸಂವರ್ತಕ, ಪ್ರಳಯ ಕಾಲದ ಅಗ್ನಿ, ದ್ರೋಣ ಪರ್ವ,4,37
  • 114. ಸಂಶಯ, ಸಂದೇಹ, ಆದಿ ಪರ್ವ,14,28
  • 115. ಸಂಸರ್ಗ, ಒಡನಾಟ, ಆದಿ ಪರ್ವ,11,3
  • 116. ಸಂಸಾರಾನುಗತಿ, ಸಂಸಾರದ ಕ್ರಮ, ಗದಾ ಪರ್ವ,11,11
  • 117. ಸಂಸೃತಿ, ಸಂಸಾರ, ಆದಿ ಪರ್ವ,16,51
  • 118. ಸಂಸೃತಿ, ಸಂಸಾರ , ಅರಣ್ಯ ಪರ್ವ,5,37
  • 119. ಸಂಸೃತಿ, ಪ್ರಪಂಚ, ಸಭಾ ಪರ್ವ,1,26
  • 120. ಸಂಸ್ಕøತಿ, ಮಾಡಬೇಕಾದ ಕೆಲಸಗಳು, ಗದಾ ಪರ್ವ,12,24
  • 121. ಸಂಸ್ತರಣ, ಹಾಸಿಗೆ, ಸಭಾ ಪರ್ವ,1,59
  • 122. ಸಂಸ್ಪರುಶನ, ಮುಟ್ಟುವಿಕೆ, ಆದಿ ಪರ್ವ,4,48
  • 123. ಸಂಹನ, ದೇಹ, ಶಲ್ಯ ಪರ್ವ,3,48
  • 124. ಸಂಹರಣ, ಪರಿಹಾರ, ಆದಿ ಪರ್ವ,19,7
  • 125. ಸಂಹರಣ, ಉಪಸಂಹಾರ, ಆದಿ ಪರ್ವ,16,18
  • 126. ಸಂಹರಿಸು, ನಾಶಗೊಳಿಸು, ಗದಾ ಪರ್ವ,11,31
  • 127. ಸಂಹೃತ, ನಾಶಗೊಳಿಸಿದ, ವಿರಾಟ ಪರ್ವ,10,34
  • 128. ಸಂಹೃತಿ, ಸಂಹಾರ, ಅರಣ್ಯ ಪರ್ವ,6,56
  • 129. ಸಂಹೃತಿಕರ್ಮ, ಸಂಹಾರ ಕಾರ್ಯ, ಆದಿ ಪರ್ವ,20,59
  • 130. ಸಂಹೃದಯ, ಸಮಾನ ಹೃದಯ, ಗದಾ ಪರ್ವ,9,6
  • 131. ಸಗರ್ವಿತ, ಧಾಷ್ಟ್ರ್ಯ ಉಳ್ಳವನು, ವಿರಾಟ ಪರ್ವ,10,7
  • 132. ಸಗಾಢ, ರಭಸ , ಗದಾ ಪರ್ವ,7,28
  • 133. ಸಗಾಢ, ಗಾಢವಾದ, ಗದಾ ಪರ್ವ,6,20
  • 134. ಸಗಾಢದೊಳು, ಗಟ್ಟಿಯಾಗಿ, ಭೀಷ್ಮ ಪರ್ವ,5,2
  • 135. ಸಗ್ಗಳೆ, ಚರ್ಮದ ಚೀಲ., ವಿರಾಟ ಪರ್ವ,7,42
  • 136. ಸಘಾಟದ, ವೇಗ ಶಾಲಿಯಾದ, ಆದಿ ಪರ್ವ,18,6
  • 137. ಸಘಾಟಿಕೆ, ಅತಿಶಯತೆ, ಭೀಷ್ಮ ಪರ್ವ,3,68
  • 138. ಸಘಾಡ, ರಭಸ, ಗದಾ ಪರ್ವ,2,14
  • 139. ಸಘಾಡನು, ಗರ್ವಿಷ್ಠನು, ಭೀಷ್ಮ ಪರ್ವ,9,36
  • 140. ಸಘಾಡಿಕೆ, ತೀಕ್ಷ್ಣ, ದ್ರೋಣ ಪರ್ವ,6,11
  • 141. ಸಘಾಡಿಸಿತು, ಒಟ್ಟಾಯಿತು, ಭೀಷ್ಮ ಪರ್ವ,2,5
  • 142. ಸಘಾನತನ, ದೊಡ್ಡಸ್ತಿಕೆ, ಭೀಷ್ಮ ಪರ್ವ,6,41
  • 143. ಸಘಾನತೆ, ದರ್ಪ, ಶಲ್ಯ ಪರ್ವ,2,63
  • 144. ಸಘಾನರು, ಸಘನರು, ಗದಾ ಪರ್ವ,6,35
  • 145. ಸಚರ ಅಚರ, ಜಂಗಮ ಸ್ಥಾವರ, ಭೀಷ್ಮ ಪರ್ವ,3,56
  • 146. ಸಚ್ಚಿದಾತ್ಮಕ, ಚೈತನ್ಯ ಸ್ವರೂಪನಾದ ಆತ್ಮ, ಭೀಷ್ಮ ಪರ್ವ,3,45
  • 147. ಸಜ್ಜನರು, ಸಂಭಾವಿತರು, ಆದಿ ಪರ್ವ,8,26
  • 148. ಸಜ್ಜರಸ, ರಾಳ, ಆದಿ ಪರ್ವ,8,69
  • 149. ಸಜ್ಜೆ, ಮಲಗುವ ಕೋಣೆ , ಗದಾ ಪರ್ವ,9,34
  • 150. ಸಜ್ಜೆಯೋವರಿ, ಮಲಗುವ ಕೋಣೆ, ಗದಾ ಪರ್ವ,9,27
  • 151. ಸಜ್ಜೋಡು, ಕುದುರೆಯ ಬೆನ್ನಿನ ಮೇಲೆ ಹಾಕಿದ ಕವಚ, ಶಲ್ಯ ಪರ್ವ,3,51
  • 152. ಸತಿನಿವಹ, ಹೆಂಗಸರ ಗುಂಪು, ವಿರಾಟ ಪರ್ವ,10,55
  • 153. ಸತೃಣಾಸಿ, ಹುಲ್ಲಿನ ಕತ್ತಿ, ಕರ್ಣ ಪರ್ವ,23,6
  • 154. ಸತ್ಕರ್ಮ, ಒಳ್ಳೆಯ ಕೆಲಸಗಳು, ಗದಾ ಪರ್ವ,11,7
  • 155. ಸತ್ಕರ್ಮಬಾಹಿರ, ಒಳ್ಳೆಯ ಕೆಲಸಗಳಿಂದ ಹೊರತಾದವನು, ಗದಾ ಪರ್ವ,11,7
  • 156. ಸತ್ಕಾರ, ಮರ್ಯಾದೆ, ಆದಿ ಪರ್ವ,17,32
  • 157. ಸತ್ತಿಗೆ, ಬೆಳ್ಗೊಡೆ, ಭೀಷ್ಮ ಪರ್ವ,8,11
  • 158. ಸತ್ತಿಗೆ, ರಾಜಲಾಂಛನವಾದ ಛತ್ರಿ, ಶಲ್ಯ ಪರ್ವ,3,18
  • 159. ಸತ್ತಿಗೆ, ಕೊಡೆ, ಭೀಷ್ಮ ಪರ್ವ,3,15
  • 160. ಸತ್ತ್ವೋತ್ಕರುಷವಂತರು, ಸಾತ್ತ್ವಿಕರಲ್ಲಿ ಉತ್ಕøಷ್ಟರಾದವರು., ಆದಿ ಪರ್ವ,7,69
  • 161. ಸತ್ಯ ಭುಜಬಲಗೂಡಿ, ಸತ್ಯದ ಬಾಹುಬಲದೊಡನೆ ಸೇರಿದ, ಸಭಾ ಪರ್ವ,1,50
  • 162. ಸತ್ಯಮಾರಿ, ಸತ್ಯಹೀನ, ಅರಣ್ಯ ಪರ್ವ,16,19
  • 163. ಸತ್ಯವುಳ್ಳರೆ, ಸತ್ಯವಿದ್ದರೆ, ಸಭಾ ಪರ್ವ,1,50
  • 164. ಸತ್ಯವ್ಯಪಗತ, ದಿಕ್ಕೆಟ್ಟ, ಅರಣ್ಯ ಪರ್ವ,9,29
  • 165. ಸತ್ರಾಣ, ಅಧಿಕಶಕ್ತಿ, ಗದಾ ಪರ್ವ,10,22
  • 166. ಸತ್ವ ಸವೆಯದು, ಇಬ್ಬರ ಶಕ್ತಿಯೂ ಕುಗ್ಗದು, ಸಭಾ ಪರ್ವ,2,111
  • 167. ಸತ್ವದಸಾರ, ಶಕ್ತಿ ಘನೀಭೂತವಾದ, ಭೀಷ್ಮ ಪರ್ವ,3,18
  • 168. ಸತ್ವನಿಧಿ, ಶಕ್ತಿಸಾಮರ್ಥ್ಯಕ್ಕೆ ಆಕರ, ಗದಾ ಪರ್ವ,5,44
  • 169. ಸತ್ವಹೀನನನ್ನಾಗಿಸು. ಜರುಹು, ಭೇದಿಸು, ಕರ್ಣ ಪರ್ವ,14,2
  • 170. ಸತ್ವೈಕನಿಧಿ, ಸತ್ವಗುಣಕ್ಕೆ, ಗದಾ ಪರ್ವ,11,38
  • 171. ಸದರ, ಸುಲಭ, ಆದಿ ಪರ್ವ,15,10
  • 172. ಸದರ, ಹಗುರ, ದ್ರೋಣ ಪರ್ವ,1,70
  • 173. ಸದೆ, ಬಡಿದು ಹಾಕು, ಆದಿ ಪರ್ವ,14,11
  • 174. ಸದೆಗ, ಕ್ಷುದ್ರ, ಕರ್ಣ ಪರ್ವ,2,18,
  • 175. ಸದೆದು, ಸಂಹರಿಸಿ, ಗದಾ ಪರ್ವ,13,13
  • 176. ಸದೆದು, ಬಡಿದು , ಗದಾ ಪರ್ವ,9,34
  • 177. ಸದೆದುದು, ತಟ್ಟಿತು, ಭೀಷ್ಮ ಪರ್ವ,8,7
  • 178. ಸದ್ಧರ್ಮ, ಒಳ್ಳೆಯಧರ್ಮ, ಗದಾ ಪರ್ವ,11,7
  • 179. ಸಧಾರತನ, ಶೂರತ್ವ, ಕರ್ಣ ಪರ್ವ,20,5
  • 180. ಸಾನಕ, ಶಬ್ದ/ಧ್ವನಿ, ಕರ್ಣ ಪರ್ವ,24,49
  • 181. ಸನಾಮ, ಪ್ರಸಿದ್ಧನಾದ, ಆದಿ ಪರ್ವ,4,15
  • 182. ಸನಾಮರು, ಸಾರ್ಥಕವಾದ ಹೆಸರುಳ್ಳವರು, ಗದಾ ಪರ್ವ,12,14
  • 183. ಸನುಮತ, ಸಮ್ಮತಿ/ಒಪ್ಪಿಗೆ, ಉದ್ಯೋಗ ಪರ್ವ,9,24
  • 184. ಸನ್ನಿಭ, ಸಮಾನ , ವಿರಾಟ ಪರ್ವ,10,78
  • 185. ಸನ್ನಿಭ, ಸದೃಶ, ಆದಿ ಪರ್ವ,19,34
  • 186. ಸನ್ನಿಹಿತ, ಒಳಗೊಂಡ/ಕೂಡಿಕೊಂಡ, ಉದ್ಯೋಗ ಪರ್ವ,4,61
  • 187. ಸನ್ನುತ, ಒಳ್ಳೆಯ, ಉದ್ಯೋಗ ಪರ್ವ,7,27
  • 188. ಸನ್ನೆ, ಸಂಕೇತ, ಆದಿ ಪರ್ವ,8,76
  • 189. ಸನ್ನೆಗಾಳೆಗಳು, ಸೂಚನೆ ನೀಡುವ ಕಹಳೆಗಳು, ದ್ರೋಣ ಪರ್ವ,3,80
  • 190. ಸನ್ನೆಯಲಿ, ಸೌಂಜ್ಞೆಯಲ್ಲಿ, ಗದಾ ಪರ್ವ,8,63
  • 191. ಸನ್ಮೋಹನ, ಆಕರ್ಷಣೆ, ಆದಿ ಪರ್ವ,12,20
  • 192. ಸಪ್ತವಸ್ಯನ, ಜೂಜು , ಸಭಾ ಪರ್ವ,12,89, , , ಮಾಂಸ, ಸ್ತ್ರೀ ವ್ಯಸನ, ದಂಡ ವಿಘಾತಿ , ಅರ್ಥದೂಷಣ.,
  • 193. ಸಪ್ತವ್ಯಸನ, ಸ್ತ್ರೀ , ಸಭಾ ಪರ್ವ,1,32, , , ಪಾನ ವಾಕ್‍ಪೌರುಷ್ಯ , ದಂಡಪೌರುಷ್ಯ , ಅರ್ಥದೂಷಣ,
  • 194. ಸಪ್ತಾಂಗ, ಏಳು ಅಂಗಗಳು (ಸ್ವಾಮಿ, ಉದ್ಯೋಗ ಪರ್ವ,9,3
  • 195. ಸಪ್ರಾಣ, ಪ್ರಾಣವುಳ್ಳವನು, ಗದಾ ಪರ್ವ,7,42
  • 196. ಸಪ್ರಾಣಿಸಲಿ, ಚೇತನವನ್ನು ಪಡೆಯಲಿ, ಗದಾ ಪರ್ವ,7,46
  • 197. ಸಪ್ರಾಣಿಸು, ಉಸಿರು ಬರುವಂತೆ ಮಾಡು., ವಿರಾಟ ಪರ್ವ,2,19
  • 198. ಸಬಳ, ಈಟಿಯಂತಹ ಆಯುಧ, ಶಲ್ಯ ಪರ್ವ,2,24
  • 199. ಸಬಳ, ಕೊಂತ, ವಿರಾಟ ಪರ್ವ,4,27
  • 200. ಸಬಳಿಗ, ಈಟಿಯಂತಹ ಆಯುಧವನ್ನು ಹಿಡಿದಿರುವವ, ಶಲ್ಯ ಪರ್ವ,2,11
  • 201. ಸಬಳಿಗರು, ಈಟಿಕಾರರ ಪಡೆ, ಭೀಷ್ಮ ಪರ್ವ,4,46
  • 202. ಸಬ್ಬಗತ, ಸರ್ವಗತ , ಭೀಷ್ಮ ಪರ್ವ,3,67
  • 203. ಸಮ, ಶ್ರಮ, ಆದಿ ಪರ್ವ,6,41
  • 204. ಸಮ, ಹೊಂದಿಕೆ ಸರಿವು, ಗದಾ ಪರ್ವ,9,4
  • 205. ಸಮಂಜಸ, ಸೂಕ್ತವಾದ, ಆದಿ ಪರ್ವ,18,1
  • 206. ಸಮಂಜಸ, ಯೋಗ್ಯ , ಗದಾ ಪರ್ವ,11,33
  • 207. ಸಮಚಡಿಸಿ, ?, ಸಭಾ ಪರ್ವ,2,95
  • 208. ಸಮಚಿತ್ತ, ಸಮಾಧಾನ ಚಿತ್ತ, ಆದಿ ಪರ್ವ,10,35
  • 209. ಸಮತಳಿಸು, ಸಮಬಲವಾಗಿ, ಶಲ್ಯ ಪರ್ವ,3,63
  • 210. ಸಮತಳಿಸು, ಸರಿಸಮನಿಸು, ಭೀಷ್ಮ ಪರ್ವ,8,42
  • 211. ಸಮತಳಿಸು, ನಿರ್ಮಿಸು, ಆದಿ ಪರ್ವ,12,13
  • 212. ಸಮತಳಿಸು, ಅಣಿಯಾಗು , ವಿರಾಟ ಪರ್ವ,4,0
  • 213. ಸಮತಳಿಸು, ಅಣಿಗೊಳ್ಳು , ವಿರಾಟ ಪರ್ವ,9,13
  • 214. ಸಮದಂಡಿ, ಸರಿಸಮರು, ಭೀಷ್ಮ ಪರ್ವ,1,19
  • 215. ಸಮದಂಡಿ, ಒಂದೇ ರೀತಿಯಲ್ಲಿ, ಉದ್ಯೋಗ ಪರ್ವ,3,120
  • 216. ಸಮನಿಸು, ಉಂಟಾಗು , ವಿರಾಟ ಪರ್ವ,3,58
  • 217. ಸಮಪಾಳಿ, ಸರಿಸಮ, ಉದ್ಯೋಗ ಪರ್ವ,6,22
  • 218. ಸಮಪಾಳಿ, ಜೊತೆಜೊತೆಗೆ (ಪಾಳಿ, ಗದಾ ಪರ್ವ,4,1
  • 219. ಸಮಬೆಸ, ಸಮಕ್ಕೆ ಸಮ ಬೆಸಕ್ಕೆ ಬೆಸ, ದ್ರೋಣ ಪರ್ವ,13,34
  • 220. ಸಮಯ, ಸಂದರ್ಶನದ ಭಾಗ್ಯ, ವಿರಾಟ ಪರ್ವ,10,52
  • 221. ಸಮಯ ವಿಕಾರ ಭೇದಿ, ಗೊಡ್ಡು ಹರಟೆಯಲ್ಲಿ ಹೊತ್ತು ಕಳೆಯುವವನು, ಉದ್ಯೋಗ ಪರ್ವ,4,47
  • 222. ಸಮಯಕೃತ, ಒಡಂಬಡಿಕೆಯಾದುದು, ಗದಾ ಪರ್ವ,5,45
  • 223. ಸಮರ ಭೂತಗಳು, ಯುದ್ಧ ಭೂಮಿ ಭೂತಪ್ರೇತಗಣ, ಭೀಷ್ಮ ಪರ್ವ,5,15
  • 224. ಸಮರಥ, ಗದಾಪರ್ವದ 9ನೆಯ ಸಂಧಿಯ 9ನೆಯ ಪದ್ಯದ ಟಿಪ್ಪಣಿಯನ, ಶಲ್ಯ ಪರ್ವ,2,15
  • 225. ಸಮಸ್ತಪ್ರಕೃತಿಜನ, ಎಲ್ಲ ಜನಸಾಮಾನ್ಯರು, ಗದಾ ಪರ್ವ,12,21
  • 226. ಸಮಹಂತಿಗಾರರು, ಆಪ್ತರು, ಅರಣ್ಯ ಪರ್ವ,21,44
  • 227. ಸಮಾಖ್ಯಾ, ಕೀರ್ತಿ, ಆದಿ ಪರ್ವ,19,14
  • 228. ಸಮಾಗತರು, ಗುಂಪುಗೂಡಿದವÀರು, ಆದಿ ಪರ್ವ,12,21
  • 229. ಸಮಾಧಾನದಿಂದ (ಸಾಮ, ಚತುರೋಪಾಯಗಳಲ್ಲಿ ಮೊದಲನೆಯದು , ಗದಾ ಪರ್ವ,11,0
  • 230. ಸಮಾಧಿ, ಏಕಾಗ್ರತೆ, ಆದಿ ಪರ್ವ,19,32
  • 231. ಸಮಾಧಿ, ಧ್ಯಾನಸ್ಥಿತಿ . ಯೋಗಸ್ಥಿತಿ, ದ್ರೋಣ ಪರ್ವ,7,20
  • 232. ಸಮಾರ್ಚನನು, ಚೆನ್ನಾಗಿ ಪೂಜಿಸುವವನು., ದ್ರೋಣ ಪರ್ವ,9,14
  • 233. ಸಮಾಸ, ಒಟ್ಟು ಎಲ್ಲ, ಭೀಷ್ಮ ಪರ್ವ,1,55
  • 234. ಸಮಾಸಪೂರಿತ, ಸಮೂಹದೊಡಗೂಡಿ, ಅರಣ್ಯ ಪರ್ವ,3,7
  • 235. ಸಮಾಸವಿಸ್ತರ, ಸಮಸ್ತ ವಿವರಗಳು, ಭೀಷ್ಮ ಪರ್ವ,1,55
  • 236. ಸಮಾಹಿತ, ಸಮಬಲ, ದ್ರೋಣ ಪರ್ವ,4,47
  • 237. ಸಮಾಹಿತ, ವ್ಯವಸ್ಥೆಗೊಳಿಸಿದ., ಆದಿ ಪರ್ವ,15,6
  • 238. ಸಮಾಹಿತ, ಒಟ್ಟಿಗೆ ಸೇರಿದ, ಉದ್ಯೋಗ ಪರ್ವ,3,72
  • 239. ಸಮಿತ್ತು, ಸಮಿಧಾ, ಗದಾ ಪರ್ವ,11,60
  • 240. ಸಮಿಧೆ, ಸಮಿತ್ತು, ಗದಾ ಪರ್ವ,1,20
  • 241. ಸಮಿಧೆ, ಸಮಿತ್ತು (ಹೋಮದ ಕಟ್ಟಿಗೆ) ಕುಮತಿ, ಆದಿ ಪರ್ವ,8,85
  • 242. ಸಮೀರ, ವಾಯು ಭುಜಗರು, ಆದಿ ಪರ್ವ,11,41
  • 243. ಸಮೀರಜನನುಜ, ಭೀಮನ ಸೋದರ, ಭೀಷ್ಮ ಪರ್ವ,3,25
  • 244. ಸಮೀರನ ಸೂನು, ವಾಯುಪುತ್ರ (ಭೀಮ), ವಿರಾಟ ಪರ್ವ,1,22
  • 245. ಸಮೀರÀಸುತ, ವಾಯುವಿನ ಮಗ, ಗದಾ ಪರ್ವ,10,16
  • 246. ಸಮೀರಾತ್ಮಜ, ವಾಯುಪತ್ರ, ಗದಾ ಪರ್ವ,7,21
  • 247. ಸಮುದ್ಭವ, ಉದ್ಭವ, ಆದಿ ಪರ್ವ,18,3
  • 248. ಸಮುದ್ರಘೋಷ, ಸಮುದ್ರದ ಅಲೆಗಳ ಮೊರೆತ., ಗದಾ ಪರ್ವ,5,30
  • 249. ಸಮುದ್ರವಿಭವ, ಯಾವಾಗಲೂ ಭರ್ತಿಯಾಗಿರುವ ಸಮುದ್ರದ ವೈಭವ, ಗದಾ ಪರ್ವ,4,18
  • 250. ಸಮುದ್ರಸೇನನ, ಸಮುದ್ರ ಸೇನನೆಂಬವನನ್ನು, ಸಭಾ ಪರ್ವ,4,9
  • 251. ಸಮೂಹ ಉಪ್ಪರಗುಡಿ, ಮೇಲೆ ಹಾರುವ ಬಾವುಟ, ಶಲ್ಯ ಪರ್ವ,2,34
  • 252. ಸಮೂಹ ಸದೆ, ಹೊಡೆ., ಶಲ್ಯ ಪರ್ವ,3,2
  • 253. ಹಲ್ಲಣಿಸು, ಜೀನನ್ನು ಕಟ್ಟು ('ಹಲ್ಲಣ'ವೆಂಬ ನಾಮಪದದಿಂದ, ಶಲ್ಯ ಪರ್ವ,2,4
  • 254. ಸಮೇಳದ ಮಾತು, ಸಖಿಯರ ಗುಂಪಿನೊಂದಿಗಿನ ಮಾತು, ವಿರಾಟ ಪರ್ವ,5,35
  • 255. ಸಮ್ಮದ, ಹಿಗ್ಗು, ಉದ್ಯೋಗ ಪರ್ವ,9,7
  • 256. ಸಮ್ಮುಖ, ಎದುರಿಗೆ, ಭೀಷ್ಮ ಪರ್ವ,6,22
  • 257. ಸಮ್ಮುಖದ, ಎದುರು ಬಿದ್ದ, ಭೀಷ್ಮ ಪರ್ವ,4,64
  • 258. ಸಮ್ಮುಖದ ಅಳವಿ, ಎದುರಿಗೆ ಸಮೀಪದಲ್ಲಿರುವ ನಿಂತಿರುವ, ಭೀಷ್ಮ ಪರ್ವ,3,11
  • 259. ಸಮ್ಮುಖನಾದನು, ಇದಿರಾದನು, ಭೀಷ್ಮ ಪರ್ವ,8,34
  • 260. ಸಮ್ಮೋಹನ, ವಿಶೇಷ ಆಶೆ, ಗದಾ ಪರ್ವ,5,13
  • 261. ಸಮ್ಮೋಹನಾಸ್ತ್ರ, ಇದು ರಸಾಯನ ಯುದ್ಧಕ್ಕೆ ಸಂವಾದಿಯಾದ ಒಂದು ಮಹಾಸ್ತ್ರ. ಇದರ ಪ್ರಭಾವದಿಂದ ಎಲ್ಲರೂ ತಾತ್ಕಾಲಿಕವಾಗಿ ಮೂರ್ಛೆಗೆ ಒಳಗಾಗುತ್ತಾರೆ. ಒಂದು ಪೌರಾಣಿಕ ಅಸ್ತ್ರ. ಮನ್ಮಥನ ಪಂಚಬಾಣಗಳಲ್ಲಿ ಒಂದರ ಹೆಸರು. ಒಂದು ವಶೀಕರಣ ತಂತ್ರಕ್ಕೆ ಸಂಬಂಧಿಸಿದ ಶಬ್ದ, ವಿರಾಟ ಪರ್ವ,8,0
  • 262. ಸಮ್ಯಗ್ ಜ್ಞಾನ, ಸಂಪೂರ್ಣ ಜ್ಞಾನ, ಉದ್ಯೋಗ ಪರ್ವ,4,16
  • 263. ಸಮ್ಯಜ್ಞಾನಿ, ಸರಿಯಾದ ಜ್ಞಾನ ಉಳ್ಳವನು, ದ್ರೋಣ ಪರ್ವ,1,30
  • 264. ಸರಕಟಿಸಿ, ಉತ್ಸಾಹಿಸಿ, ದ್ರೋಣ ಪರ್ವ,18,13
  • 265. ಸರಕಟಿಸು, ರಭಸದಿಂದ ನುಗ್ಗು, ಕರ್ಣ ಪರ್ವ,13,12
  • 266. ಸರಕು, ಸಾಮಗ್ರಿಗಳು, ಗದಾ ಪರ್ವ,4,13
  • 267. ಸರಕು, ಲಕ್ಷ್ಯ, ದ್ರೋಣ ಪರ್ವ,10,43
  • 268. ಸರಕು, ಗೌರವ/ಮನ್ನಣೆ, ಉದ್ಯೋಗ ಪರ್ವ,3,110
  • 269. ಸರಕು ಮಾಡರು, ಪರಿಗಣಿಸುವವರಲ್ಲ ಜಯವಧು, ಭೀಷ್ಮ ಪರ್ವ,8,66
  • 270. ಸರಕು ಮಾಡು, ಅವರನ್ನು ಗಮನಿಸಬೇಕಾದ ಸರಕು (ವಸ್ತು) ಎಂದು ಭಾವಿಸು, ವಿರಾಟ ಪರ್ವ,10,63
  • 271. ಸರಟ, ಓತಿ, ಅರಣ್ಯ ಪರ್ವ,4,33
  • 272. ಸರವಿ, ಹುಲ್ಲಿನ ಹಗ್ಗ, ದ್ರೋಣ ಪರ್ವ,5,78
  • 273. ಸರಸ, ರಸಭರಿತವಾದ, ಆದಿ ಪರ್ವ,16,23
  • 274. ಸರಸ, ರಸವತ್ತಾದ, ಆದಿ ಪರ್ವ,13,17
  • 275. ಸರಸಿ, ಸರೋವರ., ಗದಾ ಪರ್ವ,3,38
  • 276. ಸರಸಿಜಾಕ್ಷಿ, ಕಮಲದಂತೆ ಕಣ್ಣುಳ್ಳವಳು, ಆದಿ ಪರ್ವ,12,2
  • 277. ಸರಸಿಜಾನನೆ, ಕಮಲಮುಖಿ, ಆದಿ ಪರ್ವ,11,13
  • 278. ಸರಸಿಜಾಯತ, ವಿಸ್ತಾರವಾದ ತಾವರೆ, ವಿರಾಟ ಪರ್ವ,1,28
  • 279. ಸರಳ ಸಾರ, ಬಾಣಗಳ ಸಮೂಹ, ವಿರಾಟ ಪರ್ವ,8,35
  • 280. ಸರಳ ಸಾರ, ಬಾಣಗಳ ಶ್ರೇಣಿ , ವಿರಾಟ ಪರ್ವ,4,58, ,
  • 281. ಸರಳ ಸೊಕ್ಕು, ಸಮ್ಮೋಹನಾಸ್ತ್ರದ ಮತ್ತು, ವಿರಾಟ ಪರ್ವ,8,86
  • 282. ಸರಳಕಂಗೈಸುವರೆ, ಇದು ಸರಳಿಗಂಗೈಸುವರೆ (ಮನ್ಮಥನ ಬಾಣಗಳಿಗೆ ದೇಹವನ್ನು ಒಪ್ಪಿಸುತ್ತಾರೆಯೆ ?) ಎಂದಿರಬಹುದೆ ? ದಳ್ಳುರಿ, ವಿರಾಟ ಪರ್ವ,2,35
  • 283. ಸರಳಿನ ಹಾಸಿಕೆ, ಶರಶಯನ, ಶಲ್ಯ ಪರ್ವ,1,35,
  • 284. ಸರಳಿಸಿ, ಜಿಗಿದು, ವಿರಾಟ ಪರ್ವ,7,50
  • 285. ಸರಳಿಸು, ಓಡಿಬರು , ಗದಾ ಪರ್ವ,5,42
  • 286. ಸರಳು, ಬಾಣ್ಲ, ಭೀಷ್ಮ ಪರ್ವ,4,100
  • 287. ಸರಾಗ, ಪ್ರೀತಿಯಿಂದ ಕೂಡಿದ, ಅರಣ್ಯ ಪರ್ವ,11,25
  • 288. ಸರಿ, ಸುರಿಮಳೆ, ಗದಾ ಪರ್ವ,1,61
  • 289. ಸರಿ, ಜಾರು, ಆದಿ ಪರ್ವ,8,76
  • 290. ಸರಿ, ಝರಿ, ಕರ್ಣ ಪರ್ವ,20,41
  • 291. ಸರಿಗ, ಸಮಾನರಾದ, ಸಭಾ ಪರ್ವ,1,15
  • 292. ಸರಿಗಡಿದು, ಸರಿಸಮವಾಗಿ ಕತ್ತರಿಸಿ, ಭೀಷ್ಮ ಪರ್ವ,4,100
  • 293. ಸರಿಗಳೆ, ಬಿಟ್ಟು ಹೋಗು, ವಿರಾಟ ಪರ್ವ,6,21
  • 294. ಸರಿಗಳೆ, ಗುರುತಿಸು, ಕರ್ಣ ಪರ್ವ,22,41
  • 295. ಸರಿದ, ಪ್ರಸಿದ್ಧ ತರುಬು, ಭೀಷ್ಮ ಪರ್ವ,4,35
  • 296. ಸರಿದರೆ, ಹಗೆ ಹಿಂಜರಿದರೆ, ಭೀಷ್ಮ ಪರ್ವ,9,2
  • 297. ಸರಿನುಡಿ, ಸರಿಸಮನೆಂದು ಭಾವಿಸಿ ಆಡುವ ಮಾತು, ಗದಾ ಪರ್ವ,8,9
  • 298. ಸರಿಮಳೆ, ಬಾಣಗಳ ಮಳೆ, ಭೀಷ್ಮ ಪರ್ವ,5,25
  • 299. ಸರಿಮಿಗಿಲು, ಸಮಾನತೆಗಿಂತ ಹೆಚ್ಚೆನಿಸಿ., ಭೀಷ್ಮ ಪರ್ವ,9,45
  • 300. ಸರಿಯೊರೆಗೆ, ಸಮಸಮವಾಗಿ, ದ್ರೋಣ ಪರ್ವ,5,16
  • 301. ಸರಿವಳೆ, ಭಾರಿಯ ಮಳೆ, ವಿರಾಟ ಪರ್ವ,8,24
  • 302. ಸರಿವಳೆ, ಸುರಿಮಳೆ, ಭೀಷ್ಮ ಪರ್ವ,6,23
  • 303. ಸರಿವಳೆ, ಒಂದೇ ಸಮನೆ ಉಂಟಾಗುವ ಮಳೆ, ದ್ರೋಣ ಪರ್ವ,3,22
  • 304. ಸರಿವು, ಮಳೆ, ವಿರಾಟ ಪರ್ವ,8,89
  • 305. ಸರಿಸ, ಸಾಲಾಗಿ , ಶಲ್ಯ ಪರ್ವ,3,74, ,
  • 306. ಸರಿಸ, ಸರಿಸಮಾನ, ದ್ರೋಣ ಪರ್ವ,15,23
  • 307. ಸರಿಸ, ಮುಂಭಾಗ, ಗದಾ ಪರ್ವ,2,14, ,
  • 308. ಸರಿಸ, ಉಚಿತ, ಕರ್ಣ ಪರ್ವ,21,9
  • 309. ಸರಿಸ ಮತ್ತು ವಿಷಮ, ಸಂಗೀತಶಾಸ್ತ್ರದಲ್ಲಿ ಸೂಚಿಸುವ ತಾಳ ಗತಿಗಳು, ಕರ್ಣ ಪರ್ವ,20,34
  • 310. ಸರಿಸಕ್ಕೆ, ಸಮಕ್ಕೆ, ಭೀಷ್ಮ ಪರ್ವ,1,39
  • 311. ಸರಿಸಗುಂಡು, ಹತ್ತಿರದ ಗುಂಡು (?), ಭೀಷ್ಮ ಪರ್ವ,4,83
  • 312. ಸರಿಸದಲಿ, ಸರಾಗವಾಗಿ, ಸಭಾ ಪರ್ವ,3,30
  • 313. ಸರಿಸದಲಿ, ಇದಿರಿನಲಿ, ಭೀಷ್ಮ ಪರ್ವ,9,2
  • 314. ಸರಿಸದಲಿ, ಎದುರಿಗೆ ಸರಿಸಮಾನರಾಗಿ, ಭೀಷ್ಮ ಪರ್ವ,4,63
  • 315. ಸರಿಹೃದಯನು, ಸಮಾನಹೃದಯನು, ದ್ರೋಣ ಪರ್ವ,1,7
  • 316. ಸರೀಸೃಪ, ಉರಗ, ಅರಣ್ಯ ಪರ್ವ,13,42
  • 317. ಸರೋವಾರಿ, ಸರೋವರದ ನೀರು, ಆದಿ ಪರ್ವ,4,47
  • 318. ಸರ್ಗ, ಸೃಷ್ಟಿ, ಅರಣ್ಯ ಪರ್ವ,8,5
  • 319. ಸರ್ಬದಳ, ಸಕಲದಳ, ಶಲ್ಯ ಪರ್ವ,3,52
  • 320. ಸರ್ವಗತ, ಅಂತರ್ಯಾಮಿ, ಉದ್ಯೋಗ ಪರ್ವ,4,37
  • 321. ಸರ್ವಗತ, ಎಲ್ಲೆಲ್ಲೂ ಇರುವ., ಗದಾ ಪರ್ವ,4,56
  • 322. ಸರ್ವಗವತೆಯಲಿ, ಸಂಪೂರ್ಣವಾಗಿ ಸರ್ವಸ್ವವನ್ನು ಅಪಹರಿಸುವ ಮೂಲP, ಸಭಾ ಪರ್ವ,4,9
  • 323. ಸರ್ವಥಾ, ಖಂಡಿತವಾಗಿಯೂ, ಆದಿ ಪರ್ವ,9,23
  • 324. ಸರ್ವಾಂಗಯಜ್ಞ, ಸಂಪೂರ್ಣ ದೇಹವನ್ನೇ ಅಗ್ನಿಗೊಪ್ಪಿಸುವ ಯಜ್ಞ, ಗದಾ ಪರ್ವ,9,21
  • 325. ಸರ್ವಾಪರಾಧಿಗಳು, ಎಲ್ಲ ರೀತಿಯ ಪಾಪಗಳನ್ನು ಮಾಡಿದವರು, ಗದಾ ಪರ್ವ,11,65
  • 326. ಸರ್ವಾಪಹಾರ, ಎಲ್ಲರ ಪ್ರಾಣಗಳೂ ಅಪಹಾರವಾದುದು, ಗದಾ ಪರ್ವ,4,10
  • 327. ಸರ್ವಾರ್ಥ, ಎಲ್ಲದ್ದಕ್ಕೂ, ಉದ್ಯೋಗ ಪರ್ವ,6,29
  • 328. ಸರ್ವಾವಯವ, ಎಲ್ಲ ಅಂಗಗಳೂ, ಗದಾ ಪರ್ವ,11,37
  • 329. ಸರ್ಷಪ, ಸಾಸುವೆಕಾಳು, ಆದಿ ಪರ್ವ,14,24
  • 330. ಸಲಗ, ಗೂಳಿ, ವಿರಾಟ ಪರ್ವ,7,51
  • 331. ಸಲಹು, ಸಾಕು, ಆದಿ ಪರ್ವ,10,15
  • 332. ಸಲಹುವನು, ಸಂರಕ್ಷಿಸುವನು, ಭೀಷ್ಮ ಪರ್ವ,7,32
  • 333. ಸಲಾಕೆ, ತೆಳುಕಂಬಿ, ಭೀಷ್ಮ ಪರ್ವ,4,18
  • 334. ಸಲಿಲ, ನೀರು., ಗದಾ ಪರ್ವ,4,57
  • 335. ಸಲಿಲ ಬಾಣದಲಿ, ವಾರುಣಾಸ್ತ್ರದಲ್ಲಿ (ನೀರಿನ ಬಾಣದಿಂದ) ತಪ್ತ ಲೋಹದ ಜಲದವೊಲು, ಭೀಷ್ಮ ಪರ್ವ,10,27
  • 336. ಸಲಿಲವಾಸ, ನೀರೊಳಗಿರುವಿಕೆ., ಗದಾ ಪರ್ವ,4,35
  • 337. ಸಲಿಲಸ್ತಂಭ, ಜಲಸ್ತಂಭನ, ಗದಾ ಪರ್ವ,5,5
  • 338. ಸಲಿಲಸ್ತಂಭವಿದ್ಯೆ, ನೀರೊಳಗೆ ಮುಳುಗಿಯೂ ಬದುಕಿರುವ ಒಂದು ವಿದ್ಯೆ., ಗದಾ ಪರ್ವ,3,41
  • 339. ಸಲಿಲಾಂಜಲಿ, ನೀರಿನಿಂದ ಕೊಡುವ ಶ್ರದ್ಧಾಂಜಲಿ (ಸಲಿಲ, ಗದಾ ಪರ್ವ,11,13
  • 340. ಸಲಿಸು, ನಡೆಸು , ಗದಾ ಪರ್ವ,10,27
  • 341. ಸಲಿಸು, ನಡೆಸಿಕೊಡು, ಗದಾ ಪರ್ವ,11,14
  • 342. ಸಲಿಸು, ದಯಪಾಲಿಸು, ಆದಿ ಪರ್ವ,16,60
  • 343. ಸಲೆ, ವಿಸ್ತಾರವಾಗಿ, ಉದ್ಯೋಗ ಪರ್ವ,9,79
  • 344. ಸಲೆ, ವಿಶೇಷ, ಸಭಾ ಪರ್ವ,1,40
  • 345. ಸಲ್ಲದು, ಸೇರದು, ಗದಾ ಪರ್ವ,11,49
  • 346. ಸವಗ, ಒಳ ಕವಚ (ಕಾಪು) ಜೋಡು, ಭೀಷ್ಮ ಪರ್ವ,4,67
  • 347. ಸವಡಿ, ಎರಡು, ಗದಾ ಪರ್ವ,8,7
  • 348. ಸವಡಿ, ಎದುರು, ಅರಣ್ಯ ಪರ್ವ,6,98
  • 349. ಸವಡಿ, ಹೆಣ್ಣು ಆನೆ, ಗದಾ ಪರ್ವ,1,49
  • 350. ಸವಡಿ ಮಂದರ, ಜೋಡಿ ಪರ್ವತ, ವಿರಾಟ ಪರ್ವ,3,89
  • 351. ಸವಡಿಗತ್ತಲೆ, ಎರಡು ವಿಧದ ಕತ್ತಲೆ (ಸÀವಡಿ, ಗದಾ ಪರ್ವ,8,64
  • 352. ಸವಡಿಗೋಲು, ಜೋಡಿಬಾಣ, ಆದಿ ಪರ್ವ,18,29
  • 353. ಸವನ, ಹೋಮ, ಗದಾ ಪರ್ವ,4,36
  • 354. ಸವರಿದನು, ನಾಶಮಾಡಿದನು., ಭೀಷ್ಮ ಪರ್ವ,9,21
  • 355. ಸವರಿದನು, ಕೊಂದು ಹಾಕಿದನು, ದ್ರೋಣ ಪರ್ವ,2,70
  • 356. ಸವರು, ನಾಶಮಾಡು, ಗದಾ ಪರ್ವ,3,24,
  • 357. ಸವರು, ತರಿದು ಹಾಕು, ಭೀಷ್ಮ ಪರ್ವ,5,8
  • 358. ಸವರ್ತುಳ, ದುಂಡಾಗಿರುವ, ಭೀಷ್ಮ ಪರ್ವ,3,77
  • 359. ಸವಳ, ಸಬಳ, ಕರ್ಣ ಪರ್ವ,8,13
  • 360. ಸವಿ, ಮಾಧುರ್ಯ, ಆದಿ ಪರ್ವ,11,13
  • 361. ಸವಿದು, ತಿಂದು, ಉದ್ಯೋಗ ಪರ್ವ,9,14
  • 362. ಸವೆ, ಶಕ್ತಿಗುಂದು, ಆದಿ ಪರ್ವ,11,29
  • 363. ಸವೆ, ನಾಶವಾಗು, ಭೀಷ್ಮ ಪರ್ವ,8,50
  • 364. ಸವೆ, ಕಳೆ, ಆದಿ ಪರ್ವ,10,1
  • 365. ಸವೆದನು, ನಿರ್ನಾಮ ಮಾಡಿದ, ಶಲ್ಯ ಪರ್ವ,3,6
  • 366. ಸವೆದರು, ಸಿದ್ಧಮಾಡಿದರು, ಉದ್ಯೋಗ ಪರ್ವ,8,4
  • 367. ಸವೆದುದು, ಪೂರ್ಣಗೊಂಡವು, ಭೀಷ್ಮ ಪರ್ವ,5,0
  • 368. ಸವೆಯೆ, ನಾಶವಾಗಲು, ಗದಾ ಪರ್ವ,3,0
  • 369. ಸವೆಸು, ಸಿದ್ಧಮಾಡು, ಆದಿ ಪರ್ವ,8,86
  • 370. ಸವೆಸು, ಮಾಡಿಸು., ಉದ್ಯೋಗ ಪರ್ವ,8,64
  • 371. ಸವ್ಯ, ವಿರೋಧ, ಗದಾ ಪರ್ವ,11,44
  • 372. ಸವ್ಯಕುತ, ಸ್ಪಷ್ಟವಾಗಿ ಒಡೆಮಟ್ಟು, ಉದ್ಯೋಗ ಪರ್ವ,3,137
  • 373. ಸವ್ಯಥೆ, ವ್ಯಥೆಯಿಂದ ಕೂಡಿದ, ಗದಾ ಪರ್ವ,7,48
  • 374. ಸವ್ಯಾಕುಲ, ಚಿಂತೆಗೊಳಗಾದವನು., ಅರಣ್ಯ ಪರ್ವ,11,8
  • 375. ಸಸಿದೆರಳೆ, ಚಿಕ್ಕ ಕ್ಷುದ್ರ ಹುಳು (ಹಣ್ಣುಗಳಲ್ಲಿರುವ ಹುಳು) ವಿಶ್ವಪ್ರಸರರೂಪಿಂಗೆ, ಭೀಷ್ಮ ಪರ್ವ,3,84
  • 376. ಸಸಿನಿರು, ಸುಮ್ಮನೆ (ಸಸಿನೆ) ಇರು , ವಿರಾಟ ಪರ್ವ,7,18
  • 377. ಸಸಿನೆ, ಕ್ಷೇಮವಾಗಿ., ಕರ್ಣ ಪರ್ವ,7,19
  • 378. ಸಹಜಕೆ, ನಿಜದಲ್ಲಿ, ಭೀಷ್ಮ ಪರ್ವ,8,58
  • 379. ಸಹದೇವಾಂಕ, ಸಹದೇವ ಎಂಬ ಅಂಕ, ವಿರಾಟ ಪರ್ವ,10,13
  • 380. ಸಹಭವ, (ಜತೆಯಲ್ಲಿ ಹುಟ್ಟಿದವ) ಅಣ್ಣ, ವಿರಾಟ ಪರ್ವ,3,97
  • 381. ಸಹಭವ, ಸಹೋದರ, ಗದಾ ಪರ್ವ,2,22
  • 382. ಸಹಸ, ಸಾಹಸ (ಪ್ರಾಸ ಸೌಕರ್ಯಕ್ಕಾಗಿ ಬದಲಾವಣೆ) ಮರಳಿಚಿ, ವಿರಾಟ ಪರ್ವ,5,16
  • 383. ಸಾಂಗ, ಷಡಂಗ, ಆದಿ ಪರ್ವ,15,5
  • 384. ಸಾಂಗೋಪಾಂಗ, ಪೂರ್ಣವಾದ, ಆದಿ ಪರ್ವ,7,1
  • 385. ಸಾಂಗೋಪಾಂಗ, ಎಲ್ಲ ಅಂಗಗಳಿಂದ ಕೂಡಿದ, ಆದಿ ಪರ್ವ,7,33
  • 386. ಸಾಕಾರ, ಆಕಾರವುಳ್ಳÀ, ಆದಿ ಪರ್ವ,13,47
  • 387. ಸಾಕಾರಿ, ಆಕಾರವುಳ್ಳದ್ದು, ಆದಿ ಪರ್ವ,13,22
  • 388. ಸಾಕಿಕೊಂಡೈ, ಸಲಹಿದೆ, ಭೀಷ್ಮ ಪರ್ವ,10,28
  • 389. ಸಾಕ್ಷಾತರ್ಜುನರು, ನೇರವಾಗಿ ಅರ್ಜುನನನಿಗೆ ಸಂಬಂಧಿಸಿದವರು., ಕರ್ಣ ಪರ್ವ,26,15
  • 390. ಸಾಗರವೇಲೆ, ಸಮುದ್ರದಗಡಿ, ಗದಾ ಪರ್ವ,13,1
  • 391. ಸಾಣೆ, ಸಾಣೆ ಹಿಡಿದು ಹರಿತಗೊಳಿಸಿದ ಆಯುಧ, ಆದಿ ಪರ್ವ,15,45
  • 392. ಸಾಣೆ, ತೀಕ್ಷ್ಣ, ಆದಿ ಪರ್ವ,20,40
  • 393. ಸಾಣೆವಿಡಿ, ಸಾಣೆಹಿಡಿ , ಗದಾ ಪರ್ವ,7,48
  • 394. ಸಾದು, ಸಾದು> ಸಾಂದು , ವಿರಾಟ ಪರ್ವ,3,81
  • 395. ಸಾದು, ಒಂದು ಬಗೆಯ ಸುಗಂಧ ದ್ರವ್ಯ, ವಿರಾಟ ಪರ್ವ,10,48
  • 396. ಸಾಧಿಸು, ಛಲವನ್ನು ಕಾಯ್ದಿಟ್ಟುಕೊಂಡಿರು, ಅರಣ್ಯ ಪರ್ವ,4,13
  • 397. ಸಾಧುಗಳು, ಸಜ್ಜನರು, ಗದಾ ಪರ್ವ,11,5
  • 398. ಸಾಧುರವ, ಸಾಧು ಎಂಬ ಶಬ್ದ., ಗದಾ ಪರ್ವ,7,4
  • 399. ಸಾಧುವಾದ, ಒಳ್ಳೆಯ ಮಾತುಗಳು, ಕರ್ಣ ಪರ್ವ,21,18
  • 400. ಸಾನುರಾಗ, ವಿಶೇಷ ಪ್ರೇಮ, ಆದಿ ಪರ್ವ,7,73
  • 401. ಸಾಪತ್ನರು, ಶತ್ರುಗಳು, ಉದ್ಯೋಗ ಪರ್ವ,3,22
  • 402. ಸಾಪೇಕ್ಷ, ಹೊಂದಿಕೊಂಡಿರುವ, ಗದಾ ಪರ್ವ,4,36
  • 403. ಸಾಮ, ಸಾಮ ಬುದ್ಧಿಯಿಂದ, ವಿರಾಟ ಪರ್ವ,3,39
  • 404. ಸಾಮ, ಚತುರೋಪಾಯಗಳಲ್ಲಿ ಒಂದು, ಉದ್ಯೋಗ ಪರ್ವ,1,10
  • 405. ಸಾಮಂತರು, ಅಧೀನರಾಜರು, ಶಲ್ಯ ಪರ್ವ,3,72
  • 406. ಸಾಮದಲಿ, ಉಪಾಯದಿಂದ, ಗದಾ ಪರ್ವ,11,0
  • 407. ಸಾಮವ, ಶಿಕ್ಷಣ (ಸಾಮು, ವಿರಾಟ ಪರ್ವ,8,16
  • 408. ಸಾಮ್ರಾಜ್ಯಕವು, ಚಕ್ರಾಧಿಪತ್ಯವು, ಆದಿ ಪರ್ವ,8,89
  • 409. ಸಾಯುಜ್ಯ, ಪರಮಾತ್ಮನಲ್ಲಿ ಐಕ್ಯ, ಗದಾ ಪರ್ವ,1,26
  • 410. ಸಾರ, ಸಕಲ, ಆದಿ ಪರ್ವ,16,67
  • 411. ಸಾರ, ಮುಖ್ಯ, ಆದಿ ಪರ್ವ,11,40
  • 412. ಸಾರ, ತಿರುಳು, ಉದ್ಯೋಗ ಪರ್ವ,4,15
  • 413. ಸಾರಣೆ, ಸಾರಿಸು, ಆದಿ ಪರ್ವ,12,10
  • 414. ಸಾರಣೆ, ನೆಲಗಾರೆ, ವಿರಾಟ ಪರ್ವ,10,48
  • 415. ಸಾರಥಿವ್ರಾತ, ಸಾರಥಿಗಳ ಸಮೂಹ, ಗದಾ ಪರ್ವ,12,21
  • 416. ಸಾರಮಣಿ, ಉತ್ತಮ ಮಣಿಗಳಿಂದ ಕೂಡಿದ, ಗದಾ ಪರ್ವ,3,40
  • 417. ಸಾರಸಂಗತಿ, ಸಾರವತ್ತಾದ ವಿಚಾರ, ಆದಿ ಪರ್ವ,12,20
  • 418. ಸಾರಸತ್ವ, ಶಕ್ತಿಯ ಎಲ್ಲ ಸಾರ, ಗದಾ ಪರ್ವ,7,31
  • 419. ಸಾರಹೃದಯ, ಉತ್ತಮ ಹೃದಯವನ್ನುಳ್ಳವನ, ಗದಾ ಪರ್ವ,8,21
  • 420. ಸಾರಾಯ, ಸಾರವತ್ತಾದ, ಆದಿ ಪರ್ವ,11,13
  • 421. ಸಾರಿ, ಪಗಡೆಕಾಯಿ, ಆದಿ ಪರ್ವ,13,42
  • 422. ಸಾರಿ, ಪಗಡೆಯ ದಾಳ (ಪಗಡೆಯಾಡುವಾಗ ಬಳಸುವ ದಾಳ), ವಿರಾಟ ಪರ್ವ,9,19
  • 423. ಸಾರಿಯ ನಿವಹ, ಪಗಡೆಗಳು, ವಿರಾಟ ಪರ್ವ,9,12
  • 424. ಸಾರಿಸು, ಘೋಷಿಸು, ಉದ್ಯೋಗ ಪರ್ವ,11,11
  • 425. ಸಾರು, ಪಕ್ಕಕ್ಕೆ ಹೋಗು, ದ್ರೋಣ ಪರ್ವ,1,56
  • 426. ಸಾರು, ದೂರಸರಿ, ಕರ್ಣ ಪರ್ವ,11,35
  • 427. ಸಾರುಗು, ಬರುತ್ತದೆ, ಸಭಾ ಪರ್ವ,1,50
  • 428. ಸಾರೆನುತ, ಹೋಗು ಎನ್ನುತ್ತ, ಗದಾ ಪರ್ವ,11,52
  • 429. ಸಾರೋದ್ಧಾರ, ಮುಖ್ಯ ತತ್ತ್ವಸಾರ, ಭೀಷ್ಮ ಪರ್ವ,3,50
  • 430. ಸಾರ್ಗು, ಪ್ರಾಪ್ತವಾಗುತ್ತದೆ, ಸಭಾ ಪರ್ವ,1,50
  • 431. ಸಾಲ, ಕಡ, ಆದಿ ಪರ್ವ,10,18
  • 432. ಸಾಲಕುರಿದರಿಹಿ, ಕುರಿಗಳನ್ನು ಬಲಿಕೊಟ್ಟು ಯಜ್ಞಗಳನ್ನು ಮಾಡಿದವರು, ಅರಣ್ಯ ಪರ್ವ,7,15
  • 433. ಸಾಲಕೊಳಚೆ, ಕೆಸರಾದ ರಕ್ತ, ಭೀಷ್ಮ ಪರ್ವ,10,11
  • 434. ಸಾಲಭಂಜಿಕೆ, ಮರದಗೊಂಬೆ, ಸಭಾ ಪರ್ವ,1,11
  • 435. ಸಾಲು, ಸಾಕಾಗು, ಆದಿ ಪರ್ವ,20,40
  • 436. ಸಾಹಸ ಇಡಿದುದು, ಪುಡಿಪುಡಿಮಾಡಿದುದು., ಶಲ್ಯ ಪರ್ವ,3,13
  • 437. ಸಾಹಸಮಲ್ಲ, ಮಹಾಪರಾಕ್ರಮಿ, ಆದಿ ಪರ್ವ,11,36
  • 438. ಸಾಹಾಯ್ಯ, ವೇಷ ?, ವಿರಾಟ ಪರ್ವ,1,21
  • 439. ಸಾಹಾಯ್ಯ, ಅನುಕೂಲ, ದ್ರೋಣ ಪರ್ವ,9,38
  • 440. ಸಾಹಿತ್ಯ, ಸಂಬಂಧ, ಉದ್ಯೋಗ ಪರ್ವ,4,40
  • 441. ಸಾಹಿತ್ಯ, ಸಹಚರ್ಯ/ಸಂಬಂಧಿ, ಉದ್ಯೋಗ ಪರ್ವ,4,26
  • 442. ಸಾಹಿತ್ಯರೇಖೆ, ಸಾಹಚರ್ಯದಲ್ಲಿ , ಗದಾ ಪರ್ವ,4,31
  • 443. ಸಾಳಗ, ಮೇಳ, ಆದಿ ಪರ್ವ,12,20
  • 444. ಸಾಳಗ, ರಾಗದ ಹೆಸರು, ಸಭಾ ಪರ್ವ,1,21
  • 445. ಸಾಳಗ, ಒಂದು ರಾಗದ ಹೆಸರು, ಸಭಾ ಪರ್ವ,9,36
  • 446. ಸಾಳುವ, ಗಿಡುಗ, ಆದಿ ಪರ್ವ,20,53
  • 447. ಸಾಳುವ, ಗಿಡುಗ ಆಗಮ(ನ) ವಿದ್ಯೆ(?), ಕರ್ಣ ಪರ್ವ,11,58
  • 448. ಸಾಳ್ವ, ಗಿಡುಗ, ಭೀಷ್ಮ ಪರ್ವ,3,16
  • 449. ಸಿಂಗಿ, ಉರಿ, ಅರಣ್ಯ ಪರ್ವ,17,18
  • 450. ಸಿಂಧ, ದಂಡ ಧ್ವಜ, ಭೀಷ್ಮ ಪರ್ವ,3,19
  • 451. ಸಿಂಧ, ಧ್ವಜ, ಶಲ್ಯ ಪರ್ವ,2,22
  • 452. ಸಿಂಧ ಮತ್ತು ಸೆಳೆ, ಧ್ವಜ ಮತ್ತು ಧ್ವಜ ಸ್ತಂಭ, ಭೀಷ್ಮ ಪರ್ವ,8,64
  • 453. ಸಿಂಧದ, ಬಾವುಟದ, ದ್ರೋಣ ಪರ್ವ,3,50
  • 454. ಸಿಂಧೂರ, ಹಣೆಗೆ ಹಚ್ಚಿಕೊಳ್ಳುವ ಕೆಂಪು ವಸ್ತು, ಆದಿ ಪರ್ವ,1,3
  • 455. ಸಿಂಪಿಸಿದ, ಎರೆಚಿದ, ದ್ರೋಣ ಪರ್ವ,3,56
  • 456. ಸಿಂಹನಾದದಲಿ, ಗರ್ಜಿಸುತ್ತಾ, ಭೀಷ್ಮ ಪರ್ವ,8,34
  • 457. ಸಿಕ್ಕಿದ, ಸಿಕ್ಕಿಹೋದ (ಸುಕ್ಕಿದ, ಶಲ್ಯ ಪರ್ವ,1,15
  • 458. ಸಿಗುರು, ಗಾಯಮಾಡು, ಕರ್ಣ ಪರ್ವ,17,52
  • 459. ಸಿಗುರು, ಚೆಕ್ಕೆ, ಉದ್ಯೋಗ ಪರ್ವ,11,39
  • 460. ಸಿಡಿ, ಚಲ್ಲಾಪಿಲ್ಲಿ, ಆದಿ ಪರ್ವ,20,54
  • 461. ಸಿಡಿಲೇಳಿಗೆ, ಅಬ್ಬರಿಸುವ ಸಿಡಿಲಿನಿಂತಹ ಕೂಗು, ವಿರಾಟ ಪರ್ವ,4,41
  • 462. ಸಿತ, ಬಿಳಿಯ, ಸಭಾ ಪರ್ವ,1,8
  • 463. ಸಿತಗತನ, ಶೌರÀ, ಕರ್ಣ ಪರ್ವ,16,17
  • 464. ಸಿತಗರು, ಬಲಿಷ್ಠರು, ಭೀಷ್ಮ ಪರ್ವ,3,9
  • 465. ಸಿತಗರು, ಧೂರ್ತರು., ದ್ರೋಣ ಪರ್ವ,16,32
  • 466. ಸಿತತುರಗ, ಶ್ವೇತವಾಹನ ಅಂದರೆ ಅರ್ಜುನನ ಹೆಸರು, ವಿರಾಟ ಪರ್ವ,1,23
  • 467. ಸಿತತುರಗ, ಬಿಳಿಯ ಕುದುರೆಯನ್ನುಳ್ಳವ, ಗದಾ ಪರ್ವ,11,53
  • 468. ಸಿತಪತಾಕೆ, ಬಿಳಿಯಧ್ವಜ, ಉದ್ಯೋಗ ಪರ್ವ,7,8
  • 469. ಸಿತಹಯ, ಬಿಳಿಕುದುರೆಯವ, ಕರ್ಣ ಪರ್ವ,8,37
  • 470. ಸಿತಾಕ್ಷತಾವಳಿ, ಬಿಳಿಯ ಮಂತ್ರಾಕ್ಷತೆ, ದ್ರೋಣ ಪರ್ವ,6,43
  • 471. ಸಿತಾಶ್ವ, ಬಿಳಿಯ ಕುದುರೆ, ಆದಿ ಪರ್ವ,20,20
  • 472. ಸಿತಾಶ್ವ, ಅರ್ಜುನ (ಕೃಷ್ಣ), ಕರ್ಣ ಪರ್ವ,9,24
  • 473. ಸಿತಾಶ್ವ, ಅರ್ಜುನ., ದ್ರೋಣ ಪರ್ವ,10,9
  • 474. ಸಿದ್ಧ, ಸಿದ್ಧಿಯನ್ನು ಪಡೆದವ, ಗದಾ ಪರ್ವ,8,60
  • 475. ಸಿದ್ಧಾಂತ, ತತ್ತ್ವ, ಆದಿ ಪರ್ವ,11,12
  • 476. ಸಿದ್ಧಿ, ಗುರಿ ಮುಟ್ಟುವುದು., ಉದ್ಯೋಗ ಪರ್ವ,4,54
  • 477. ಸಿರಿ, ಶೋಭೆ, ಆದಿ ಪರ್ವ,16,52
  • 478. ಸಿರಿ, ಶ್ರೀ(ಸಂ) ಐಶ್ವರ್ಯ, ಗದಾ ಪರ್ವ,11,7
  • 479. ಸಿರಿಕರಣದವರು, ಶಾನುಭೋಗರು, ಉದ್ಯೋಗ ಪರ್ವ,9,29
  • 480. ಸಿರಿನಾಮ, ಮಂಗಳಕರ ನಾಮಸ್ಮರಣೆ, ಭೀಷ್ಮ ಪರ್ವ,6,44
  • 481. ಸಿರಿಮುಡಿ, ಸುಂದರವಾದ ತುರುಬು, ಆದಿ ಪರ್ವ,14,7
  • 482. ಸಿರಿಲೋಲ, ಲಕ್ಷ್ಮಿಗೆ ಪ್ರಿಯ, ಸಭಾ ಪರ್ವ,1,1
  • 483. ಸಿರಿಲೋಲ, ಶ್ರೀಲೋಲ, ಗದಾ ಪರ್ವ,6,1
  • 484. ಸಿಲುಕಿದಡೆ, ಸಿಕ್ಕಿಕೊಂಡರೆ, ಗದಾ ಪರ್ವ,12,7
  • 485. ಸಿಲುಕಿದನು, ಸಿಕ್ಕಿ ಬಿದ್ದನು, ಭೀಷ್ಮ ಪರ್ವ,6,24
  • 486. ಸಿಲುಕಿದನು, ಸಿಕ್ಕಿಹಾಕಿಕೊಂಡನು, ದ್ರೋಣ ಪರ್ವ,2,73
  • 487. ಸಿಲುಕು, ಸೇರಿಸು, ಆದಿ ಪರ್ವ,13,11
  • 488. ಸಿವಡು ಸುಂಟಿಗೆ, ಸುಟ್ಟಮಾಂಸ, ಕರ್ಣ ಪರ್ವ,8,42
  • 489. ಸೀಕರಿ, ಕರಕಲಾಗುವುದು, ಗದಾ ಪರ್ವ,9,18
  • 490. ಸೀಕರಿವೋಗು, ಕಪ್ಪಾಗು, ವಿರಾಟ ಪರ್ವ,3,55
  • 491. ಸೀಗುರಿ, ಬೀಸುವ ಸೀಗುರಿ, ಭೀಷ್ಮ ಪರ್ವ,3,15
  • 492. ಸೀತಾಳ ಮಳಿಗೆ, ನೆಲೆ ?, ಕರ್ಣ ಪರ್ವ,22,1
  • 493. ಸೀದು, ಕಪ್ಪಾಗಿ, ಶಲ್ಯ ಪರ್ವ,1,15
  • 494. ಸೀಮಂತಮಣಿ, ಬೈತಲೆಯ ಆಭರಣ, ಆದಿ ಪರ್ವ,13,23
  • 495. ಸೀಮಾ ಸನ್ನಿವೇಶ, ಎಲ್ಲೆ ಕಟ್ಟಿನ ಪ್ರದೇಶ, ಆದಿ ಪರ್ವ,20,33
  • 496. ಸೀಮೆ, ಪರಿಮಿತಿ, ಆದಿ ಪರ್ವ,18,34
  • 497. ಸೀಮೆ, ಮೇರೆ, ಆದಿ ಪರ್ವ,16,35
  • 498. ಸೀಮೆ, ಕಟ್ಟಳೆ, ಆದಿ ಪರ್ವ,11,32
  • 499. ಸೀರೆ, ಉಡುವ ವಸ್ತ್ರ, ಸಭಾ ಪರ್ವ,12,30
  • 500. ಸೀರೆ, ಧೋತ್ರ, ಗದಾ ಪರ್ವ,8,21
  • 501. ಸೀವಟ, ಫಲಗಳ ಮಿಶ್ರಣ, ಅರಣ್ಯ ಪರ್ವ,9,20
  • 502. ಸೀವರಿಸದ, ಬೇಸರಗೊಳ್ಳದ, ಸಭಾ ಪರ್ವ,14,116
  • 503. ಸೀವರಿಸದೆ, ಹಿಮ್ಮೆಟ್ಟದೆ, ಆದಿ ಪರ್ವ,13,5
  • 504. ಸೀವರಿಸು, ಅಸಹ್ಯ ಪಡು, ವಿರಾಟ ಪರ್ವ,4,36
  • 505. ಸೀವರಿಸು, ಉಪೇಕ್ಷಿಸು, ಅರಣ್ಯ ಪರ್ವ,22,2
  • 506. ಸೀವರಿಸು, ತಿರಸ್ಕರಿಸು/ಹಿಂದೆಗೆ, ಕರ್ಣ ಪರ್ವ,24,41
  • 507. ಸೀವವು, ಸುಟ್ಟು ಹೋಗುತ್ತದೆ, ದ್ರೋಣ ಪರ್ವ,3,65
  • 508. ಸೀವುತಿವೆ, ಸುಟ್ಟುಕರಕಲಾಗುವುದು, ಭೀಷ್ಮ ಪರ್ವ,3,75
  • 509. ಸೀಸಕ, ತಲೆ ರಕ್ಷಾ ಕವಚ, ಭೀಷ್ಮ ಪರ್ವ,9,37
  • 510. ಸೀಸಕ, ತಲೆಗಾಪು, ಸಭಾ ಪರ್ವ,2,11
  • 511. ಸೀಸಕÀ, ಶಿರಸ್ತ್ರ್ತಾಣ, ಗದಾ ಪರ್ವ,5,39
  • 512. ಸೀಸಕದ ಕಿಗ್ಗಟ್ಟು, ಶಿರಸ್ತ್ರಾಣದ ಕೆಳಪಟ್ಟಿ, ಭೀಷ್ಮ ಪರ್ವ,4,12
  • 513. ಸೀಸವಾಳ, ? ಸೀಸ = ಶೀರ್ಷ, ಕರ್ಣ ಪರ್ವ,19,40
  • 514. ಸೀಹದ, ಪ್ರೀತಿಯ, ಉದ್ಯೋಗ ಪರ್ವ,8,20
  • 515. ಸೀಳಬಡಿ, ಸೀಳಿ ಹೋಗುವಂತೆ ಹೊಡೆ, ಗದಾ ಪರ್ವ,9,36
  • 516. ಸೀಳಿದು, ಸೀಳಿ, ವಿರಾಟ ಪರ್ವ,9,36
  • 517. ಸೀಳು ಕಟಾಹ, ಕೊಪ್ಪರಿಗೆ , ಶಲ್ಯ ಪರ್ವ,3,19
  • 518. ಸುಂಟಗೆ, ಗುಂಡಿಗೆ, ಕರ್ಣ ಪರ್ವ,19,86
  • 519. ಸುಂಟಿಗೆ, ಹೃದಯ, ದ್ರೋಣ ಪರ್ವ,13,53
  • 520. ಸುಕರ, ಸುಲಭ, ಉದ್ಯೋಗ ಪರ್ವ,6,13
  • 521. ಸುಕರ, ಸರಾಗ, ದ್ರೋಣ ಪರ್ವ,13,18
  • 522. ಸುಕರ್ಮದುಷ್ಕರ್ಮ, ಪುಣ್ಯಪಾಪ, ಭೀಷ್ಮ ಪರ್ವ,3,48
  • 523. ಸುಕೃತ, ಪುಣ್ಯ , ಗದಾ ಪರ್ವ,4,39
  • 524. ಸುಕೃತ, ಪುಣ್ಯ, ಗದಾ ಪರ್ವ,3,28
  • 525. ಸುಕೃತ, ಪುಣ್ಯಕಾರ್ಯ, ಸಭಾ ಪರ್ವ,1,72
  • 526. ಸುಕೃತ, ಪುಣ್ಯೋದಯ, ಆದಿ ಪರ್ವ,16,39
  • 527. ಸುಕೃತ, ಒಳ್ಳೆಯ, ಉದ್ಯೋಗ ಪರ್ವ,4,96
  • 528. ಸುಕೃತ ಫಲ, ಪುಣ್ಯದ ಫಲ, ವಿರಾಟ ಪರ್ವ,3,11
  • 529. ಸುಕೃತಾವಳಿ, ಪುಣ್ಯ ಸಮೂಹ, ವಿರಾಟ ಪರ್ವ,3,11
  • 530. ಸುಕೃತಿ, ಪುಣ್ಯವಂತ, ಉದ್ಯೋಗ ಪರ್ವ,3,123
  • 531. ಸುಕೃತಿಗಳು, ಪುಣ್ಯಶಾಲಿಗಳೂ, ಸಭಾ ಪರ್ವ,1,91
  • 532. ಸುಕ್ಕಿತು, ಮುದುಡು, ಕರ್ಣ ಪರ್ವ,16,27
  • 533. ಸುಕ್ಕಿತು, ಕುಗ್ಗಿತು, ಶಲ್ಯ ಪರ್ವ,3,77
  • 534. ಸುಕ್ಕಿಸಿ, ಮಂಕುಗೊಳಿಸಿ, ವಿರಾಟ ಪರ್ವ,7,51
  • 535. ಸುಖಾಯ, ಯೋಗ್ಯ ಪ್ರಮಾಣ (?) (ಕನ್ನಡ ನಿಘಂಟುಗಳಲ್ಲಿ ಈ ಪದ ಇಲ್ಲ ಕುವ್ಯಾನಿಘಂಟು ಎನ್. ಕೆಯಲ್ಲಿ ಮಾತ್ರ ಈ ಅರ್ಥವಿದೆ), ಭೀಷ್ಮ ಪರ್ವ,4,30
  • 536. ಸುಗಂಧ, ಪರಿಮಳ, ಆದಿ ಪರ್ವ,14,3
  • 537. ಸುಗಂಧಾನಿಲ, ಪರಿಮಳಭರಿತವಾದಗಾಳಿ, ಆದಿ ಪರ್ವ,11,22
  • 538. ಸುಗತಿ, ಸದ್ಗತಿ, ದ್ರೋಣ ಪರ್ವ,5,18
  • 539. ಸುಗಮಗಾನಿ, ಸರಳವಾಗಿ ಹಾಡುವವರು, ಸಭಾ ಪರ್ವ,1,89
  • 540. ಸುಗುಡತನ, ಬಯಕೆ, ಅರಣ್ಯ ಪರ್ವ,14,2
  • 541. ಸುಘಾಯ, ಏಟಿನ ಮೇಲೆ ಏಟು ಬಿದ್ದು ಆದ ಗಾಯ, ಭೀಷ್ಮ ಪರ್ವ,4,44
  • 542. ಸುಚರಿತ, ಉತ್ತಮ ಚಾರಿತ್ರ್ಯವುಳ್ಳ, ಗದಾ ಪರ್ವ,11,5
  • 543. ಸುಜನರನು, ಒಳ್ಳೆಯವರನ್ನು, ಸಭಾ ಪರ್ವ,1,27
  • 544. ಸುಜನರು, ಒಳ್ಳೆಯ ಮನುಷ್ಯರು, ಆದಿ ಪರ್ವ,8,26
  • 545. ಸುಜನರು, ಒಳ್ಳೆಯವರು, ದ್ರೋಣ ಪರ್ವ,1,6
  • 546. ಸುಜನವ್ರಾತಕಾಶ್ರಯ, ಸಜ್ಜನರಿಗೆ ನೆರಳನ್ನು ಕೊಡುತ್ತಿದೆ (ಅಂದರೆ ನಮ್ಮಂಥವರಿಗೆ ಆಶ್ರಯಕೊಡುತ್ತಿದೆ ಎಂದರ್ಥ), ವಿರಾಟ ಪರ್ವ,3,23
  • 547. ಸುಡುಗಾಡಲಿ, ಪರೇತ ವನದಲ್ಲಿ, ವಿರಾಟ ಪರ್ವ,3,82
  • 548. ಸುತನಿಧಿ, ಮಕ್ಕಳೆಂಬ ಐಶ್ವರ್ಯ, ಶಲ್ಯ ಪರ್ವ,1,4
  • 549. ಸುತಶೋಕ, ಮಕ್ಕಳನ್ನು ಕಳೆದುಕೊಂಡ ಶೋಕ, ಗದಾ ಪರ್ವ,11,73
  • 550. ಸುತಿ, ವೇದ (ಸುತಿ<ಶ್ರುತಿ), ವಿರಾಟ ಪರ್ವ,10,69
  • 551. ಸುತ್ತ ಬಳಸೆವು, ಲೋಕಾಭಿರಾಮವಾದ ಮಾತುಗಳನಾಡುವುದಿಲ್ಲ ನೇರವಾಗಿ ವಿಚಾರಕ್ಕೆ ಬರುತ್ತೇನೆ ಎಂದರ್ಥ, ವಿರಾಟ ಪರ್ವ,1,18
  • 552. ಸುತ್ತುವಲಗೆ, ರಥದ ಗೋಲಾಕಾರದ ಹಲಗೆ, ಗದಾ ಪರ್ವ,1,8
  • 553. ಸುತ್ರಾಮ, ದೇವೇಂದ್ರ, ಕರ್ಣ ಪರ್ವ,12,17
  • 554. ಸುತ್ರಾಮ ರಿಪುಗಳು, ದೇವೇಂದ್ರನ ವ್ಶೆರಿಗಳು, ಗದಾ ಪರ್ವ,12,14
  • 555. ಸುದತಿ, ಮಹಿಳೆ, ಗದಾ ಪರ್ವ,11,46
  • 556. ಸುದತಿ, ಮಡದಿ, ಉದ್ಯೋಗ ಪರ್ವ,9,78
  • 557. ಸುದತಿ, ಒಳ್ಳೆಯ ಹಲ್ಲುವಳು, ಆದಿ ಪರ್ವ,16,28
  • 558. ಸುದತಿ, ಹೆಂಗಸು, ವಿರಾಟ ಪರ್ವ,9,24
  • 559. ಸುದತಿಯರು, ಹೆಂಡಿರು, ಗದಾ ಪರ್ವ,12,10
  • 560. ಸುಧಾಕರುಣಾವಧಾನ, ಕರುಣಾಮೃತದ ನೋಟ, ಗದಾ ಪರ್ವ,5,52
  • 561. ಸುಧಾತ್ರಿ, ಪವಿತ್ರ ಭೂಮಿ, ಉದ್ಯೋಗ ಪರ್ವ,4,54
  • 562. ಸುಧಾದೀಧಿತಿ, ಚಂದ್ರನ ದೀಪ್ತಿ, ದ್ರೋಣ ಪರ್ವ,17,13
  • 563. ಸುನಾಸಾಲಂಬಿತ, ದೀರ್ಘವಾದ ಉಸಿರು, ಗದಾ ಪರ್ವ,10,12
  • 564. ಸುಪೈಕದೊಳು, ಅವರ ಪೈಕಿಯೇ, ಸಭಾ ಪರ್ವ,10,43
  • 565. ಸುಪ್ರಣಿತಾಗ್ನಿ, ? ಆಹವನೀಯಾಗ್ನಿ, ಸಭಾ ಪರ್ವ,7,31
  • 566. ಸುಪ್ರೇಮನು, ಬಹಳ ಪ್ರೀತಿಯುಳ್ಳವನು (ವ್ಯಂಗ್ಯದಿಂದ ಹೇಳಿರುವ ಮಾತು) ಮೋಹ, ಗದಾ ಪರ್ವ,11,39
  • 567. ಸುಬಲ, ಉತ್ತಮ ಶಕ್ತಿ ಸಾಮಥ್ರ್ಯ, ಗದಾ ಪರ್ವ,13,11
  • 568. ಸುಬಲಜೆ, ಸು¨ಲ ರಾಜನ ಮಗಳು, ಗದಾ ಪರ್ವ,11,64
  • 569. ಸುಬಲನಂದನ, ಸುಬಲರಾಜನ ಮಗ ಶಕುನಿ, ಗದಾ ಪರ್ವ,2,31
  • 570. ಸುಬಲನಂದನೆ, ಸುಬಲರಾಜನ ಮಗಳು, ಗದಾ ಪರ್ವ,11,71
  • 571. ಸುಬ್ರಾಹ್ಮ್ಯ, ಬ್ರಾಹ್ಮೀ ಮುಹೂರ್ತ (ದಿನದ ಆರಂಭ ಭಾಗ) ಸಂಧ್ಯಾಮಠ, ಆದಿ ಪರ್ವ,10,6
  • 572. ಸುಭಟ ಜೀವನದ ಅಳವುಳಿಗ, ವೀರರ ಬದುಕನ್ನು ನಾಶಪಡಿಸುವಾತ, ವಿರಾಟ ಪರ್ವ,7,34
  • 573. ಸುಭಟ ನಿಧಾನರು, ಶೂರರಲ್ಲಿ ಮೇಲಾದವರು, ಭೀಷ್ಮ ಪರ್ವ,8,67
  • 574. ಸುಭಟವ್ರಜ, ವೀರರ ಸಮೂಹ, ಸಭಾ ಪರ್ವ,1,37
  • 575. ಸುಭಟೌಘ, ಸುಭಟರ ಸಮೂಹ, ಗದಾ ಪರ್ವ,8,26
  • 576. ಸುಮನೋಹರ, ಅತ್ಯಂತ ಚೆಲುವು, ಆದಿ ಪರ್ವ,13,15
  • 577. ಸುಮುಕ್ತಾಫಲ, ಮುತ್ತಿನಸಾಲು, ಭೀಷ್ಮ ಪರ್ವ,3,77
  • 578. ಸುಮುಖ, ಹಸನ್ಮುಖ, ಗದಾ ಪರ್ವ,5,57
  • 579. ಸುಮ್ಮಾನ, ಸಂತೋಷಾತಿರೇಕ , ಗದಾ ಪರ್ವ,4,53
  • 580. ಸುಯಿದಾನ, ರಕ್ಷಣೆ, ಉದ್ಯೋಗ ಪರ್ವ,3,50
  • 581. ಸುಯಿಧಾನ, ಮೇಲ್ವಿಚಾರಣೆ, ಭೀಷ್ಮ ಪರ್ವ,4,1
  • 582. ಸುಯಿಧಾನ, ಕಾವಲು, ಗದಾ ಪರ್ವ,2,1
  • 583. ಸುಯಿಲು, ನಿಟ್ಟುಸಿರು, ವಿರಾಟ ಪರ್ವ,2,53
  • 584. ಸುಯಿಲು, ಒರಗು, ಉದ್ಯೋಗ ಪರ್ವ,3,61
  • 585. ಸುಯ್ದಾನ, ಎಚ್ಚರಿಕೆ, ಆದಿ ಪರ್ವ,18,16
  • 586. ಸುಯ್ದಾನದಲಿ, ಎಚ್ಚರಿಕೆಯಿಂದ, ಸಭಾ ಪರ್ವ,6,14
  • 587. ಸುಯ್ದು, ನಿಟ್ಟುಸಿರು ಬಿಟ್ಟು, ಆದಿ ಪರ್ವ,10,9
  • 588. ಸುಯ್ವ, ಧೀರ್ಘವಾಗಿ ಉಸಿರುಬಿಡುವ, ಗದಾ ಪರ್ವ,3,14
  • 589. ಸುಯ್ವವನ, ಏದುಸಿರು ಬಿಡುವವನನ್ನು, ಗದಾ ಪರ್ವ,3,12
  • 590. ಸುರ, ನರ, ಗದಾ ಪರ್ವ,4,6
  • 591. ಸುರಂಗದ, ಆಕರ್ಷಕರಂಗಿನ, ಭೀಷ್ಮ ಪರ್ವ,4,41
  • 592. ಸುರಂಭ, ಚೆಲುವು, ವಿರಾಟ ಪರ್ವ,6,1
  • 593. ಸುರಗಂಗೆ, ದೇವಗಂಗಾನದಿ, ಭೀಷ್ಮ ಪರ್ವ,4,6
  • 594. ಸುರಗಿ, ಕಠಾರಿ, ದ್ರೋಣ ಪರ್ವ,15,19
  • 595. ಸುರಗಿ, ಕೈಕತ್ತಿ, ಉದ್ಯೋಗ ಪರ್ವ,11,7
  • 596. ಸುರಗಿ, ಚೂರಿ, ಉದ್ಯೋಗ ಪರ್ವ,11,16
  • 597. ಸುರಗಿಯ ಬಸೆಯ ಬೆಳಸುತ, ಸುರಗಿ ಕತ್ತಿಗಳಿಗೆ ನೆಣವನ್ನು ಹೆಚ್ಚಾಗಿ ಬಳೆವುದು ?, ಭೀಷ್ಮ ಪರ್ವ,5,38
  • 598. ಸುರಗಿಯತಿಬಲರು, ಅತಿಬಲರಾದ ಖಡ್ಗವೀರರು., ಭೀಷ್ಮ ಪರ್ವ,4,24
  • 599. ಸುರತರುಣಿಯರು, ದೇವತಾ ಸ್ತ್ರೀಯರು., ಗದಾ ಪರ್ವ,2,31
  • 600. ಸುರತವಿರಹಿ, ಕಾಮಬಾಧಿತ ವಿರಹಿ, ವಿರಾಟ ಪರ್ವ,2,50
  • 601. ಸುರನದೀಸುತ, ಗಂಗಾಪುತ್ರ ಭೀಷ್ಮ, ಭೀಷ್ಮ ಪರ್ವ,7,6
  • 602. ಸುರನಿಕರ, ದೇವ ಸಮೂಹ, ವಿರಾಟ ಪರ್ವ,1,15
  • 603. ಸುರಪ, ದೇವತೆಗಳ ಒಡೆಯ, ಆದಿ ಪರ್ವ,20,26
  • 604. ಸುರಪನ, ಇಂದ್ರನ, ದ್ರೋಣ ಪರ್ವ,7,32
  • 605. ಸುರಪನ ಸೂನು, ಇಂದ್ರನ ಮಗ (ಅರ್ಜುನ), ವಿರಾಟ ಪರ್ವ,6,0
  • 606. ಸುರಪನರಸಿ, ಇಂದ್ರನ ಅರಸಿ , ವಿರಾಟ ಪರ್ವ,1,23
  • 607. ಸುರಭಿ, ಧೇನು/ಹಸು, ಉದ್ಯೋಗ ಪರ್ವ,7,5
  • 608. ಸುರಭಿತನ, ಪರಿಮಳಿಸುವಿಕೆ, ವಿರಾಟ ಪರ್ವ,10,83
  • 609. ಸುರರಾಜಸುತ, ಅರ್ಜುನ (ಇಂದ್ರನ ಮಗ), ವಿರಾಟ ಪರ್ವ,8,36
  • 610. ಸುರಲತೆ, ಕಲ್ಪಲತೆ, ದ್ರೋಣ ಪರ್ವ,4,48
  • 611. ಸುರವ್ರಜ, ದೇವತೆಗಳ ಸಮೂಹ, ಶಲ್ಯ ಪರ್ವ,3,71
  • 612. ಸುರಸನ್ನಿಭ, ದೇವಸಮಾನವಾದ, ಸಭಾ ಪರ್ವ,12,82
  • 613. ಸುರಸ್ತೋಮ, ದೇವತೆಗಳ ಗುಂಪು, ವಿರಾಟ ಪರ್ವ,10,68
  • 614. ಸುರಾರಿ, ರಕ್ಕಸ, ಆದಿ ಪರ್ವ,10,36
  • 615. ಸುರಿದು, ಹೀರಿಕೊಂಡು, ಶಲ್ಯ ಪರ್ವ,2,28
  • 616. ಸುರಿದುದು, ಹೊರಹಾಕಿತು, ಭೀಷ್ಮ ಪರ್ವ,8,0
  • 617. ಸುರಿವೆನು, ಸುರ್ರೆಂದು ಕುಡಿಯುವೆನು, ಭೀಷ್ಮ ಪರ್ವ,10,36
  • 618. ಸುರೇಖರು, ಅಂಗಸೌಷ್ಠವವುಳ್ಳವರು (ಶಕ್ತರು), ಭೀಷ್ಮ ಪರ್ವ,9,33
  • 619. ಸುರೇಶ, ದೇವೇಂದ್ರ, ಆದಿ ಪರ್ವ,20,25
  • 620. ಸುರೇಶ್ವರ, ದೇವತೆಗಳಿಗೆಲ್ಲ ಒಡೆಯ, ಆದಿ ಪರ್ವ,20,31
  • 621. ಸುಲಿ, ಸೆಳೆ/ಎಳೆ, ಉದ್ಯೋಗ ಪರ್ವ,5,6
  • 622. ಸುಲಿ, ವಸೂಲು ಮಾಡು, ವಿರಾಟ ಪರ್ವ,9,9
  • 623. ಸುಲಿಪಲ್ಲು, ಸ್ವಚ್ಛವಾದ ಹಲ್ಲು, ಸಭಾ ಪರ್ವ,14,46
  • 624. ಸುಲಿಸೀರೆಯಲಿ, ಸೀರೆಯನ್ನು ಸೆಳೆಯುವ ಸಂದರ್ಭದಲ್ಲಿ, ಗದಾ ಪರ್ವ,11,4
  • 625. ಸುಲಿಸು, ಬಿಡಿಸು, ಗದಾ ಪರ್ವ,5,12
  • 626. ಸುಲೋಚನ, ಚಂದ್ರ ವಂಶದ ಒಬ್ಬ ರಾಜ, ದ್ರೋಣ ಪರ್ವ,8,49
  • 627. ಸುವರ್ಣ, ಸ್ವರ್ಣ, ಗದಾ ಪರ್ವ,13,18
  • 628. ಸುವರ್ಣಾಪಳಿ, ಹಳದಿ ವಸ್ತ್ರ ಸಂಧ್ಯಾಪಳಿ, ಭೀಷ್ಮ ಪರ್ವ,4,52
  • 629. ಸುವಾಸಿನಿ, ಸುಮಂಗಲಿ, ಆದಿ ಪರ್ವ,13,27
  • 630. ಸುವಿವೇಕಗತಿ, ಉತ್ತಮವಾದ ವಿವೇಕದಿಂದ ದೊರಕುವ ಅಂತಿಮ ಸ್ಥಿತಿ, ಗದಾ ಪರ್ವ,11,12
  • 631. ಸುವಿಹ್ವಲಕರಣರು, ವಿಹ್ವಲಗೊಂಡ ಮನಸ್ಸಿನವರು., ಗದಾ ಪರ್ವ,9,38
  • 632. ಸುವೃಷ್ಟಿ, ಒಳ್ಳೆಯ ಮಳೆ, ಉದ್ಯೋಗ ಪರ್ವ,4,60
  • 633. ಸುಶರ್ಮ, ತ್ರಿಗರ್ತ ದೇಶಾಧಿಪತಿ (ಈಗಿನ ಪಾಕಿಸ್ತಾನದ ಲಾಹೋರ್‍ನಲ್ಲಿರುವ ಜಲಂಧರ್), ಕರ್ಣ ಪರ್ವ,15,4
  • 634. ಸುಷುಪ್ತಿ, ಅರೆಪ್ರಜ್ಞಾವಸ್ಥೆ., ದ್ರೋಣ ಪರ್ವ,9,5
  • 635. ಸುಷುಮ್ನಾನಾಡಿ, ಸೂರ್ಯ ಚಂದ್ರನಾಡಿಗಳ ಮಧ್ಯದಲ್ಲಿರುವ ನಾಳವೇ ಸುಷುಮ್ನಾನಾಡಿ, ದ್ರೋಣ ಪರ್ವ,18,69
  • 636. ಸುಸಂಗತ, ಒಳ್ಳೆಯ, ಆದಿ ಪರ್ವ,11,22
  • 637. ಸುಸಂಚ, ರಹಸ್ಯ, ಗದಾ ಪರ್ವ,6,23
  • 638. ಸುಸ್ವರ, ಇಂಪಾದ ಧ್ವನಿ, ಆದಿ ಪರ್ವ,11,22
  • 639. ಸುಹೃತ್ಸಂತತಿ, ಒಳ್ಳೆಯ ಮಕ್ಕಳು, ಉದ್ಯೋಗ ಪರ್ವ,4,113
  • 640. ಸುಳಿ, ಬಾಳೆಗಿಡದಲ್ಲಿ ಸುರುಳಿಯಾಗಿ ಸುತ್ತಿಕೊಂಡಿರುವ ಚಿಗುರೆಲೆ, ದ್ರೋಣ ಪರ್ವ,12,29
  • 641. ಸುಳಿ, ತಿರುಗುವುದು, ಆದಿ ಪರ್ವ,20,37
  • 642. ಸುಳಿನಾಭಿ, ಸುಳಿಯಾಕಾರದ ಹೊಕ್ಕಳು, ಭೀಷ್ಮ ಪರ್ವ,3,77
  • 643. ಸುಳಿವು, ಸೂಚನೆ, ವಿರಾಟ ಪರ್ವ,7,1
  • 644. ಸುಳಿವು, ಸಂಚಾರ, ಆದಿ ಪರ್ವ,19,28
  • 645. ಸುಳಿವು, ಗುರುತು, ಗದಾ ಪರ್ವ,1,65
  • 646. ಸುಳಿವು, ತಿರುಗಾಟ, ಆದಿ ಪರ್ವ,16,15
  • 647. ಸುಳಿವುದು, ಸೃಷ್ಟಿ ಆಗುವುದು, ಭೀಷ್ಮ ಪರ್ವ,3,86
  • 648. ಸುಳಿಸಿದನು, ಮುನ್ನಡೆಸಿದನು, ಭೀಷ್ಮ ಪರ್ವ,3,3
  • 649. ಸೂಕರನ ತುಪ್ಪ, ಹಂದಿಕೊಬ್ಬು, ಭೀಷ್ಮ ಪರ್ವ,5,42
  • 650. ಸೂಕ್ತಿ, ಒಳ್ಳೆಯ ಮಾತುಗಳು, ಉದ್ಯೋಗ ಪರ್ವ,6,0
  • 651. ಸೂಕ್ಮ, ನಿಖರವಾದ, ಉದ್ಯೋಗ ಪರ್ವ,3,87
  • 652. ಸೂಗರಿಸು, ತೂಕಡಿಸು, ಕರ್ಣ ಪರ್ವ,11,30
  • 653. ಸೂಚಿಯಗ್ರಪ್ರಮಿತ, ಸೂಜಿಯ ತುದಿಯನ್ನು ಊರುವಷ್ಟು ಅಳತೆಯ (ಪ್ರಮಿತ, ಗದಾ ಪರ್ವ,5,16
  • 654. ಸೂಚಿಸು, ಗಮನಕ್ಕೆ ತರು, ಆದಿ ಪರ್ವ,8,81
  • 655. ಸೂಚ್ಯಾಗ್ರಸಮ್ಮಿತ, ಸೂಜಿಯ ತುದಿಯಷ್ಟು, ಗದಾ ಪರ್ವ,8,8
  • 656. ಸೂಟಿ, ಚುರುಕು, ಉದ್ಯೋಗ ಪರ್ವ,3,104
  • 657. ಸೂಠಿ, ವೇಗ, ಗದಾ ಪರ್ವ,1,47
  • 658. ಸೂಠಿಯಲಿ, ವೇಗದಲ್ಲಿ, ದ್ರೋಣ ಪರ್ವ,3,45
  • 659. ಸೂಡುದರಿ, ಹುಲ್ಲನ್ನು ಕತ್ತರಿಸು, ಕರ್ಣ ಪರ್ವ,19,30
  • 660. ಸೂತ, ಸಾರಥಿ `ತಾಯೆ.... ಸೂತನ ತಾ' ಶಬ್ದಗಳು ಮೂಡಿರುವ ಸೊಬಗನ್ನು ನೋಡಿ, ವಿರಾಟ ಪರ್ವ,5,32
  • 661. ಸೂತ ಕುನ್ನಿಗಳು, ಸಾರಥಿಗಳು, ಭೀಷ್ಮ ಪರ್ವ,8,63
  • 662. ಸೂತಕ, ಮೈಲಿಗೆ, ಅರಣ್ಯ ಪರ್ವ,5,22
  • 663. ಸೂತಜ, ಸೂತಪುತ್ರ ಕರ್ಣ, ಗದಾ ಪರ್ವ,11,5
  • 664. ಸೂತತನ, ಸಾರಥಿತನ, ವಿರಾಟ ಪರ್ವ,6,15
  • 665. ಸೂತರ ಓಜೆಗಳು, ಸಾರಥಿಗಳ ಸಮೂಹ, ಭೀಷ್ಮ ಪರ್ವ,2,5
  • 666. ಸೂತಾಶ್ರಯ, ಸಾರಥಿಗಳು ಏರಿದ್ದ, ಭೀಷ್ಮ ಪರ್ವ,4,95
  • 667. ಸೂತ್ರಧಾರೆ, ನಿರ್ದೇಶನ, ಆದಿ ಪರ್ವ,18,5
  • 668. ಸೂತ್ರಿಸಿ, ಪೋಣಿಸಿ, ಆದಿ ಪರ್ವ,12,15
  • 669. ಸೂನಗಿ, ಶೂಲ, ಕರ್ಣ ಪರ್ವ,19,89
  • 670. ಸೂನಗೆ, ಶೂಲ, ಅರಣ್ಯ ಪರ್ವ,18,29
  • 671. ಸೂನಗೆ, ಶೂಲದ, ಭೀಷ್ಮ ಪರ್ವ,4,94
  • 672. ಸೂನಗೆ, ಶೂಲದಂಥ ಆಯುಧ, ಭೀಷ್ಮ ಪರ್ವ,4,65
  • 673. ಸೂನಿಗೆ, ಮಾರಕಾಸ್ತ್ರ, ಉದ್ಯೋಗ ಪರ್ವ,11,17
  • 674. ಸೂನಿಗೆ, ಒಂದು ಬಗೆ ಕತ್ತಿ, ಭೀಷ್ಮ ಪರ್ವ,3,19
  • 675. ಸೂನಿಗೆ, ಒಂದು ಬಗೆಯ ಆಯುಧ, ದ್ರೋಣ ಪರ್ವ,3,5
  • 676. ಸೂನಿಗೆ, ಕಠಾರಿ, ಶಲ್ಯ ಪರ್ವ,2,44
  • 677. ಸೂನು, ಮಗ., ವಿರಾಟ ಪರ್ವ,1,8
  • 678. ಸೂಪ, ಸಾರು, ಆದಿ ಪರ್ವ,10,17
  • 679. ಸೂಪ, ಸಾರು , ಆದಿ ಪರ್ವ,15,7
  • 680. ಸೂಪಕಾರ, > ಸೂವಾರ> ಸುವಾರ, ವಿರಾಟ ಪರ್ವ,3,38
  • 681. ಸೂಪಶಾಸ್ತ, ಪಾಕಶಾಸ್ತ್ರ (ಅಡುಗೆ ವಿದ್ಯೆ), ಉದ್ಯೋಗ ಪರ್ವ,3,92
  • 682. ಸೂರಿ ಸಂದೋಹ, ವಿದ್ವಾಂಸರ ಸಮೂಹ, ವಿರಾಟ ಪರ್ವ,10,69
  • 683. ಸೂರುಳ್, ಪ್ರತಿಜ್ಞೆ, ಉದ್ಯೋಗ ಪರ್ವ,3,112
  • 684. ಸೂರುಳಿಸು, ಸೂರುಳ್ ಪ್ರತಿಜ್ಞೆ ಮಾಡು, ವಿರಾಟ ಪರ್ವ,9,35
  • 685. ಸೂರೆ, ಸೂರೆ ಹೊಡೆಯುವುದು, ಗದಾ ಪರ್ವ,5,18
  • 686. ಸೂರೆಗಳ, ಗಂಟು ಮೂಟೆಗಳ, ಭೀಷ್ಮ ಪರ್ವ,7,8
  • 687. ಸೂರೆಗೆಳಸು, ಲೂಟಿ ಮಾಡ ಬಯಸು, ಆದಿ ಪರ್ವ,13,31
  • 688. ಸೂರೆಗೊಂಡು, ಅಲ್ಲಿನವರನ್ನೆಲ್ಲ ಸೂರೆಮಾಡಿದ ಮೇಲೆ, ಸಭಾ ಪರ್ವ,4,8
  • 689. ಸೂರೆಯ ಕೈತವಕಿಗಳು, ?, ಸಭಾ ಪರ್ವ,1,2
  • 690. ಸೂರೆವೋಗು, ದಾಳಿಗೆ ಒಳಗಾಗು, ವಿರಾಟ ಪರ್ವ,2,10
  • 691. ಸೂರ್ಯನ ತುರಗ, ಸೂರ್ಯನ ರಥದ ಏಳು ಕುದುರೆಗಳು, ಗದಾ ಪರ್ವ,8,43
  • 692. ಸೂಲಿಗೆ, ಶೂಲ, ದ್ರೋಣ ಪರ್ವ,3,7
  • 693. ಸೂವಾರ ವಿದ್ಯೆ, ಅಡಿಗೆಯ ಕಲೆ, ವಿರಾಟ ಪರ್ವ,3,38
  • 694. ಸೂಸಕ, ಬೈತಲೆಮಣಿ, ಗದಾ ಪರ್ವ,11,19
  • 695. ಸೂಸಿ, ಚೆಲ್ಲಿ, ಆದಿ ಪರ್ವ,15,41
  • 696. ಸೂಸಿತು, ತುಂಬಿತು, ಗದಾ ಪರ್ವ,12,5
  • 697. ಸೂಸಿದರು, ಸುರಿಸಿದರು, ಭೀಷ್ಮ ಪರ್ವ,6,16
  • 698. ಸೂಸಿದವು, ಚೆಲ್ಲಿದವು, ಗದಾ ಪರ್ವ,11,18
  • 699. ಸೂಸು, ಹೊರಚೆಲ್ಲು, ಆದಿ ಪರ್ವ,13,64
  • 700. ಸೂಸು, ತುಂಬು, ಗದಾ ಪರ್ವ,8,4, ,
  • 701. ಸೂಳ್, ಸರದಿ, ಸಭಾ ಪರ್ವ,2,118
  • 702. ಸೂಳಡಿಸಿ, ಕ್ರಮವಾಗಿ, ದ್ರೋಣ ಪರ್ವ,9,12
  • 703. ಸೂಳಬಂಟಿಕೆ, ಸೂಳೆಯರನ್ನು ಒಲಿಸಿಕೊಂಡು ಸೇವಿಸುವ ವಿದ್ಯೆ, ಭೀಷ್ಮ ಪರ್ವ,5,20
  • 704. ಸೂಳವಿಸಿ, ಒಂದಾದ ಮೇಲೊಂದರಂತೆ, ದ್ರೋಣ ಪರ್ವ,1,44
  • 705. ಸೂಳವಿಸು, ಬಾರಿಸು, ಉದ್ಯೋಗ ಪರ್ವ,11,34
  • 706. ಸೂಳವಿಸು, ಸಾರು, ಉದ್ಯೋಗ ಪರ್ವ,11,14
  • 707. ಸೂಳವಿಸು, ಅಬ್ಬರಿಸು, ವಿರಾಟ ಪರ್ವ,4,46
  • 708. ಸೂಳವಿಸು, ಕ್ರಮವಾಗಿ, ದ್ರೋಣ ಪರ್ವ,4,52
  • 709. ಸೂಳವಿಸು, ಗಜರು, ಭೀಷ್ಮ ಪರ್ವ,5,28
  • 710. ಸೂಳವಿಸು, ಗಟ್ಟಿಧ್ವನಿಮಾಡು, ಗದಾ ಪರ್ವ,5,1, ,
  • 711. ಸೂಳವಿಸು, ಧ್ವನಿಮಾಡು, ಶಲ್ಯ ಪರ್ವ,2,3
  • 712. ಸೂಳಾಯಿತರ, ಪರಿಚಾರಿಕೆಯರ, ಸಭಾ ಪರ್ವ,15,21
  • 713. ಸÀೂಳು, ಬಾರಿಬಾರಿಗೂ ಬರುವ, ಗದಾ ಪರ್ವ,11,1
  • 714. ಸೂಳು, ಸುಳಿವು, ಆದಿ ಪರ್ವ,8,1
  • 715. ಸೂಳು, ಸರದಿ, ಭೀಷ್ಮ ಪರ್ವ,8,1
  • 716. ಸೂಳು, ಗರ್ಜನೆ, ದ್ರೋಣ ಪರ್ವ,12,6
  • 717. ಸೂಳು À, ಸೂಚನೆ ವೀರಪಣಹ, ಗದಾ ಪರ್ವ,7,52
  • 718. ಸೂಳು ಬಂಟರು, ಸರದಿಯ ಸೇವಕರು?, ಕರ್ಣ ಪರ್ವ,1,7
  • 719. ಸೂಳುನಗು, ಅವಿರತವಾದ ನಗು, ಸಭಾ ಪರ್ವ,2,76
  • 720. ಸೂಳೆದ್ದ, ಬೆದೆಗೆ ಬಂದ, ವಿರಾಟ ಪರ್ವ,7,50
  • 721. ಸೂಳೈಸು, ತಟ್ಟು, ದ್ರೋಣ ಪರ್ವ,16,55
  • 722. ಸೂಳೈಸು, ಧ್ವನಿಮಾಡು, ಸಭಾ ಪರ್ವ,3,37
  • 723. ಸೃಕ್ವ, ಕಟವಾಯಿ, ಭೀಷ್ಮ ಪರ್ವ,3,4
  • 724. ಸೃಜಿಸಿದೆವು, ಹುಟ್ಟಿಸಿದೆವು, ವಿರಾಟ ಪರ್ವ,8,34
  • 725. ಸೃಣಿ, ಅಂಕುಶ, ಆದಿ ಪರ್ವ,13,23
  • 726. ಸೆಂಡು, ಚೆಂಡÀು, ಗದಾ ಪರ್ವ,2,26
  • 727. ಸೆಕ್ಕು, ನಾಟಿಸು, ಗದಾ ಪರ್ವ,1,43
  • 728. ಸೆಕ್ಕು, ನಾಟಿಸು, ಗದಾ ಪರ್ವ,7,9
  • 729. ಸೆಗಳಿ, ಬೇಸಿಗೆ, ದ್ರೋಣ ಪರ್ವ,19,19
  • 730. ಸೆಗಳಿಕೆ, ಕಾವು, ದ್ರೋಣ ಪರ್ವ,9,32
  • 731. ಸೆಗಳಿಕೆಯ, ನೀರುಕಾಣದ, ಸಭಾ ಪರ್ವ,15,57
  • 732. ಸೆಗಳಿಕೆಯ ಸಸಿ, ಬೇಗೆಗೆ ಬಾಡಿದ ಸಸಿ, ವಿರಾಟ ಪರ್ವ,2,47
  • 733. ಸೆಗಳಿಗೆ, ಸೆಗಳಿಕೆ (ಪ್ರಾಸಕ್ಕಾಗಿ ಬದಲಾವಣೆ) ಧಗೆ, ವಿರಾಟ ಪರ್ವ,7,32
  • 734. ಸೆಜ್ಜೆ, ಶಯ್ಯ, ಸಭಾ ಪರ್ವ,1,46
  • 735. ಸೆಜ್ಜೆ, ಮಲಗುವ ಮನೆ, ಆದಿ ಪರ್ವ,12,14
  • 736. ಸೆಜ್ಜೆ, ಹಾಸಿಗೆ, ಉದ್ಯೋಗ ಪರ್ವ,1,13
  • 737. ಸೆಡೆದು, ಅಳುಕಿ, ಭೀಷ್ಮ ಪರ್ವ,3,26
  • 738. ಸೆಡೆಯದೆ, ಹೆದರದೆ, ದ್ರೋಣ ಪರ್ವ,13,56
  • 739. ಸೆಣಸು, ಪೈಪೋಟಿ, ಆದಿ ಪರ್ವ,6,0
  • 740. ಸೆರಗ, ವಸ್ತ್ರದ ತುದಿ., ದ್ರೋಣ ಪರ್ವ,1,15
  • 741. ಸೆರಗಬಿಡಿ, ನನ್ನನ್ನು ಬಿಟ್ಟು ಬಿಡಿ ಎಂಬ ಭಾವ (ಸ್ವತಂತ್ರವಾಗಿರಲು ಬಿಡಿ) ಬೇಹುದು, ವಿರಾಟ ಪರ್ವ,9,38
  • 742. ಸೆರಗು, ಉತ್ತರೀಯ, ದ್ರೋಣ ಪರ್ವ,14,36
  • 743. ಸೆರೆ, ಕಾಯಿಗಳನ್ನು ಕಟ್ಟಿಹಕುವುದು, ದ್ರೋಣ ಪರ್ವ,10,49
  • 744. ಸೆರೆ, ಕಂಠ, ದ್ರೋಣ ಪರ್ವ,12,1
  • 745. ಸೆರೆ, ಗಂಟಲ ನರ, ದ್ರೋಣ ಪರ್ವ,8,7
  • 746. ಸೆರೆ, ಗಂಟಲಿನ ನರ, ಗದಾ ಪರ್ವ,9,22
  • 747. ಸೆರೆಗ ಬೆಳೆದುದು, ಅಕ್ಷಯವಸ್ತ್ರ ಪ್ರದಾನವಾದುದು, ಭೀಷ್ಮ ಪರ್ವ,3,83
  • 748. ಸೆರೆನರ, ನರನಾಳಗಳು, ಗದಾ ಪರ್ವ,3,12
  • 749. ಸೆರೆನರ, ರಕ್ತನಾಳ, ಗದಾ ಪರ್ವ,1,20
  • 750. ಸೆಲ್ಲಹ, ಶಲ್ಯ (ಒಂದು ಆಯುಧ), ದ್ರೋಣ ಪರ್ವ,7,24
  • 751. ಸೆಲ್ಲಿಸು, ಶಲ್ಯದಿಂದಿರಿ, ಶಲ್ಯ ಪರ್ವ,2,15
  • 752. ಸೆಲ್ಲೆಹ, ಶಲ್ಯ, ದ್ರೋಣ ಪರ್ವ,11,1
  • 753. ಸೆಲ್ಲೆಹ, ಶಲ್ಯವೆಂಬ ಆಯುಧ, ಗದಾ ಪರ್ವ,1,29
  • 754. ಸೆಲ್ಲೆಹ, ಬರ್ಚಿ, ಕರ್ಣ ಪರ್ವ,18,23
  • 755. ಸೆಳೆ, ಬೆತ್ತ, ದ್ರೋಣ ಪರ್ವ,3,24
  • 756. ಸೆಳೆ, ಎಳೆ, ಆದಿ ಪರ್ವ,15,28
  • 757. ಸೆಳೆ, ದಂಡ, ಕರ್ಣ ಪರ್ವ,3,13
  • 758. ಸೆಳೆ, ದೊಣ್ಣೆ, ಕರ್ಣ ಪರ್ವ,24,35
  • 759. ಸೆಳೆವ ಸಿಂಧ, ಹಾರಾಡುವ ಬಾವುಟ, ವಿರಾಟ ಪರ್ವ,4,32
  • 760. ಸೆಳ್ಳುಗುರು, ಚೂಪಾದ ಉಗುರು, ಆದಿ ಪರ್ವ,13,12
  • 761. ಸೇಡುಗೊಳ್ಳು, ಸುರುಟಿಕೊಳ್ಳು, ಆದಿ ಪರ್ವ,19,23
  • 762. ಸೇತುಬಂಧನ, ಸೇತುವೆ, ಆದಿ ಪರ್ವ,19,14
  • 763. ಸೇದಿಹೋದವು, ಹೀರಿ ಹಿಂಡಿತು, ಭೀಷ್ಮ ಪರ್ವ,10,8
  • 764. ಸೇದು, ಹೀರು, ಕರ್ಣ ಪರ್ವ,22,44
  • 765. ಸೇದು, ಮೇಲೆ ಎಳೆ, ಕರ್ಣ ಪರ್ವ,25,2
  • 766. ಸೇನಾನಿಕರ, ಸೇನಾಪಡೆ, ಭೀಷ್ಮ ಪರ್ವ,7,21
  • 767. ಸೇನಾವ್ರಾತ, ಸೇನಾಸಮೂಹ, ಸಭಾ ಪರ್ವ,3,18
  • 768. ಸೇನಾಸ್ತಂಭ ಶರ, ಸೇನೆಯನ್ನು ನಿಶ್ಚಲಗೊಳಿಸುವ ಬಾಣ, ಕರ್ಣ ಪರ್ವ,14,35
  • 769. ಸೇನೆ, ಅರ್ಜುನನ ಸೈನ್ಯ, ಸಭಾ ಪರ್ವ,3,46
  • 770. ಸೇರಿಸು, ಹೊಂದಿಸು., ಆದಿ ಪರ್ವ,18,34
  • 771. ಸೇರುವೆ, ಸೇರಿಕೆ, ಆದಿ ಪರ್ವ,18,1
  • 772. ಸೇರುವೆ, ಒಡನಾಟ, ಆದಿ ಪರ್ವ,13,60
  • 773. ಸೇರೆ, ಬೊಗಸೆ, ವಿರಾಟ ಪರ್ವ,10,56
  • 774. ಸೇವ್ಯ, ಸೇವಿಸಲ್ಪಡಬೇಕಾದವನು, ಅರಣ್ಯ ಪರ್ವ,6,64
  • 775. ಸೇಸೆ, ಮಂಗಳಾಕ್ಷತೆ, ಆದಿ ಪರ್ವ,13,27
  • 776. ಸೇಸೆ, ಮಂತ್ರಾಕ್ಷತೆ (ಅಕ್ಕಿ ಕಾಳು), ವಿರಾಟ ಪರ್ವ,3,80
  • 777. ಸೇಸೆ, ಅಕ್ಷತೆಕಾಳು, ಸಭಾ ಪರ್ವ,13,7
  • 778. ಸೇಸೆದಳಿ, ಶುಭಾಶಂಸನೆಯಿಂದ ಅಕ್ಷತೆಗಳನ್ನು ಹಾಕು., ಸಭಾ ಪರ್ವ,10,81
  • 779. ಸೇಸೆದಳಿ, ಮಂತ್ರಾಕ್ಷತೆಹಾಕು, ಗದಾ ಪರ್ವ,4,36
  • 780. ಸೈ, ಚೆನ್ನಾಗಿ ಪರಿ, ವಿರಾಟ ಪರ್ವ,6,16
  • 781. ಸೈಕತ, ಉಸುಕು, ಉದ್ಯೋಗ ಪರ್ವ,4,52
  • 782. ಸೈಗರೆ, (<ಸಯ್ಗರೆ) ಸತತವಾಗಿ (ಒಂದೇ ಸಮನೆ) ಅಳು, ವಿರಾಟ ಪರ್ವ,3,55
  • 783. ಸೈಗರೆ, ಸುರಿಸು, ಭೀಷ್ಮ ಪರ್ವ,6,21
  • 784. ಸೈಗರೆ, ಒಂದೇ ಸವನೆ ಸುರಿ, ದ್ರೋಣ ಪರ್ವ,11,10
  • 785. ಸೈಗರೆ, ಒಂದೇ ಸಮನೆ ಸುರಿವ, ದ್ರೋಣ ಪರ್ವ,16,2
  • 786. ಸೈಗೆಡೆದ, ಬಿದ್ದ, ದ್ರೋಣ ಪರ್ವ,6,52
  • 787. ಸೈಗೆರೆವುದೈ, ಸುರಿಸು, ಭೀಷ್ಮ ಪರ್ವ,3,83
  • 788. ಸೈರಂಧ್ರಿ, ಸ್ವಾvಂತ್ರ್ಯವನ್ನು ಉಳಿಸಿಕೊಂಡಿರುವ ರಾಣೀವಾಸದ ಪರಿಚಾರಿಕೆ, ವಿರಾಟ ಪರ್ವ,1,7
  • 789. ಸೈರಣೆ, ಸಹನೆ, ಉದ್ಯೋಗ ಪರ್ವ,4,78
  • 790. ಸೈರಿಸು, ಸಹಿಸಿಕೊಳ್ಳು, ಆದಿ ಪರ್ವ,17,26
  • 791. ಸೈರಿಸು, ಸಮಾಧಾನಿಸು, ಗದಾ ಪರ್ವ,6,33
  • 792. ಸೈವರಿ, ನೇರವಾಗಿ ಹೋಗು, ದ್ರೋಣ ಪರ್ವ,5,2
  • 793. ಸೈವೆರಗು, ಬೆಕ್ಕಸಬೆರಗು, ಉದ್ಯೋಗ ಪರ್ವ,11,43
  • 794. ಸೈವೆರಗು, ಸ್ತಬ್ಧತೆ , ವಿರಾಟ ಪರ್ವ,3,31
  • 795. ಸೈವೆರಗು, ದಿಗ್ಭ್ರಮೆ , ವಿರಾಟ ಪರ್ವ,3,21, ,
  • 796. ಸೈವೊಳೆ, ಒರತೆ, ದ್ರೋಣ ಪರ್ವ,10,28
  • 797. ಸೊಂಪಿನ, ಸೊಗಸಿನ, ಭೀಷ್ಮ ಪರ್ವ,5,21
  • 798. ಸೊಂಪು, ಸಮೃದ್ಧಿ., ಉದ್ಯೋಗ ಪರ್ವ,7,26
  • 799. ಸೊಂಪುಗೆಟ್ಟುದು, ಕಳೆಗುಂದಿತು, ಭೀಷ್ಮ ಪರ್ವ,6,26
  • 800. ಸೊಗಡು, ಒಂದು ವಾಸನೆ, ಕರ್ಣ ಪರ್ವ,17,52
  • 801. ಸೊಗಸಿ, ಒಪ್ಪಿ , ಗದಾ ಪರ್ವ,7,41, ,
  • 802. ಸೊಗಸು, ಸಂತೋಷಪಡುವಂತೆ ಮಾಡು, ಆದಿ ಪರ್ವ,17,25
  • 803. ಸೊಗಸು, ಮೆಚ್ಚು, ಅರಣ್ಯ ಪರ್ವ,4,47
  • 804. ಸೊಗಸು, ಆನಂದಪಡು, ಅರಣ್ಯ ಪರ್ವ,6,62
  • 805. ಸೊಗಸು, ಚೆಲುವು, ಆದಿ ಪರ್ವ,13,2
  • 806. ಸೊಗಸುವುದು, ಮನಸ್ಸಿಗೆ ಹಿಡಿಸುತ್ತದೆ, ಭೀಷ್ಮ ಪರ್ವ,10,31
  • 807. ಸೊಡರು, ದೀಪ, ಆದಿ ಪರ್ವ,16,15
  • 808. ಸೊದೆ, ಹಾಲು, ಆದಿ ಪರ್ವ,12,17
  • 809. ಸೊಪ್ಪಾದುದು, ನಿಶ್ಶಕ್ತವಾಯಿತು, ದ್ರೋಣ ಪರ್ವ,4,1
  • 810. ಸೊಮ್ಮಿನವರು, ಸಂಬಂಧಿಕರು, ಕರ್ಣ ಪರ್ವ,10,29
  • 811. ಸೊಮ್ಮು, ನಂಟಸ್ತಿಕೆ, ಗದಾ ಪರ್ವ,11,18
  • 812. ಸೊಮ್ಮು, ಆತ್ಮೀಯ, ಆದಿ ಪರ್ವ,8,55
  • 813. ಸೊವಡಿನಾನೆ, ಮದಗಜ, ಅರಣ್ಯ ಪರ್ವ,17,30
  • 814. ಸೋಕಿನಲಿ, ಮೈತಾಗುವಷ್ಟು ಸಮೀಪದಲ್ಲಿ, ಗದಾ ಪರ್ವ,11,24
  • 815. ಸೋಕು, ಸ್ಪರ್ಶ, ಆದಿ ಪರ್ವ,17,18
  • 816. ಸೋಗೆ, ನವಿಲಿನ ಗರಿ, ಅರಣ್ಯ ಪರ್ವ,8,14
  • 817. ಸೋಗೆನವಿಲು, ಉದ್ದನೆಗರಿಗಳ ಗಂಡುನವಿಲು, ಭೀಷ್ಮ ಪರ್ವ,4,37
  • 818. ಸೋದರ ಭಾವನು, ಭಾವ, ಭೀಷ್ಮ ಪರ್ವ,3,68
  • 819. ಸೋದಿಸಿ, ಪರೀಕ್ಷಿಸಿ, ಗದಾ ಪರ್ವ,3,13
  • 820. ಸೋದಿಸು, ಶೋಧಿಸು, ವಿರಾಟ ಪರ್ವ,4,26
  • 821. ಸೋನೆ, ಮಳೆ, ಆದಿ ಪರ್ವ,20,36
  • 822. ಸೋನೆ, ವೃಷ್ಟಿ, ಆದಿ ಪರ್ವ,11,13
  • 823. ಸೋಪಾನ, ಮೆಟ್ಟಿಲು, ಉದ್ಯೋಗ ಪರ್ವ,3,9
  • 824. ಸೋಮಧರ, ಶಿವ (ಚಂದ್ರನನ್ನು ಧರಿಸಿರುವವನು), ಆದಿ ಪರ್ವ,10,40
  • 825. ಸೋಲ, ಸೋಲು (ಗೋಗ್ರಹಣದಲ್ಲಿ ಅರ್ಜುನನಿಂದ ಆದ ಸೋಲು), ವಿರಾಟ ಪರ್ವ,10,72
  • 826. ಸೋಹಿನಲಿ, ಬೆನ್ನಟ್ಟಿ ಹೋದಾಗ, ಸಭಾ ಪರ್ವ,15,22
  • 827. ಸೋಹಿನಲಿ, ಸೆಳೆತದಲ್ಲಿ, ದ್ರೋಣ ಪರ್ವ,5,74
  • 828. ಸೋಹು, ದೀಹದ ಮೃಗ, ಅರಣ್ಯ ಪರ್ವ,5,34
  • 829. ಸೋಹು, ಅಟ್ಟು, ಅರಣ್ಯ ಪರ್ವ,5,36
  • 830. ಸೋಹು, ಓಡಿಸು, ಆದಿ ಪರ್ವ,7,2
  • 831. ಸೋಹೆ, ಸುಳಿವು, ಸಭಾ ಪರ್ವ,12,38
  • 832. ಸೌಖ್ಯಸ್ಥಿತಿ, ಸ್ವರ್ಗಸುಖ (ಸಾವು), ಭೀಷ್ಮ ಪರ್ವ,9,4
  • 833. ಸೌಬಲ, ಸುಬಲ ದೇಶದ ರಾಜಪುತ್ರನಾದ ಶಕುನಿ, ಗದಾ ಪರ್ವ,2,15
  • 834. ಸೌಬಲ, ಸುಬಲರಾಜನ ಮಗ, ಆದಿ ಪರ್ವ,17,14
  • 835. ಸೌಬಲ, ಶಕುನಿ, ಉದ್ಯೋಗ ಪರ್ವ,9,40
  • 836. ಸೌಬಲರು, ಸುಬಲ ವಂಶದವರು, ದ್ರೋಣ ಪರ್ವ,3,78
  • 837. ಸೌಭಟ, ಸುಭಟ, ಗದಾ ಪರ್ವ,9,12
  • 838. ಸೌಭಾಗ್ಯ, ಸೌಮಂಗಲ್ಯ ಶೋಭಾ, ಆದಿ ಪರ್ವ,12,0
  • 839. ಸೌಭಾಗ್ಯ, ಮಂಗಳ, ಆದಿ ಪರ್ವ,13,1
  • 840. ಸೌಮನಸ್ಯ, ಸಂತೋಷ., ಗದಾ ಪರ್ವ,1,25
  • 841. ಸೌಮನಸ್ಯ, ಒಳ್ಳೆಯ ಮನಸ್ಸುಳ್ಳವನು , ಗದಾ ಪರ್ವ,6,10
  • 842. ಸೌರಂಭ, ಸಂಭ್ರಮ., ಉದ್ಯೋಗ ಪರ್ವ,8,18
  • 843. ಸೌರಂಭ, ಸಂಭ್ರಮ/ಸಡಗರ, ಉದ್ಯೋಗ ಪರ್ವ,8,30
  • 844. ಸೌರಂಭ, ಸಡಗರ, ಭೀಷ್ಮ ಪರ್ವ,1,56
  • 845. ಸೌರಿ, ಶನಿ, ಸಭಾ ಪರ್ವ,13,3
  • 846. ಸೌಹಾರ್ದ, ಸೌಜನ್ಯ, ಆದಿ ಪರ್ವ,19,50
  • 847. ಸೌಹಾರ್ದ, ಮೈತ್ರಿ, ಆದಿ ಪರ್ವ,16,13
  • 848. ಸೌಹಾರ್ದ, ಒಳ್ಳಯ ಹೃದಯದಿಂದ, ಗದಾ ಪರ್ವ,5,53
  • 849. ಸೌಹೃದ ವಾಗ್ವಿವಾದ, ಮಿತ್ರÀರ ನಡುವೆ ನಡೆದ ಚರ್ಚೆ, ಭೀಷ್ಮ ಪರ್ವ,1,42
  • 850. ಸ್ಕಂದ, ಷಣ್ಮುಖ, ಉದ್ಯೋಗ ಪರ್ವ,3,132
  • 851. ಸ್ಖಲನ, ಪ್ರಮಾದ, ಆದಿ ಪರ್ವ,20,2
  • 852. ಸ್ಖಲಿತ, ಜಾರಿ, ಆದಿ ಪರ್ವ,13,46
  • 853. ಸ್ತಂಭ, ಕಂಬ, ಆದಿ ಪರ್ವ,8,69
  • 854. ಸ್ತನಿತ, ಗರ್ಜಿಸುವ, ಆದಿ ಪರ್ವ,9,18
  • 855. ಸ್ತೋಮ, ಗುಂಪು , ಅರಣ್ಯ ಪರ್ವ,4,8
  • 856. ಸ್ತ್ರೀ, ಮಡದಿ, ಉದ್ಯೋಗ ಪರ್ವ,3,31
  • 857. ಸ್ತ್ರೈಣ, ಸ್ತ್ರೀ ಸಂಬಂಧವಾದ, ಸಭಾ ಪರ್ವ,12,7
  • 858. ಅಡೆಗಲಸು, ಸ್ತಬ್ಧರನ್ನಾಗಿಸು, ಶಲ್ಯ ಪರ್ವ,2,23
  • 859. ಸ್ಥೂಲವಕ್ಷ, ಹಿರಿದಾದ ಎದೆಯುಳ್ಳ, ಗದಾ ಪರ್ವ,10,1
  • 860. ಸ್ನಾತಕ, ವೇದಾಧ್ಯಯನ ಮುಗಿಸಿ ಗೃಹಸ್ಥಾಶ್ರಮ ಸೇರಲಿರುವವನು., ಸಭಾ ಪರ್ವ,7,46
  • 861. ಸ್ನಾತಕವ್ರತಿ, ಬ್ರಹ್ಮಚರ್ಯದಲ್ಲಿ ವಿದ್ಯಾಭ್ಯಾಸ ಮುಗಿಸಿದವನು., ಸಭಾ ಪರ್ವ,2,55
  • 862. ಸ್ಪಂದ, ಸ್ಪಂದನ, ಆದಿ ಪರ್ವ,17,30
  • 863. ಸ್ಪಾಧ್ಯಾಯ, ಸ್ವತಂತ್ರ ಕಲಿಕೆ, ಭೀಷ್ಮ ಪರ್ವ,3,9
  • 864. ಸ್ಫುಟ, ವ್ಯಕ್ತ, ಉದ್ಯೋಗ ಪರ್ವ,7,28
  • 865. ಸ್ಫುರಣ, ಪ್ರತಿಭೆ, ಕರ್ಣ ಪರ್ವ,24,52
  • 866. ಸ್ಫುರಣ, ಅದುರುವಿಕೆ, ಅರಣ್ಯ ಪರ್ವ,11,18
  • 867. ಸ್ಫುರಣ, ಹೊಳೆ, ಆದಿ ಪರ್ವ,17,31
  • 868. ಸ್ಫುರಣ, ಹೊಳೆಯುವುದು, ಗದಾ ಪರ್ವ,5,37
  • 869. ಸ್ಫುರಿತ, ಹೊಮ್ಮಿದ, ಸಭಾ ಪರ್ವ,1,5
  • 870. ಸ್ಫುರಿತ, ಹೊಳೆಯುತ್ತಿರುವ, ಆದಿ ಪರ್ವ,7,65
  • 871. ಸ್ಫುರಿತರವ, ಹೊರಹೊರಟ ಧ್ವನಿ, ಭೀಷ್ಮ ಪರ್ವ,3,2
  • 872. ಸ್ಮಾರ್ತ, ಸ್ಮøತಿಯನ್ನು ಅರಿತವನು, ಉದ್ಯೋಗ ಪರ್ವ,3,86
  • 873. ಸ್ಮಾರ್ತಮಾರ್ಗ, ಸ್ಮøತಿಗಳಲ್ಲಿ ಹೇಳಿದ್ದು, ಭೀಷ್ಮ ಪರ್ವ,3,54
  • 874. ಸ್ಮøತಿ, ಧರ್ಮಶಾಸ್ತ್ರ, ಉದ್ಯೋಗ ಪರ್ವ,4,97
  • 875. ಸ್ಯಂದನ, ತೇರು, ಭೀಷ್ಮ ಪರ್ವ,5,2
  • 876. ಸ್ರುವ, ಯಜ್ಞಯಾಗಗಳಲ್ಲಿ ಅಗ್ನಿಗೆ ತುಪ್ಪವನ್ನು ಬಿಡುವ ಸಾಧನ, ಗದಾ ಪರ್ವ,1,20
  • 877. ಸ್ವಕೀಯ ಕ್ಷಣನ, ತಮ್ಮ ತಮ್ಮವರ ನಾಶ., ದ್ರೋಣ ಪರ್ವ,15,30
  • 878. ಸ್ವಸ್ತಿ, ಮಂಗಳ, ವಿರಾಟ ಪರ್ವ,10,34
  • 879. ಸ್ವಸ್ತಿ, ಮಂಗಳವಾಚನ/ಶುಭಹಾರೈಕೆ, ಉದ್ಯೋಗ ಪರ್ವ,1,9
  • 880. ಸ್ವಸ್ಥಾನ, ಸ್ವಂತಸ್ಥಳ, ಆದಿ ಪರ್ವ,7,41
  • 881. ಸ್ವಾಮಿಸಂಪತ್ತು, ದುರ್ಯೋಧನನ ಸಿರಿ, ಭೀಷ್ಮ ಪರ್ವ,1,39
  • 882. ಸ್ವಾರ್ಥ, ತನ್ನದು, ಉದ್ಯೋಗ ಪರ್ವ,4,54
  • 883. ಸ್ವೇದ, ಬೆವರು, ಸಭಾ ಪರ್ವ,15,40
  • 884. ಸ್ವೇದಜ, ಬೆವರಿನಿಂದ ಹುಟ್ಟಿದ ಜೀವರಾಶಿ (ಕ್ರಿಮಿಗಳು), ಸಭಾ ಪರ್ವ,9,13
  • 885. ಸ್ವೇದಜಲ, ಬೆವರು, ಭೀಷ್ಮ ಪರ್ವ,3,4
  • 886. ಹಂಗ, ಶಕುನ ಪಕ್ಷಿ, ಉದ್ಯೋಗ ಪರ್ವ,1,18
  • 887. ಹಂಗ, ಕಳಿಂಗ ಪಕ್ಷಿ, ಸಭಾ ಪರ್ವ,13,2
  • 888. ಹಂಗನ ಗರಿ, ಶಕುನದ ಪಕ್ಷಿಯ ಗರಿ, ದ್ರೋಣ ಪರ್ವ,5,13
  • 889. ಹಂಗಿಗ, ದಾಕ್ಷಿಣ್ಯಕ್ಕೆ ಒಳಗಾದವನು, ವಿರಾಟ ಪರ್ವ,9,29
  • 890. ಹಂಗಿಗರು, ಋಣಿಗಳು, ವಿರಾಟ ಪರ್ವ,8,8
[೧][೨][೩]

ನೋಡಿ[ಸಂಪಾದಿಸಿ]

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಕುಮಾರವ್ಯಾಸ ಕೋಶ
  2. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  3. ಸಿರಿಗನ್ನಡ ಅರ್ಥಕೋಶ