ಟೋನಿ - ಆನಂದವೇ ಮೈ ತುಂಬಿದೇ ಆಕಾಶಕೇ ಕೈ ಚಾಚಿದೇ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಚಿತ್ರ: ಟೋನಿ
ಸಾಹಿತ್ಯ: ದೊಡ್ಡರಂಗೇಗೌಡ
ಗಾಯಕರು: ಎಸ್.ಪಿ.ಬಾಲಸುಬ್ರಮ್ಹಣ್ಯಂ ಮತ್ತು ಎಸ್.ಜಾನಕಿ
ಸಂಗೀತ: ರಾಜನ್-ನಾಗೇಂದ್ರ


ಆನಂದವೇ ಮೈ ತುಂಬಿದೇ ಆಕಾಶಕೇ ಕೈ ಚಾಚಿದೇ
ಸನಿಹದಲೀ ನೀನಿರಲೂ ಏನೊಂದೂ ಕಾಣದೇ ||2||
||ಪಲ್ಲವಿ||


ಕಣ್ಣೋಟ ಬಲೆಬೀಸೀ ಮನವಾ ಸೆಳೆದಿದೇ
ಮೋಹ ಮೂಡಿಸೀ ಎಲ್ಲೇ ದಾಟಿದೇ
ಚಲ್ಲಾಟ ಜಿಗಿದಾಡಿ ಚಲುವಾ ಚಲ್ಲಿದೇ
ಆಸೇ ಅರಳಿಸೀ ಪ್ರೀತೀ ಬೆಳೆಸಿದೇ
ಹೃದಯಗೀತೆ ಹಾಡಿದೇ
||ಆನಂದವೇ||


ನಿನ್ನಪ್ಪೀ ನಲಿವಾಗಾ ನನ್ನೇ ಮರೆಸಿದೇ
ಸ್ನೇಹಾ ಎಂದಿಗೂ ಒಂದೇ ಆಗಿದೇ
ನಿನ್ನನ್ನೂ ನೆನೆದಾಗಾ ಜೀವಾ ಮಿಡಿದಿದೇ
ಹಿಂದೇ ಸರಿಯದೇ ಎಂದೂ ಮರೆಯದೇ
ಹೃದಯಗೀತೆ ಹಾಡಿದೇ
||ಆನಂದವೇ||ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ