ನಮ್ಮೂರ ಮಂದಾರ ಹೂವೆ - ಮನದಾಸೆ ಹಕ್ಕಿಯಾಗಿ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಚಿತ್ರ: ನಮ್ಮೂರ ಮಂದಾರ ಹೂವೆ
ಗಾಯನ: ಮಂಜುಳಾ ಗುರುರಾಜ್, ಎಸ್.ಪಿ.ಬಾಲಸುಬ್ರಹ್ಮಣ್ಯಂ
ಸಂಗೀತ: ಇಳಯರಾಜ


ಮನದಾಸೆ ಹಕ್ಕಿಯಾಗಿ ಮುಗಿಲಾಗೆ ತೇಲಿ ತೇಲಿ |೨|
ಬನದಾಗೆ ಸುತ್ತಿ ಸುಳಿದು ಬಯಲಾಗೆ ಜೀಕಿ ಜೀಕಿ
ಓ ಜುಳುಜುಳು ಹರಿಯುವ ನದಿಯಲಿ
ಕಿಲಕಿಲ ಉಲಿಯುವ ಗಿಳಿಯಲಿ |೨|
ಪ್ರೀತಿ ಮಾತೇನೇ!

ಮನದಾಸೆ ಹಕ್ಕಿಯಾಗಿ ಮುಗಿಲಾಗೆ ತೇಲಿ ತೇಲಿ
ಬನದಾಗೆ ಸುತ್ತಿ ಸುಳಿದು ಬಯಲಾಗೆ ಜೀಕಿ ಜೀಕಿ

ಚಿಲಿಪಿಲಿ ಹಾಡೊ ಮೈನಾ
ಪ್ರೇಮದರ್ಥ ಗೊತ್ತೆ ನಿನಗೆ?..
ತುಡಿವ ಮಿಡಿವ ಜೀವ ಒಳಗೆ |೩|
ತುಂತುಂ ಎಂದು ಹಾಡೊ ದುಂಬಿ
ಪ್ರೀತಿ ರೀತಿ ಗೊತ್ತೆ ನಿನಗೆ?..
ಕೂಗಿ ಕರೆವ ಭಾವ ಒಳಗೆ |೩|

ನೀಲಾದ ನೆಲಕೆ ಹಸಿರಾ ನೀಡೆ ತೂಗಾಡೊ ಗಿಡಮರ ಪ್ರೀತಿ
ಬೊಳಾದ ಮರಕೆ ಚಿಗುರಾ ತಂದು ಓಲಾಡೊ ಎಲೆಯೆಲಿ ಪ್ರೀತಿ
ಇತ್ತಾ ಮಲೆಮಲೆಯಲ್ಲಿ..
ಅತ್ತಾ ನೆಲೆನೆಲೆಯಲ್ಲಿ
ಸುಂದರ ಸುಂದರ ಸೆಲೆ..
ಹಂದರ ಹಂದರ ಬಲೆ
ಎಂದೂ ಪ್ರೀತಿ ತಂದಾಗ..

ಮನದಾಸೆ ಹಕ್ಕಿಯಾಗಿ ಮುಗಿಲಾಗೆ ತೇಲಿ ತೇಲಿ
ಬನದಾಗೆ ಸುತ್ತಿ ಸುಳಿದು ಬಯಲಾಗೆ ಜೀಕಿ ಜೀಕಿ
ಓ ಜುಳುಜುಳು ಹರಿಯುವ ನದಿಯಲಿ
ಕಿಲಕಿಲ ಉಲಿಯುವ ಗಿಳಿಯಲಿ
ಓ ನ ನ ನ ನ ನ ನ ನ ನಾ
ಪ್ರೀತಿ ಮಾತೇನೇ!

ಮನದಾಸೆ ಹಕ್ಕಿಯಾಗಿ ಮುಗಿಲಾಗೆ ತೇಲಿ ತೇಲಿ
ಬನದಾಗೆ ಸುತ್ತಿ ಸುಳಿದು ಬಯಲಾಗೆ ಜೀಕಿ ಜೀಕಿ

ಪ್ರೇಮಿ ಅವಳ ಕಾಣದೆ ಇರಲು..
ಪ್ರೀತಿ ನೋವು ತಂದೆ ತಹುದು
ಪ್ರೇಮ ರೋಗ ಬಂದೇ ಬಹುದು |೩|
ಪ್ರೇಮ ರೋಗ ಬಿಡದೆ ಬರಲು..
ಪ್ರೇಮಿ ಎದೆಯ ಸುಡದೆ ಇರಲು
ಸುಡುವ ಎದೆಗೆ ಪ್ರೇಮವೆ ಮದ್ದು |೩|

ಸಂತೋಷ ತಂದಾ ಪ್ರೀತಿ ಎಂದು ನೋವಲ್ಲೆ ಮುಳುಗಿ ಸಾಗಿ
ಸಂಗಾತಿ ಕಂಡಾ ಪ್ರೀತಿ ನಿತ್ಯ ಬಾಳಲ್ಲಿ ಬೆಂದು ಹೋಗಿ
ಹೊನ್ನಾ ರಾಗ ರಂಗಿನಲ್ಲೀ..
ಮಣ್ಣಾ ಅಂದ ಚಂದದಲ್ಲೀ
ಚಂದನ ಚಂದನ ಸಿರಿ
ಚುಂಬನ ಚುಂಬನ ಸವಿ ಓ ಓ ಓ ಓ!

ಮನದಾಸೆ ಹಕ್ಕಿಯಾಗಿ ಋತುಮಾನ ರಂಗು ತೂಗಿ
ಸಂತೋಷ ಸೂರ್ಯ ಮಿನುಗಿ ಅನುರಾಗ ಭಾನು ಬೀಗಿ
ಓ ಕನಸಲಿ ಮನಸಲಿ ಅಲೆಯುತ
ನೋವಲಿ ನಲಿವಲಿ ಕಲೆಯುತ
ಏನು ಅರಿಯೇನಾ ಅ ಅ ಅ ಆ!

ಮನದಾಸೆ ಹಕ್ಕಿಯಾಗಿ ಋತುಮಾನ ರಂಗು ತೂಗಿ
ಸಂತೋಷ ಸೂರ್ಯ ಮಿನುಗಿ ಅನುರಾಗ ಭಾನು ಬೀಗಿ

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ