ನವರಾತ್ರಿಯ ಈ ನವವೈಭವ

ವಿಕಿಸೋರ್ಸ್ ಇಂದ
Jump to navigation Jump to search

ಚಿತ್ರ / ಧ್ವನಿಸುರುಳಿ: ನವರಾತ್ರಿಯ ನವವೈಭವ
ಸಂಗೀತ: ಭಾರದ್ವಾಜ್
ಗಾಯನ: ಪ್ರಿಯದರ್ಶಿನಿ, ಮಹೇಶ್ ಮಹದೇವ್
ಸಾಹಿತ್ಯ: ಮಹೇಶ್ ಮಹದೇವ್ ಅಂಕಿತನಾಮ: ಶ್ರೀಸ್ಕಂದ
ಬಿಡುಗಡೆ ವರ್ಷ: ೨೦೧೮ ಪಿ.ಎಂ.ಆಡಿಯೋಸ್
ರಾಗ: ಬೃಂದಾವನ ಸಾರಂಗ
ಶೃತಿ: ಸಿ#
ತಾಳ: ಆದಿತಾಳ
ಲಯ: ೯೬

ಪಲ್ಲವಿ:

ನವರಾತ್ರಿಯ ಈ ನವ ವೈಭವಧಿ ಶೋಭಿಸೊ ಜಗದಂಬೆ (2)
ನವದುರ್ಗೆಯ ರೂಪದಿ ಧುರಿತವ ಕಳೆಯುತ
ಅಭಯವ ಕೊಡು ಅಂಬೆ ಕರುಣಿಸು ಜಗದಂಬೆ
ಜೈ ಜೈ ಜೈ ಜೈ ಕಾತ್ಯಾಯನಿ ಜೈ ಜೈ ಜೈ ಜೈ ನಾರಾಯಣಿ
ಜೈ ಜೈ ಜೈ ಜೈ ವಾಗೇಶ್ವರಿ ಜೈ ಜೈ ಜೈ ಜೈ ಲೋಕೇಶ್ವರಿ

ಚರಣ- ೧

ಸಿಂಹವಾಹಿನಿ ರುಂಡಮಾಲಿನಿ ಗಧಾ ಶೂಲ ಖಡ್ಗ ಧಾರಿಣಿ
ಜೈ ಜೈ ಜೈ ಜೈ ಮಾಹೇಶ್ವರಿ ಜೈ ಜೈ ಜೈ ಜೈ ಲೋಕೇಶ್ವರಿ
ಗರುಡವಾಹಿನಿ ಚಕ್ರಧಾರಿಣಿ ಶ್ರೀಹರಿ ಹೃದಯ ನಿವಾಸಿನಿ
ಚತುರ್ಮುಖ ಬ್ರಾಮನ ಪ್ರಿಯಸತಿ ವಾಣಿ…..
ಚತುರ್ಮುಖ ಬ್ರಾಹ್ಮನ ಪ್ರಿಯಸತಿ ವಾಣಿ
ವೀಣಾ ಪುಸ್ತಕ ಧಾರಿಣಿ
ದುರ್ಗಾ ಲಕ್ಷ್ಮಿ ಸರಸ್ವತಿ ರೂಪದಿ
ಜಗವನು ಸಲಹೋ ಮಹಾಶಕ್ತಿ
ನಿರತವು ಭಜಿಸಲು ಒಲಿಯುವ ದೇವಿ
ಕರುಣಾಕರಿಯೇ ಮಹಾದೇವಿ
ಶ್ರೀ ಸ್ಕಂದ ಗಜಮುಖ ಜನನಿ ರುದ್ರಾಣಿ
ಕಷ್ಟನಾಶಿನಿಯೇ ಕಾಮಾಕ್ಷಿ

ಜೈ ಜೈ ಜೈ ಜೈ ಕಾತ್ಯಾಯನಿ ಜೈ ಜೈ ಜೈ ಜೈ ನಾರಾಯಣಿ
ಜೈ ಜೈ ಜೈ ಜೈ ವಾಗೇಶ್ವರಿ ಜೈ ಜೈ ಜೈ ಜೈ ಲೋಕೇಶ್ವರಿ

ನವರಾತ್ರಿಯ ಈ ನವ ವೈಭವಧಿ ಶೋಭಿಸೊ ಜಗದಂಬೆ (2)
ನವದುರ್ಗೆಯ ರೂಪದಿ ಧುರಿತವ ಕಳೆಯುತ
ಅಭಯವ ಕೊಡು ಅಂಬೆ ಕರುಣಿಸು ಜಗದಂಬೆ
ಜೈ ಜೈ ಜೈ ಜೈ ಕಾತ್ಯಾಯನಿ ಜೈ ಜೈ ಜೈ ಜೈ ನಾರಾಯಣಿ
ಜೈ ಜೈ ಜೈ ಜೈ ವಾಗೇಶ್ವರಿ ಜೈ ಜೈ ಜೈ ಜೈ ಲೋಕೇಶ್ವರಿ

ಚರಣ-೨

ರಕ್ತಬೀಜಾಸುರ ಧೈತ್ಯ ಮರ್ಧಿನಿ ಸಪ್ತಮಾತೃಕೆ ಶಂಕರಿ
ಜೈ ಜೈ ಜೈ ಜೈ ರಕ್ತೇಶ್ವರಿ ಜೈ ಜೈ ಜೈ ಜೈ ಲೋಕೇಶ್ವರಿ
ಶುಂಭ-ನಿಶುಂಭರ ಶಿರಾಚಂಡಾಡುತ
ಲೋಕ ಸಂಕಟವ ನೀ ಕಳೆದೇ
ಸೃಷ್ಟಿ ಸ್ತಿತಿಲಯ ಕಾರಿಣಿ ದೇವಿ
ಸೃಷ್ಟಿ ಸ್ತಿತಿಲಯ ಕಾರಿಣಿ ದೇವಿ ಜಗನ್ಮಾತೆ ನೀ ಶಿವಶಕ್ತಿ
ನಾನಾ ನಾಟಕ ಸೂತ್ರ ಧಾರಿಣಿ ಮೂಕಾಂಬಿಕೆಯೇ ಮಹಾಶಕ್ತಿ
ಧೈರ್ಯಶಕ್ತಿನು ತಂಬುತ ನಮಗೆ
ಜ್ಞಾನ ಭಿಕ್ಷೆಯನು ನೀಡಮ್ಮ
ಸಿರಿ ಸೌಭಗ್ಯವ ನೀಡುತ ಜಗಕೆ
ಮಹಾದಾನಂದವ ತಾರಮ್ಮ

ಜೈ ಜೈ ಜೈ ಜೈ ಕಾತ್ಯಾಯನಿ ಜೈ ಜೈ ಜೈ ಜೈ ನಾರಾಯಣಿ
ಜೈ ಜೈ ಜೈ ಜೈ ವಾಗೇಶ್ವರಿ ಜೈ ಜೈ ಜೈ ಜೈ ಲೋಕೇಶ್ವರಿ

ನವರಾತ್ರಿಯ ಈ ನವ ವೈಭವಧಿ ಶೋಭಿಸೊ ಜಗದಂಬೆ (2)
ನವದುರ್ಗೆಯ ರೂಪದಿ ಧುರಿತವ ಕಳೆಯುತ
ಅಭಯವ ಕೊಡು ಅಂಬೆ ಕರುಣಿಸು ಜಗದಂಬೆ
ಜೈ ಜೈ ಜೈ ಜೈ ಕಾತ್ಯಾಯನಿ ಜೈ ಜೈ ಜೈ ಜೈ ನಾರಾಯಣಿ
ಜೈ ಜೈ ಜೈ ಜೈ ವಾಗೇಶ್ವರಿ ಜೈ ಜೈ ಜೈ ಜೈ ಲೋಕೇಶ್ವರಿ

ನವರಾತ್ರಿಯ ನವವೈಭವ ನೋಡಿ ಧನ್ಯರಾಗಿರೋ.....

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ