ನೀನೆ ಪರಮ ಪಾವನಿ ನಿರಂಜನಿ
ಚಿತ್ರ / ಧ್ವನಿಸುರುಳಿ: ದಾಸಾಮೃತಸಾರ
ಸಂಗೀತ: ಮಹೇಶ್ ಮಹದೇವ್
ಗಾಯನ: ಪ್ರಿಯದರ್ಶಿನಿ
ಸಾಹಿತ್ಯ: ಮಹಿಪತಿದಾಸರು
ಬಿಡುಗಡೆ ವರ್ಷ: ೨೦೨೦ ಪಿ.ಎಂ.ಆಡಿಯೋಸ್
ರಾಗ: ಧನಿ
ತಾಳ: ೪/೪
ಶೃತಿ: ಬಿ
ಲಯ: ೮೮ ಬಿಪಿಎಂ
ಪಲ್ಲವಿ:
ನೀನೆ ಪರಮ ಪಾವನಿ ನಿರಂಜನಿ
ನೀನೆ ಪರಮ ಪಾವನಿ ನಿರಂಜನಿ
ಆದಿ ನಾರಾಯಣಿ ಸಾಧು ಜನ ವಂದಿನಿ
ಸದಾನಂದ ರೂಪಿಣಿ ಸದ್ಗತಿ ಸುಖ ದಾಯಿನಿ
ನೀನೆ ಪರಮ ಪಾವನಿ ನಿರಂಜನಿ
ನೀನೆ ಪರಮ ಪಾವನಿ
ಚರಣ-೧
ಲಕ್ಷುಮಿ ರೂಪಿಣಿ ಸಾಕ್ಷಾತ್ಕರಿಣಿ
ರಕ್ಷ ರಕ್ಷಾತ್ಮಿಣಿ ಅಕ್ಷಯ ಪದ ದಾಯಿನಿ
ಲಕ್ಷುಮಿ ರೂಪಿಣಿ ಸಾಕ್ಷಾತ್ಕರಿಣಿ
ರಕ್ಷ ರಕ್ಷಾತ್ಮಿಣಿ ಅಕ್ಷಯ ಪದ ದಾಯಿನಿ
ಅನಾಥ ರಕ್ಷಿಣಿ ದೀನೋದ್ಧಾರಿಣಿ
ಅನಾಥ ರಕ್ಷಿಣಿ ದೀನೋದ್ಧಾರಿಣಿ
ಅನಂತಾನಂತ ಗುಣಿ ಮುನಿಜನ ಭೂಷಣಿ
ಅನಂತಾನಂತ ಗುಣಿ ಮುನಿಜನ ಭೂಷಣಿ
ನೀನೆ ಪರಮ ಪಾವನಿ ನಿರಂಜನಿ
ನೀನೆ ಪರಮ ಪಾವನಿ
ಚರಣ-೨
ದಾರಿದ್ರ ಭಂಜನಿ ದುರಿತ ವಿಧ್ವಂಸಿನಿ
ಪರಮ ಸಂಜೀವಿನಿ ಸುರ ಮುನಿ ರಂಜನಿ
ದಾರಿದ್ರ ಭಂಜನಿ ದುರಿತ ವಿಧ್ವಂಸಿನಿ
ಪರಮ ಸಂಜೀವಿನಿ ಸುರ ಮುನಿ ರಂಜನಿ
ಸ್ವಾಮಿ ಶ್ರೀ ಗುರುವಿನಿ ಬ್ರಹ್ಮಾನಂದ ರೂಪಿಣಿ
ಸ್ವಾಮಿ ಶ್ರೀ ಗುರುವಿನಿ ಬ್ರಹ್ಮಾನಂದ ರೂಪಿಣಿ
ಸ್ವರ:
ಗರಿಸನಿ ಸ,; ಸನಿಪಮ ಪ,; ನಿಸಗಮ ಗಮಪನಿ ಮಪನಿಸ ಗರಿಸ;
ಗರಿಸನಿ ಸ,; ಸನಿಪಮ ಪ,; ನಿಸಗಮ ಗಮಪನಿ ಮಪನಿಸ ಗರಿಸ;
ಗಗಗ ರಿರಿರಿ ಸಸಸ ನಿಪಮಪ ಸಸನಿಪ ನಿನಿಪಮ ಪಪಮಗ ನಿಸಗಮ
ಗಗಗಗ ರಿರಿರಿರಿ ಸಸಸಸ ನಿಪಮಪ ಸನಿಪ ನಿಪಮ ಪಮಗ ಸಗಮ
ಸ್ವಾಮಿ ಶ್ರೀ ಗುರುವಿನಿ ಬ್ರಹ್ಮಾನಂದ ರೂಪಿಣಿ
ಮಹಿಪತಿ ಕುಲ ಸ್ವಾಮಿನಿ ಪರಮ ಪಾವನಿ
ಮಹಿಪತಿ ಕುಲ ಸ್ವಾಮಿನಿ ಪರಮ ಪಾವನಿ
ನೀನೆ ಪರಮ ಪಾವನಿ ನಿರಂಜನಿ
ನೀನೆ ಪರಮ ಪಾವನಿ
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ