ವಿಷಯಕ್ಕೆ ಹೋಗು

ಪುಟ:ಅಜಿತ ಕುಮಾರ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೦ ಮೋಸದ ಹಾಸು,

ಕಾಲಭೈರವನಂತೆ ಇರುವ ಈ ಮಾರಕನಲ್ಲಿ ಸೌದೆ ಒಡೆದು ನೀರು ಸೇದ
ಬೇಕಾದ ಈ ದುರವಸ್ಥೆಯು ನನಗೆ ಪ್ರಾಪ್ತವಾಗಿದೆ !” ಎಂದು ದುಃಖ
ದಿಂದ ಹೇಳಿದನು.

ಅಜಿತನು ಅದಕ್ಕೆ ಏನೊಂದು ಉತ್ತರವನ್ನೂ ಕೊಡಲಿಲ್ಲ; ಸಿಟ್ಟಿನಿಂದ
ಹಲ್ಲು ಮಾತ್ರ ಕಡಿದನು, ಮುದುಕನು ಮತ್ತೂ ಹೇಳತೊಡಗಿದನು.
ಇಲ್ಲಿಂದ ಬೇಗನೆ ತಪ್ಪಿಸಿಕೊಂಡು ಹೋಗು ; ನಿನ್ನಲ್ಲಿ ಆತನಿಗೆ ಏನೂ
ಕರುಣೆ ಹುಟ್ಟದು. ನಿನ್ನೆ ತಾನೆ ಒಬ್ಬ ಯುವಕನನ್ನೂ ಒಬ್ಬ ಯುವತಿ
ಯನ್ನೂ ಆತನು ಕರೆದುಕೊಂಡು ಬಂದಿದ್ದನು. ಯುವಕನ ಕೈ ಕಾಲು
ಗಳನ್ನು ಕತ್ತರಿಸಿಬಿಟ್ಟನು! ಯುವತಿಯ ದೇಹವನ್ನು ಲಂಬಿಸಿಬಿಟ್ಟನು !
ಇಬ್ಬರೂ ಸತ್ತು ಹೋದರು. ಆದರೆ ನನಗೇನು ಅಳುಬಾರದು, ನೋಡಿ
ನೋಡಿ ಸಾಕಾಯಿತು ! ಈಗ ನೀನು ಹೇಗಾದರೂ ಮಾಡಿ ಓಡಿಹೋಗ
ಬೇಕು. ಎಲ್ಲಿಗೆ ತಾನೆ ಓಡಿಹೋಗುವೆ? ಈ ಬಂಡೆಗಳು ಬಹು ಎತ್ತರ
ವಾಗಿವೆ ; ನೀನು ಹತ್ತಲಾರೆ ! ಬೇರೆ ಹಾದಿಯಿಂದ ಹೋಗುವೆಯೆಂದರೆ
ಇಲ್ಲಿ ಇರುವುದೊಂದೇ ಹಾದಿ !” ಎಂದು ತಳಮಳಿಸಿದನು.

ಅಜಿತನು ಕೂಡಲೆ ಮುದುಕನ ಕೈಯನ್ನು ಮುಟ್ಟಿ ಹಿಡಿದು
ಕೊಂಡು, “ಓಡಿಹೋಗುವ ಆವಶ್ಯಕವಿಲ್ಲ” ಎಂದು ಹೇಳಿ, ಬಂದ
ಹಾದಿಯಿಂದಲೇ ಹಿಂದೆ ಹೋಗುವುದಕ್ಕೆ ಹೊರಟನು.

ಆಗ ಮುದುಕನು “ಅಯಾ, ನಾನು ಹೀಗೆ ಹೇಳಿದೆನೆಂದು ಆ
ಮಾರಕನಿಗೆ ಮಾತ್ರ ತಿಳಿಸಬೇಡ, ಕಂಡೆಯಾ? ನನ್ನನ್ನು ಚಿತ್ರವಧೆ
ಮಾಡಿಬಿಟ್ಟಾನು !” ಎಂದು ಬಹು ದೈನ್ಯದಿಂದ ಪ್ರಾರ್ಥಿಸಿದನು. ಅಜಿತನು
ಕಿಡಿಕಿಡಿಯಾಗುತ್ತ ಹೊರಟುಹೋಗುತಿದ್ದನು.

"ಈ ರಾಜ್ಯದ ಆಡಳಿತೆ ಏನೂ ಚೆನ್ನಾಗಿಲ್ಲ. ಇಂಥ ದುಷ್ಟರನ್ನು
ಸಂಹಾರಮಾಡಿ ಮುಗಿಸಿಬಿಡುವ ಕಾಲವು ಎಂದಿಗೆ ಪ್ರಾಪ್ತಿಸುವುದೋ"?
ಎಂದು ಯೋಚಿಸುತ್ತ ಹೋಗುವಷ್ಟರಲ್ಲಿ, ಮಾರಕನು ಆ ಸಾಹುಕಾರರನ್ನು