ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(49) ಅರೇಬಿರ್ಯ ನೈಟ್ಸ್ ಕಥೆಗಳು, YoY ಆಕೆಯ ಸೌಂದರವನ್ನು ನೋಡಿ ವಿವರಿಸುವುದಕ್ಕೆ ಯಂತಹ ಪಂಡಿತನಿಗೂ ಅಸಾಧ್ಯವಾಗಿದ್ದಿತು. ಬಳಿಕ ನಾವಿಬ್ಬರೂ ವಂದನೆಗಳನ್ನು ಆಚರಿಸಿ, ಪರಸ್ಪರಾಲಿಂಗನದಿಗಳನ್ನು ಮಾಡಿಕೊಂಡು ಬಂದು ಮಂಚದ ಮೇಲೆ ಕುಳಿತು ಮಾತನಾಡುತ್ತಿದ್ದವು. ಅದಕ್ಕೆ ಸಿದ್ದವಾದ ಭೋಜನ ಪದಾರ್ಥಬರಲು, ಸಂತೋಷದಿಂದ ಭುಜಿಸಿ, ರಾತ್ರಿ ಯಾಗುವವರೆಗೂ ವಿನೋದದಿಂದ ಕಾಲವನ್ನು ಕಳೆಯುತ್ತಿದ್ದವು. ರಾತ್ರಿ ಯಾಗುತ್ತದೆ ಒಬ್ಬಳು ಸಂಗೀತವನ್ನು ಹಾಡಲಾರಂಭಿಸಿದಳು, ಮತ್ತೊಬ್ಬಳು ಮೃದಂಗವನ್ನು ಬಾರಿಸಿದಳು. ಇನ್ನೊಬ್ಬಳು ತಾಳವನ್ನು ಹಾಕುತ್ತಿ ದಳು. ಆ ನನ್ನ ಮೋಹನಾಂಗಿಯು ತಾನು ತನ್ನ ಕಂಠಸರವನ್ನು ಮಹೋತ್ಸುಖದಿಂದ ಹಾಡುತ್ತಾ ನರ್ತಿಸಿದುದರಿಂದ ನಾನು ಮೊಹಾವಿ ನಾದೆನು, ಬಹಳವಾಗಿ ಹೇಳಿದುದರಿಂದ ಫಲವೇನು ? ಆ ರಾತ್ರಿಯಲಾ ಸಂಪೂರ್ಣವಾದ ಆನಂದಸಮುದ ದಲ್ಲಿ ಮುಳುಗಿ, ಸಕಲಸುಖಗಳನ್ನನು ಭವಿಸಿದನು, ಮರುದಿನ ಬೆಳಿಗ್ಗೆ ನಾನು ತಂದಿದ್ದ ಮೊಹರಿಗಳನ್ನು ಮಂಚದಮೇಲಿಟ್ಟು, ಆಕೆಯಿಂದಪ್ಪಣೆಯನ್ನು ತೆಗೆದುಕೊಂಡು, ಹೊರ ಡಲು ಸಿದ್ದನಾದೆನು, ಆಕೆ ಪುನಹ ತಾವು ಯಾವಾಗಬರುವಿರೆಂದು ಕೇಳಿದಳು. ನಾನು ಸುಟೆಗೆ ಬರುತ್ತೇನೆಂದು ಹೇಳಿ ಹೊರಟುಬರುವಾಗ, ಆ ಲಲನಾಮಣಿಯು ತಲೆಬಾಗಿಲವರಿಗೂ ಬಂದು, ನೀನು ಕೊಟ್ಟಮಾತು ಜೈವಕವಿರಲಿ ಎಂದು ಹೇಳಿದಳು. ನಾನು ಗೊತ್ತುಮಾಡಿದ ಕುದುರೆಯವನುಬಂದು ಬಾಗಿಲಲ್ಲಿ ಕಾದುಕೊಂಡಿದ್ದುದರಿಂದ, ಕುದುರೆಯನ್ನೇರಿ ನನ್ನ ಬಿಡಾರವನ್ನು ಸೇರಿದ ಬಳಿಕ, ನರಳಿ ಸಾಯಂಕಾಲಕ್ಕೆ ಕುದುರೆಯನ್ನು ತರುವಂತೆ ಹೇಳಿ, ದುಡ್ಡು ಕೊಡದೆ, ಹಾಗೆ ಕಳುಹಿಸಿದೆನು. ನಂತರ ನನ್ನ ಚಾರಕನಿಬ್ಬ ನನ್ನು ಕರೆದು ಅತ್ಯುತ್ತಮವಾದ ಭಕ್ಷಗಳನ್ನು ಫಲಗಳನ್ನು ತರಿಸಿ, ಆ ಬಾಲಿಕಾಮಣಿಯಮನೆಗೆ ಕಳುಹಿಸಿ, ಭೋಜನಾದಿಗಳನ್ನು ತೀರಿಸಿ ಕೊಂಡು, ನನ್ನ ಕೆಲಸಕಾರಗಳನ್ನು ನೋಡಿಕೊಳ್ಳುತ್ತಿರ.ವಮ್ಮರಿ ಕುದುರೆಯವನು ಬರಲು, ಆ ಕುದುರೆಯನ್ನು ಹತ್ತಿ ಬಾಲಕಾಮಣಿಯ ಮನೆಗೆಹೋಗಿ, ನಿನ್ನೆಯಂತಯೇ ಬಹು ಗೌರವಪುರಸ್ಸರವಾಗಿ, ಅವರಿಂದ ಬರಮಾಡಿಕೊಳ್ಳಲ್ಪಟ್ಟು ಹಿಂದಿನರಾತ್ರಿಯಂತೆ, ಆನಂದಭರಿತವಾಗಿ ಸಕಲ