ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿಯರ್ ನೈಟ್ಸ್ ಕಥಗಳು ** ಈ ವಿಷಯದಲ್ಲಿ ನೀನು ಸ್ವಲ್ಪವೂ ಅನುಮಾನಿಸದ ಧೈರ್ಯವಾಗಿರು, ಸಮ್ಮು ಮತದಲ್ಲಿ ಬಹಳ ಉತ್ತಮವಾದವುಗಳಮೇಲೆಲ್ಲಾ ಆಣೆ ಇಟ್ಟು ಖಂಡಿತವಾಗಿ ಪ್ರಮಾಣ ಮಾಡಿ ಹೇಳುವನು. ಅಲ್ಲದೆ ನೀನು ಕಳೆದುಕೊಂಡ ಸ್ನೇಹಿತನು ನಿನ್ನಲ್ಲಿ ಇರುವನೆಂದು ತಿಳಿದುಕೊ, ಎಂದು ನುಡಿಯಲು, ರಾಜಕುಮಾರನು ಸ್ವಲ್ಪ ಧೈರ್ಯವುಳ್ಳವನಾಗಿ, ಇರ್ಬಿಡರನು ಹೊರ ಟುಹೋದ ಆಸನವು ತನಗೆ ಕಡಿಮೆಯಾಗುವುದೆಂದು ತಿಳಿದು, ರತ್ನಪಡಿ ವ್ಯಾಪಾರಿಯನ್ನು ನೋಡಿ ಅಯಾ ! ನನಗೆ ಸಂಭವಿಸಿದ ನಮ್ಮದು ನಿನ್ನಿಂಧ ಪೂರ್ತಿ ಮಾಡಲ್ಪಡುವುದು, ನಿನ್ನೀ ಉಪಕಾರಬದಿಗಾಗಿ, ನಾನು ನಿನ್ನನ್ನು ಬಹಳವಾಗಿ ವಂದಿಸುವೆನು, ಮಾಡತಕ್ಕ ಕಾರ್ಯಗಳೆಲ್ಲ ಪನ್ನು ನಾನು ಮನಃಪೂರ್ವಕವಾಗಿ ಅಂಗೀಕರಿಸುವನು. ಇದಕ್ಕೆ ತಕ್ಕ ಪ್ರತ್ಯುಪಕಾರವನ್ನು ಭಗವಂತನು ನಿನಗೆ ಮಾಡಲೆಂದು ಶಾ ರ್ಧಿಸುತಿ, ರುವೆನು. ಅಲ್ಲದೆ ಆ ದಾದಿಯು ನಿನ್ನ ವಿಚಾರವಾಗಿ ಮಾತನಾಡುವುದಕ್ಕಾಗಿ ನನ್ನ ಹತ್ತಿರಕ್ಕೆ ಬಂದಿದ್ದಳು, ಇರ್ಬವರನನ್ನು ನೀನು ಹೊರಟುಹೋಗುವಂಡ ಹೇಳಿದೆಯಂಥ. ಹಾಗೆ ಮಾಡಿದ್ದುದೇ ಆದರೆ ಅದು ಮಹಾ ಅಪರಾಧವೆಂದು ನಾನು ಭಾವಿಸು ವಸು, ಅದರಿಂದಲೇ ಇನಿದಿಯು ಆತನು ಹೊರಟುಹೋದ ಸಂಗತಿಯನ್ನು ನಂಬಿಕಯಾಗಿ ತಿಳಿದು, ನನ್ನ ಒಳಗೆ ಓಡಿಬಂದು ಹೇಳಿದನು. ಹೇಗೋ ಸಂಚು ನಡೆದಿರಬೇಕೆಂದು ತೋರುವುದೆನಲು, ವರ್ತಕನು ರಾಜಪುತಾ || ನಾನು ಇರ್ಬಳಿಕರನನ್ನು ಹೊರಟುಹೋಗುವಂತೆ ಹೇಳಲಿಲ್ಲ. ಸುಮ್ಮನ ಆ ದಾದಿಯ ಮಾತನ್ನು ಕೇಳಿ ನಂಬಿಕೆಯನ್ನು ಕಡಿಸಿಕೊಳ್ಳಬೇಡ. ನಾನು ಭಕ್ತಿಕ ದ್ಯಾವಂತನಾಗಿ ನಿನಗೆ ಉಪಕಾರ ಮಾಡಲು ಸಿದ್ಧನಾಗಿರುವನು. ನಿನಗೆ ನಾನು ಉವಕಾರವನ್ನು ಮಾಡಿದರೂ, ಮೊದಲೇ ಪ್ರಮಾಣ ಮಾಡಿ 'ಇರುವುದರಿಂದ, ನಿನ್ನ ರಹಸ್ಯವನ್ನು ಎಂದಿಗೂ ಹೊರಹಾಕಲಾರನೆಂದು ಹೇಳಲು, ರಾಜಕುಮಾರನು ಆ ದಾದಿಯ ಮಾತನ್ನು ನಾನು ಮೊದಲೆ ನಂಬಲಿಲ್ಲವೆಂದು ಹೇಳಿರುವೆನಲ್ಲಾ! ಅವಳು ಮೂರ್ಖತನದಿಂದ ಸುಳ್ಳನ್ನು ನಿಜವಾಗಿರುವಂತೆ ಹೇಳಿರುವಳು. ನೀನು ನನ್ನ ಅಪರಾಧವನ್ನು ಕ್ಷಮಿಸೆಂದು ಬೇಡಿಕೊಂಡನು. ಈವಿಧದಿಂದ ಓಹಳ ಹೊತ್ತಿನವರಿಗೂ, ಚರ್ಚಿಸುತ್ತಿದ್ದು