ಅಲ್ಪ ಪ್ರಯತ್ನ ವನ್ನು ಮಾಡಲುಜ್ಜುಗಿಸಿ ಈ ಹೊತ್ತಿನವರೆಗೆ ಅಚ್ಚು ಹಾಕದೆ ಇದ್ದ ಗ್ರಂಧಗಳನ್ನು ಜೈಲಿಗೆ ತರಬೇಕೆಂದೆಣಿಸಿದೆನು. ಈ ಭೌತಿಕ ಶಾಸ್ತ್ರದ ಕಳಸಕ್ಕೇರಿದವರು ಋಣ, ಧನ, ವಿದ್ಯುತ್ತುಗಳನ್ನು ಅಗಲಿ ಸಿಟ್ಟು ಅದರಿಂದುಂಟಾಗತಕ್ಕೆ ಅತ್ಯಗಾಧವಾದ ಚಮತ್ಕೃತಿಗಳನ್ನು ಮಾಡಿನೋಡಿ ಪುನಃ ಅವುಗಳನ್ನು ಕೂಡಿಸಿಡಲು ಆ ಆಟಗಳು ನಡಿಯುವವೋ ? ಇಲ್ಲಾ, ಇಷ್ಟೆಲ್ಲ ಚಮತ್ಕಾರವನ್ನು ಬೀರಿದ ಆ ಋಣ, ಧನ ವಿದ್ಯುತ್ಯಗಳೆರಡೂ ಇಲ್ಲದಂತಾದವೋ ? ಇಲ್ಲಾ, ಅವು ಆ ಸ್ಥಾನದಲ್ಲಿ ಐಕ್ಯವನ್ನು ಹೊಂದಿದವು, ಪುನಃ ಅಗಲಿಸಿಡಲು ಮತ್ತೆ ಆಟವು ಪ್ರಾರಂಭವಾಗುವದು, ಇದೇರೀತಿಯ ಜಗದೀಶನು ಈ ಟೀವಶಿವಗಳ ನ್ನು ಅಗಲಿಸಿಟ್ಟು ಈ ಪ್ರಪಂಚ ವೆಂಬ ಸೃಷ್ಟಿ ಚಮತ್ಕಾರವನ್ನು ನೋಡಿ ಪುನಃ ಜೀವ ಶಿವೈಕ್ಯ ವೆಂಬ ಪರಂಧಾಮಪದವಿಯನ್ನೀಯುವನು. ಅಂಥ ಪದವನ್ನು ಹೊಂದಬೇ ಕಾಗಿರುವ ಈ ಅಲ್ಪಾಯುಗಳಾದ ಮಾನವರ ಹೃತ್ಪಟಲದಲ್ಲಿ ಅತಿ ಸುಲಭವಾದ ಮತ್ತು ಊರುಗೋಲಿನಂತಿರುವ ಭಕ್ತಿಯೆಂಬ ಬೀಜವನ್ನು ಬಿತ್ತಿ ವೀರಶೈವಮತಕ್ಕೆ ಬಂದ ಗ್ಲಾನಿಯನ್ನು ದೂರೀಕರಿಸಿಬರುವದಕ್ಕೆ ತನ್ನಂಶವನ್ನೇ ಶ್ರೀ ಆದಯ್ಯಗಳೆಂಬ ಹೆಸರಿನಿಂದ ಈ ಭೂತಲದಲ್ಲಿರಿಸಿ ಅವತಾರಕಾರ್ಯವನ್ನು ನೆರವೇರಿಸಿದ ಮತ್ತು ಸತ್ಯದ ಧೀರನೆನಿಸಿಕೊಂಡ ಹರಿಶ್ಚಂದ್ರನಂತೆ ಭಕ್ತಿಯಲ್ಲಿ ಅತಿಢೀರನೆನಿಸಿಕೊಂಡಂಧ ಶ್ರೀ ಆದಯ್ಯಗಳೆಂಬ ಶಿವಶರಣರ ಭಕ್ತಿಯೋಗವರ್ಣನಾತ್ಮಕವಾದ ಶ್ರೀಮದ್ರಾಘ ವಾಂಕ ಮಹಾಕವಿಪಿರಚಿತ ಶ್ರೀ ಸೋಮನಾಥಚರಿತ್ರೆಯನ್ನು ಅಚ್ಚು ಹಾಕಿಸಿ ಪ್ರಚುರ ಗೊಳಿಸಿರುವೆನು. ಈ ಪ್ರಸ್ತಾವನೆಯನ್ನು ಮುಗಿಸುವ ಮೊದಲು ಈ ಪುರಾಣದ ಮುಖ್ಯ ವಿಷಯಗಳ ಸ್ಪಷ್ಟ್ರೀಕರಣ ಮಾಡುವದು ಅಗತ್ಯವಾಗಿರುವದರಿಂದ ಅತ್ತಕಡೆಗೆ ಹೋಗುವಾ:-
- ಈ ಗ್ರಂಥವನ್ನು ರಚಿಸಿದ ರಾಘವಾಂಕ ಕವಿಗಳು ಕ್ರಿ. ಶ. ೧೧೬೦ ರ ಸುಮಾರಿನಲ್ಲಿ ಕುಂತ ರದೇಶದಲ್ಲಿ ತುಂಗಭದ್ರಾ ತೀರದಲ್ಲಿರುವ ಪಂಪಾಪುರದಲ್ಲಿ ಹುಟ್ಟಿದರು. ಇವರ ತಂದೆ ಮಹಾದೇವ ಭಟ್ಟನು, ತಾಯಿರುದ್ರಾಣಿ, ಹಂಪೆಯ ಹರೀಶ್ವರದೇವರು ಇವರ ಸೋದರಮಾವನು ಮತ್ತು ಗುರು. ಇವರು ತಮಗೆ ಕವಿತಾಶಕ್ತಿಯುಂಟಾಗಲು ಪಂಪಾಪುರದ ದೇವರಾಜನ ಸಭೆಯಲ್ಲಿ ವಿದ್ಯಾಂಸರೆಲ್ಲರು ಮೆಚ್ಚುವಂತ ಹರಿಶ್ಚಂದ್ರ ಕಾವ್ಯವನ್ನು ರಚಿಸಿ ಓದಿದರು. ಹೀಗೆ ನರಸ್ತುತಿ ಮಾಡಿದ ತಪ್ಪಿ ತಕ್ಕ ಹರೀಶ್ವ
- Karnatic KaVIcharita by S. (i, Neurasimhuchary& and R. Narasimhachary: ; Raghavanka Cliarita Iby Chikkananjesha, Chania basava Purana by Virupaxha
Pandita.