ವಿಷಯಕ್ಕೆ ಹೋಗು

ಪುಟ:ಆದಿಶೆಟ್ಟಿಪುರಾಣವು.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

111 ರರು ಕೋಪಗೊಂಡು ಇವರ ೫ ಹಲ್ಲುಗಳನ್ನು ಮುರಿಯಲು ಅವರ ಇಷ್ಟಾನುಸಾರವಾಗಿ ೧ ಸೋಮು ನಾಥಚರಿತೆ, ೨ ಸಿದ್ದರಾಮಪುರಾಣ, ೩ ವಿರೇಶ್ವರಚರಿತೆ, ೪ ಶರಭಚಾರಿತ್ರ, ೫ ಹರಿಹರ ಮಹತ್ವವೆಂಬ ೫ ವೀರಶೈವ ಕೃತಿಗಳನ್ನು ಮಾಡಿದ್ದರಿಂದ ಮರಳಿ ಹಲ್ಲುಗಳನ್ನು ಕೊಟ್ಟರು. ಇದಲ್ಲದೆ ಇವರು ಹೊಯಿಸಳ ನಗರದ ನರಸಿಂಹಬಲ್ಲಾಳ (೧೧೫೯-೬೯) ನ ಮಂತ್ರಿಯಾದ ಕೆರೆಯ ಪದ್ಯರಸರನ್ನು ಕಂಡು, ಓರುಗಲ್ಲಿನ ರುದ್ರ ಪ್ರತಾಪರಾಜನ ಸಭೆಯಲ್ಲಿ ಏಕತ್ರಿ ಸಂಧಾಗಾಹಿಗಳೆಂಬ ಏಕದಂಡಿ, ದ್ವಿ ದಂಡಿ, ತ್ರಿದಂಡಿಯಂಬ ಕುಕವಿಗಳನ್ನು ಕವಿಮುಖಕವಾಟವೆಂಬ ಪದ್ಯಶಾಸ್ತ್ರವನ್ನು ಮತ್ತು ವಿರೇಶ್ವರಚರಿತ್ರೆ ಯನ್ನು ರಚಿಸಿ ವೈರಿಗಳನ್ನು ಜಯಿಸಿ, ಸೋಮನಾಥನ ಕಾವ್ಯವನ್ನು ಹೇಳಿ ಕುಮಾರವ್ಯಾಸನನ್ನು ಗೆದ್ದು ಗುರುವಿನಾಚ್ಛಾನುಸಾರವಾಗಿ ಬೇಲೂರಲ್ಲಿ ಬೈಲಾದರು, ಇವರಿಗೆ ಹಿಂದೆ ಪಟ್ಟದಿಯಲ್ಲಿ ಯಾರೂ ಗ್ರಂಥ ಗಳನ್ನು ಬರಿಯಲಿಲ್ಲಾ, ಇವರೇ ಈ ಹೊಸರೀತಿಯ ಛಂದಸ್ಸನ್ನು ರಚಿಸಿದವರು, ಇವರಿಗೆ ಉಭಯ ಕವಿಶರಭಭೇರುಂಡ ಮೊದಲಾದ ಬಿರುದಾವಳಿಗಳಿದ್ದು , ಇವರಬಂಧವು ಪ್ರೌಢವಾಗಿದ್ದು ಅರ್ಥಗಾಂಭೀರ್ಯ ವುಳ್ಳದುದಾಗಿಯೂ, ದೇಶ್ಯ ಪದಭೂಯಿಷ್ಟವಾಗಿಯೂ ಇರುವದಾಗಿ ಅನೇಕ ವೀರಶೈವಗ್ರಂಥಗಳು ಪ್ರತಿ ಪಾದಿಸುತ್ತವೆ. ಕಳಕೊಂಡ ಹಲ್ಲುಗಳನ್ನು ಮರಳಿ ಪಡೆಯಲು ಶ್ರೀ ಸೋಮನಾಧ ಚರಿತ್ರೆಯ « ಮೊದಲು ಬರೆದರು. ಈ ಗ್ರಂಥವು ಹುಲಿಗೆರೆಯ ಶ್ರೀ ಸೋಮನಾಧನ ಚರಿತ್ರರೂ ಪವಾಗಿದೆ. ಇದರ ಕಥಾಗರ್ಭವು :- ನಾರದನ ಮುಖದಿಂದ ಕಲಿಕಾಲದನುವ ಮದ | ನಾರಿ ಚಿತ್ತೈಸಿ ಗಣನಾಧನಂ ಕಳುಹಿದೊಡೆ | ಸೌರಾಷ್ಟ್ರದೊಳಗಾತನಾದಯ್ಯವೆಸರಿಂದ ಒನಿಸಿ ಹುಲಿಗೆರಿಗೆ ಬಂದೂ | ವೈರಿಗಳ ಮೂದಲೆಗೆ ಹಿರಿಯಬಸದಿಯೊಳು ಶಶಿ | ಧಾರಿ ಸೋಮಯ್ಯನಂ ನಿಲಿಸಿ ತನ್ನ ಮುತ್ತಿ | ದಾರುಹತರಂ ಗೆಲ್ಲ ನೆಂಬುದು ಕಥಾಗರ್ಭ ಎದ ಬೆಳಿಸಿ ಕೃತಿಮಾಳ್ಳೆನೂ || ಯಂಬ ಪದ್ಯದಲ್ಲಿ ಹೇಳಿಕೊಂಡಿರುತ್ತಾರೆ. ಆದರೆ ಈ ಚರಿತ್ರನಾಯಕರಾದ ಶ್ರೀ ಆದಿಶೆಟ್ಟಿಗಳವರ ಮಹಿಮೆಯು ನಡೆದಂಧ ಕ್ಷೇತ್ರ ಸ್ಥಾನವಾವದು ? ಕಾಲವ್ಯಾವದೆಂಬುದನ್ನು ಕುರಿತು ಸ್ವಲ್ಪ ವಿಚಾರಿಸುವಾ:- ↑ ಬುದ್ಧನಸಮಯದಲ್ಲಿ ವರ್ಧಮಾನನೆಂಬವನು, ಮಹಾವೀರಪಾರ್ಶ್ವನಾಥನೆಂಬ ಹೆಸರನ್ನು ಧರಿಸಿ ಜಿನಮತವನ್ನು ಸ್ಥಾಪಿಸಿದನು, ಈ ಜಿನನು ಸತ್ತು ೨೦೦ ವರ್ಷಗಳಾದ ಮೇಲೆ ಮಗಧದೇಶದಲ್ಲಿ ಒಂದು ದೊಡ್ಡ ಬರಬಿತ್ತು. ಆ ಕಾಲದಲ್ಲಿ ಪ್ರಸಿದ್ಧನಾದ ಚಂದ್ರಗುಪ್ತನು ಆ ದೇಶವನ್ನಾಳುತ್ತಿದ್ದನು. ↑ Indian history by E, I. Mursden and sketein history of India by V, C. Hooti.