iv ಆಗ ಎಷ್ಟೊ ಜೈನರು ಉತ್ತರ ಹಿಂದುಸ್ಥಾನವನ್ನು ಬಿಟ್ಟು ದಕ್ಷಿಣದಲ್ಲಿ ಈಗಿನ ಕರ್ನಾಟಕಕ್ಕೆ ಬಂದರು, ಭದ್ರಬಾಹುಯೆಂಬವನು ಕ್ರಿ. ಶ. ೪ ನೇ ಶತಮಾನದಲ್ಲಿ ಶ್ರವಣಬೆಳಗುಳದಲ್ಲಿ ಜನಮತ ವನ್ನು ಪ್ರಚುರಗೊಳಿಸಿದನು, ಆ ಕಾಲದಲ್ಲಿ (೧) ಬಿಳಿವಸ್ತ್ರವನ್ನು ಧರಿಸುವ ಶ್ವೇತಾಂಬರರು (೨) ವಸ್ತ್ರ ಹೀನರಾದ ದಿಗಂಬರರು (ಮಲಸಂಪ) ಅಂತಾ ಎರಡು ಪಂಗಡಗಳಿದ್ದವ. ೯ ಕ್ರಿ.ಶ. ೫ ನೇ ೬ ನೇ ಶತಮಾನದಲ್ಲಿ ಆಳುತ್ತಿದ್ದ ಬಾದಾಮಿ ಚಾಲುಕ್ಯರ ಕಾಲ೬ ಚಿನ ಮತವ ಫಕ್ತ ಕರ್ನಾಟದಲ್ಲಿ ಮಾತ್ರ ಅಘನತೆಗೇರಿದಂತೆ ತೋರುತ್ತಿದ್ದು , ೬ ನೇ ೭ ನೇ ಶಮಾನದಲ್ಲಿ ವೈದಿಕಧರ್ಮದ ಪುನರುಥಾನವಾಗಿ ಜಿನಧರ್ಮದ ಅಳಿಗಾಲಕ್ಕೆ ಮುಳುವಾಯಿತು. - ? ಇಂಥಿ ಸಮಯದಲ್ಲಿ ಬಾದಾಮಿ ಚಾಲುಕ್ಯ ಅರಸನಾದ ೨ ನೇ ಪುಲಿಕೇಶಿಯ (ಕ್ರಿ. ಶ. ೬೦೯-೪೨) ಹಿರೇಮಗನಾದ ಚಂದ್ರಾದಿತ್ಯನು (ಕ್ರಿ. ಶ. ೬೫೫-೫೯) ಪುಲಿಕರನಗರದಲ್ಲಿ ಆಳುತ್ತಿದ್ದನು. ಕಿರಿಯಮಗನಾದ ೧ ನೇ ಸಿಕ್ರಮಾದಿತ್ಯನು ಪುಲಿಕೇಶಿಯ ಪ್ರಿಯ ತನಯನೆನಿಸಿಕೊಂಡು ಬಾದಾಮಿ ಸಾರ್ವ ಭೌಮಾಧಿಪತ್ಯದಲ್ಲಿದ್ದನು. ಆಗ ಆದಿಗಣನಾಥನು ಆದಯ್ಯನೆಂಬ ಹೆಸರಿನಿಂದ ಸೌರಾಷ್ಟ್ರ (ಗುಜರಾಥ) ದಲ್ಲಿ ಘೋರದತ್ತನೆಂಬ ವೀರಶೈವ ಶೆಟ್ಟಿಯ ಮಗನಾಗಿ ಜನಿಸಿ ವಂಶಪರಂಪರೆಯಿಂದ ನಡೆಯುತ್ತ ಬಂದ ವಾಣಿಜ್ಯ ರೂಪಿನಿಂದ ಜೈನರ ಮುಖ್ಯಸ್ಥಾನವಾಗಿರುವ ಈ ಪುಲಿಕರನಗರಕ್ಕೆ ಬಂದು ಅವತಾರಕಾರ್ಯ ವನ್ನು ತೀರಿಸುವಾಗ್ಗೆ 4 ಚಂದ್ರಾದಿತ್ಯನು ” ಜೈನರಿಗೆ ಬೆಂಬಲವಾಗಿ ದಂಡುಹೋಗಿ ದೇವಾಲಯವನ್ನು ಮುತ್ತಲು ಅವರನ್ನೆಲ್ಲ ಖಡ್ಗದಿಂದ ಕತ್ತರಿಸಿ ಖಡ್ಗಗಳನ್ನು ದೇವಸಿಕೇಶನದ ಪಶ್ಚಿಮಕ್ಕಿರುವ ಕೊಳ ದಲ್ಲಿ ತೊಳೆದರಾದಕಾರಣ ಈಗಲೂ ಖಡ್ಗ ತೀರ್ಥವಾಗಿ ಪುಲಿಕರನಗರ (ಲಕ್ಷ್ಮೀಶ್ವರ) ದಲ್ಲಿ ಇರುವದು. - ಚಂದ್ರಾದಿತ್ಯ” ನು ಕಂಗೆಟ್ಟು ಕಟ್ಟಡವಿಯನ್ನು ಶೇರಿದನಂತ್ರ ಆತನ ತಮ್ಮನ ಮಗನಾದ ವಿನಯಾದಿ ತ್ಯನು (ಕ್ರಿ.ಶ, ೬೮೦-೯೬) ಆದಯ್ಯಗಳ ಕಾಲಕ್ಕೆ ರಕ್ತಮಯವಾದ ಪುಲಿಕರನಗರಕ್ಕೆ ತನ್ನ ಜಯ ಶೀಲವಾದ ಮುಕ್ಕಾಂ « ರಕ್ತಪುರ ” ವೆಂದು ಹೆಸರನ್ನಿಟ್ಟನು, ವಿನಯಾದಿತ್ಯನ ಮಗನಾದ ವಿಜಯಾದಿ ತ್ಯನು (ಕ್ರಿ.ಶ. ೬೯೬.೭೩೩-೪) ಮತ್ತು ಆತನತಂಗಿಯಾದ ಕುಂಕುಮ ಮಹಾದೇವಿಯು ಆನಸಜ್ಜೆಯ ಮೊದಲಾದ ಹಾಳಾದಬಸ್ತಿಗಳನ್ನು ವುನಃ ಕಟ್ಟಿ ಸಿದರು, ೨ ನೇ ವಿಕ್ರಮಾದಿತ್ಯನು (ಕ್ರಿ. ಶ ೭೩೩-೩೪ ರಿಂದ ೭೪೬.೪೭) ಶಂಖಾಕೃತಿಯಾದ 'ವಚದಲ್ಲಿ ಜಿನಬಿಂಬವುಳ್ಳ, ಈಗಲೂ ಅಸ್ತಿತ್ವದಲ್ಲಿ ಇದ್ದ ಶಂಖಜಿನೇಂದ್ರ ಬಸದಿಯನ್ನು ಪುನಃ ಕಟ್ಟಿಸಿದನು, ಅಲ್ಲಿ ಶಂಖಜಿನೇಂದ್ರನು ಇಲ್ಲಾ, ಎರಡನೇ ದಿಗಂ ಬರಮೂರ್ತಿಯು ಪ್ರತಿಷ್ಟಿ ಸಲ್ಪ ಟ್ಟಿರುತ್ತದೆ. ಈ « ರಕ್ತಪುರ ” ವೆಂಬಹೆಸರು ಬಾದಾಮಿ ಮನೆತನದ ಉಳಿದ ಯಾವತ್ತೂ ಅರಸರಕಾಲದಲ್ಲಿಯೂ ಕೂಡ ನಡೆಯುತ್ತ ಬಂತು ಇದು ಲಕ್ಷ್ಮೀಶ್ವರ ಶಾಸನಗಳಿಂದ ಮತ್ತು ಕೋಚೆ (ರುಗಿರಿ), ನೆರೂರ (ಸಾವಂತವಾಡಿ) ಮೊದಲಾದ ಶಾಸನಗಳಿಂದ ಗೊತ್ತಾಗುತ್ತದೆ. ಶ್ರೀ
=
1 Early history of the Deccan by R. G. Bhandarker, M.A., Ph, D., C.1.E. ? Genealogy of the Western Chaluky as of Badami one of the Dynasties of the Kanarase Districts by Johzz Faithfull Fleet, Ph. 1), C.IE., Ind, Anti, Vol, Vji p.p. 101-106-110-112-161 -163-197: Vol. VIII p.p 26-44 ; Vol. IX pp. 126-130 ; Vol. XVIII p, 38; Vol. XIX , 16-149 ; Vol. XX p. 3: and id. Vol. VII p. 112.