ಪುಟ:ಆದಿಶೆಟ್ಟಿಪುರಾಣವು.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೋಮನಾಥನ ದೇವಾಲಯವು ಈ ಮೇಲ್ಕಂಡ ರಾಜರ ಕಾಲದಲ್ಲಿ ಅಚ್ಚಳಿಯದೆ ಮೂಲಸ್ಥಿತಿಯಲ್ಲಿ ಬೆಳಗುತ್ತಿರುವದರಿಂದ ಮತ್ತು ೨ ನೇ ಪುಲಿಕೇಶಿಯ ಕಿರಿಯತಮ್ಮನ ಮಗನಾದ ನಾಗವರ್ಧನನು ನಾಸಿಕ ದಲ್ಲಿ ರುವಂಥ ಶ್ರೀ ಕಪಾಲಿಕೇಶ್ವರನಿಗೆ ಒಂದು ಗ್ರಾಮವನ್ನು ಇನಾಂ ಹಾಕಿಕೊಟ್ಟದ್ದು ನಾಸಿಕದ ಶಾಸ ನದಿಂದ ತಿಳಿಯುತ್ತಿರುವದರಿಂದ ಯಾವತ್ತೂ ಧರ್ಮದವರನ್ನು ಸರಿಯಾಗಿ ಕಾಪಾಡುವ ರಾಜನೀತಿಯನ್ನು ಚನ್ನಾಗಿ ಅರಿತವರಿದ್ದ ರಂದು ಶ್ರೀ ಸೋಮೇಶನ ಮಹಿಮೆಯು ಆಗಾಧವಾದದ್ದೆಂದು ಸಹಜ ವ್ಯಳ. ವಾಗುತ್ತದೆ.

  • ಆ ಮೇಲೆ ಸಾರ್ವಭೌಮಾಧಿಕಾರವು ಮಳಖೇಡದ ರಾಷ್ಟ್ರ ಕಟದರಸರ ಕಡೆಗೆಹೋಗಿ (ಕ್ರಿ.ಶ. ೭೭೪-೯೭೨) ಪುಲಿಕರನಗರವನ್ನು ಆಳಿದರೆಂಬದಾಗಿ ಲಕ್ಷ್ಮೀಶ್ವರ, ನಿಡಗುಂದಿ, ಹುಮತ್ತೂರ, ಕಳಸಾ ಪೂರ, ಹೆಬ್ಬಾಳ, ಅದರಗುಂಚಿ, ಗುಂಡೂರ, ಮೊದಲಾದ ಶಾಸನಗಳಿಂದ ಗೊತ್ತಾಗುತ್ತದೆ. ಶ್ರೀ ಸೋಮು ನಾಥನ ದೇವಾಲಯಗಳು, ಕರ್ನಾಟಕ ಪ್ರಾಂತದಲ್ಲೆಲ್ಲ ಹರಡಿಕೊಳ್ಳಲು ಕಳಸಾಪೂರ (ಗದಗತಾಲೂಕು) ದೇವಾಲಯಕ್ಕೆ ರಾಷ್ಟ್ರಕೂಟದ ೪ ನೇ ಗೋವಿಂದನು (ಕ್ರಿ. ಶ. ೯೧೮-೩೩) ದೇಣಿಗೆ ಕೊಟ್ಟಿರುವನು. * + ಆ ಮೇಲೆ ಕಲ್ಯಾಣಪುರದ ಚಾಲುಕ್ಯರು ಪುನಃ ತಮ್ಮ ಸಾರ್ವಭೌಮಾಧಿಕಾರವನ್ನು ಪಡ ಕೂಂಡು, ಪುಲಿಕರನಗರವನ್ನು (ಕ್ರಿ. ಶ. ೯೭೩-ರಿಂದ ೧೧೮೯) ಆಳಿದರೆಂದು, ಮುಳಗುಂದ, ಗದಗ, ಹೊಟ್ಟೂರು, ನವಲೂರು, ಅಣ್ಣಿಗೇರಿ, ಗಾರವಾಡ, ಹುಲುಗೂರ, ಗಳಗನಾಥ, ಹಾನಗಲ್ಲ ಹಿರೇವಡವಟ್ಟಿ

ಕಲಕೇರಿ, ಅಬ್ದು ರು, ಬಿಜಾಪುರ ಜಿಲ್ಲಾ ಶಿಂದಿಗಿತಾಲೂಕು ಹಿಪ್ಪರಗಿ ಶಾಸನಗಳಿಂದ ಗೊತ್ತಾಗುತ್ತದೆ. ಈ ಆಳಿಕೆಯಲ್ಲಿ ನೆನಪಿನಲ್ಲಿಡತಕ್ಕ ಸಂಗತಿಗಳಾವವೆಂದರೆ :- ತನ್ನ ಪಟ್ಟದರಸಿಯಾದ ಸುಗ್ಗಲಾದೇವಿಯು ತನ್ನ ಗುರುವಾದ ದೇವರದಾಸಿಮಯ್ಯನಕಡೆಯಿಂದ ಸಂದುಕದಲ್ಲಿ ಹಾಕಿದ ಒಂದು ಘಟಸರ್ಪವನ್ನು ಚಂದ್ರಕಾಂತಶಿಲೆಯ ಲಿಂಗವನ್ನಾಗಿಮಾಡಿ ತೋರಿಸಲು ವೀರಶೈವದೀಕ್ಷೆಯನ್ನು ಹೊಂದಿದ ೨ನೇ ಜಯಸಿಂಹ-ಜಗದೇಕಮಲ್ಲನು (ಕ್ರಿ. ಶ. ೧೦೧೮-೪೨) ಶ್ರೀ ಸೋಮನಾಥದೇವರಿಗೆ ಒಂದು ಸುವರ್ಣದ ಕಳಶವನ್ನು ೧೦೧ ಮಾರು ಭೂಮಿಯನ್ನು , ತ್ರಿ ಕಮಲ್ಲ ನು (ಕ್ರಿ. ಶ. ೧೦೪೪-೬೮) ನರೇಗಲ್ಲ ಗ್ರಾಮವನ್ನು ದೇವರ ನಂದಾದೀಪಕ್ಕೆ ೫೦೦ ಗ್ರಾ ಮಗಳಲ್ಲಿ ಯ ಆ ಹಾಣ ” ವೆಂಬ ನಾಣ್ಯದ ಸುಂಕವನ್ನು , ತ್ರಿಭುವನಮಲ್ಲ ನು (ಕ್ರಿ. ಶ. ೧೦೫೫ ಮ ತು, ೧೦೭೬-೧೧೨೬) ಕ್ರಿ. ಶ. ೧೦೯೯ ರಲ್ಲಿ ನಂದಾದೀಪದ ಹಕ್ಕನ್ನೂ, ೧೧೦೨ ರಲ್ಲಿ ಸನ್ಮಾನ ವನದ ಹಕ್ಕನ್ನೂ, ೧೧೧೦ರಲ್ಲಿ ಸೇವಾನಿರತರಾದ ಪಾತರದವರಿಗೆ ಭೂಮಿಯನ್ನೂ, ಭೂಲೋಕವಲ್ಲ ನು (೧೧೨೬-೧೧೩೮ - ೩೯) ನಿಟ್ಟೂರಗ್ರಾಮದಲ್ಲಿ ಭಾವಿಗೆ ನಡೀತಕ್ಕ ಸರ್ವಮಾನ್ಯ ವನ್ನೂ, ೧೪ ಮಾರುಭೂಮಿಯನ್ನೂ ಕೊಟ್ಟ ಬಗ್ಗೆ ಪುರಾಣೇತಿಹಾಸಗಳಿಂದ, ಹಿಪ್ಪರಗಿ ಮತ್ತು ಲಕ್ಷ್ಮೀಶ್ವರ ಮದ ಲಾದ ಶಾಸನಗಳಿಂದ ಗೊತ್ತಾಗುತ್ತದೆ.

  • Ind, Anti, Vol. VII p. 101, Vol. XI p. 155 , Vol. XII pp. 170-217, and Note 23:-224-255-270. Epi, Indi, Vol. II p. 167. Boin. (Gaz, Vol. I 'aat 11 y, 417.

↑ Ind, Anti, Vol. II p. 297 Note 3, Vol. XIX p. 162 Vol. XXI p. 282. Cam. I)es, Ins, Vol, I, pp. 39-216-287-410-412-732-812, Vol, II pp. 1-605, Ibid, p.p. 223-299. Bom, Gaz, Vol, I YPart II p.p, 432-433-437-440-501-50%.