ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ V - 124 - ಹೋಗೋಣ; ಪಿತ್ತವೃದ್ಧಿಯಾದಾಗ್ಗೆ, ಅರಸಿನ ವರ್ಣ, ಉರಿ, ಶೀತದ ಅಪೇಕ್ಷೆ, ಅಲ್ಪ ನಿದ್ರೆ, ಮೂರ್ಚ್ಛೆ,ಬಲಹಾನಿ, ಇಂದ್ರಿಯಗಳ ದುರ್ಬಲತೆ ಮತ್ತು ಮಲ, ಮೂತ್ರ, ಕಣ್ಣು, ಕೂಡ ಅರಸಿನವಾಗೋಣ, ಕಫ ವೃದ್ಧಿಯಾದಾಗ್ಗೆ, ಬಿಳೇ ವರ್ಣ, ಶೈತ್ಯ, ಅಂಗಗಳು ಸರಿಯಾಗಿ ಚಲಿಸದೆ ಸ್ಥಿರವಾಗಿರುವಿಕೆ, ಭಾರವಾಗಿರುವಿಕೆ, ಉತ್ಸಾಹವಿಲ್ಲದಿರೋಣ, ಆಲಸ್ಯ, ನಿದ್ರೆ, ಮತ್ತು ಎಲುಬುಸಂದುಗಳು ಶಿಧಿಲವಾಗೋಣ, ರಸವೃದ್ಧಿಯಾದಾಗ್ಗೆ, ಹೃದಯದಲ್ಲಿ ಸಂಕಟ (ವಾಂತಿಬರುವ ಹಾಗಿನ ಸಂಕಟ) ಮತ್ತು ಜೊಲ್ಲು, ರಕ್ತವೃದ್ಧಿಯಾದಾಗ್ಗೆ, ಅಂಗ ಮತ್ತು ಕಣ್ಣು ಕೆಂಪಾಗೋಣ, ಮತ್ತು ಸಿರಾನಾಳಗಳು ತುಂಬಿರೋಣ, ಮಾಂಸವೃದ್ಧಿಯಾ ದಾಗ್ಗೆ, ಅಂಡು, ಕೆಪ್ಪಟೆ, ತುಟಿ, ಉಪಸ್ಥ, ತೊಡೆ, ತೋಳು, ಮೊಣಕಾಲುಗಳಲ್ಲಿ ವೃದ್ಧಿ. ಮತ್ತು ದೇಹ ಭಾರವಾಗೋಣ, ಮೇದಸ್ಸು ವೃದ್ಧಿಯಾದಾಗ್ಗೆ, ಅಂಗಗಳು ಜಿಡ್ಡುಳ್ಳದ್ದಾ ಗೋಣ, ಹೊಟ್ಟೆ ಮತ್ತು ಪಕ್ಕಗಳ ವೃದ್ಧಿ, ಕೆಮ್ಮು, ಉಬ್ಬಸ, ಮುಂತಾದವು, ಮತ್ತು ದುರ್ವಾಸನೆ, ಅಸ್ಥಿಧಾತು ವೃದ್ಧಿಯಾದಾಗ್ಗೆ, ಎಲುಬು ಮತ್ತು ಹಲ್ಲುಗಳು ಅಧಿಕವಾಗಿ ಉಂಟಾಗೋಣ, ಮಜ್ಜಿ ವೃದ್ಧಿಯಾದಾಗ್ಗೆ, ಸರ್ವಾಂಗ ಮತ್ತು ಕಣ್ಣುಗಳು ಭಾರವಾಗೋಣ; ಶುಕ್ರವೃದ್ಧಿಯಾದಾಗ್ಗೆ, ಶುಕ್ರಾಶ್ಮರೀ ಎಂಬ ಕಲ್ಲುಮೂತ್ರದ ವ್ಯಾಧಿ, ಮತ್ತು ಶುಕ್ರವು ಅತಿ ಯಾಗಿ ಹೊರಗೆ ಬರೋಣ, ಮಲವೃದ್ಧಿಯಾದಾಗ್ಗೆ, ಹೊಟ್ಟೆಯುಬ್ಬರ, ಮತ್ತು ಹೊಟ್ಟೆ ಶೂಲೆ, ಮೂತ್ರವೃದ್ಧಿಯಾದಾಗ್ಗೆ, ಪದೇಪದೇ ಮೂತ್ರ ಬರೋಣ, ಮೂತ್ರಾಶಯದಲ್ಲಿ ನೋವು ಮತ್ತು ಉಬ್ಬರ, ಬೆವರು ವೃದ್ಧಿಯಾದಾಗ್ಗೆ, ಚರ್ಮದಲ್ಲಿ ದುರ್ವಾಸನೆ ಮತ್ತು ತುರಿಕೆ; ರಜಸ್ಸು ವೃದ್ಧಿಯಾದಾಗ್ಗೆ, ಅಂಗ ಹಿಸಿಕಿದ ಸಂಕಟ, ರಜಸ್ಸು ಹೆಚ್ಚಾಗಿ ಹೊರಗೆ ಹೋಗೋಣ ಮತ್ತು ಅಶಕ್ತಿ, ("ದೌರ್ಗಂಧ್ಯ”-ಅಂದರೆ ದುರ್ವಾಸನೆ-ಎಂಬ ಪಾರವೂ ಉಂಟು), ಮೊಲೆಹಾಲು ವೃದ್ಧಿಯಾದಾಗ್ಗೆ, ಮೊಲೆಗಳು ದೊಡ್ಡವಾಗೋಣ, ಪದೇಪದೇ ಹಾಲು ಇಳಿಯೋಣ, ಮತ್ತು ನೋವು, ಗರ್ಭವು ಅತಿ ವೃದ್ಧಿಯಾದಾಗ್ಗೆ, ಹೊಟ್ಟೆ ಬೆಳೆ ಯೋಣ, ಮತ್ತು ಊದು, ( “ಸ್ವೇದಂ"-ಅಂದರೆ ಬೆವರು-ಎಂಬ ಪಾರವೂ, "ದೌರ್ಬಲ್ಯಂ”- ಅಂದರೆ ದುರ್ಬಲತೆ-ಎಂಬ ಪಾರವೂ ಉಂಟು) ಸಹ ಉಂಟಾಗುತ್ತವೆ. ಈ ವಿಕಾರಗಳಿಗೆ ಯಧಾಯೋಗ್ಯವಾಗಿ ಶೋಧನೆ ವಿಧಿ ನಡಿಸುವಂಧಾದ್ದು, ಕ್ಷೀಣಮಾಡುವದು ಮತ್ತು ಕ್ಷಯವಾಗುವದಕ್ಕೆ ವಿರುದ್ಧವಲ್ಲದ ವಿಶೇಷ ಕ್ರಮಗಳನ್ನು ನಡಿಸುವದು ಪ್ರತಿಕ್ರಿಯೆ ಆಗಿರುತ್ತದೆ.

47.ಹಿಂದಿನ ಧಾತು ಪೂರ್ವಃ ಪೂರ್ವೋತಿವೃದ್ಧತ್ವಾತ್ ವರ್ಧಯೇದ್ಧಿ ಪರಂ ಪ ವೃದ್ಧಿಯಿಂದ ಮುಂದಿನವೂ ರಂ | ತಸ್ಮಾದತಿಪ್ರವೃದ್ದಾನಾಂ ಧಾತೂನಾಂ ಹ್ರಾಸನಂ

ಗಳ ವೃದ್ಧಿ ಹಿತಂ || (ಸು. 54.)

ಧಾತುಗಳಲ್ಲಿ ಹಿಂದೆ ಹಿಂದಿನದು ಅತಿಯಾಗಿ ವೃದ್ಧಿಯಾಗುವದರ ದೆಸೆಯಿಂದ ಮುಂದೆ ಮುಂದಿನದು ವೃದ್ಧಿಗೊಳ್ಳುವದಾದ್ದರಿಂದ, ಅತ್ಯಂತ ವೃದ್ಧಿಯಾದ ಧಾತುಗಳನ್ನು ಕಡಿಮೆ ಮಾಡುವದು ಹಿತವಾಗಿರುತ್ತದೆ.

48. ರಸಾದೀನಾಂ ಶುಕ್ರಾಂತಾನಾಂ ಧಾತೂನಾಂ ಯತ್ಪರಂ ತೇಜಸ್ತತ್ ಬಲದ ಲಕ್ಷಣ. ಖಲ್ವೋಜಸ್ತದೇವ ಬಲಮುಚ್ಯತೇ ಸ್ವಶಾಸ್ತ್ರಸಿದ್ದಾಂತಾತ್ | ತತ್ರ