– 175 - 8 VIII
ವರ್ಜಯೇದನ್ನ ಪಾನಾನಿ ಲಘನಿ ವಾತಲಾನಿ ಚ | ಪ್ರವಾತಂ ಪ್ರಮಿತಾಹಾರಮುದಮಂಧಂ ಹಿಮಾಗಮೇ || (ಚ. 35.) ಶೀತವಾದ ಹೇಮಂತಋತುವಿನಲ್ಲಿ, ಬಲವಂತರಾದ ಜನರಲ್ಲಿ* ಬಲವಂತನಾದ ಪಾಚ ಕಾಗ್ನಿಯು ಶೀತವಾದ ಗಾಳಿಯ ಸ್ಪರ್ಶದಿಂದ ತಡೆಯಲ್ಪಟ್ಟು, ಗುರುವಾದ ಆಹಾರಪ್ರಮಾಣ ಗಳನ್ನು ದ್ರವ್ಯಗಳನ್ನೂ ಪಚನಮಾಡುವ ಶಕ್ತಿಯುಳ್ಳವನಾಗುತ್ತಾನೆ ಪಾಚಕನಾದ ಆ ಅಗ್ನಿಗೆ ತಕ್ಕ ಇಂಧನ ಸಿಕದೆ ಹೋದಾಗ, ದೇಹದಲ್ಲಿ ಹುಟ್ಟಿದ ರಸವನ್ನೇ ಕೆಡಿಸುತ್ತಾನೆಆದ್ದರಿಂದ ಶೀತಸ್ವಭಾವದ್ದಾದ ವಾಯುವು ಶೀತಕಾಲದಲ್ಲಿ ಪ್ರಕೂಪಗೊಳ್ಳುತ್ತಾನೆ. ಆದದರಿಂದ ಚಳಿ ಅಧವಾ ಹಿಮಕಾಲದಲ್ಲಿ ಜನರು ಸ್ಮಗ್ಗ, ಹುಳಿ, ಉಪ್ಪು ರಸಗಳನ್ನೂ, ಶುಚಿಯಾದ ಜಲಪಾಣಿ ಗಳ ಮಾಂಸವನ್ನೂ ಉಪಯೋಗಿಸಬೇಕು, ಹಾಗೆಯೇ ಬಿಲದಲ್ಲಿ ವಾಸವಾಗಿರುವ ಪ್ರಾಣಿ ಗಳ ಮತ್ತು ಬೇಟಿ ಮೃಗಪಕ್ಷಿಗಳ ಮಾಂಸಗಳನ್ನೂ ಧಕ್ಷಿಸಿ, ಪ್ರಾಕ್ಷಾ ಮದ್ಯವನ್ನೂ, ಬೆಲ್ಲದ ಮದ್ಯವನ್ನೂ, ಮತ್ತು ಪುಷ್ಪಮದ್ಯವನ್ನೂ ಕುಡಿಯಬೇಕು, ಹಾಲು, ಮಜ್ಜಿಗೆ, ಕಬ್ಬಿನಿಂದಾ ಗುವ ಪದಾರ್ಥಗಳು, ವಸ, ತೃಲ, ಹೂಸ ಅನ್ನ, ಬಿಸಿ ನೀರು, ಇವ್ರಗಳನ್ನೂ ಹೇಮಂತದಲ್ಲಿ ಅಭ್ಯಾಸಮಾಡಿದ್ದಲ್ಲಿ, ಆಯುಃ ಕ್ಷೀಣವಾಗದಿರುವದು ಅಭ್ಯಂಗ, ಸುಮಳದ ಪುಡಿಯಿಂದ ಮೈ ತಿಕ್ಕಿಸಿಕೊಳ್ಳುವದು, ತಲೆಗೆ ತೈಲ, ಚೇಂತಾಕ ಎಂಬ ಸೈದೆ, ಒಸಿಲು ಮತ್ತು ಉಷ್ಣ ವಾದ ನೆಲ, ಮನೆ ಮತ್ತು ಗರ್ಭಗೃಹ, ಇವುಗಳು ಸೇವೆಸಲ್ಪಡಬೇಕು* ಲಘುವಾಗಿ, ವಾತವೃದ್ಧಿ ಮಾಡತಕ್ಕ ಅನ್ನಪಾನಗಳನ್ನೂ, ಬಿರುಗಾಳಿಯನ್ನೂ, ತಕ್ಕ ಪ್ರಮಾ ಣಕ್ಕೆ ಕಡಿಮೆಯಾದ ಆಹಾರವನ್ನೂ, ಗಂಜಿನೀರನ್ನೂ, ಹಿಮ ಒಂದಾಗ್ಗೆ ವರ್ಜಿಸತಕ್ಕದ್ದು.
- ಜನರು ದಕ್ಷಿಸಾಯನದ ಆವಿಯಲ್ಲಿ ಮತ್ತು ಉತ್ತರಾಯಣದ ಅಂತ್ಯದಲ್ಲಿ ದುರ್ಬಲರಾಗಿಯೂ, ಆಯನ ಮಧ್ಯಕಾಲದಲ್ಲಿ ಮಧ್ಯ ಬಲರಾಗಿಯೂ ದಕ್ಷಿಣಾಯನದ ಅಂತ್ಯದಲ್ಲಿ ಮತ್ತು ಉತ್ತರಾಯಣದ ಆದಿಯಲ್ಲಿ ಶ್ರೇಷಬಲ ರಾಗಿಯೂ ಇರುತ್ತಾರೆ (ಚ } } }
16. ಹೇಮಂತಶಿಶಿರೇ ತು ಶಿಶಿರೇಕಲ್ಪಂ ವಿಶೇಷಣಂ | ರೌಕ್ಷಮಾದಾನಜಂ ಶೀತಂ ಮೇಘಮಾರುತವರ್ಷಜಂ || ಆಶಿರಹತುವಿಗೆ ತಸ್ಮಾದ್ಧಿಮಂತಿಕಃ ಸರ್ವ ಶಿಶಿರ ವಿಧಿರಿಷ್ಯತೇ | ತಕ್ಕ ಉಪಚಾರ ನಿವಾತಮುತ್ಥ ಮಧಿಕಂ ಶಿಶಿರೇ ಗೃಹಮಾಶ್ರಯೇತ್ | ಕಟುತಿಕಷಾಯಾಣಿ ವಾತಲಾನಿ ಲಘಸಿ ಚ | ವರ್ಜಯೇದನ್ನಪಾನಾಸಿ ಶಿಶಿರೇ ಶೀತಲಾಸಿ ಚ | (ಚ, 35-36.) ಶಿಶಿರಋತುವು (ಮಾಘ - ಫಾಲ್ಗುಣ) ಹೇಮಂತಋತು(ಮಾರ್ಗಶೀರ್ಷ - ಪುಷ್ಯ) ನಿಗೆ ಸಮಾನ, ಅಲ್ಪ ವಿಶೇಷವಿರುವದ್ಯಾವದೆಂದರೆ ಉತ್ತರಾಯಣಸಂಬಂಧವಾದ ರೂಕ್ಷತ್ರ ಮತ್ತು ಮೋಡ, ಗಾಳಿ, ಮಳೆಗಳಿಂದ ಹುಟ್ಟಿದ ಶೈತ್ಯ, ಇವೆರಡು. ಆದ್ದರಿಂದ ಹೇಮಂತಋತುವಿಗೆ ಹೇಳಿದ ವಿಧಿ ಸರ್ವವೂ ಶಿಶಿರಋತುವಿಗೆ ಪ್ರಶಸ್ತವಾಗುತ್ತದೆ. ಬೀಸುವ ಗಾಳಿಯಿಲ್ಲದ ಮತ್ತು ಉಷ್ಣ ಅಧಿಕವಾದ ಮನೆಯನ್ನು ಶಿಶಿರದಲ್ಲಿ ಆಶ್ರಯಿಸತಕ್ಕದ್ದು. ಖಾರ, ಕಹಿ, ಚೊಗರು
- ಶಿಶಿರದಲ್ಲಿ ಮೋಡ, ಗಾಳಿ, ಮಳೆಗಳು ಕಾಣುವದು ಇಲ್ಲಿಗಿಂತ ಉತ್ತರ ದೇಶದಲ್ಲಿ ಹೆಚ್ಚು ಇರಬೇಕು