ಅ VIII - 178 ಹುಳಿ, ಉಪ್ಪು ಮತ್ತು ಸ್ನೇಹಗಳನ್ನು ಸ್ವಲ್ಪ ಹೆಚ್ಚಾಗಿ ಭುಂಜಿಸಬೇಕು. ಹಳೆದಾದ ಯವೆ, ಗೋದಿ, ಅಕ್ಕಿಗಳನ್ನು, ಸರಿಯಾಗಿ ತಯಾರಿಸಿದ ಬಾಂಗಲಮಾಂಸಗಳ ಮತ್ತು ಸಾರುಗಳ ಜೊತೆಯಿಂದ ಭುಂಜಿಸಿ, ಅಗ್ನಿಯನ್ನು ರಕ್ಷಿಸಿಕೊಳ್ಳಬೇಕು ಅಲ್ಪವಾಗಿ ಶರಾಬು ಮತ್ತು ಅರಿಷ್ಟ (ಕಷಾಯದ ಹುಳಿ) ಗಳನ್ನು ಅಥವಾ ಕುದಿಸಿ ತಣಿಸಲ್ಪಟ್ಟ ಮಳೆನೀರನ್ನಾಗಲಿ, ಬಾವಿ ನೀರನ್ನಾಗಲಿ, ಸರೋವರ ಸೀರನ್ನಾಗಲಿ, ಜೇನು ಕೂಡಿಸಿಕೊಂಡು ಕುಡಿಯಬೇಕು. ಮೈ ತಿಕ್ಕುವಿಕ, ಲೇಪ, ಸ್ವಾನ, ಗಂಧ, ಮಾಲಾಧರಣಗಳಲ್ಲಿ ಪರನಾಗಿ, ಶುದ್ಧವಾದ ಮತ್ತು ಹಗುರವಾದ ವಸ್ತ್ರಗಳನ್ನು ಧರಿಸಿಕೊಂಡು ತಣಸು ಇಲ್ಲದ ಮತ್ತು ಮಳೆಗಾಲಕ್ಕೆ ತಕ್ಕದಾದ ಸ್ಥಳವನ್ನು ಆಶ್ರಯಿಸಿರಬೇಕು 20 ವರ್ಷಾ ಶೀತೋಚಿತಾಂಗಾನಾಂ ಸಹಸೈವಾರ್ಕರಥಃ | ತಪ್ತಾನಾಮಾಚಿತಂ ಪಿತ್ತಂ ಪ್ರಾಯಃ ಶರದ ಕುಪ್ಯತಿ || ತತಾನ್ನಪಾನಂ ಮಧುರಂ ಲಘು ಶೀತಂ ಸತಿಕಮ್ | (ಪ್ರಶಮನಂ ಸೇವಂ ಮಾತ್ರಯಾ ಸುಪ್ರಕಾಂಕ್ಷಿ: || ಲಾವಾನ್ನವಿಂಜಲಾನೇಣಾನುರಭ್ಯಾನ್ ಶರಭಾನ್ ಶಶಾನ್ | ಶಾಲೀನ್ ಸಯವಗೋಧೂಮಾನ್ ಸೇವಾನಾಹುರ್ಘನಾತ್ಯಯ || ತಿಕಸ್ಯ ಸರ್ಮಿಷಃ ಪಾನಂ ವಿರೇಕೋ ರಕ್ತಮೋಕ್ಷಣಂ || ಧಾರಾಧ್ಯರಾತ್ಯಯೇ ಕಾರ್ಯಮಾತಪಸ್ಯ ಚ ವರ್ಜನಂ || ಶರದೃತು ವಸಾಂ ತೈಲಮವಶ್ಯಾಯಮೌದಕಾನೂಪವಾಮಿಷಂ | ಏಗೆ ತಕ್ಕ Wವತಾರ ಕ್ವಾರಂ ದಧಿ ದಿವಾನ್ವಪ್ನಂ ಪ್ರಾಗ್ವಾತಂ ಚಾತ್ರ ವರ್ಜಯೇತ್ || ದಿವಾ ಸೂರ್ಯಾ೦ಶುಸಂತಪ್ತಂ ನಿತಿ ಚಂದ್ರಾಂಶುಶೀತಲಂ | ಕಾಲೇನ ಪಕ್ಷಂ ನಿರ್ದೋಷಮಗನಾವಿಹೀಕೃತಂ || ಹಂಸೋದಕಮಿತಿ ಖ್ಯಾತಂ ಶಾರದಂ ಎಮಲಂ ಶಚಿ | ಸ್ವಾನಪಾನಾವಗಾಹೇಷು ಶಸ್ಯತೇ ತದಧಾಮೃತಂ || ಶಾರದಾನಿ ಚ ಮಾಲ್ಯಾನಿ ವಾಸಾಂಸಿ ವಿಮಲಾಸಿ ಚ | ಶರತ್ಕಾಲೇ ಪ್ರಶಸ್ಸಂತೇ ಪ್ರದೋಷೇ ಚಂದ್ರರಶ್ರಯಃ || (ಚ 37.38 ) ವರ್ಷಋತುವಿನ ಶೀತದಿಂದ ಕೂಡಿದ ಶರೀರಗಳು ಸುರ್ಯನ ರಶ್ಮಿಗಳಿಂದ ಒಡನೆ ಕಾಯಿಸಲ್ಪಡುವದರಿಂದ, ನಿತ್ಯವೂ ಕೂಡಿ ಹೆಚ್ಚಾಗಿ, ಶರದೃತು (ಆಶ್ವಯುಜ-ಕಾರ್ತಿಕ) ವಿನಲ್ಲಿ ಕೋಪಗೊಳ್ಳುತ್ತದೆ. ಆಗ್ಗೆ ಸೀಯಾದ, ಲಘುವಾದ, ಶೀತವಾದ, ಕಹಿರಸ ಕೂಡಿದ ಮತ್ತು ಪಿತ್ತಶಮನಕರವಾದ ಆಹಾರಪಾನಗಳು, ಪ್ರಮಾಣವರಿತು, ಚೆನ್ನಾಗಿ ಅಪೇಕ್ಷೆ ಹುಟ್ಟಿದ ಮೇಲೆ, ಸೇವಿಸಲ್ಪಡಬೇಕು. ಲಾವ, ಕಪಿಂಜಲ, ಎಂಬ ಪಕ್ಷಿಗಳು ಏಣ ಎಂಬ ಜಿಂಕೆ, ಕುರಿ, ಶರಭ, ಮೊಲ, ಇವುಗಳ ಮಾಂಸಗಳು, ಶಾಲ್ಯಕ್ತಿಗಳು, ಯವೆ, ಮತ್ತು ಗೋದಿ, ಮಳೆ ದಾಟಿದ ಮೇಲೆ ಉಪಯೋಗಿಸಲ್ಪಡತಕ್ಕವೆಂತ ಹೇಳುತ್ತಾರೆ. ಕಹಿ ತುಪ್ಪದ
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೬೮
ಗೋಚರ