ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ X - 210 - ರದ ಡರ್ಯಾ 48. ಭೋಜನಾನಂತ ದಂತಾಂತರಗತಂ ಚಾನ್ನಂ ಶೋಧನೇನಾಹರೇಚನೈಃ | ರ ದಂತಶೋಧನ ಕುರ್ಯಾದನಾಹೃತಂ ತದ್ದಿ ಮುಖಸ್ಯಾನಿಷ್ಟಗಂಧತಾಂ || (ಸು. 237,) ಹಲ್ಲುಗಳ ಎಡೆ ಸೇರಿಕೊಂಡ ಅನ್ನವನ್ನು ಮೆಲ್ಲನೆ (ಹುಲ್ಲು ಕಡ್ಡಿ ಮುಂತಾದ್ದರಿಂದ) ತೆಗೆದು ಶುಚಿಮಾಡಬೇಕು. ಹಾಗೆ ತೆಗೆಯದೆ ಬಿಟ್ಟರೆ, ಅದರಿಂದ ಬಾಯಿಯಲ್ಲಿ ದುರ್ವಾಸನೆ ಉಂಟಾಗುವದು. 49, ಮೂಜನದಿಂದ ಜೀರ್ಣೋsನ್ನೇ ವರ್ಧತೇ ವಾಯುರ್ವಿದಲ್ಲೇ ಪಿತ್ತಮೇವ ತು | ವಾತ ಪಿತ್ತ ಕಫ ವೃದ್ಧಿ ಭುಕ್ತಮಾತ್ರೆ ಕಫಾಪಿ ತಸ್ಮಾದ್ದುಕೇ ಹರೇಫಂ || (ಸು. 237.) ಅನ್ನವು ಜೀರ್ಣವಾದಾಗ್ಗೆ ವಾಯ, ಕಿಂಚಿತ್ ಪಾಕವಾದಾಗ್ಗೆ ಪಿತ್ತವು, ಮತ್ತು ಉಂಡ ಕೂಡಲೇ ಕಫವು, ವೃದ್ದಿಯಾಗುತ್ತದಾದ್ದರಿಂದ, ಉಂಡ ಮೇಲೆ ಕಫವನ್ನು ತೆಗೆದುಬಿಡಬೇಕು. 50. ಭುಕ್ತಾ ರಾಜವದಾಸೀತ ಯಾವದನ್ನ ಕ್ಲಮೋ ಗತಃ | ತತಃ ಪದಶತಂ ಗತ್ವಾ ವಾಮಪಾರ್ಶ್ವ ತು ಸಂವಿಶೇತ್ | ಶಬ್ದ ರೂಪರಸಾನ್ ಗಂಧಾನ್ ಸ್ಪರ್ಶಾಂಶ್ಚ ಮನಸಃ ಪ್ರಿಯಾನ್ | ಭೋಜನಾನಂತ ಭುಕ್ತವಾನುಪಸೇವೇತ ತೇನಾನ್ನಂ ಸಾಧು ತಿಷ್ಠತಿ || ಶಬ್ದ -ರೂಪ-ರಸ-ಸ್ಪರ್ಶ-ಗಂಧಾತ್ತಾಪಿ ಜುಗುಪ್ಪಿತಾಃ | ಅಶುಚೆನ್ನಂ ತಧಾ ಭುಕ್ತ ಮತಿಹಾಸ್ಯಂ ಚ ವಾಮಯೇತ್ | ಶಯನಂ ಚಾಸನಂ ವಾಪಿ ನೇಚ್ಛೇದ್ವಾಪಿ ದ್ರವೋತ್ತರಂ || ನಾಗ್ತಾತಪ್‌ ನ ಪ್ಲವನಂ ನ ಯಾನಂ ನಾಪಿ ವಾಹನಂ || (ಸು. 238.) . ಉಂಡ ಮೇಲೆ ಅನ್ನದ ಆಯಾಸ ಹೋಗುವ ವರೆಗೆ ರಾಜನಂತೆ ಕೂತು, ಅನಂತರ ನೂರು ಹೆಜ್ಜೆ ನಡೆದು, ಎಡಪಾರ್ಶ್ವದ ಮೇಲೆ ಮಲಗಬೇಕು. ಉಂಡ ಮೇಲೆ ಮನಸ್ಸಿಗೆ ಪ್ರಿಯವಾದ ಶಬ್ದ, ರೂಪ, ರಸ, ಗಂಧ, ಸ್ಪರ್ಶಗಳನ್ನೇ ಸೇವಿಸಿದ್ದಲ್ಲಿ ಆಹಾರವು ಒಳ್ಳೇದಾಗಿ (ಜೀರ್ಣಕ್ಕೆ ಹಿತ ವಾಗಿ) ನಿಲ್ಲುವದು. ಅಹಿತವಾದ ಶಬ್ದ, ರೂಪ, ರಸ, ಸ್ಪರ್ಶ ಮತ್ತು ಗಂಧ, ಅಶುಚಿಯಾದ ಅನ್ನ ಮತ್ತು ಅತಿ ಹಾಸ್ಯ, ಉಂಡದ್ದನ್ನು ವಾಂತಿಮಾಡಿಸುವದು. ದ್ರವಪದಾರ್ಥಗಳನ್ನು ಸೇವಿಸಿ ಶಯನವನ್ನಾಗಲಿ, ಆಸನವನ್ನಾಗಲಿ, ಅಪೇಕ್ಷಿಸಬಾರದು. ಬೆಂಕಿ, ಬಿಸಿಲು, ಹಾ ರೋಣ, ಯಾನ, ವಾಹನ ಸಹ ವರ್ಜವಾಗಿರುತ್ತವೆ. ಷರಾ (ಪ್ಲವನ' ಎಂದರೆ ಸ್ನಾನ ಅಥವಾ ನೀರನ್ನು ದಾಟುವದು ಎಂತ ಸ ಸಂ ವ್ಯಾ ವ್ಯಾಯಾಮಂ ಚ ವ್ಯವಾಯಂ ಚ ಧಾವನಂ ಯಾನಮೇವ ಚ | ಯುದ್ಧಂ ಗೀತಂ ಚ ಪಾರಂ ಚ ಮುಹೂರ್ತಂ ಭುಕ್ತವಾಂಸ್ತ್ರಜೇತ್ || (ನಿ, ರತ್ನಾಕರ.) ವ್ಯಾಯಾಮ, ಮೈಥುನ, ಓಡುವದು, ಯಾನ, ಯುದ್ಧ, ಹಾಡುವದು, ಪಾರ ಮಾಡು ವದು, ಇವುಗಳನ್ನು ಉಂಡು ಒಂದು ಮುಹೂರ್ತದ ವರೆಗೆ ಬಿಡಬೇಕು.