ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಆ XIV
-260-
ತೊಗರಿಯು ಚೊಗರು, ರೂಕ್ಷ, ಸೀ, ಶೀತಕರ, ಲಘು, ಗ್ರಾಹಿ, ವಾತವನ್ನುಂಟು ಮಾಡುವಂಧಾದ್ದು, ವರ್ಣ ಕೊಡುತ್ತದೆ ಮತ್ತು ಪಿತ್ತ, ಕಫ, ರಕ್ತಗಳನ್ನು ಜಯಿಸು ವಂಧಾದ್ದು.
28 ಕಡಲೆಯ ವಾತಲಾಃ ಶೀತಮಧುರಾಃ ಸಕಷಾಯಾ ವಿರಕ್ಷಣಾಃ|
ಗುಣ. ಕಫಶೋಣಿತಪಿತ್ತಘ್ನಾಶ್ವಣಕಾಃ ಪುಂಸ್ತ್ವನಾಶನಾಃ|| (ಸು 195) *ತ ಏವ ಘೃತಸಂಯುಕ್ತಾಸ್ತ್ರಿದೋಷಶಮನಾಃ ಪರಮ್ | ಕಡಲೆಯ ಸೀ ಚೊಗರು ರುಚಿಯುಳ್ಳದ್ದು, ಶೀತ, ಬಹಳ ರೂಕ್ಷ, ಕಫರಕ್ತಪಿತ್ತ ಗಳನ್ನೂ, ಪುಂಸ್ತ್ವವನ್ನೂ ನಾಶಮಾಡುವ ಗುಣವುಳ್ಳದ್ದು ಮತ್ತು ವಾಯುಪ್ರಕೋಪ ಮಾಡು ತ್ತದೆ. ಆದರೆ ಅದಕ್ಕೆ ತುಪ್ಪ ಕೂಡಿದರೆ ತ್ರಿದೋಷಶಮನಕ್ಕೆ ಉತ್ತಮವಾದದ್ದು * ಷರಾ ಈ ಅರ್ಧ ಶ್ಲೊಕವು ಕೆಲವು ಪ್ರತಿಗಳಲ್ಲಿ ಕಾಣುವದಿಲ್ಲ ಸ ಚಾಂಗಾರೇಣ ಸಂಭ್ರಷ್ಟಸ್ತೈಲಭ ಷ್ಟಶ್ಚ ತದ್ಗುಣಃ | ಅದ್ರು೯ಭೃಶ್ಟೋ ಬಲಕರೋ ರೋಚನಶ್ಚ ಪ್ರಕೀರ್ತಿತಃ || ಶುಷ್ಕಭೃಷ್ಟೋsತಿರೂಕ್ಷಶ್ಚ್ ವಾತಕುಷ್ಟ ಪ್ರಕೋಪಣಃ
ಹುರಿದು ಬೇ | ಯಿಸಿದ ಮ ಸ್ವಿನ್ನ ಪಿತ್ತಕಥಂ ಹನ್ಸಾತ್ಸೂಪಃ ಕ್ಷೊಭಕರೋ ಮತಃ ತ್ತು ಹಸಿ || ಯದು ಆರ್ದ್ರೋsತಿಕೋಮಲೋ ರುಚ್ಯಃ ಪಿತ್ತ
ಶುಕ್ರಹರೋ ಹಿಮಃ | ಕಷಾಯೋ ವಾತಲೋ ಗ್ರಾಹೀ ಕಫಪಿತ್ತಹರೋ ಲಘುಃ || (ಭಾ. ಪ್ರ. 143.) ಕಡಲೆಯನ್ನು (ಬರೇದಾಗಿ) ಕೆಂಡದಲ್ಲಿ ಹುರಿದರೂ, ತೈಲದಲ್ಲಿ ಹುರಿದರೂ, ಅದರಲ್ಲಿ ಮೇಲೆ ಹೇಳಿದ ಗುಣಗಳೇ ಇರುವವು, ನೆನೆಸಿ ಅಧವಾ ಹಸಿಯಾಗಿ ಹುರಿದದ್ದು ಬಲಕಾರಿ ಮತ್ತು ರುಚಿಕರ; ಒಣಗಲಾಗಿಯೇ ಹುರಿದದರಲ್ಲಿ ವಿಶೇಷ ರೂಕ್ಷಗುಣವೂ, ವಾತ-ಕುಷ್ಟ ರೋಗಗಳನ್ನು ಪ್ರಕೋಪಿಸುವ ಗುಣವೂ ಇರುವವು; ಬೇಯಿಸಿದ ಕಡಲೆ ಪಿತ್ತ ಕಫಗಳನ್ನು
ನಾಶಮಾಡುವದು, ಕಡಲೆತೋವೆಯಿಂದ ಹೊಟ್ಟೆಯಲ್ಲಿ ಕ್ಷೋಭ (ಗುಡುಗುಡು) ಉಂಟಾ ಗುವದು, ಮತ್ತು ಹಸಿಕಡಲೆಯು ಅತಿಕೋಮಲ, ರುಚಿಕರ ಚೊಗರು, ಗ್ರಾಹಿ, ಲಘು, ತಂಪು, ವಾಯುಪ್ರಕೋಪಕರ ಮತ್ತು ಪಿತ್ತವನ್ನೂ, ಶುಕ್ರವನ್ನೂ, ಕಫಪಿತ್ತವನ್ನೂ ನಾಶ ಮಾಡತಕ್ಕಂಧಾದ್ದು. 29. ಮಾಷೋ ಗುರುರ್ಭಿನ್ನ ಪುರೀಷಮೂತ್ರಃ
ಸ್ನಿಗ್ದೊಷ್ಣವೃಷ್ಯೊ ಮಧುರೋsನಿಲಘ್ನಃ || ಸಂತರ್ಪಣಃ ಸ್ತನ್ಯಕರೂ ವಿಶೇಷಾತ್ ಬಲಪ್ರದಃ ಶುಕ್ರಕಫಾವಹಶ್ಚ || (ಸು 195.) ಉದ್ದು ಗುರು, ಸ್ನಿಗ್ದ, ಉಷ್ಣ,ವೃಷ್ಯ, ಸೀ, ವಾತಹರ, ಪುಷ್ಟಿ ಕರ, ಮೊಲೆಹಾಲನ್ನು ವೃದ್ಧಿ ಮಾಡತಕ್ಕಂಧಾದ್ದು. ವಿಶೇಷವಾಗಿ ಬಲಕಾರಿ, ಶುಕ್ರಕಫಗಳನ್ನು ವೃದ್ಧಿ ಮಾಡುವಂಧಾದ್ದು ಮತ್ತು ಮಲಮೂತ್ರಗಳನ್ನು ಸಡಿಲಿಸತಕ್ಕಂಧಾದ್ದು ಆಗಿರುತ್ತದೆ.