ಈ ಪುಟವನ್ನು ಪರಿಶೀಲಿಸಲಾಗಿಲ್ಲ.
- 300 -
XVII ನೇ ಅಧ್ಯಾಯ. ರೋಗಿಯ ಪರೀಕ್ಷೆ. 1. ತ್ರಿವಿಧಂ ಖಲು ರೋಗವಿಶೇಷಜ್ಞಾನಂ ಭವತಿ | ತದ್ಯಧಾ | ಆಪ್ತೋಪ ರೋಗಜ್ಞಾನಕ್ಕೆ ದೇಶಃ ಪ್ರತ್ಯಕ್ಷ ಮನುಮಾನಂ ಚೇತಿ | (ಚ. 25.) ರೋಗಜ್ಞಾನಕ್ಕೆ ಮೂರು ಸಾಧನಗಳು
ರೋಗಭೇದ ತಿಳಿಯುವ ಜ್ಞಾನವು ಮೂರು ವಿಧ, ಹ್ಯಾಗೆಂದರೆ ಆಪ್ತೋಪದೇಶ, ಪ್ರತ್ಯಕ್ಷ ಮತ್ತು ಅನುಮಾನ, ಎಂತ. 2. ತತ್ರಾಪ್ತೋಪದೇಶೋ ನಾಮ ಆಪ್ತವಚನಂ | (ಚ. 257 ) ಆಪ್ತೋಪದೇಶ ಅವುಗಳೊಳಗೆ ಆಪ್ತೋಪದೇಶಪದೇಶ ಎಂಬದು ಆಪ್ತರ ವಚನ. ರಜಸ್ತಮೋಭ್ಯಾಂ ನಿರ್ಮುಕ್ತಾಸ್ತಪೋಜ್ಞಾನಬಲೇನ ಯೇ | ಯೇಷಾಂ ತ್ರಿಕಾಲಮಮಲಂ ಜ್ಞಾನಮವ್ಯಾಹತಂ ಸದಾ || ಆಪ್ತಾಃ ಶಿಷ್ಟಾ ಎಬುಧಾಸ್ತೇ ತೇಷಾಂ ವಾಕ್ಯಮಸಂಶಯಂ | ಸತ್ಯಂ ವಕ್ಷ ತೇ ಕಸ್ಮಾದಸತ್ಯಂ ನೀರಜಸ್ತಮಃ || (ಚ. 57.)
ತಪೋಜ್ಞಾನಗಳ ಒಲದಿಂದ ಯಾರು ರಜೋಗುಣದಿಂದಲೂ, ತಮೋಗುಣದಿಂದಲೂ ಮುಕ್ತರಾಗಿದ್ದಾರೋ ಮತ್ತು ಯಾರ ಜ್ಞಾನವು ಭೂತ, ವರ್ತಮಾನ, ಭವಿಷ್ಯತ್ಕಾಲಗಳನ್ನು ವ್ಯಾಪಿಸಿಕೊಂಡು, ಸದಾಕಾಲದಲ್ಲಿಯೂ ನಿರ್ಮಲವಾಗಿಯೂ, ಚಂಚಲ ಪಡೆಯದೆಯೂ ಇದೆಯೋ, ಅಂಧವರು ಆಪ್ತರು, ಅವರೇ ಶ್ರೇಷ್ಠರು ಮತ್ತು ಪಂಡಿತರು, ಅವರ ವಾಕ್ಯವು ಸಂಶಯಾಸ್ಪದವಿಲ್ಲದ್ದು ಮತ್ತು ಅವರು ಸತ್ಯವಾದದ್ದನ್ನು ಹೇಳುತ್ತಾರೆ ರಜಸ್ತಮೋಗುಣ ಇಲ್ಲದವರು ಅಸತ್ಯವನ್ನು ಯಾಕೆ ಹೇಳ್ಯಾರು? ತತ್ರಾಪ್ತಾಗಮಸ್ತಾವದ್ವೇದೋ ಯಶ್ಚಾನ್ಯೋSಪಿ ಕಶ್ಚದ್ವೇದಾಧಾ೯ದ ವಿಪರೀತ: ಪರೀಕ್ಷಕೈಃ ಪ್ರಣೀತಃ | (ಚ. 58 ) ಆಪ್ತಾಗಮ ಎಂಬದು ವೇದ ಮತ್ತು ಪರೀಕ್ಷೆ ಮಾಡಿ ರಚಿಸಲ್ಪಟ್ಟ,ವೇದಾರ್ಧಕ್ಕೆ ವಿರೋಧವಿಲ್ಲದ, ಬೇರೆ ಯಾವದಾದರೂ ಗ್ರಂಧ.
3. ಪ್ರತ್ಯಕ್ಷಂ ತು ಖಲು ತದ್ಯತ್ ಸ್ವಯಮಿಂದ್ರಿಯೈಮ೯ನಸಾ ಚೋಪ ಪ್ರತ್ಯಕ್ಷಾನು ಮಾನಗಳು ಲಭ್ಯತೇ | ಅನುಮಾನಂ ಖಲು ತರ್ಕೋ ಯುಕ್ತ | (ಚ. 257)
ಯಾವದು ಸ್ವತಃ ಇಂದ್ರಿಯಗಳಿಂದಲೂ, ಮನಸ್ಸಿನಿಂದಲೂ, ತಿಳಿಯಬರುತ್ತದೋ ಅದು ಪ್ರತ್ಯಕ್ಷ, ಅನುಮಾನ ಎಂಬದು ಯುಕ್ತಿಯನ್ನು ಆಧರಿಸಿದ ಊಹೆ.