ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



               -349-       
                             ಅ XIX
ಮಾತನ್ನು ನಡಿಸತಕ್ಕವನಾಗಿಯೂ,ಶ್ರಮವಿಲ್ಲದವನಾಗಿಯೂ,ಇರುವ

ಪರಿಚಾರಕನೇ ಚಿಕಿತ್ಸೆಯಲ್ಲಿ ಪರಿಚಾರಕ ಎಂಬ ಪಾದವನ್ನಿಸಿಕೊಳ್ಳುತ್ತಾನೆ 8. ದ್ವಿವಿಧಾಸ್ತು ಖಲು ಭಿಷಜೋ ಭವಂತಿ ಅಗ್ನಿವೇಶ' ಪ್ರಾಣಾನಾಮೇ ದುಷ್ಟವೈದ್ಯ ಕೇಽಭಿಸರಾ ಹಂತಾರೋ ರೋಗಾಣಾಂ, ರೋಗಾಣಾಮೇಕೇಽಭಿಸರಾ ಹಂತಾರಃ ಪ್ರಾಣಾನಾಮಿತಿ | (ಚ 189.) ವೈದ್ಯರು ಎರಡು ವಿಧ ಕೆಲವರು ಪ್ರಾಣಗಳನ್ನು ರಕ್ಷಿಸಿ ರೋಗಗಳನ್ನು ಕೊಲ್ಲತಕ್ಕ ವರು, ಕೆಲವರು ರೋಗಗಳನ್ನು ರಕ್ಷಿಸಿ ಪ್ರಾಣಗಳನ್ನು ಕೊಲ್ಲತಕ್ಕವರು. ಷಗಾ ಚರಕಸಂಹಿತೆಯ ಸೂತ್ರಸ್ಥಾನದ 29ನೇ ಅಧ್ಯಯವು ಪೂರ್ಣವಾಗಿ ಈ ಎರಡು ವಿಹವಾದ ವೈದ್ಯನ ವರ್ಣನೆಗೆ ಉಪಯೋಗಿಸಲ್ಪಟದೇ ಆ ವರ್ಣನದಲ್ಲಿ ದುಷ್ಟವೈದ್ಯನ ವಿಷಯವಾದ ಒಂದು ಮಾತನ್ನು ಮಾತ್ರ ಇದರ ಕೆಳಗೆ ಕಾಣಿಸೋಣಾಗುತ್ತದ

9. ಭಿಷಕ್ ಛದ್ಮಪ್ರವಿಶ್ಯೈವ ವ್ಯಾಧಿತಾಂಸ್ತರ್ಪಯಂತಿ ಯೇ | ವಿತಂಸಮಿವ ಸಂಶ್ರಿತ್ಯ ವನೇ ಶಾಕುಂತಿಕೋ ದ್ವಿಚಾನ್ || ವೈದ್ಯವೇಷಧಾರಿ ಗಳ ವರ್ಜನ ಶ್ರುತದೃಷ್ಟ ಕ್ರಿಯಾಕಾಲಮಾತ್ರಾಸ್ಥಾನಬಹಿಷ್ಕೃತಾಃ | ವರ್ಜನೀಯಾ ಹಿ ತೀ ಮೃತ್ಯೋಶ್ಚರಂತ್ಯನುಚಾರ ಭೂ || (ಚ.192.)

ಕಾಡಿನಲ್ಲಿ ಬೇಡನು ತಾನು ಇಟ್ಟ ಗೂಡಿನ ಕಡೆಗೆ ಪಕ್ಷಿಗಳು ಹೋಗುವಂತೆ ಅವುಗಳನ್ನು ತೃಪ್ತಿಗೊಳಿಸುವಂತೆ, ವೈದ್ಯರೆಂಬ ಕಪಟವೇಷವನ್ನು ಧರಿಸಿಕೊಂಡು ರೋಗಿಗಳನ್ನು ತೃಪ್ತಿ ಗೊಳಿಸುತ್ತಾ, ಪ್ರತಿಕ್ರಿಯ, ಅದರ ಕಾಲ, ಔಷಧಪ್ರಮಾಣ, ಈ ಭಾಗಗಳಲ್ಲಿ ಕೇಳಿದ್ದಾಗಲಿ, ನೋಡಿದ್ದಾಗಲಿ ಇಲ್ಲದ, ಅವುಗಳ ಜ್ಞಾನದಿಂದ ಹೂರಪಟ್ಟವರಾಗಿ ಯಾರು ಇದ್ದಾರೋ, ಅವರನ್ನು ವರ್ಜಿಸತಕ್ಕದ್ದು, ಯಾಕೆಂದರೆ ಅವರು ಯಮನ ಸೇವಕರಾಗಿ ಭೂಮಿಯಲ್ಲಿ ಸಂಚ ರಿಸುವಂಧವರಾಗಿರುತ್ತಾರ.

10. ಕಿಂಚಿದ್ರೋಷಪ್ರಶಮನಂ ಕಿಂಚಿದ್ದಾತುಪ್ರದೂಷಣಂ | ಗುಣಭೇದದಿಂದ ದ್ರವ ಸ್ವಸ್ಥವೃತ್ತೌ ಹಿತಂ ಕಿಂಚಿದ್ದ್ರವ್ಯಂ ತ್ರಿವಿಧಮುಚ್ಯತೇ || (ಚ. 6 ) ಗಳಲ್ಲಿ ಮೂರು ವಿಧ ವಿಧಿ ದ್ರವ್ಯಗಳಲ್ಲಿ ಕೆಲವು ದೋಷಗಳನ್ನು ಶಮನಮಾಡುವ ಗುಣವುಳ್ಳವು, ಕೆಲವು ಧಾತುಗಳನ್ನು ಕೆಡಿಸುವ ಗುಣವುಳ್ಳವು ಮತ್ತು ಕೆಲವು ಸೌಖ್ಯಸ್ಥಿತಿಯಲ್ಲಿ ಹಿತಕರವಾದವು, ಹೀಗೆ ದ್ರವ್ಯಗಳು ಮೂರು ವಿಧ. 11. ತತ್ಪುನಸ್ತ್ರಿವಿಧಂ ಜ್ಞೇಯಂ ಜಾಂಗಮೌದ್ಭಿದಪಾರ್ಧಿವಂ | ದ್ರವ್ಯಗಳ ಮೂರು ಜಾತಿ - (ಚ 6 ) ದ್ರವ್ಯಗಳಲ್ಲಿ ಪುನಃ 3 ವಿಧ -1 ಜಂಗಮ (ಚಲನಶಕ್ತಿಯುಳ್ಳ,ಪ್ರಾಣಿಸಂಬಂಧವಾದದ್ದು), 2, ಔದ್ಭಿದ (ಮೊಳಿಕೆಯುಂಟಾಗಿ ಬೆಳೆಯುವ ಗಿಡವೃಕ್ಷಾದಿಗಳಿಗೆ ಸಂಬಂಧವಾ ದದ್ದು), 3. ಪಾರ್ಥಿವ (ಭೂಮಿಯಲ್ಲಿ ಸಿಕ್ಕುವ ಲೋಹಾದಿಗಳಿಗೆ ಸಂಬಂಧವಾದದ್ದು).