ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



                      _   391   _
                                                                                                          ಲಿ XX

ಕ್ರಮ 9. ಪಾನೀಯಂ ಷೋಡಶಗುಣಂ ಕ್ಷುಣ್ಣೀ ದ್ರವ್ಯಪಲೇ ಕ್ಷಿಪೇತ್ | ಮೃತ್ಪಾತ್ರೇ ಕ್ವಾಧಯೇದ್ಯಾ ಹ್ಯಮಷ್ಟಮಾಂಶಾವಶೇಷಿತಂ || ತಜ್ಜಲಂ ಪಾಯಯೇದ್ಧೀಮಾನ್ ಕೋಷ್ಣಂ ಮೃದ್ವಗ್ನಿಸಾಧಿತಂ | ಶೃತಕಪಾಯದ ಶೃತಃ ಕ್ಟಾಧಃ ಕಷಾಯಶ್ಚ ನಿರ್ಯೂಹಃ ಸ ನಿಗದ್ಯತೇ || ಆಹಾರರಸಪಾಕೇ ಚ ಸಂಚಾತೇ ದ್ವಿಪಲೋನ್ಮಿತಂ | ವೃದ್ಧ ವೈದ್ಯೋಪದೇಶೇನ ಪಿಬೇತ್ಯಾಧಂ ಸುಪಾಚಿತಂ || (ಶಾ. 41.) ಒಂದು ಪಲ ಕಷಾಯ ದ್ರವ್ಯವನ್ನು (ಕುಟ್ಟಿ) ಪುಡಿಮಾಡಿ, ಮಣ್ಣಿನ ಗಡಿಗೆಯಲ್ಲಿ ಹಾಕಿ, ಅದಕ್ಕೆ 16 ಪಾಲು (4 ಕುಡ್ತೆ) ನೀರು ಹೊಯಿದು, ಸಣ್ಣ ಉರಿಯಿಂದ ಕುದಿಸಿ, ನೀರು ಬತ್ತಿ ಅರ್ಧ ಕುಡ್ತೆಗೆ ಇಳಿದ ಕೂಡಲೇ, ಪಾತ್ರೆಯನ್ನು ಒಲೆಯಿಂದ ಕೆಳಗೆ ಇರಿಸಿ, ಶೋಧಿಸಿದ ಆ ನೀರನ್ನು ಅಲ್ಪವಾಗಿ ಬಿಸಿಯಿರುವಾಗ್ಗೆ, ರೋಗಿಯ ಆಹಾರವು ಜೀರ್ಣವಾದ ಕಾಲ ನೋಡಿ ಕೊಂಡು, ಕುಡಿಸಬೇಕು. ಆ ನೀರಿಗೆ ಶೃತ ಎಂತಲೂ, ಕ್ಟಾಧ ಎಂತಲೂ, ಕಷಾಯ ಎಂತ ಲೂ, ನಿರ್ಯೂಹ ಎಂತಲೂ, ಹೇಳುತ್ತಾರೆ. 10. ತತ್ರಾನ್ಯತಮಪರಿಮಾಣಸಮ್ಮಿತಾನಾಂ ಯಧಾಯೋಗಂ ತ್ವಕ್ಟತ್ರಮೂ ಲಾದೀನಾಮಾತಪಪರಿಶೋಷಿತಾನಾಂ ಛೇದ್ಯಾನಿ ಖಂಡಶಶ್ವೇದಯಿ

ಕಷಾಯಪಾಕದ ತ್ವಾ ಭೇದ್ಯಾನ್ಯಣುಶೋ ಭೇದಯಿತ್ವಾವಕುಬ್ಯಾಷ್ಟಗುಣೇನ ಷೋಡಶ ಸಾಮಾನ್ಯ ಕ್ರಮ ಗುಣೇನ ವಾಂಭಸಾಭಿಷಿಚ್ಯ ಸಲ್ಯಾಂ ಚತುರ್ಭಾಗಾವಶಿಷ್ಟಂ

ಕ್ವಾಧಯಿತ್ವಾಪಹರೇದಿತ್ಯೇಷ ಕಷಾಯಪಾಕಕಲ್ಪಃ | (ಸು. 538.) ಯೋಗ ಪ್ರಕಾರ ಚಕ್ಕೆ, ಎಲೆ, ಬೇರು, ಮುಂತಾದ ದ್ರವ್ಯಗಳನ್ನು, ಒಣಗಲು ಹಾಕ ಬೇಕಾದ ಸಂಗತಿಯಲ್ಲಿ, ಬಿಸಿಲಲ್ಲಿ ಒಣಗಿಸಿಕೊಂಡು, ತೂಕಮಾಡಿ, ಉಕ್ತಪರಿಮಾಣ ತೆಗೆದು ಕೊಂಡು, ಒಣಗಲು ಹಾಕಬೇಕಾದದ್ದರ ಬದಲಿಗೆ ಹಸಿಯನ್ನೇ ಕೂಡಿಸುವದಾದರೆ ಎರಡು ಪಾಲಷ್ಟು ಸೇರಿಸಿಕೊಂಡು, ತುಂಡುಮಾಡಲ್ಪಡಬೇಕಾದವುಗಳನ್ನು ಚಿಕ್ಕ ಚೂರುಗಳಾಗಿ ಕಡಿದು, ಪುಡಿಮಾಡಲ್ಪಡಬೇಕಾದವುಗಳನ್ನು ನುಣ್ಣಗಿನ ಚೂರ್ಣವಾಗುವಂತೆ ಜಜ್ಜಿ ಒಟ್ಟಾಗಿ ಕುಟ್ಟಿ, ಗಡಿಗೆಯಲ್ಲಿ ಹಾಕಿ, ಅದರ ಮೇಲೆ ಎಂಟು ಪಾಲೋ, ಹದಿನಾರು ಪಾಲೋ, ನೀರು ಹೊಯಿದು, ಆ ನೀರಿನ ಕಾಲು ಭಾಗ ಉಳಿಯುವ ವರೆಗೆ ಕುದಿಸಿ, ಗಡಿಗೆಯನ್ನು ಒಲೆ ಯಿಂದ ಕೆಳಗೆ ಇಳಿಸಬೇಕು. ಇದು ಕಷಾಯಪಾಕದ ಕ್ರಮವಾಗಿರುತ್ತದೆ. ಕ್ವಾಧಂ ದ್ರವ್ಯಪಲೇ ಕುರ್ಯಾತ್ ಪ್ರಸ್ಥಾರ್ಧಂ ಪಾದಶೇಷಿತಂ | (ವಾ. 432,) ಕಷಾಯವನ್ನು ಒಂದು ಪಲ ಔಷಧಕ್ಕೆ 8 ಪಲದಷ್ಟು ನೀರಿಟ್ಟು, ಕಾಲು ಪಾಲಿಗೆ ಬತ್ತಿಸಿ ಮಾಡತಕ್ಕದ್ದಾಗಿರುತ್ತದೆ. 11. ಚತುರ್ಗುಣಂ ಮೃದುದ್ರವ್ಯೇ ಕರಿನೇತಷ್ಟಗುಣಂ ಜಲಂ | ಮೃದ್ವಾದಿಕ್ವಾಧ್ಯಸಂಘಾತೇ ದದ್ಯಾದಷ್ಟಗುಣಂ ಪಯಃ ||