ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 419 419 - ಅ. XXI ಪ್ರವಿಷ್ಟಾಯಾಮಮ್ಲಮನ್ಯೇ ತಸ್ಯ ಪುರಸ್ತಾತ್ ಸ್ವಾದಯೇಯುಃ | ವ್ಯಾವೃತ್ತೇ ಚಾಕ್ಷಿಣೀ ಮೃತಾಭ್ಯಕ್ತೇ ಪೀಡಯೇತ್ | ಹನುಸಂಹನನೇ ವಾತಶ್ಲೇಪ್ಮಹರಂ ನಸ್ಯಂ ಸ್ವೇದಾಂಶ್ಟ ವಿದಧ್ಯಾತ್ | ತೃಷ್ಣಾದಿಷು ಚ ಯಧಾಸ್ವಂ ಪ್ರತಿಕುರ್ವೀತ | ವಿಸಂಜ್ಞೇ ವೇಣುವೀಣಾಗೀತಸ್ವನಂ ಶ್ರಾವ ಯೇತ್ | (ಸು. 555 ) ಅದೇ ಅತಿಯಾದ ವಾಂತಿಯು ಬಹಳ ವೃದ್ಧಿಯಾದರೆ, ಎಂಜಲೊಂದಿಗೆ ರಕ್ತವನ್ನುಗಿಯು ತತ್ತಾನೆ, ಅಧವಾ ರಕ್ತವನ್ನು ವಾಂತಿಮಾಡುತ್ತಾನೆ ಆಗ್ಗೆ ನಾಲಗೆ ಹೊರಗೆ ಬರುವದು, ಕಣ್ಣುಗಳು ಒಳಗೆ ತಿರುಗಿ ತೆರೆದಿರುವವು, ದವಡೆಗಳು ಕಲ್ಲಾಗಿ ಬಿಡಿಸಿಕೊಂಡಿರುವವು, ಬಾಯಾರಿಕೆ, ಬಿಕ್ಕಟ್ಟು, ಜ್ವರ, ಸಂಜ್ಞೆ ತಪ್ಪುವದು, ಈ ಉಪದ್ರವಗಳುಂಟಾಗುವವು ಅಂಧವ ನಿಗೆ ಆಡಿನ ರಕ್ತ, ಶ್ರೀಗಂಧ, ಲಾವಂಚ, ರಸಾಂಜನ, ಅರಳಿನ ಚೂರ್ಣ, ಇವುಗಳಿಂದಲೂ, ಸಕ್ಕರೆನೀರಿನಿಂದಲೂ ಕೂಡಿದ ಮಂಧವನ್ನು ಕುಡಿಸಬೇಕು ಹಣ್ಣಿನ ರಸಗಳಿಂದ, ಅಥವಾ ತುಪ್ಪ, ಸಕ್ಕರೆ, ಜೇನುಗಳಿಂದ, ಅಧವಾ ಆಲ ಮೊದಲಾದವುಗಳ ಮಲಕಟ್ಟತಕ್ಕ ಕುಡಿ ಗಳಿಂದ ತಯಾರಿಸಲ್ಪಟ್ಟ ಜೇನು ಕೂಡಿದ ಗಂಜಿಯನ್ನು, ಅಥವಾ ಹಾಲಿನಿಂದ, ಅಥವಾ ಚಾಂಗಲ ಮಾಂಸರಸದಿಂದ, ಉಣ್ಣಿಸಬೇಕು. ಅತಿಯಾಗಿ ರಕ್ತ ತೆಗೆದದ್ದಕ್ಕೆ ಹೇಳಿದ ವಿಧಾ ನಕ್ಕನುಸಾರವಾಗಿ ಉಪಚಾರಮಾಡಬೇಕು ಅತಿಯಾಗಿ ಹೊರಗೆ ಬಂದ ನಾಲಿಗೆಯನ್ನು ತ್ರಿಕಟು, ಸೈಂಧವಲವಣ, ಇವುಗಳ ಚೂರ್ಣದಿಂದ ತಿಕ್ಕಿ, ಅಧವಾ ಎಳ್ಳು ಮತ್ತು ದ್ರಾಕ್ಷಿಗಳ ಲೇಪನ ಮಾಡಿ, ಒಳಗೆ ನೂಕಬೇಕು, ಮತ್ತು ಅದು ಒಳಗೆ ಹೋದ ಮೇಲೆ, ಬೇರೆಯವರು ಅವನ ಮುಂದೆ ಹುಳಿಫಲಗಳ ಸ್ವಾದು ನೋಡಿ ತೋರಿಸಬೇಕು. ತೆರಕೊಂಡಿರುವ ಕಣ್ಣು ಗಳಿಗೆ ತುಪ್ಪ ಹಚ್ಚಿ ಮಲ್ಲನೆ ತಿಕ್ಕಿ ಹತ್ತರ ಮಾಡಬೇಕು. ದವಡೆ ಬಿಡಿಸಿಕೊಂಡು ಚೇಷ್ಟಾ ರಹಿತ ವಾಗಿರುವದಕ್ಕೆ ವಾತಕಫಹರವಾದ ನಸ್ಯವನ್ನೂ, ಸ್ವೇದಗಳನ್ನೂ, ಉಪಯೋಗಿಸುವದು. ಬಾಯಾರಿಕೆ ಮುಂತಾದ ಉಪದ್ರವಗಳಲ್ಲಿ ಆಯಾ ಉಪದ್ರವಕ್ಕೆ ವಿಧಿಸಿರುವ ಪ್ರತಿಕ್ರಿಯ ಗಳನ್ನೇ ನಡಿಸುವದು ಸಂಜ್ಞೆತಪ್ಪಿರುವದಕ್ಕೆ ಕೊಳಲು, ವೀಣೆ ಬಾರಿಸಿ ಸ್ವರವನ್ನು ಕೇಳಿಸಬೇಕು 38 ವಿರೇಚನಾತಿಯೋಗೇ ಚ ಸಚಂದ್ರಕಂ ಸಲಿಲಮಧಃ ಸ್ರವತಿ | ತತೋ ಮಾಂಸಧಾವನಪ್ರಕಾಶಮುತ್ತರಕಾಲಂ ಜೀವಶೋಣಿತಂ ಚ ತತೋ ಗು ದನಿಃಸರಣಂ ವೇಪಧುರ್ವಮನಾತಿಯೋಗೋಪದ್ರವಾಶ್ಚಾಸ್ಯ ಭವಂತಿ | ಎರೇಚನಾತಿ ಯೋಗದ ಏಶೇ

ತಮಪಿ ನಿಃಸ್ರುತಶೋಣಿತವಿಧಾನೇನೋಪಚರೇತ್ | ನಿಃಸರ್ಪಿತಗುದಸ್ಯ ಷ ಉಪದ್ರವ ಗುದಮಭ್ಯಜ್ಯ ಪರಿಸ್ವೇದ್ಯಾಂತಃ ಪೀಡಯೇತ್ ಕ್ಷುದ್ರರೋಗಚಿಕಿತ್ಸಿತಂ ಗಳು ಮತ್ತು

ವಾ ವೀಕ್ಷೇತ | ವೇಷದೌ ವಾತವ್ಯಾಧಿವಿಧಾನಂ ಕುರ್ವೀತ | ಜಿಹ್ವಾ ಅವುಗಳಿಗೆ ಪರಿಹಾರ ನಿಃಸರಣಾದಿಷೂಕ್ತಃ ಪ್ರತೀಕಾರಃ | ಅತಿಪ್ರವತ್ತೇ ವಾ ಜೀವಶೋಣಿತೇ ಕಾಶ್ಮರೀಫಲಬದರೀದೂರ್ವೋಶೀರೈಃ ಶೃತೇನ ಪಯಸಾ ಘೃ ತಮಂಡಾಂ ಜನಯುಕ್ತೇನ ಸುಶೀತೇನಾಸ್ಥಾಪಯೇತ್ | ನ್ಯಗ್ರೋಧಾದಿಕಷಾಯ 53*