ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

459 es XXIV ಜೀರ್ಣವಾಗಿರುವ ಕಾಲದಲ್ಲಿ, ಕಣ್ಣುಗಳಿಗೆ ತರ್ಪಣಕ್ರಮವು ನಡಿಸಲ್ಪಡತಕ್ಕದ್ದು. ಗಾಳಿ, ಬಿಸಿಲು ಮತ್ತು ದೂಳು, ಇಲ್ಲದ ಮನೆಯಲ್ಲಿ ರೋಗಿಯು ಅಂಗಾತವಾಗಿ ಮಲಗಬೇಕು. ಎರಡು ಕಣ್ಣುಗಳ ಕೋಶಗಳಿಗೂ ಸುತ್ತಲು, ಉರುಟಾದ, ಎತ್ತರತಗ್ಗು ಇಲ್ಲದ, ಮತ್ತು ಕೋಶಗಳಿಗೆ ಅತಿಸಮಾಪವಲ್ಲದ ಮತ್ತು ಎಡೆಯಿಲ್ಲದಂತೆ ಗಟ್ಟಿಯಾಗಿ ಹಿಡಿದ, ಎರಡು ದಂಡೆ ಗಳನ್ನು ನೀರಿನಿಂದ ಕಲಸಿದ ಉದ್ದಿನ ಹಿಟ್ಟಿನಿಂದ ಕಟ್ಟಬೇಕು. ಅವುಗಳ ಮಧ್ಯ ಅಲ್ಪ ಬಿಸಿ ಯಾದ ನೀರನ್ನು ಕೂಡಿಸಿ ಕರಗಿಸಿದ ತುಪ್ಪವನ್ನು ರೆಪ್ಪೆ ಕೂದಲುಗಳ ತುದಿ ವರೆಗೆ ತುಂಬಿಸ ಬೇಕು. ಹಾಗೆ ಸ್ವಸ್ಥನ ವಿಷಯದಲ್ಲಿ 500 ಮಾತ್ರಾಕಾಲ, ಕಫದೋಷದಲ್ಲಿ 600 ಮಾತ್ರಾ ಕಾಲ, ಪಿತ್ತದೋಷದಲ್ಲಿ 800 ಮಾತ್ರಾಕಾಲ, ವಾತದೋಷದಲ್ಲಿ 1000 ಮಾತ್ರಾಕಾಲ, ಇರಿಸತಕ್ಕದ್ದು; ಇದು ಉತ್ತಮಪಕ್ಷ, ರೋಗದ ಸ್ಥಾನಭೇದದ ಮೇಲೆ ಕಾಲಭೇದ ಮಾಡ ಬೇಕೆಂತ ಕೆಲವರ ಅಭಿಪ್ರಾಯವಿದೆ ಹಾಗಂದರೆ ಸಂಧಿಗತರೋಗದಲ್ಲಿ 300, ವರ್ತ್ಯಗತ ರೋಗದಲ್ಲಿ 100, ಶುಕ್ಲಗತರೋಗದಲ್ಲಿ 500, ಕೃಷ್ಣಗತರೋಗದಲ್ಲಿ 700, ಸರ್ವಗತ ರೋಗದಲ್ಲಿ 1000, ದೃಷ್ಟಿಗತರೋಗದಲ್ಲಿ 800, ಮಾತ್ರಾಕಾಲ ಇರಿಸತಕ್ಕದ್ದು. ಷರಾ ದಂಡೆಯು ಎರಡಂಗುಲ ಎತ್ತರವಿರ ಬೇಕಾಗಿಯೂ, ಕಣ್ಣು ಮುಚ್ಚಿಸಿ, ರೆಪ್ಪೆ ಕೂದಲು ಮುಳುಗುವ ತನಕ ತುಪ್ಪವನ್ನು ಸುರಿದು, ಅನಂತರ ಮೆಲ್ಲಗೆ ಕಣ್ಣು ತೆರಿಸಬೇಕಾಗಿಯೂ, ವಾ ದಿಂದ ಕಾಣುತ್ತದೆ ತತಶಾ ಪಾಂಗತಃ ಸ್ನೇಹಂ ಸ್ರಾವಯತ್ತಾಕಿ ಶೋಧಯತ್ | ಸ್ಪಿನ್ನೇನ ಯವಪಿಷ್ಟೇನ ಸ್ನೇಹವಿರ್ಯೇರಿತಂ ತತಃ || ಯಧಾಸ್ವಂ ಧೂಮಪಾನೇನ ಕಫಮಸ್ಯ ವಿಶೋಧಯೇತ್ | (ಸು. 706.) ಆ ಮೇಲೆ ಕಣ್ಣಿನ ಹೊರಮೂಲೆಯಲ್ಲಿ ದಂಡ ಕಡಿದು, ಸ್ನೇಹವನ್ನು ಹೊರಗೆ (ಪಾತ್ರ ಕೆ) ಸುರಿಸಿ, ಕಣ್ಣನ್ನು ತುಪ್ಪದಿಂದ ಕಲಸಿದ ಯವೆಗೋದಿ ಹಿಟ್ಟಿನಿಂದ ಶುದ್ಧ ಮಾಡಿ, ಸ್ನೇಹ ವೀರ್ಯದಿಂದುಂಟಾದ ಕಫವನ್ನು ಯುಕ್ತವಾದ (ಶಿರೋವಿರೇಚನಕರವಾದ) ಧೂಮಪಾನ ದಿಂದ ಹೋರಗೊಳಿಸಬೇಕು. 5. ಏಕಾಹಂ ವಾ ತ್ರಹಂ ವಾಪಿ ಪಂಚಾಹಂ ಚೇಷ್ಯತೇ ಪರಂ | ತರ್ಪಣಕ್ಕೆ ಕಾಲಾವಧಿ (ಸು. 706.) ಈ ತರ್ಪಣಕ್ರಮವನ್ನು ಒಂದು ದಿನ, ಅಥವಾ ಮೂರು ದಿನ, ಅಧವಾ ಪರಮಾವಧಿ ಐದು ದಿನ ನಡಿಸುವದು ಒಳ್ಳೇದು. ಷರಾ ಈ ತರ್ಪಣಕ್ರಮವನ್ನು ವಾತದೋಷದಲ್ಲಿ ಪ್ರತಿದಿನ, ಪಿತ್ತದಲ್ಲಿ ಮಧ್ಯ ಒಂದು ದಿನ ಬಿಟ್ಟು, ಕಫದಲ್ಲಿ ಯೂ ಸ್ವಸ್ಥ ಸ್ಥಿತಿಯಲ್ಲಿಯೂ ಮಧ್ಯ ಎರಡು ದಿನ ಬಿಟ್ಟು, ಈ ರೀತಿ ಕಣ್ಣಿಗೆ ತೃಪ್ತಿಯುಂಟಾಗುವ ವರೆಗೆ ನಡಿಸಬಹು ದಾಗಿ ವಾ *(ಪು 107 ) 6. ಸಾರ್ಥಕವಾದ ತರ್ಪಣದ ತರ್ಪಣೇ ತೃಪ್ತಿಲಿಂಗಾನಿ ನೇತ್ರಸೈಮಾನಿ ಲಕ್ಷಯೇತ್ | ದ ಸುಖಸ್ವಪ್ರಾವಬೋಧತ್ವಂ ವೈಶದ್ಯಂ ವರ್ಣಪಾಟವಂ || ಲಕ್ಷಣಗಳು ನಿರ್ವೃತಿರ್ವ್ಯಾಧಿವಿಧ್ವಂಸಃ ಕ್ರಿಯಾಲಾಘವಮೇವ ಚ | (ಸು. 706-07.) 58*