ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ XXV - 468 -

ಧೂಮದ ನಳಿ ಗಯ ವಿವರ

ತೋ ಮೂಲೇಂsಗುಷ್ಠ ಪರಿಣಾಹಂ ಧೂಮವರ್ತಿಪ್ರವೇಶಸ್ರೋತೋಂಗು ಲಾನ್ಯಷ್ಟಚತ್ವಾರಿಂಶತ್ ಪ್ರಾಯೋಗಿಕೇ | ದ್ವಾತ್ರಿಂಶತ್ ಸ್ನೇಹನೇ | ಚತುರ್ವಿಂಶತಿರ್ವೈರೇಚನೇ | ಷೋಡಶಾಂಗುಲಂ ಕಾಸಘ್ನೇ ವಾಮನೀಯೇ ಚ | ಏತೇSಪಿ ಕೋಲಾಸ್ದಿಮಾತ್ರಛಿದ್ರೇ ಭವತಃ | ವ್ರಣನೇತ್ರಮಷ್ಟಾಂಗುಲಂ ವ್ರಣಧೂಪನಾರ್ಧಂ ಕಲಾಯಪರಿಮಂಡಲಂ ಕುಲತ್ಥವಾಹಿಸ್ರೋ

ತ ಇತಿ | (ಸು. 592.) ವಸ್ತಿಯ ನಳಿಗೆಗೆ ಯಾವ ದ್ರವ್ಯಗಳು ಹೇಳಲ್ಪಟ್ಟವೋ, ಅವೇ ಧೂಮನಳಿಗೆಗೂ ಪ್ರಶಸ್ತವಾದವುಗಳಾಗಿರುತ್ತವೆ. ಆದರೆ ಧೂಮದ ನಳಿಗೆಯು ತುದಿಯಲ್ಲಿ ಕಿರಿಬೆರಳಷ್ಟು ತೋರ ಮತ್ತು ಕಲಾಯ (ಪುಟಾಣಿಕಡಲೆ) ಧಾನ್ಯದಷ್ಟು ಗೋಳೆ, ಮತ್ತು ಬುಡದಲ್ಲಿ ಹೆಬ್ಬೆಟ್ಟಿ ನಷ್ಟು ತೋರ ಮತ್ತು ಧೂಮದ ವರ್ತಿ ಹೊಗುವಷ್ಟು ಗೋಳೆ, ಸಹ ಉಳ್ಳದ್ದಾಗಿರಬೇಕು. ಅದರ ಉದ್ದವು ಪ್ರಾಯೋಗಿಕದಲ್ಲಿ ನಾಲ್ವತ್ತೆಂಟು ಅಂಗುಲ, ಸ್ನೇಹನದಲ್ಲಿ ಮೂವತ್ತೆರಡು ಅಂಗುಲ, ವೈರೇಚನದಲ್ಲಿ ಇಪ್ಪತ್ತನಾಲ್ಕು ಅಂಗುಲ, ವಾಮನೀಯದಲ್ಲಿ ಅಧವಾ ಕಾಸಘ್ನದಲ್ಲಿ ಹದಿನಾರು ಅಂಗುಲ, ಇರಬೇಕು. ಕಾಸಘ್ನ ಮತ್ತು ವಾಮನೀಯದ ನಳಿಗೆಗಳ ಛಿದ್ರವು ಬೊಗರಿಬೀಜದಷ್ಟು ಇರಬೇಕು. ವ್ರಣಗಳಿಗೆ ಧೂಪ ಕೊಡುವದಕ್ಕೆ ಉಪಯೋಗಿಸಲ್ಪಡುವ ವ್ರಣನಳಿಗೆಯು ಎಂಟು ಅಂಗುಲ ಉದ್ದವಾಗಿಯೂ, ಕಲಾಯಧಾನ್ಯದಷ್ಟು ತೋರವಾಗಿಯೂ, ಹುರುಳಿ ಹೋಗುವಷ್ಟು ಗೋಳೆಯುಳ್ಳದ್ದಾಗಿಯೂ ಇರತಕ್ಕದ್ದು.

ಷರಾ ವಾಮಸೀಯಕ್ಕೆ ನೇತ್ರದ ಉದ್ದ ಹತ್ತು ಅಂಗುಲವಿದ್ದರೆ ಸಾಕೆಂಬ ಮತಾಂತರವನ್ನು ಕೆಲವರು ಅವಲಂಬಿ ಸುತ್ತಾರೆ
ಧೂಮನಾಡೀ ಭವೇತ್ತತ್ರ ತ್ರಿಖಂಡಾ ಚ ತ್ರಿಪರ್ವಿಕಾ || ಭಾ. ಪ್ರ. (ಪು 226-27.) 

ಧೂಮದ ನಳಿಗೆಯಲ್ಲಿ ಮೂರು ಗಂಟುಗಳು ಮತ್ತು ಮೂರು ತುಂಡುಗಳು ಇರಬೇಕು.

  4.                       ಜಲೇ ಸ್ಥಿತಾಮಹೋರಾತ್ರಷೀ ದುಮದ ಭತ್ತಿ           ಕಾಂ ದ್ವಾದಶಾಂಗುಲಾಂ |

ಯನ್ನು ತಯಾರಿ ಪಿಷ್ಟೈರ್ಧೂಮೌಷಧೈರೇವಂ ಸುವ ಕ್ರಮ ಪಂಚಕೃತ್ವಂ ಪ್ರಲೇಪಯೇತ್ || ವ‌ರ್ತಿರಂಗುಷ್ಠ ವತ್ ಸ್ಥೂಲಾ ಯವಮಧ್ಯಾ ಯಧಾ ಭವೇತ್ | ಛಾಯಾಶುಷ್ಕಾಂ ವಿಗರ್ಭಾಂ ತಾಂ ಸ್ನೇಹಾಭ್ಯ‌ಕ್ತಾಂ ಯಧಾಯಧಂ || ಧೂಮನೇತ್ರಾರ್ಪಿತಾಂ ಪಾತುಮ‌ಗ್ನಿ ಪ್ಲುಷ್ಟಾಂ ಪ್ರಯೋಜಯೇತ್ | (ವಾ.100 )

ಹನ್ನೆರಡಂಗುಲ ಉದ್ದದ (ದರ್ಭೆಯ ದಂಟಿನ ಅಧವಾ ಬೇರಿನ) ಕಡ್ಡಿಯನ್ನು ನೀರಲ್ಲಿ ಒಂದು ಹಗಲೂ ರಾತ್ರಿ ನೆನೆಸಿಟ್ಟು, ಅನಂತರ ಅದಕ್ಕೆ ಹೊಗೆಯ ಔಷಧಗಳನ್ನು ಅರೆದು ತಯಾರಿಸಿದ ಹಿಟ್ಟನ್ನು ಐದು ಸರ್ತಿ ಲೇಪಿಸಿ, ಅಂಗುಷ್ಟದಷ್ಟು ತೋರವಾಗಿ ಮಧ್ಯದಲ್ಲಿ ಯವೆ ಯಾಕಾರವಾಗಿ ಇರುವ ಬತ್ತಿಯನ್ನು ಮಾಡಿ, ನೆಳಲಲ್ಲಿ ಒಣಗಿಸಿ, ಒಳಗಿನ ಕಡ್ಡಿಯನ್ನು ತೆಗೆದುಬಿಟ್ಟು, ಅಲ್ಪಸ್ವಲ್ಪ ಸ್ನೇಹವನ್ನು ಹಚ್ಚಿ, ನಳಿಗೆಯೊಳಗೆ ಹೊಗಿಸಿ, ತುದಿಗೆ ಬೆಂಕಿ ಹಚ್ಚಿ, ಹೊಗೆಯನ್ನು ಕುಡಿಯಲಿಕ್ಕೆ ಉಪಯೋಗಿಸತಕ್ಕದ್ದಾಗಿರುತ್ತದೆ.

ಷರಾ ಕಬ್ಕಕರ್ಷ ಪ್ರಮಾಣ ಎಂತ ತಾ (ಪು 162 )