ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಉಪೋದ್ಘಾತ ಇನ್ಮೊಬ್ಬ ರೋಗಿಗೆ ಆಗಾಗ್ಗೆ ಮೂತ್ರ ಸಿಕ್ಕಿಕೊಂಡು,ಪೇಚಾಟವಾಗುತ್ತಿತ್ತು. ಅವರು ಉಪದ್ರವ ಉಂಟಾದ ಕೂಡಲೇ, ಆಸ್ಪತ್ರೆಗೆ ಹೋಗಿ, ಮೂತ್ರದ್ವಾರದೊಳಗೆ ನಳಿಗೆಯನ್ನು ಹೊಗಿಸಿ, ಮೂತ್ರವನ್ನು ಹೊರಪಡಿಸಿಕೊಳ್ಳುತ್ತಾ ಇದ್ದರು. ಅವರು, ತನಗೆ ಅಶ್ಮರೀ ರೋಗ(ಕಲ್ಲಿನ ವ್ಯಾಧಿ) ಇರಬಹುದೋ ಎಂತ ಸಂದೇಹಪಟ್ಟು ಎರಡು ಆಸ್ಪತ್ರೆಗಳಲ್ಲಿ ವಿಚಾರಿಸಿದಾಗ್ಗೂ, ಅವರಿಗೆ ಆ ರೋಗವಿಲ್ಲ ಅಂದರಂತೆ. ಸುಮಾರು ಎರಡು ವರ್ಷ ಈ ರೀತಿ ಪೇಚಾಟ ಪಟ್ಟನಂತರ, ಅವರು ನಮ್ಮ ಹತ್ತಿರ ಬಂದು ಕೇಳಿದ್ದಲ್ಲಿ, ಅವರ ರೋಗ ಅಶ್ಮರಿಯೇ ಆಗಿರಬೇಕೆಂತ ಹೇಳಿ, ಆಯುರ್ವೇದಾನುಸಾರವಾಗಿ ಚಿಕಿತ್ಸೆಯನ್ನಾರಂಭಿಸಿದ 4ನಯೋ 5ನೆಯೋ ದಿನದಲ್ಲಿ ಒಂದು ಭದ್ರಮುಷ್ಟಿಯ ಹಾಗಿನ ಕಲ್ಲು ಮೂತ್ರದ್ವಾರದಿಂದ ಹೊರಗೆ ಬಂತು ಅದಾಗಿ ಈಗ ಸುಮಾರು ಏಳು ವರ್ಷಗಳು ಕಳೆದವು, ತನ್ಮಧ್ಯ ಆ ಸಂಕಷ್ಟ ಪುನಃ ಅವರಿಗೆ ಉಂಟಾಗಲಿಲ್ಲ ಇದೇ ರೀತಿ ಪಾಶ್ಚಾತ್ಯಚಿಕಿತ್ಸೆ ನಿಷ್ಫಲವಾದ್ದನ್ನು ಕಂಡ ಮೇಲೆ, ಆಯುರ್ವೇದಾನುಸಾರವಾದ ಚಿಕಿತ್ಸೆಯನ್ನು ಮಾಡಿದರಿಂದ ಸೌಖ್ಯಪಡದ ರೋಗಿಗಳ ಇನ್ನೂ ಅನೇಕ ದೃಷ್ಟಾಂತಗಳನ್ನು ಕೊಡಬಹುದು ಆದರೆ ನಮ್ಮ ವಾಚಕರೊಳಗೆ ಅನೇಕರಿಗೆ ಅಂಧಾ ದೃಷ್ಟಾಂತಗಳು ಅವರವರ ಅನುಭವಸಿದ್ಧವಾಗಿಯೇ ನೆನಪಿಗೆ ಬರಬಹುದಾದದ್ದರಿಂದ, ಈ ಪ್ರಮೇಯದಲ್ಲಿ ಇನ್ನು ಹೆಚ್ಚಿನ ವಿಸ್ತಾರವು ಅವಶ್ಯಕವಲ್ಲ. ಸುಮಾರು 25 ವರ್ಷಗಳ ಹಿಂದೆ ಈ ಭರತಖಂಡದಲ್ಲಿ ಪ್ಲೇಗೆಂಬ ರೋಗವು ಆರಂಭವಾಗಿ ಒಹು ವರ್ಷಗಳ ಪರ್ಯಂತ ಈ ಪಾಶ್ಚಾತ್ಯವೈದ್ಯರ ಉಪದೇಶವನ್ನನುಸರಿಸಿ, ಸರಕಾರದವರು ವಿಧಿಸಿದ ನಿವಾರಣೋಪಾಯ ಕ್ರಮಗಳ ದೆಸಯಿಂದ ಭಾರತೀಯರು ಸಿರರ್ಧಕವಾಗಿ ಪಟ್ಟ ಒಹು ಧವಾದ ಸಂಕಷ್ಟಗಳು ಸರ್ವರಿಗೂ ವಿದಿತವಾಗಿವೆ ಆ ರೋಗವು ಅವರಿಗೆ ಹೊಸತಾಗಿರಲಿಲ್ಲ 1665ನೇ ಇಸವಿಯಲ್ಲಿ ಒಂದು ಲಂಡನ್ಪಟ್ಟದಲ್ಲಿಯೇ 70,000 ಜನರು ಆ ರೋಗದಿಂದ ಮೃತವಾಗಿದ್ದರು ಎಂತ ಅವರ ಪುಸ್ತಕಗಳೇ ಹೇಳುತ್ತವೆ. ಕೆಲವು ವರ್ಷಗಳ ಹಿಂದೆ ತಗುಣೆಗಳಿಂದ ಹೆಚ್ಚಾಗಿ ಹಬ್ಬಿಸಲ್ಪಡುವ ಒಂದು ಜಾತಿ ಜೀವಬೀಜದಿಂದ 'ಕಾಲಾಹಚಾರ' ಎಂಬ ಕೆಟ್ಟ ವ್ಯಾಧಿಯುಂಟಾಗುತ್ತದೆಂತ ಗದ್ದಲವನ್ನೆಬ್ಬಿಸಿ, ಜನರಿಗೆ ಭಯಪಡಿಸಿದರು. ಮತ್ತೊಂದು ಸಮಯದಲ್ಲಿ ತೊಳಸಿ ಸ್ವಚ್ಛಮಾಡಲ್ಪಟ್ಟ ಅಕ್ಕಿಯ ಅನ್ನವನ್ನುಂಡರೆ 'ಬೆರಿಬೆರಿ' ಎಂಬ ಮಹಾವ್ಯಾಧಿ ಉಂಟಾಗುತ್ತದೆಂತ ಹೆದರಿಸಿದರು. ಅನಂತರ ಆ ದೋಷವು ಮಿಲ್(ಯಂತ್ರ)ನಲ್ಲಿ ತಯಾರಿಸಲ್ಪಟ್ಟ ಅಕ್ಕಿಯಲ್ಲಿರುವದಲ್ಲದೆ, ಊರಲ್ಲಿ ಈ ಮೊದಲಿನಂತೆ ತಯಾರಿಸಲ್ಪಡುವ ಅಕ್ಕಿಯಲ್ಲಿಲ್ಲ ಎಂತ ನಿಶಯವಾಗಿದೆಯಂತೆ. ಇತ್ತಲಾಗಿ ಒಂದೆರಡು ವರ್ಷಗಳಿಂದ ಭಾರತೀಯರೊಳಗೆ 88ರಿಂದ 98ರ ವರೆಗಿನ ಶತಾಂಶಗಳ ಜನರ ಹೊಟ್ಟೆಯಲ್ಲಿ ಜಾಡ್ಯತನ, ಪಾಂಡು, ಶೋಭಫೆ, ಕೆಮ್ಮು ಇತ್ಯಾದಿ ಅನೇಕ ರೋಗಗಳನ್ನುಂಟುಮಾಡತಕ್ಕ ಹೂಕ್ವರ್ಮ' ಎಂಬ ಹುಳವು ಕಾಣುತ್ತದೆಂತ ಹೇಳತೊಡಗಿದ್ದಾರೆ ಈ ದಕ್ಷಿಣಕನ್ನಡ ಜಿಲ್ಲೆಯಲ್ಲಿ 100 ಮಂದಿಗಳೊಳಗೆ 98 ಮಂದಿಗಳಲ್ಲಿ ಆ ಹುಳ ಉಂಟಂತೆ. ಈ ಹುಳ ಎಲ್ಲಿಂದ, ಯಾವಾಗ್ಗೆ, ಮತ್ತು ಹ್ಯಾಗೆ ಬಂತೆಂತ ನಿಶ್ಚಯವಾಗಬೇಕಷ್ಟೆ. ಆದರೆ ಅದು ದೀರ್ಘಕಾಲದಿಂದ ಇದ್ದಿರಬೇಕೆಂಬ ಅಭಿಪ್ರಾಯವಿದೆ. ಈ ಮತಗಳೆಲ್ಲಾ ಎಷ್ಟರ ಮಟ್ಟಿಗೆ ನಿಜವಾಗಿರಬಹುದೆಂಬದನ್ನು ಆಲೋಚಿ ಸುವ ಜನರು ಈ ಭರತಖಂಡವು ನಿರ್ಜನವಾಗುವದಕ್ಕೆ ಬದಲಾಗಿ ಅದರ ಜನಸಂಖ್ಯೆಯು ವರ್ಷದಿಂದ ವರ್ಷಕ್ಕೆ ಏರುತ್ತಲೇ ಬರುತ್ತದೆಂಬ ತಥ್ಯವನ್ನು ನೆನಪಿನಲ್ಲಿಟ್ಟರೆ ಸಾಕು.

                   8 A