ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ || -

                     -   6 -

ಎದೆಯಲ್ಲಿ ಕಫಾಶಯ, ಅದರ ಕೆಳಗೆ ಆಮಾಶಯ, ಹೊಕ್ಕುಳ ಮೇಲ್ಗಡೆ ಮಧ್ಯಭಾಗ ದಲ್ಲಿ ‌ಅಗ್ಯ್ನಶಯ ಅದರ ಮೇಲೆ ತಿಲ, ಅದರ ಕೆಳಗೆ ವಾತಾಶಯ, ಅದರ ಕೆಳಗೆ ಮಲಾಶಯ, ಅದರ ಕೆಳಗೆ ಮೂತ್ರಾಶಯವಾದ ವಸ್ತಿ.

ಸ ರಾ ಪಕ್ವಾಶಯವೆಂದರೂ ಮಲಾಶಯವೆಂದರೂ ಒಂದೇ (ಧಾ ಪ್ರ) ತಿಲ ಎಂದರೂ ಕ್ಲೋಮ ಎಂದರೂ ಒ೦ದೇ 'ಮಧ್ಯ' ಎಂಬಲ್ಲಿ 'ವಾಮ' (ಅಂದರೆ ಎಡ) ಎಂಬ ಪಾರ ಕಾಣುತ್ತದೆ ಅದು ಸರಿಯಲ್ಲ ಧಾವ ಪ್ರಕಾಶದ ಪ್ರಕಾರ ಎದೆಯಲ್ಲಿ ರಕ್ತಾಶಯ, ಅದರ ಕೆಳಗೆ ಕಫಾಶಯ, ಅದರ ಕೆಳಗೆ (ನಾಭಿಗೂ ಮೊಲೆಗಳಿಗು ಮಧ್ಯ) ಆಮಾಶಯ (stomach), ಆಮಾಶಯಕ್ಕೂ ಪಕ್ವಾಶಯಕ್ಕು ಮಧ್ಯ ಪಿತ್ತಾಶಯ (gall bladder), ನಾಭಿಯ ಮೇಲ್ಗದೆ ಮಧ್ಯಭಾಗದಲ್ಲಿ ಅಗ್ಯಾಶಯ (pancreas), ನಾಭಿಯ ಕೆಳಗೆ ವಾತಾಶಯ, ಅದರ ಕೆಳಗೆ ಪಕ್ವಾಶಯ ಇದೇ ಮಲಾಶಯ ಮತ್ತು ಅದರ ಕೆಳಗೆ ಮೂತ್ರಾಶಯ (bladder) ವಾಗ್ಬಟನು ರಕ್ತಾಶಯ ಬಿಟ್ಟು ಉಳಿದ ಕಥ, ಆಮ, ಪಿತ್ತ ವಾತ, ಮಲ, ಮೂತ್ರ ಈ ಆಶಯಗಳು ಯಧುಕ್ರಮ, ಹಿಂದಿನದಕ್ಕೆ ಮುಂದಿನದು ಕೆಳಗಾಗಿರುತ್ತದಂತ ಹೇಳಿದ್ದಾನೆ

8. ನಾಭಿ ಸೃಷ್ಯ ಕಟೀ ಮುಷ್ಕ ಗುದ ವಬ್ಕ್ಷಣ ಶೇಫಸಾಂ |

       ಏಕದ್ವಾರಸ್ತನುತ್ವಕ್ಕೋ ಮಧ್ಯೇ ವಸ್ತಿರಧೋಮುಖಃ |
       ಅಲಾಬ್ವಾ ಇವ ರೂಪೇಣ ಸಿರಾಸ್ನಾಯುಪರಿಗ್ರಹಃ | 
       ವಸ್ತಿರ್ವಸ್ತಿಶಿರಶ್ಯೆವ ಪೌರುಷಂ ವೃಷಣೌ ಗುದಂ |
       ಏಕಸಂಬಂಧಿನೋಹ್ಯೇತೇ ಗುದಾಸ್ಥಿವಿವರಸ್ಥಿತಾಃ ||
     . ಮೂತ್ರಾಶಯೋ ಮಲಾಧಾರಃ ಪ್ರಾಣಾಯತನಮುತ್ತಮಂ         ಪಕ್ವಾಶಯಗತಾಸ್ತತ್ರ ನಡ್ಯೋ ಮೂತ್ರವಹಾಸ್ತು ಯಾ|
ತರ್ಪಯಂತಿ ಸದಾ ಮೂತ್ರಂ ಸರಿತಃ ಸಾಗರಂ ಯಧಾ | ಸೂಕ್ಷತ್ರಾನ್ನೋಪಲಭ್ಯಂತೇ ಮುಖಾನ್ಯಾಸಾಂ ಸಹಸ್ರಶಃ ||
ನಾಡೀಭಿರುಪನೀತಸ್ಯ ಮೂತ್ರಸ್ಯಾಮಾಶಯಾಂತರಾತ್ |
ಜಾಗ್ರತಃ ಸ್ವಪತಶ್ಯೆವ ಸ ನಿಸ್ಯಂದೇನ ಪೂರೃತೇ |
ಆಮುಖಾತ್ಸಲಿಲೇನ್ಯಸ್ತಃ ಪಾಶ್ವೇಭ್ಯಃ ಪೊರೈತೇ ನಮಃ |

ಘಟೋ ಯಥಾ ತಧಾ ವಿದ್ದಿವಸ್ತಿರ್ಮತ್ರೇಣ ಪೂರತೇ || (ಸು 257.)

ಮೂತ್ರಾಶಯವು, ಹೊಕ್ಕಳು, ಬೆನ್ನು, ಸೂಂಟ ಅಂಡ, ಗುದ ಸೊಂಟದ ಪಕ್ಕ, (ತೊಡೆಗೂ ಅಂಡಿಗೂ ಸಂದು), ಮೇಢ್ಯ, ಇವುಗಳ ಮಧ್ಯದಲ್ಲಿ ಮುಖ ಕೆಳಗಾಗಿ ಇರುತ್ತದೆ ಅದಕ್ಕೆ ಒಂದೇ ದ್ವಾರ, ಮತ್ತು ಅದರ ಚರ್ಮ ಅಧವಾ ಹೊದಿಕೆಯು ತೆಳ್ಳಗೆ. ಅದು ರೂಪದಲ್ಲಿ ಸೋರೆಕಾಯಿಯ ಹಾಗೆ ಇದ್ದು ಸಿರಾನಾಳಗಳಿಂದಲೂ, ನರಗಳಿಂದಲೂ ಸುತ್ತಲ್ಪಟ್ಟಿರುತ್ತದೆ. ಮೂತ್ರಾಶಯ, ಮೂತ್ರಾಶಯದ ತಲೆ ಮೇಡ್ರ, ಅಂಡಗಳು, ಗುದ, ಇವುಗುದದೆಲುಬಿನ ಹೂಂಡ( ಕೂಪ) ದಲ್ಲಿ ನಿಂತಿರುವದರಿಂದ, ಒಂದೇ ಸಂಬಂಧವುಳ್ಳವು. ಮೂತ್ರಾಶಯವು ಮಲಾ ಧಾರವಾಗಿ, ಮುಖ್ಯವಾದ ಪ್ರಾಣದ ಮನೆಯಾಗಿರುತ್ತದೆ ನದಿಗಳು ಸಾಗರವನ್ನು ಹ್ಯಾಗೆ ತೃಪ್ತಿಗೊಳಿಸುತ್ತವೋ, ಹಾಗೆ ಮೂತ್ರವಾಹಿಯಾದ ನಾಳಗಳು ಪಕ್ವಾಶಯವನ್ನು ಸೇರಿ, ಮೂತ್ರವನ್ನು ಸದಾಕಾಲ ಸುರಿಯುತ್ತಾ ಇರುತ್ತವೆ. ಸಹಸ್ರ ಕಟ್ಲೆಯಲ್ಲಿರುವ ಈ ನಾಳಗಳ