ವಿಷಯಕ್ಕೆ ಹೋಗು

ಪುಟ:ಇಂದ್ರವಜ್ರ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

5

ನಿಗೆ ಯಾವುದೂ ಗೊತ್ತಾಗಲಿಲ್ಲ. ಅವನ ಮನಸ್ಸು ಮಾತ್ರ ತನ್ನ ತಾಯಿಯದುರವಸ್ಥೆಯನ್ನೂ, ತನ್ನ ಚಿಕ್ಕಪ್ಪನ ಅನ್ಯಾಯವನ್ನೂ ಕುರಿತ ಯೋಚಿಸುತಲಿತ್ತು. ಹಾಗೆ ಯೋಚಿಸುತ್ತಾ, ತನ್ನ ದುರ್ದೈವವನ್ನು ಬೈಯುತ್ತಾ ಇರಲು, ಅವನ ಕಣ್ಣಿಗೆ ನಿದ್ದೆ ಹತ್ತಿತು. ಸ್ವಲ್ಪ ಹೊತ್ತಿನ ಮೇಲೆ ಅವನು ನಿದ್ದೆಯಲ್ಲಿಯೇ ಇರುವಾಗ, ಯಾರೋ ಬಂದು ಬಲುವಿಶ್ವಾಸದಿಂದ ಅವನನ್ನೆತ್ತಿ ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡು, ಬಲುಸವಿಯಾದ ತಿಂಡಿಯನ್ನವನಿಗೆ ಕೊಟ್ಟರು. ಅದನ್ನವನು ತಿಂದೊಡನೆಯೆ ಅವನ ಹಸಿವು ಬಾಯಾರಿಕೆಗಳೆಲ್ಲವೂ ಮಾಯವಾದುವು. ಹಾಗೆಯೇ ಯಾರೋ ಅವನ ಕೈಮೈಗಗಳನ್ನೂ ಕಣ್ಣು ತಲೆಗಳನ್ನ ಸವರಲು ಅವನು ನಿರಾಯಾಸನಾದನು, ಅವನಿಗೆ ಅದು ಯಾರೆಂಬುದೂ ತಿಳಿಯಲಿಲ್ಲ. ಕಣ್ಣ ರೆಪ್ಪೆಗಳು ಗಟ್ಟಿಯಾಗಿ ಮುಚ್ಚಿಕೊಂಡಿದ್ದ ಕಾರಣ ಅವನು ಕಣ್ಣೆರೆಯಲಾಗಲಿಲ್ಲ. ಅದೆಲ್ಲವೂ ಕನಸೆಂದು ಅವನು ತಿಳಿದುಕೊಂಡನು.

ಕೆಲವು ನಿಮಿಷಗಳ ಮೇಲೆ ಅವನು ಮೇಲಕ್ಕೇಳಲು ಯತ್ನಿಸಿದನು. ಆಗ ಅವನ ಕೈಗೆ ಏನೋಸಿಕ್ಕಿತು. ಅದನ್ನವನು ಹಾಗೆಯೇ ಕಣ್ಣುಗಳ ಬಳಿಗೆ ತೆಗೆದು ಕೊಂಡು ಹೋಗಲು ಅವನಿಗಿರಿಗೆ ದೊಡ್ಡ ಬೆಳಕು ಬಂದ ಹಾಗಾಯಿತು, ಅವನು ಕೈಯಲ್ಲಿದ್ದುದನ್ನು ಚೆನ್ನಾಗಿ ಸವರಿನೋಡಿ, ಅದಾವುದೋ ಒಡವೆಯಾಗಿರಬಹುದೆಂದು ಊಹಿಸಿದನು. ಹಾಗೆ ಊಹಿಸಿ, "ನನಗಿದು