10
ಶವು ಅನೇಕ ರಾಜಾಧಿರಾಜರುಗಳ ಸಾಮ್ರಾಜ್ಯವೈ ಭವಕ್ಕೂ, ಅನೇಕ ಕವಿಪುಂಗರವರ ವರ್ಣನಾ ವಿಶೇಷಕ್ಕೂ ಪಾತ್ರವಾಗಿ, ಹಿಂದೂ ಜನರಿಗೆ ತನ್ನ ಹಿಂದಿನ ಉನ್ನತ ಸ್ಥಿತಿಯನ್ನು ಜ್ಞಾಪಕಪಡಿಸುತ್ತಿರುವುದು.
ಹಾ ಉಜ್ಜಯನಿ! ನಿನ್ನ ಹೆಸರನ್ನು ಹೇಳಿದೊಡ ನೆಯೆ ಎಷ್ಟೊಂದು ಅಂಶಗಳು ಸ್ಮತಿಗೆ ಬರುತ್ತಲಿವೆ! ಪೂರ್ವದಲ್ಲಿ ನಿನ್ನನ್ನು ಅವಂತಿಯೆಂದು ಕರೆಯುತಲಿ ದ್ದರು ನೀವಾಗ ಭರತವರ್ಷದ ಎಳು ಪುಣ್ಯ ಸತ್ತನ ಗಳಲ್ಲಿ ಒಂದಾಗಿದ್ದೆ, ಅಪಾರವಾದ ವಿದ್ಯೆಯ ಐಶ್ವರ್ಯವೂ ನಿನ್ನನ್ನೇ ಆಶ್ರಯಿಸಿದ್ದುವು. ಈಚೆಗೆ ಬೌದ್ಧ ಚಕ್ರವರ್ತಿಯಾದ ಅಶೋಕನ ಕಾಲದಲ್ಲಿ ನೀನುಮತ್ತಷ್ಟು ಪ್ರಬಲಳಾಗಿ,ಆತನ ರಾಜ್ಯದಲ್ಲಿ ಮುಖ್ಯನಗರ ವಾ ಗಿದ್ದೆ, ತನ್ನ ಒಂದಾನೊಂದು ವಿಜಯದ ಜ್ಞಾಪಕಾರ್ಥ ವಾಗಿಯೇ ಆ ರಾಜರ್ಸಿಯು ನಿನ್ನನ್ನ "ಉಜ್ಜಯಿನಿ” ಎಂದು ಕರೆದಿರಬಹುದು.
ಆತನಿಂದೀಚೆಗೆ ನಿನ್ನ ಪ್ರಶಸ್ತಿಯು ಇನ್ನೂ ಹೆಚ್ಚಿತು. ನೀನುಮಾಲವದೇಶದ ರಾಜಧಾನಿಯಾಗಿ, ಶಾಶ್ವತಕೀ ರ್ತಿಯಾದ ಭರಥಹರಿಯ ಮಹಿಮೆಯನ್ನು ಕಣ್ಣಾರ ನೋಡಿದೆ. ಆತನೆಂತಹ ಮಹಾರಾಜ! ಎಂತಹ ಮಹಾ ಪಂಡಿತ! ಎಂತಹ ಮಹಾಕವಿ!ಎಂತಹ ಮಹಾಯೋಗಿ! ಅಂತಹ ಮತ್ತೊಬ್ಬ ವ್ಯಕ್ತಿಯನ್ನು ವಿಧಿಯು ಇದು ವರೆಗೂ ಸೃಷ್ಟಿಸಿಲ್ಲ: ಆತನ ಸುಭಾಷಿತವನ್ನು ಓದ ದವರೂ ಕೇಳದವರೂ ನಿರ್ಭಾಗ್ಯರೇಸರಿ! ಆಮಾರಾ