ಪುಟ:ಇಂದ್ರವಜ್ರ.djvu/೩೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


29 ಸಕ್ಕರಾರು? 1'ಎಂದು ವಿನಯದಿಂದ ಬೇಡಿದನು. ವಿಕ್ರಮನು ಆತನಿಗೆ ಒಂದು' ಗ್ರಾಮವನ್ನೇ ದಾನವಾಗಿಕೊಟ್ಟು, ಆತನ ವಿವಾಹಕ್ಕೂ ಸುಖಜೀವನಕ ತಕ್ಕ ಅನುಕಾಣ್ಯಗಳನ್ನು ಒದಗಿಸಿಕೊಟ್ಟನು. ಇಂತಹ ಕಾರ್ಯಗಳನ್ನು ತಾವೆಷ್ಟು ಮಾಡಿರುವಿರಿ ? 1) ಭೋಜನು ಏನೂ ಹೇಳಲಿಲ್ಲ. ಏಳನೆಯ ಸಲ ಭಂಜಿಕೆಯು ನುಡಿದ ವೃತ್ತಾಂ ತವೇನೆಂದರೆ: 2 ಪಶ್ಚಿಮ ಸಮುದ್ರದಲ್ಲೊ೦ದು ದೀಪವುಂಟು, ಅದರ ಬ್ಲೊಂದು ಪರ್ವತದಮೇಲೆ ಭುವನೆ'೬ರಿ ದೇವಿಯ ಆಲಯ ವುಂಟು ಪೂರ್ವಕಾಲದಲ್ಲಿ, ಅದರಲ್ಲಿನ ದೇವತಾ ವಿಗ್ರಹದ ಪಕ್ಕ ದಳ್ಳಿ, ತಲೆಯಿಲ್ಲದ ನಿದೇಹ ವೊಂದೂ ಪುರುಷ ದೇಹವೊಂದೂ ಇದ್ದುವು. ಅಲ್ಲಿ ಗೋಡೆಯಮೇಲೆ { ಪರೋಪಕಾರಿಯಾದ ಮಹಾಪುರುಷನು ತನ್ನ ಕೊರಳ ರಕ್ತದಿಂದ ಇದೇವಿಯನ್ನಾರ ಧಿಸಿದರೆ ಈ ಶರೀರಗಳು ಸಜೀವವಾಗುವುವು' ಎಂದು ಬರೆಯ ಲ್ಪಟ್ಟಿತ್ತು, ಈ ಸಂಗತಿಯನ್ನು ವಿಕ್ರಮಾದಿತ್ಯನು ಹೇಗೆ ಕಳ, ಆದೇವತಾಲಯವನ್ನು ಸೇರಿ, ದೇವತೆಗೆ ನಮಸ್ಕರಿಸಿ ರಕ್ತಕ್ಕೋಸ್ಕರ ಖಡ್ಗವನ್ನು ತನ್ನ ಕಂಠದೊಳಕ್ಕೆ ಹೊಗಿಸಿದನು. ಕೂಡಲೆ ದೇವಿಯು ಪ್ರಸನ್ನ ಛಾಗಿ, ಆಮುಂಡಗಳಿಗೆ ತಲೆಯನ್ನೂ ಜೀವವನ್ನೂ ಕೊಟ್ಟು, ಅವರನ್ನು ತಮ್ಮ ರಾಜ್ಯಕ್ಕೆ ಬೀಳೊ ಟ್ಟು, ವಿಕ್ರಮನನ್ನೂ ಆಶೀರ್ವದಿಸಿದಳು. ವಿಕ್ರಮನ ಈ ನಾ ಹಸಪರೋಪಕಾರಗಳಿಗೆ ಸಮವಾದ ಗುಣಗಳು ತಮ್ಮ ಈಾವುವು ? ? ಭೋಜನು ಮೂಕನಂತಿದ್ದನು.