ವಿಷಯಕ್ಕೆ ಹೋಗು

ಪುಟ:ಐನ್‌ಸ್ಟೀನ್ ಬಾಳಿದರಿಲ್ಲಿ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

X ಐನ್‌ಸ್ಟೈನ್ ಬಾಳಿದರಿಲ್ಲಿ

ತಿತ್ತು. ಅದು ಮಹಾಪ್ರಶ್ನೆಗಳನ್ನು ಮಾತ್ರ ಕೇಳಬಲ್ಲದ್ದಾಗಿತ್ತು. ಚಿಲ್ಲರೆ ಸಂಗತಿಗಳ ಬಗ್ಗೆ ಆಸಕ್ತಿವಹಿಸುವುದು, ಆಸಕ್ತಿ ಇಲ್ಲದ್ದನ್ನು ಅಧ್ಯಯನ ಮಾಡುವುದು ಅವರಿಗೆ ಸುತರಾಂ ಅಸಾಧ್ಯವಾಗಿತ್ತು. ಈ ವಿಷಯದಲ್ಲಿ ಐನ್‌ಸ್ಟೈನರು ರವೀಂದ್ರನಾಥ ಠಾಕೂರರಿಗೆ ಹೆಚ್ಚು ಹತ್ತಿರದವರೇನೋ. ಠಾಕೂರರಿಗೆ ಹೈಸ್ಕೂಲ್ ಗಣಿತ ಕೂಡ ಹತ್ತದೆ ಅವರು ಮೆಟ್ರಿಕ್ ಕಾಣಲೇ ಇಲ್ಲ. ಇಬ್ಬರೂ ಒಲ್ಲದ್ದನ್ನು ಕಲಿಯಬೇಕೆಂಬುದನ್ನು ದಬ್ಬಾಳಿಕೆಯೆಂದೇ ಭಾವಿಸುವವರು ಮತ್ತು ಯಾವ ವಿಧದ ದಬ್ಬಾಳಿಕೆಗೂ ಸೊಪ್ಪು ಹಾಕುವವರಲ್ಲ.

ಐನ್‌ಸ್ಟೈನರು ಕೇಳಿದ ಮಹಾಪ್ರಶ್ನೆಗಳು ಮತ್ತು ಪಡೆದ ಮಹಾಉತ್ತರಗಳು ಭೌತಶಾಸ್ತ್ರ ಮತ್ತು ವಿಶ್ವಸೃಷ್ಟಿಶಾಸ್ತ್ರದ ಅನೇಕ ಮೂಲ ಕಲ್ಪನೆಗಳನ್ನೇ ಬದಲು ಮಾಡಿದುವು. ಪ್ರಾರಂಭದಲ್ಲಿ ಅವು ಬಲ್ಲವರಿಗೂ ಅತ್ಯಂತ ಅಸಂಭವವೆನ್ನಿಸುವಷ್ಟು ವಿಚಿತ್ರವಾಗಿ ಕಂಡಿದ್ದು ವು. ಕಾಲವೆಂಬುದು ವಿಶ್ವದ ಚತುರ್ಥ ಆಯಾಮ, ಪ್ರಕಾಶಕ್ಕೆ ದ್ರವ್ಯರಾಶಿ ಇದೆ, ಬೆಳಕು ವಕ್ರಪಥದಲ್ಲಿ ಸಾಗುತ್ತದೆ, ದೇಶ ಬಾಗಿದೆ, ವಿಶ್ವ ಅನಂತವಲ್ಲ ಆದರೆ ಎಲ್ಲೆ ಇಲ್ಲದ್ದು, ದ್ರವ್ಯ ಮತ್ತು ಶಕ್ತಿ ಮೂಲತಃ ಒಂದೇ, ದ್ರವ್ಯನಾಶದಿಂದ ಶಕ್ತಿ ಹುಟ್ಟುತ್ತದೆ, ವೇಗವೃದ್ಧಿಯೊಡನೆ ಕಾಲ ಸಂಕುಚಿತವಾಗುತ್ತದೆ, ಇತ್ಯಾದಿಗಳು, ಅನಾದಿಯಿಂದ ಮನುಷ್ಯನಿಗೆ ಇಂದ್ರಿಯಗಳ, ಮತ್ತು ಇಂದ್ರಿಯಗಳ ವಿಸ್ತರಣೆಗಳಾದ ಉಪಕರಣಗಳ ಮೂಲಕ ಬಂದ ಅನುಭವಕ್ಕೆ ವಿರುದ್ಧವೆಂಬಂತೆ ಕಂಡುಬಂದರೂ ಕಾಲಾಂತರದಲ್ಲಿ ಅವರ ಕಲ್ಪನೆಗಳಲ್ಲಿ ಹೆಚ್ಚಿನವು ಪ್ರತ್ಯಕ್ಷ ಮತ್ತು ಪ್ರಾಯೋಗಿಕ ಪರೀಕ್ಷಣೆಗಳಲ್ಲಿ ತೇರ್ಗಡೆ ಹೊಂದಿ, ಕೇವಲ ಬುದ್ದಿ, ಕಾಗದ, ಪೆನ್ಸಿಲುಗಳ ಬಲದಿಂದ ಅವರು ಸೃಷ್ಟಿಸಿದ ಸಿದ್ದಾಂತ ಸೌಧಗಳು ಎಣೆಯಿಲ್ಲದ ಆಶ್ಚರ್ಯಕ್ಕೆ ಪಕ್ಕಾಗಿವೆ. ಅವರ ಕೆಲ ಸಿದ್ಧಾಂತಗಳು ಕೇವಲ ವಿಜ್ಞಾನಿಗಳ ಬುದ್ಧಿಯನ್ನು ಕೆಣಕಿ ಹೊಸ ಹಾದಿಗಳ ಅನ್ವೇಷಣೆಗೆ ಪ್ರೇರಣೆ ಕೊಟ್ಟರೂ ಸಾಮಾನ್ಯ ಮನುಷ್ಯನಿಗೆ ತಲೆಬುಡ ಆಗದ ಕೂಟ ಪ್ರಶ್ನೆಗಳಾಗಿ ಮಾತ್ರ ಕಾಣಿಸುತ್ತಿದ್ದರೆ, ಕೆಲ ಸಿದ್ಧಾಂತಗಳು ಆಗಲೇ ಮಾನವ ಕುಲದ ಹಣೆಬರಹವನ್ನೇ ತಿದ್ದಿ ಬರೆಯುವಂಥ ಪರಿಣಾಮಗಳನ್ನು ಮಾಡಿ ಸಾಮಾನ್ಯರ ಬದುಕಿನಲ್ಲಿ ಭಾಷೆಯಲ್ಲಿ ಆಗಲೇ ತಮ್ಮ ಸತ್ಯ ಪ್ರದರ್ಶಿಸಿವೆ. ಅವರ ಗುರುತ್ವಾಕರ್ಷಣ ತರಂಗ ಕಲ್ಪನೆಯಂಥವು ಇನ್ನೂ ಅಸಂದಿಗ್ಧ ಪ್ರಾಯೋಗಿಕ ಪ್ರಮಾಣಗಳನ್ನು ಎದುರು ನೋಡುತ್ತಿವೆ. ಇಂಥ ಒಬ್ಬ ಮಹಾಮತಿಯ ವೈಜ್ಞಾನಿಕ ಸಾಧನೆಗಳೇ ಅದ್ಭುತಗಳ ಸರಪಳಿಯಂತಿದ್ದರೆ, ಅವರ ಬದುಕು, ಅವರ ವ್ಯಕ್ತಿತ್ವ ತಮ್ಮ ನಂಬಲಾರದಂಥ ಸರಳತನದಿಂದ ನಮ್ಮ ಮನಸ್ಸನ್ನು ಸೆರೆಹಿಡಿ ಯುತ್ತವೆ. ಈ ಪುಸ್ತಕದಲ್ಲಿ ಅವರ ಅಷ್ಟ ಫೈಲು ಬದುಕಿನ ಅನೇಕ ಪೈಲುಗಳ ವಿವರಗಳೇ ಸಾಮಾನ್ಯ ಓದುಗನನ್ನು ಮೆಚ್ಚಿಸುವ ಅಂಶಗಳಾಗಿವೆ. ಪ್ರಪಂಚವನ್ನೇ ಅಲುಗಿಸುವ ಸಿದ್ದಾಂತಗಳನ್ನು ಮಂಡಿಸಿದ ಇಂಥ ವ್ಯಕ್ತಿಯ ಶುದ್ಧ ನಿರಹಂಕಾರತೆ ಕತೆಕತೆಯಾಗಿದೆ. ಅವರ ದೊಗಳೆ ಬಟ್ಟೆಗಳು, ಅವುಗಳಲ್ಲೇ ಎಂಥ ಪ್ರತಿಷ್ಠಿತರನ್ನೂ ಕಾಣಹೋಗುವ ಧೈರ್ಯ, ಕೂದಲು ಕತ್ತರಿಸಿಕೊಳ್ಳುವ ತೊಂದರೆಯನ್ನು ತಪ್ಪಿಸಿಕೊಳ್ಳುವ ಸಲುವಾಗಿ ಅವರು 'ಸಿಂಹಕೇಶಿ'ಯಾಗಿದ್ದದ್ದು, ಪ್ರಾಥಮಿಕ ಶಾಲೆಯಲ್ಲಿ ಕಲಿಯುವ ನೆರೆಮನೆಯ ಹುಡುಗಿ ಬಂದು ಕೇಳಿದರೆ ವಿಜ್ಞಾನದ ಈ ಮಹರ್ಷಿ ಅಕ್ಕರೆಯಿಂದ ಅವಳಿಗೆ ಲೆಕ್ಕ ಹೇಳಿಕೊಡುವುದು, ತಮಗೆ ಪ್ರೊಫೆಸರ್‌ ಪದವನ್ನು ಕೊಡಮಾಡಿ ಸಂಬಳ ಎಷ್ಟು ಬೇಡುತ್ತೀರಿ ಎಂದು ಕೇಳಿದರೆ ಎಷ್ಟು ಕೇಳಬೇಕೆಂದರಿಯದ ಅಮಾಯಕತನ, ಹಸುಳೆ ಮಗನನ್ನು ಎತ್ತಿಕೊಂಡು ಆಡಿಸುತ್ತಾಡಿಸುತ್ತ ಇನ್ನೊಂದು ಕೈಯಿಂದ ವಿಜ್ಞಾನದ ಘನಗಹನ ಸಮಸ್ಯೆಗಳಿಗೆ ಪರಿಹಾರವನ್ನು ಟಿಪ್ಪಣಿ ಮಾಡುತ್ತ ಹೋಗಬಲ್ಲ 'ಅಷ್ಟಾವಧಾನ' ಸಾಮರ್ಥ್ಯ, ಗುಂಪಿನಲ್ಲಿ ಬೆರೆತು ಸರಸವಾಡುವಾಗಲೂ ಆಂತರಿಕ ಏಕಾಂಗಿತನವನ್ನು ಅನುಭವಿಸುವ