ಪುಟ:ಕಥಾ ಸಂಗ್ರಹ - ಭಾಗ ೨.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಂಜನೇಯನು ಸೀತೆಯನ್ನು ಕಂಡು ಲಂಕಾಪಟ್ಟಣವನ್ನು ಸುಟ್ಟುದು, 97 ನಾದ ರಾವಣನು ತ್ರಿಭುವನವೀರವಂದಿತಪದಾಂಬುಜನಾದ ಶ್ರೀರಾಮನ ಪಟ್ಟ ಮಹಿಷಿ ಯಾಗಿಯೂ ಲೋಕಮಾತ್ರವಾಗಿಯೂ ಇರುವ ಸೀತೆಯನ್ನು ಅಪಹರಿಸಿಕೊಂಡು ಬಂದು ತನ್ನ ಪಟ್ಟಣದಲ್ಲಿಟ್ಟು ಕೊಂಡುದರಿಂದ ರಾಮನ ಅಪ್ಪಣೆಯ ಪ್ರಕಾರ ಆಕೆ ಯನ್ನು ಹುಡುಕುವುದಕ್ಕಾಗಿ ಎಲ್ಲಾ ದಿಕ್ಕುಗಳಿಗೂ ಹೋದ ಕಪಿನಾ ಯಕರಂತೆ ನಾನು ದಕ್ಷಿಣದಿಕ್ಕಿನಲ್ಲಿರುವ ಈ ಪಟ್ಟಣಕ್ಕೆ ಬಂದು ಸೀತೆಯನ್ನು ಕಂಡು ಮಾತನಾಡಿಸಿದೆನು. ನಿನ್ನ ಯಜಮಾನನಾದ ಈ ರಾವಣನನ್ನು ಕಾಣಬೇಕೆಂಬ ಉದ್ದೇಶದಿಂದ ಈ ಅಶೋಕ ವನವನ್ನು ಮುರಿದೆನು ಬಹುಜನ ರಾಕ್ಷಸರು ನನ್ನನ್ನು ಕೊಲ್ಲುವುದಕ್ಕೆ ಬಂದರು. ಅದು ಕಾರಣ ಅವರನ್ನೆಲ್ಲಾ ಸಂಹರಿಸಿ ಯಮನಗರಕ್ಕಟ್ಟಿದೆನು, ಬ್ರಹ್ಮಾಸ್ತ್ರದಿಂದಲೂ ಸಾಯದಂತೆ ನನಗೆ ಬ್ರಹ್ಮ ದೇವನ ವರವುಂಟು, ಬೇಕೆಂದದರಲ್ಲಿ ಕಟ್ಟುಬಿದ್ದು ಈ ರಾವ ಣನನ್ನು ಕಂಡು ಇವನಿಗೊಂದು ಬುದ್ದಿವಾದವನ್ನು ಹೇಳಬೇಕೆಂದು ಈ ಚಾವಡಿಗೆ ಬಂದಿರುವೆನು. ಅದೇನೆಂದರೆ, ಈ ರಾವಣನಿಗೆ ಇನ್ನೂ ಬದುಕಬೇಕೆಂಬ ಆಶೆಯಿದ್ದರೆ ಈಗಲಾದರೂ ಸೀತೆಯನ್ನು ಕರೆದು ಕೊಂಡು ಹೋಗಿ ರಾಮನಿಗೊಪ್ಪಿಸಿ ಆತನಿಗೆ ಶರಣಾ ಗತನಾದರೆ ದಯಾಳುವಾದ ಶ್ರೀರಾಮನು ಇವನನ್ನು ಕಾಪಾಡುವನು. ಅದು ಇವನ ಮನಸ್ಸಿಗೆ ಸರಿಬಾರದಿದ್ದರೆ ಈಗಲೇ ತನ್ನ ಜೀವದ ಆಶೆಯನ್ನು ತೊರೆದು ಕೊಳ್ಳಲಿ ಎಂಬುವುದೇ ಎಂದು ಹೇಳಿದನು. ಆ ಮಾತುಗಳನ್ನು ಕೇಳಿದ ಕೂಡಲೆ ರಾವಣನು ಮಹಾ ಕೋಪೋದ್ದೀಪಿತ ನಾಗಿ ಹಿಂದುಮುಂದು ಯೋಚಿಸದೆ ಈ ಕೋಡಗವನ್ನು ಕೊಂದುಹಾಕಿಸೆಂದು ಪ್ರಹಸ್ಯ ನಿಗೆ ಅಪ್ಪಣೆಕೊಡಲು; ಆಗ ನೀ ತಿವಿದನಾದ ವಿಭೀಷಣನು ರಾವಣನನ್ನು ನೋಡಿ ನೀನು ರಾಕ್ಷಸ ಚಕ್ರವರ್ತಿಯಾಗಿ ದೂತನನ್ನು ಕೊಲ್ಲುವುದು ಧರ್ಮವಿಹಿತವಲ್ಲ ವ್ರ. ಪ್ರಪಂಚದಲ್ಲಿ ದೂತರು ತಮ್ಮ ಸ್ವಾಮಿಯನ್ನು ಹೊಗಳಿಕೊಳ್ಳುವುದು ಸ್ವಭಾವವು. ಇಷ್ಟು ಮಾತ್ರಕ್ಕೆ ಕೋಪವೇಕೆ ? ದೂತರಾದವರು ಏನಾದರೂ ಹೆಚ್ಚಾಗಿ ಅಪರಾಧ ವನ್ನು ಮಾಡಿದರೆ ಅಂಥವರಿಗೆ ಸ್ವಲ್ಪ ಶಿಕ್ಷೆಯನ್ನು ವಿಧಿಸಬಹುದೆಂದು ಹೇಳಲು; ಆಗ ರಾವಣನು ತನ್ನ ದೂತರನ್ನು ನೋಡಿ-ಎಲೈ, ನೀವು ಈ ಕಪಿಯ ಕಿವಿಮರು ಗಳನ್ನು ಕೊಯ್ದು ಹಾಕಿರಿ, ಇಲ್ಲಿಂದ ಹೋಗಿ ತನ್ನೊಡೆಯನಿಗೆ ತೋರಿಸಲಿ ಎಂದು ಆಜ್ಞಾಪಿಸಲು ; ಆಗ ದೂತರು ಶೀಘ್ರವಾಗಿ ಚೂರಿ ಕತ್ತಿ ಈ ಮೊದಲಾದ ಆಯುಧ ಗಳನ್ನು ತಂದು ಕೊಯ್ಯುತ್ತಿದ್ದರೂ ಆಂಜನೇಯನ ಒಂದು ಕೂದಲಾದರೂ ಕತ್ತರಿಸಿ ಹೋಗದೆ ಆಯುಧಗಳೆಲ್ಲಾ ಮುರಿದು ನಿರರ್ಥಕವಾಗುತ್ತಿರಲು ; ರಾವಣನು ನೋಡಿ ಬೆರಗಾಗಿ ಮಗಿನ ಮೇಲೆ ಬೆರಳಿಟ್ಟು ಕೊಂಡು ಕಿರುನಗೆಯಿಂದ ಪ್ರಹಸ್ತ್ರನನ್ನು ನೋಡಿಇದೇನು ಪ್ರಹಸ್ಯನೇ, ಪರಮಾಶ್ಚರ್ಯವಾಗಿದೆ ! ಆಗಲಿ, ಕಪಿಗಳಿಗೆ ಬಾಲವು ಪ್ರಧಾ ನವಾದುದರಿಂದ ಈ ಕಪಿಯ ಬಾಲಕ್ಕೆ ಬಟ್ಟೆ ಗಳನ್ನು ಸುತ್ತಿ ಎಣ್ಣೆಯನ್ನು ಹೊಯ್ತು ಅಗ್ನಿ ಯನ್ನು ಹೊತ್ತಿಸಿಬಿಡಿರೆಂದು ಹೇಳಲು; ಇದು ಸರಿಯೆಂದು ಒಪ್ಪಿ ಎಲ್ಲರೂ ಆಂಜನೇಯನ ಬಳಿಗೆ ಬರಲು ; ಆಗ ಮಾರುತಿಯು-ಚೀರಿ ಕಿರಿ ಕಿರುಗುಟ್ಟುತ್ತಾ ಹಾರಿಬಿದ್ದು ಹಲ್ಕಿರಿದು ಹುಬ್ಬುಗಳನ್ನು ಹಾರಿಸುತ್ತ ತಲೆಯನ್ನು ಕುಣಿಸುತ್ತ ಹೆದರಿ