ಈepರ್ಳಚಂಹಾರ 133 ಕೊಂಡು ಹೋಗಿ ರಾಮನಿಗೊಪ್ಪಿಸಿಬಿಡು ಎಂದು ಹೇಳಿದನು, ಅದನ್ನು ಕೇಳಿ ರಾವ ಣನು ಕೋಪಸಂತಾಪಯುಕ್ತನಾಗಿ ಹಗಲಿರುಳುಗಳಲ್ಲೂ ಹಗೆಯನ್ನು ಹೊಗಳಿ ಕೊಂಡು ಅವನ ಬಾಯಂಬುಲಕ್ಕೆ ಕೈಯಾತುಕೊಂಡಿರುವುದಕ್ಕೆ ಅಧಮನಾದ ಒಬ್ಬ ತಮ್ಮನು ಸಾಲದೆ ಮಿಕ್ಕ ರಾಗಿಯನ್ನು ಬೀಸುವುದಕ್ಕೆ ನೀನೊಬ್ಬ ತಮ್ಮನು ಬಂದಿಯಾ ? ಬಲು ಚೆನ್ನಾಯಿತು ? ನೀನು ತಿರುಕನಂತೆ ವೈರಿಯ ಬಿರುದಾವಳಿ ಯನ್ನು ಹೊಗಳಿಕೊಂಡು ಅವನ ಪಾಳಯವನ್ನು ಕುರಿತು ಹೋಗುವವನೋ ? ಕತ್ತಿಯ ಮೊನೆಯಲ್ಲಿ ಹೋಗತಕ್ಕವನೋ ? ಎದುರಾಳಿನೊಡನೆ ಕಾಳೆಗಕ್ರಂಜಿ ನುಸು ಳುಗಂಡಿಯಲ್ಲಿ ತೂರುವವನೋ ? ನಿನ್ನ ಬಗೆಯಾವುದು ? ಅದನ್ನು ಬೇಗ ತಿಳಿಸು ಅಂದನು. ಅದಕ್ಕೆ ಕುಂಭಕರ್ಣನು--ಎಲೈ ಅಣ್ಣಾ, ನಾನು ಎಂದಿಗೂ ಕಾದಲಂಜುವ ವನಲ್ಲ, ನಾನು ಕಾಳೆಗಕ್ಕೆ ಹಿಂದೆಗೆದರೆ ಕೀರ್ತಿಲತೆಯು ಬಾಡೀತು, ಮುಕ್ತಿಯ ದಾರಿಯು ಮಾಸೀತ, ನೀನು ಸೀತೆಯನ್ನು ತಂದಾಗಲೇ ನಮ್ಮ ಆಯುಷ್ಯದ ಅವಧಿಯು ತೀರಿತು, ಹಗೆಯೊಡನೆ ಕಾದಿ ಗೆಲ್ಲುವುದು ಅಸಾಧ್ಯವು, ಈ ವಿಷಯವನ್ನು ನೀನೇ ನಿನ್ನಲ್ಲಿ ಯೋಚಿಸಿ ನೋಡು ಎನ್ನಲು ; ರಾವಣನು-ಎಲವೋ ! ನೀನು ಈ ಸಂಗ್ರಾ ಮವನ್ನು ಜಯಿಸುವಿ ಎಂದು ತಿಳಿದು ಎಬ್ಬಿಸಿದರೆ ಹೆದರಿ ಕಲಹಕ್ಕೆ ಹೋಗದೆ ನನ್ನೆ ದುರಿನಲ್ಲಿ ಶುಷ್ಕ ನೀತಿಗಳನ್ನು ಓದುತ್ತ ಕಾಲಹರಣವನ್ನು ಮಾಡುತ್ತಿರುವ, ಹೇಡಿಯ ನಿದ್ರಾಜಾಡ್ಯನಿಗೃಹೀತನೂ ಆದ ನಿನ್ನನ್ನು ತಿಳಿಯದೆ ಮಹಾವೀರನೆಂದು ಭಾವಿಸಿ ಎದು ರಿನಲ್ಲಿ ನಿಲ್ಲಿಸಿಕೊಂಡು ನುಡಿದುದೇ ತಪ್ಪು ! ಮೊದಲಂತೆಯೇ ನಿದ್ದೆಯಲ್ಲಿ ಬಿದ್ದು ಸಾಯಿ ! ಹೋಗು ! ಎಂದು ಕೋಪದಿಂದ ನುಡಿದನು. ಆಗ ಕುಂಭಕರ್ಣನು--ಎಲಾ ಅಣ್ಣಾ, ವೀಳಯವನ್ನು ತಾ! ನನ್ನ ಕಾಳೆಗದ ಹೊಸದಾದ ಪರಿಯನ್ನು ನೋಡು ! ನನ್ನೆದುರಿನಲ್ಲಿ ಕೂಲಿಯು ಅಡ್ಡ ಗಿಸಿ ಬಂದರೂ ಬಿಡದೆ ಕೊಲ್ಲುವೆನು, ಮಿಕ್ಕ ಜಾಳುಗಳ ಬಡಗೊಬ್ಬಿನ ಬಿಂಕವನ್ನು ಹೇಳದಿರು. ಲೋಕದಲ್ಲಿ ಮದನನಿಗೆ ಮನಸ್ಸನ್ನು ಮಾರಿದವರು ಬಯಲಾಗುವರು ಎಂದು ನಾನು ಹೇಳಿದರೆ ನಿನಗೆ ಇಷ್ಟು ಕೋಪವುಂಟಾಗಬಹುದೇ ? ಎಂದನು. ಆಗ ರಾವಣನು-ಎಲೇ ತಮ್ಮಾ, ನಾವಂತು ಕುಡುವಿಲ್ಲನ ಸರಳುರಿಗೆ ಸಿಕ್ಕಿ ಮೂರ್ಖರಾದವರು. ಆಗಲಿ, ಲೋಕವಿಖ್ಯಾತರಾದ ಶೂರರು ಮೂಢರಂತೆ ಮರಣ ಕಂಜಿ ಹಿಂದೆಗೆದರೆ ಜಗತ್ತಿನಲ್ಲಿರುವ ಸಮಸ್ತ ಜನರೂ ಕೈಹೊಯ್ತು ನಗದಿರುವರೇ ? ನಿಜಭುಜಾರ್ಜಿತನಾದ ನಿನ್ನ ಯಶಶ್ಚಂದ್ರನು ಪ್ರಸಿದ್ದ ಚಂದ್ರನನ್ನೂ ಕೂಡ ತಿರಸ್ಕರಿಸು ತಿರುವನಲ್ಲಾ ! ನಿನ್ನ ಅತುಲಪ್ರತಾಪಾದಿತ್ಯನು ಈ ಸೂರ್ಯನನ್ನು ಅಲ್ಲಗಳೆಯತ್ತಿ ರುವನಲ್ಲಾ!” ಅಣುಪ್ರಾಯರಾದ ಅಲ್ಪಮನುಜರ ಕೊಬ್ಬನ್ನು ಗಣಿಸದೆ ನಿರ್ನಾಮ ಮಾಡಬಲ್ಲ ವನಾದ ನೀನು ವಿರೋಧಿಗೆದುರಾಗಿ ನಿಂತರೆ ಪ್ರತಿಭಟಿಸಿ ನಿಲ್ಲುವವರು ಲೋಕತ್ರಯದಲ್ಲುಂಟೇ ? ಇಲ್ಲವು, ಅದು ಕಾರಣ ಇಂಥಾ ನೀನು ಪ್ರಾಣಗಳ ಮೇಲ ಣ ಆಶೆಯನ್ನು ಬಿಟ್ಟು ವಿರೋಧಿವಕ್ಷಃಕಂಪನದಾಯಕವಾದ ಜಗಳವನ್ನು ಅಂಗೀ
ಪುಟ:ಕಥಾ ಸಂಗ್ರಹ - ಭಾಗ ೨.djvu/೧೪೩
ಗೋಚರ