ಪುಟ:ಕಥಾ ಸಂಗ್ರಹ - ಭಾಗ ೨.djvu/೧೬೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


152 ಕಥಾಸಂಗ್ರಹ-೪ ನೆಯ ಭಾಗ ಮೃತರಾದರು ? ಯಾರು ಯಾರು ಉಳಿದಿದ್ದಾರೆ ? ಯಾರ ಯಾರ ಸ್ಥಿತಿಯು ಎಂತಂ ತಿರುವದು ? ಎಂದು ಬೆಸಗೊಳ್ಳಲು; ಆಗ ವಿಭೀಷಣನು-ರಾಮಲಕ್ಷ್ಮಣರು ಮೊದಲಾಗಿ ಸಮಸ್ತ ಕಪಿಸೇನೆಗಳೂ ಸತ್ತಿವೆ. ಹನುಮಂತನು ಮಾತ್ರ ಏನಾಗಿರು ವನೋ ? ತಿಳಿಯದು. ಇನ್ನೂ ನೋಡಲಿಲ್ಲ ಎಂದು ಹೇಳಿದನು. ಅಷ್ಟರಲ್ಲಿಯೇ ಆಂಜನೇಯನು ಬಂದು ಅತ್ಯಂತ ವ್ಯಸನಾಕ್ರಾಂತನಾಗಿ ಜಾಂಬವದ್ವಿಭೀಷಣರನ್ನು ಕಾಣಿಸಿಕೊಳ್ಳಲು ; ಜಾಂಬವಂತನು ಅವನನ್ನು ನೋಡಿ ವಿಭೀಷಣನನ್ನು ಕುರಿತು-ಎಲೈ ರಾಕ್ಷ ಸರಾಜನೇ, ಅಸಹಾಯ ಶೂರನಾದ ಈ ಹನುಮಂತನೊಬ್ಬನು ಉಳಿದಿರುವುದರಿಂದ ರಾಮಲಕ್ಷ್ಮಣ ಸುಗ್ರೀವಾಂಗದಾದಿ ಸಮಸ್ತರೂ ಬದುಕಿದರೆಂದು ಚೆನ್ನಾಗಿ ತಿಳಿದು ಕೋ. ನೀನು ಇನ್ನು ಮೇಲೆ ಸ್ವಲ್ಪ ವಾದರೂ ದುಃಖಿಸಬೇಡ, ವ್ಯಸನವನ್ನು ಬಿಡು ಎಂದನು. ಆ ಮಾತುಗಳನ್ನು ಕೇಳಿ ಆಂಜನೇಯನು-ಮೃತರಾಗಿರುವ ಸರ್ವರೂ ಈ ಮಹಾತ್ಮರಾದ ಜಾಂಬವಂತರಿಂ ದಲೇ ಬದುಕಬೇಕಲ ದೆ ಸಾಮಾನ್ಯನಾದ ನನ್ನಿಂದಾಗುವ ಪ್ರಯೋಜನವಾವುದು ? ಈ ಸಮಸ್ತರೂ ಬದುಕುವಂತೆ ಈ ಮಹನೀಯರು ಕಾಲಿನಿಂದ ತೋರಿಸಿದ ಕಾರ್ಯ ವನ್ನು ಶಿರಸ್ಸಿನಿಂದ ಮಾಡುವೆನು. ಈ ಮಹಾವಿಪ ವಾರಣೆಗಾಗಿ ಯಾವ ಯುಕ್ತಿ ಯನ್ನು ನೆನೆದು ನನಗೆ ನೇಮಿಸುವರೋ ಅದು ಎಂಥ ಅಸಾಧ್ಯವಾದುದಾದಾಗ ಮಾಡಿ ನಿರ್ವಹಿಸುವೆನು ಎಂದು ಹೇಳಲು ; ಆಗ ಜಾಂಬವಂತನು-ಕೇಳ್ಳೆ, ಅಪ್ರತಿಮ ವೀರನಾದ ಆಂಜನೇಯನೇ, ಸೂರ್ಯೋದಯವಾದ ಮೇಲೆ ಇವರೊಬ್ಬರೂ ಬದುಕುವದಿಲ್ಲ, ಬೆಳಗಾಗುವುದಕ್ಕೆ ಇನ್ನೂ ಏಳುಗಳಿಗೆಗಳು ಕಳೆಯಬೇಕಾಗಿದೆ. ಅಷ್ಟರೊಳಗೆ ನೀನು ಸಾಹಸಮಾಡಿದರೆ ನೀನೇ ರಾವಣನನ್ನು ಕೊಂದವನು, ಸೀತೆಯ ನ್ನು ತಂದವನು, ಸರ್ವಕಪಿವಾಹಿನೀ ಸಹಿತವಾಗಿ ಶ್ರೀರಾಮಲಕ್ಷ್ಮಣರನ್ನು ಬದುಕಿಸಿ ದವನು ಅಂದನು. ಆ ಮಾತುಗಳನ್ನು ಕೇಳಿ ಆಂಜನೇಯನು ಪ್ರಯಾಣೋನ್ನು ಖನಾಗಿ -ಅದೇನು ಸ್ಯಾವಿಾ, ಶೀಘ್ರವಾಗಿ ಹೇಳಿರಿ ಎನ್ನಲು ; ಆಗ ಜಾಂಬವಂತನು-ಚಂದ್ರದ್ರೋಣ ಪರ್ವತದಲ್ಲಿ ಸಂಧಾನಕರಣಿ ವಿಶಲಕರಣಿ ಸೌವರ್ಣಕರಣಿ ಮೈತಸಂಜೀವಿನಿ ಎಂಬ ನಾಲ್ಕು ವಿಧವಾದ ಸಿದೌಷಧಿಗಳಿರುವುವು. ನೀನು ಹೋಗಿ ಬೆಳಗಾಗುವಷ್ಟರಲ್ಲಿಯೇ ಅವುಗಳನ್ನು ತೆಗೆದುಕೊಂಡು ಇಲ್ಲಿಗೆ ಬರುವವನಾಗು ಎಂದು ಹೇಳಲು ; ಅವನುಅಗತ್ಯವಾಗಿ ತಮ್ಮಿಂದ ನಿಷ್ಕರ್ಷಿತವಾದ ಕಾಲಕ್ಕೆ ಮೊದಲೇ ತೆಗೆದುಕೊಂಡು ಬರು ವೆನು. ಆದರೆ ಆ ಚಂದ್ರದ್ರೋಣಪರ್ವತವೆಲ್ಲಿರುವುದು ? ಆ ದಿಕ್ಕನ್ನು ಮಾತ್ರ ತಿಳಿಸು ವವರಾಗಿರಿ ಎಂದು ಕೇಳಲು ; ಇಲ್ಲಿಂದ ನೆಟ್ಟಗೆ ಹಿಮಾಚಲಕ್ಕೆ ಹೋಗಿ ಅದನ್ನು ದಾಟಿ ಮುಂದೆ ಹೋದರೆ ಅಲ್ಲಿ ಋಷಭವೆಂಬ ಪರ್ವತವಿರುವುದು, ಅದರ ಆಚೆಗೆ ಕೈಲಾಸನಗವಿರುವುದು, ಆ ಎರಡು ಪರ್ವತಗಳ ಮಧ್ಯದಲ್ಲಿ ಚಂದ್ರದ್ರೋಣವೆಂಬ ಓಷಧಿ ಭೂಧರವಿರುವುದು, ಅದರ ಶಿಖರದಲ್ಲಿ ನಾನು ಹೇಳಿದ ಔಷಧಿಗಳಿರುಪುವು ಎಂದು ಹೇಳಿದನು