ಪುಟ:ಕಥಾ ಸಂಗ್ರಹ - ಭಾಗ ೨.djvu/೧೯೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


184 ಕಥಾಸಂಗ್ರಹ-೪ ನೆಯ ಭಾಗ ದ್ವು ವು. ಆಗ ಶ್ರೀರಾಮನು ಆ ಆಶ್ಚರ್ಯಸ್ಥಿತಿಯನ್ನು ನೋಡಿ ಅಲಘು ಪ್ರಯತ್ನ ದಿಂದ ಬ್ರಹ್ಮನನ್ನು ಮೆಚ್ಚಿ ಸಿ ತ್ರಿಲೋಕ ದುರ್ಲಭವಾದ ವರವನ್ನು ಪಡೆದವನಾದ ರಾವಣನ ತಪೋಮಹಿಮೆಗೆ ಮೆಚ್ಚಿ ಆಶ್ಚರ್ಯಮಯಮನಸ್ಕನಾಗಿ-ವೃಥಾಯಾಸ ದಿಂದೇನು ಪ್ರಯೋಜನವು ? ಇನ್ನು ಮೇಲೆ ಈ ಯುದ್ಧವು ಸಾಕು. ಲಂಕಾನಾಯಕನ ಆಯುಷ್ಯಕ್ಕೆ ಎಂದಿಗೂ ಅವಸಾನವಿಲ್ಲ, ಅದು ಕಾರಣ ಇವನೊಡನೆ ಯುದ್ದ ಕೈ ಅವಸಾನವನ್ನು ನಾನೇ ಮಾಡುವೆನು ಎಂದು ಧನುರ್ಬಾಣಗಳನ್ನು ರಥದಲ್ಲಿರಿಸಿ ತಾನು ಧ್ವಜಸ್ತಂಭವನ್ನು ಒರಗಿ ಕೂತು ಕೊಂಡು ವ್ಯಸನದಿಂದ ಬಳಲಿ-ಪೂತುರೇ ! ರಾವಣಾ, ಮಜಭಾಪು ! ಎನ್ನುತ್ತ ಬೆರಗಾಗಿದ್ದನು. ತತ್‌ಕ್ಷಣದಲ್ಲೇ ಅಗಸ್ಯ ಮಹಾಮುನಿಯು ರಾಮನ ಬಳಿಗೆ ಬಂದು ಅವನಿಗೆ ಆದಿತ್ಯ ಹೃದಯವೆಂಬ ಮಹಾಮಂತ್ರವನ್ನು ಉಪದೇಶಿಸಿ--ನೀನು ಪ್ರಯೋಗಿಸುವ ಬಾಣದ ಆದಿಮಧ್ಯಾಂತಸ್ಥಾನಗಳಲ್ಲಿ ತ್ರಿಮೂರ್ತಿಗಳನ್ನು ನೆಲೆಗೊಳಿಸಿ ಈ ಅಮರವಿ ರೋಧಿಯ ವಕ್ಷಸ್ಥಳಕ್ಕೆ ಪ್ರಯೋಗಿಸು ಎಂದು ಹೇಳಿ ಹೊರಟುಹೋದನು, ಆ ಮೇಲೆ ಶ್ರೀ ರಾಮನೆದ್ದು ಬಿಲ್ಲಿನಲ್ಲಿ ದಿವ್ಯ ಮಾರ್ಗಣವನ್ನು ಹೂಡಿ ಅದರಲ್ಲಿ ಹರಿಹರ ಹಿರಣ್ಯಗ ರ್ಭರನ್ನು ಮಂತ್ರದಿಂದ ಪ್ರತಿಷ್ಠಿಸಿ ರಾವಣನೆದೆಗೆ ಗುರಿಗಟ್ಟಿ ಹೊಡೆದನು. ಆಗ ರಾವ ಣನು ಕಂಗೆಡದೆ ತನ್ನ ಮೇಲೆ ಬರುತ್ತಿರುವ ದಿವ್ಯಾಸ್ತ್ರವನ್ನು ಅನೇಕ ಮಂತ್ರಾಸ್ತ್ರಗಳಿಂದ ಹೊಡೆದನು. ಸೂರ್ಯಚಂದ್ರರನ್ನು ಹಿಡಿದು ನುಂಗುವ ರಾಹುವನ್ನು ನಕ್ಷತ್ರಗಳು ತಡೆದು ನಿಲ್ಲಿಸಬಲ್ಕು ವೇ ? ರಾಮಬಾಣಗಳು ರಾವಣನ ಮಹಾಸ್ತ್ರಗಳನ್ನೆಲ್ಲಾ ತರಿದೊ ಟ್ಟು ಮಹಾವೇಗದಿಂದ ಬಂದು ಅವನ ವಕ್ಷಸ್ಥಳವನ್ನು ಹೊಕ್ಕು ಬೆನ್ನಿನಲ್ಲಿ ಹಾಯಲು ; ಆಗ ರಾವಣನು ಕೆಳಗೆ ಬಿದ್ದನು. ಕೂಡಲೆ ಅವನ ಪ್ರಾಣಗಳು ದೇಹ ವನ್ನು ಬಿಟ್ಟು ಹೊರಟು ಹೋದುವು. ಆಗ ಸುರಲೋಕದಲ್ಲಿ ಸಂತೋಷಸೂಚಕವಾದ ಧ್ವನಿಗಳೂ ದುಂದುಭ್ಯಾದಿ ವಾದ್ಯಧ್ಯಾನಗಳೂ ಕೂಡಿ ಜಗತ್ತೆಲ್ಲವೂ ಶಬ್ದ ಮಯವಾ ಗಿದ್ದಿತು. ರಾಮನ ಮೇಲೆ ಹೂಮಳೆಯು ಸುರಿದಿತು. ಸೂರನು ಲೋಕಾನಂದಕರ ವಾದ ತನ್ನ ತೇಜಸ್ಸಿನಿಂದ ಬೆಳಗಿದನು. ಶೈತ್ಯಸೌರಭ್ಯಮಾಂದ್ಯಗಣಯುಕ್ತವಾದ ವಾಯುವು ಬೀಸಿತು. ದಿಕ್ಷಾಲಕರೆಲ್ಲರೂ ತಮ್ಮ ತಮ್ಮ ಸ್ಥಾನಗಳಲ್ಲಿ ನಂಬಿಕೆಯನ್ನಿ ಟೈರು, ದೇವವಾರಂಗನೆಯರೆಲ್ಲಾ ನಲಿದು ನರ್ತಿಸಿದರು, ದೇವಸೀಪುರುಷಯುಗದ ಅನುರಾಗಲತೆಯು ಕುಡಿಯೊಡೆದಿತು. ಮಹಾತ್ಮರ ಹೃದಯದಲ್ಲಿ ವಿಕಾಸಭಾವ ವುಂಟಾಯಿತು, ವಿಶೇಷ ವಿಷಯಗಳನ್ನು ಹೇಳವುದೇಕೆ ? ಲೋಕತ್ರಯ ಜೀವಿಜಾಲದ ಹೃದಯದಲ್ಲಿ ಸಮಾಧಾನವು ಹುಟ್ಟಿತು. ವಿಭೀಷಣನು ಶೂರಸೋದರಮ್ಪತಿವ್ಯಸನದಿಂದ ಕಂಗೆಟ್ಟವನಾಗಿ ಕಣ್ಣೀರುಗಳನ್ನು ಸುರಿಸಿದನು. ಲೋಕದಲ್ಲಿ ಭ್ರಾತೃವಾದವನು ಎಂಥ ದುರ್ಮಾರ್ಗಿಯಾಗಿದ್ದರೂ ವಿರೋಧಿಯಾಗಿದ್ದರೂ ಅವನು ರಕ್ತ ಸಂಬಂಧಿಯಾ ದುದರಿಂದ ಅವನ ವಿನಾಶವು ಮಹಾ ಪರಿತಾಪ ದುಃಖಗಳನ್ನು ಕೊಡದೆ ಬಿಡುವು ದಿಲ್ಲ. ಇಂಥ ಅಪ್ರತಿಮಮಲ್ಲನಾದ ರಾವಣನ ಮೃತಿವಾರ್ತೆಯನ್ನು ಕೇಳಿ ಅವನ ಪಟ್ಟದರಸಿಯಾದ ಮಂಡೋದರಿಯು ವಾಚಾತೀತಸಂತಾಪ ದುಃಖಗಳಿಂದ ಪೀಡಿತ