ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
12
ಕಥಾಸಂಗ್ರಹ-೪ ನೆಯ ಭಾಗ

 ವಂತೆ ತಿಳಿಸೆಂದು ಆಜ್ಞಾಪಿಸಲು ; ಕೂಡಲೆ ಯಕ್ಷ ಕಿನ್ನರಾದಿಗಳ ಸೇನಾಸಮುದ್ರವು ದಶಕಂಠನೊಡನೆ ಯುದ್ಧ ಮಾಡಲೋಸುಗ ಬಂದು ನಿಂತಿತು.

ಆಗ ರಾಕ್ಷಸರ ಬಲವು ಬಂದು ಯಕ್ಷರ ಬಲಕ್ಕೆದುರಾಗಿ ನಿಂತು.ದಶಾನ ನನೂ ಧನಪತಿಯೂ ಭಾತೃಗಳೆಂದು ನಾವೀವರೆಗೂ ಮನ್ನಿಸಿದರೆ ನೀವಿಂತು ಕೊಬ್ಬಿದಿರಾ ? ಎಂದಬ್ಬರಿಸಿ ಮುಂದುವರಿದು ಯಕ್ಷಸೇನೆಗೆ ಬರಸಿಡಿಲೆರಗುವಂತೆರಗಿ ಮುರಿ ಬಡಿವುತ್ತಿರಲು ; ಜವನೋಕರಿಸಿದನೋ ಎಂಬಂತೆ ಬಿದ್ದಿರುವ ಮೆದುಳಳಿಂದಲೂ ಮಚ್ಚಾಮಾಂಸಗಳಿಂದಲೂ ಕುಣಿಕುಣಿದಾಡುವಟ್ಟೆಗಳಿಂದಲೂ ತಲೆಬುರುಡೆಗಳಿಂದಲೂ ನದೀರೂಪವಾಗಿ ಪ್ರವಹಿಸುತ್ತಿರುವ ರಕ್ತದಿಂದಲೂ ನಿಮೇಷಕಾಲದಲ್ಲಿ ವ್ಯಾಪ್ತವಾದ ಆ ರಣರಂಗವು ನೋಡುವುದಕ್ಕೆ ಭಯ೦ಕರವಾಗಿದ್ದಿತು. ಯಕ್ಷಾನೀಕಿನಿಯೂ ಕೂಡ ಧೈರ್ಯಗೆಡದೆ ರಾಕ್ಷಸಪತಾಕಿನಿಯನ್ನು ಬಹಳವಾಗಿ ಕೊಂದಿತು. ಆಗ ದಶವದನನು ಯಕ್ಷರ ಗುಂಪಿನ ಮೇಲೆ ತನ್ನ ಬಾಣಪರಂಪರಾವೃಷ್ಟಿಯನ್ನು ಸುರಿಸಲು ; ಆ ಬಾಣಹತಿಯಿಂದ ಅನೇಕರು ಕೈಕಾಲ್ಮುರಿದು ಕಿವಿಮೂಗುಗಳು ಹರಿದು ತಲೆಗಳೊಡೆದು ಚೂರುಗಳಾಗಿ ನಾಶವಾದುದನ್ನು ಉಳಿದವರೆಲ್ಲರೂ ನೋಡಿ ದಿಕ್ಕು ದಿಕ್ಕಿಗೆ ಓಡಿಹೋಗಲು ; ಕೂಡಲೆ ಕುಬೇರನು ಮಾಣಿಭದ್ರನೆಂಬ ತನ್ನ ಸೇನಾಪತಿಯೊಡನೆ ಕೂಡಿ ಯುದ್ಧಕ್ಕೆ ಬರಲು ; ಆಗ ದಶಗ್ರೀವನು ಬಂದು ಕುಬೇರನಿಗೆದುರಾಗಿ ನಿಂತನು. ಪ್ರ ಹಸ್ತನು ಬಂದು ಮಾಣಿಭದ್ರನನ್ನೆದುರಿಸಿ ನಿಂತನು. ಆ ಮೇಲೆ ಮಾಣಿಭದ್ರನು ಪ್ರಹಸ್ತನೊಡನೆ ಯುದ್ಧಕ್ಕೆ ಆರಂಭಿಸಿ, ಅವನ ಗದಾಘಾತದಿಂದ ಕಿವಿ ಕಣ್ಮಗುಗಳಲ್ಲಿ ರಕ್ತವು ಸುರಿಯುವುದಕ್ಕೆ ಆರಂಭಿಸಲು ; ಬಲಹೀನನಾಗಿ ಭೂಮಿಯ ಮೇಲೆ ಬಿದ್ದು ಮೈಮರೆತನು. ದಶಮುಖನು ಬ್ರಹ್ಮ ವರಪ್ರಭಾವದಿಂದ ಯುದ್ಧದಲ್ಲಿ ಕುಬೇರನನ್ನು ಸೋಲಿಸಿ ಆತನಿಗೆ ಬ್ರಹ್ಮನು ಕೊಟ್ಟಿದ್ದ ವಿಮಾನವನ್ನು ಕಿತ್ತುಕೊಂಡು ತನ್ನ, ಸಕಲ ಸೇನೆಯೊಡನೆ ಕೂಡಿ ಹೊರಟು ಆಕಾಶಮಾರ್ಗದಲ್ಲಿ ಬರುತ್ತ ಶರವಣವೆಂಬ ಸ್ಥಳವನ್ನು ನೋಡಿ ಕೈಲಾಸಗಿರಿಯ ಮೇಲ್ಗಡೆಗೆ ವಿಮಾನವನ್ನು ಹತ್ತಿಸಲು ; ಅದು ಮುಂದಕ್ಕೆ ನಡೆಯದೆ ಕಾಲ್ಮುರಿದ ಕೋಳಿಯಂತೆ ನಿಂತಿತು.

ಆಗ ದಶಮುಖನು-ಈ ವಿಮಾನವು ಇಲ್ಲಿ ಮಾತ್ರ ನಿಲ್ಲುವುದಕ್ಕೆ ಕಾರಣ ವೇನು ? ಯಕ್ಷರ ಮಾಯವೋ ? ಅಥವಾ ಇದರ ನಡೆಯುಡುಗಿತೋ ? ಬುದ್ಧಿಶಾಲಿಯಾದ ಎಲೈ ಮಾರೀಚನೇ, ಇದರ ನಿಜಸ್ಟಿತಿಯನ್ನು ಹೇಳೆಂದು ಕೇಳಲು ; ಆ ಮಾರೀಚನು--ಈ ವಿಮಾನವು ವೈಶ್ರವಣನಿಗಲ್ಲದೆ ಮತ್ತೊಬ್ಬರಿಗೆ ನಡೆಯದಿರಬಹುದೆಂದು ಹೇಳುತ್ತಿರುವಷ್ಟರಲ್ಲಿ-ಈ ಕೈಲಾಸಪರ್ವತಾಗ್ರದಲ್ಲಿ ಬ್ರಹ್ಮೇಂದ್ರಾದಿ ದೇವತೆಗಳಿಗೂ ಯಕ್ಷ ರಾಕ್ಷಸ ಕಿನ್ನರ ಕಿಂಪುರುಪಾದಿ ಕಾಮಚಾರಿಗಳಿಗೂ ಮಹಾದೇವನ ಪ್ರಭಾವದಿಂದ ಗಮಿಸುವುದು ಅಶಕ್ಯವಾಗಿರುವುದು ; ಹಿಂದಿರುಗು. ಮುಂದಕ್ಕೆ ಹೋದರೆ ಕೆಡುವೆ ಎಂದು ದಶವದನನನ್ನು ಕುರಿತು ನಂದೀಶ್ವರನು ಹೇಳಿದನು, ಆಗೆ ದಶಕಂಠನು ಶಂಕರನ ಎರಡನೆಯ ರೂಪಿಯಾದ ನಂದಿಕೇಶ್ವರನ ಮುಖವನ್ನು. ನೋಡಿ--ನಿನ್ನ ಮೋರೆಯು ಕೋತಿಯ ಸೋಡಿಗೆ ಸರಿಯಾಗಿರುವುದರಿಂದ ಬುದ್ದಿ.