ಪುಟ:ಕಥಾ ಸಂಗ್ರಹ - ಭಾಗ ೨.djvu/೨೮೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕೃಷ್ಣಾವತಾರದ ಕಥೆ 273 ಅನಂತರದಲ್ಲಿ ಒಂದಾನೊಂದು ದಿವಸ ನಂದಗೋಪನು ಮುದುಕರಾದ ಗೊಲ್ಲ ರನ್ನು ಕೂಡಿಸಿಕೊಂಡು--ಈ ಗೋಕುಲದಲ್ಲಿ ನಮಗೆ ಏನೇನೋ ದೈವಿಕವಾದ ತೊಂ ದರೆಗಳು ವಿವಿಧವಾಗಿ ಸಂಭವಿಸುತ್ತ ಇವೆ, ನಾವು ಇಲ್ಲೇ ಇದ್ದರೆ ಮುಂದೆಯ ಇದೇ ರೀತಿಯಾಗಿ ಕಷ್ಟಗಳು ಉಂಟಾಗುವುವು, ಅದು ಕಾರಣ ನಾವೆಲ್ಲ ರೂ ಈ ಸ್ಥಳ ವನ್ನು ಬಿಟ್ಟು ಬೇರೆ ಸ್ಥಳಕ್ಕೆ ಹೋಗುವುದು ಉಚಿತವಾಗಿದೆ. ಇಲ್ಲಿಗೆ ಸ್ವಲ್ಪ ದೂರದ ಲ್ಲಿರುವ ಕಾಳಿ೦ದೀ ತೀರದ ಬೃಂದಾವನವೆಂಬ ಸ್ಥಳವು ಹುಲ್ಲು ನೀರು ಕಟ್ಟಿಗೆಗಳಿಂದ ಕೂಡಿ ನಮಗೂ ನಮ್ಮ ದನಕರುಗಳಿಗೂ ಬಹಳ ಕ್ಷೇಮಕರವಾಗಿರುವುದು, ಅಲ್ಲಿಗೆ ಹೋಗೋಣ ಎಂದು ಹೇಳಿ ಅವರನ್ನೆಲ್ಲಾ ಒಡಂಬಡಿಸಿ ಸಾಮಾನುಗಳನ್ನೆಲ್ಲಾ ಕಿತ್ತು ಬಂಡಿಗಳ ಮೇಲೆ ಹೇರಿಸಿಕೊಂಡು ದನಕರುಗಳನ್ನು ಜೊತೆಯಲ್ಲಿ ಹೊಡೆದು ಕೊಂಡು ಬೃಂದಾವನಕ್ಕೆ ಬಂದು ಅಲ್ಲಿ ಹಳ್ಳಿಗಳನ್ನು ಕಟ್ಟಿ ಕೊಂಡು ಸುಖದಿಂದಿದ್ದರು. ಆ ಮೇಲೆ ಕೃಷ್ಣನು ಎಂದಿನಂತೆ ಕರುಗಳನ್ನು ಕಾಯುವ ಜೊತೆಯ ಹುಡುಗರ ಸಂಗಡ ತನ್ನ ಮನೆಯ ಕರುಗಳನ್ನು ಹೊಡೆದು ಕೊಂಡು ಮೇಯಿಸುವುದಕ್ಕೆ ಹೋಗಿ ಕಾಳಿಂದೀ ನದಿಯ ತೀರದಲ್ಲಿ ಎಳೇಹುಲ್ಲುಗಳನ್ನು ಮೇಯಿಸುತ್ತ ಸಂಗಡಿಗರಾದ ಬಾಲಕರೊಡನೆ ಗೋಲಿ ಗಜ್ಜುಗ ಕಣ್ಣು ಮುಚ್ಚಾಟ ಕುದುರೆಚ೦ಡು ಪಟಚಂಡು ಲಗ್ಗೆ ಚಂಡು ಮುಂತಾದ ಆಟಗಳನ್ನಾಡುತ್ತ ಹಸಿವಾದಾಗ ಕಲ್ಲಿಗಳಲ್ಲಿರುವ ಮೊಸರನ್ನದ ಬುತ್ತಿ ಯನ್ನುಣ್ಣ ಈ ರೀತಿಯಿಂದ ಕಾಲವನ್ನು ಕಳೆಯುತ್ತಿರುವಲ್ಲಿ ಒಂದಾನೊಂದು ದಿವಸ ಕರುಗಳನ್ನು ಅಟ್ಟಿಕೊಂಡು ಅವುಗಳನ್ನು ಮೇಯಿಸುವುದಕ್ಕಾಗಿ ಕಾಳಿ೦ ದೀನದಿಯ ಮತ್ತೊಂದು ಮಡುವಿನ ಬಳಿಗೆ ಹೊಡೆದು ಕೊಂಡು ಹೋಗುತ್ತಿರಲು ; ಜೊತೆಯ ಹುಡುಗರು ಕಂಡು-ಕೃಷ್ಣಾ ! ಕೃಷ್ಣಾ ! ಅಲ್ಲಿಗೆ ಕರುಗಳನ್ನು ಅಟ್ಟಿ ಕೊಂಡು ಹೋಗಬೇಡ. ಹೋದರೆ ಕರುಗಳೊಡನೆ ಅನ್ಯಾಯವಾಗಿ ನೀನೂ ಸತ್ತು ಹೋಗುವಿ, ಏಕೆಂದರೆ ಆ ಮಡುವಿನಲ್ಲಿ ಕಾಳಿಂಗನೆಂಬ ಭಯಂಕರವಾದ ಒಂದು ಘಟಸರ್ಪವು ತನ್ನ ಕುಟುಂಬದೊಡನೆ ವಾಸಮಾಡುತ್ತ ಅಲ್ಲೆಲ್ಲಾ ಸಂಚರಿಸಿಕೊಂಡು ಇರುವುದು, ಅದರ ಘೋರವಾದ ನಂಜಿನಿಂದ ಈ ಕಾಳಿಂದಿಯ ಜಲವನ್ನು ಹನ್ನೆರಡು ಗಾವುದಗಳ ವರೆಗೂ ಯಾವ ಪ್ರಾಣಿಗಳು ಕುಡಿದಾಗೂ ವಿಶೇಷವೇಕೆ ! ಆ ನೀರಿನ ವಾಯುವು ಸೋಂಕಿದಾಗೂ ಆ ಪ್ರಾಣಿಗಳೆಲ್ಲಾ ತತ್‌ಕ್ಷಣದಲ್ಲೇ ಮೃತಿಯನ್ನು ಹೊಂದುವುವು, ಅದು ಕಾರಣ ಮೃಗಪಕ್ಷಿ ಗಳೇ ಮೊದಲಾದ ಯಾವ ಪ್ರಾಣಿಗಳ ಒಂದು ಕ್ಷಣಕಾಲವಾದರೂ ಇಲ್ಲಿ ಬಂದಿರುವುದಿಲ್ಲವೆಂದು ಹೇಳಿದರು. ಕೃಷ್ಣನು ಆ ಮಾತುಗಳನ್ನು ಕೇಳಿ -ಓಹೋ ! ಹಾಗೋ ? ಹಾಗಾದರೆ ನಾನು ಈಗಲೇ ಹೋಗಿ ಆ ಕೆಟ್ಟ ಹಾವನ್ನು ಅಲ್ಲಿಂದ ಓಡಿಸಿ ಸಕಲ ಜೀವರಾಶಿಗಳೂ ಆ ನೀರನ್ನು ಕುಡಿದು ಸಂತೋಷಿಸುವ ಹಾಗೆ ಮಾಡುವೆನೆಂದು ಹೇಳಿ ಆ ಮಡುವಿನ ಬಳಿಗೆ ಓಡಿ ಹೋಗಿ ಅದರೊಳಗೆ ಧುಮ್ಮನೆ ದುಮುಕಲು ; ಕೂಡಲೆ ಆ ಕಾಳಿಂಗನು ಬಂದು ಕೃಷ್ಣನನ್ನು ಸುತ್ತಿಕೊಂಡಿತು, ಆಗ ಕೃಷ್ಣನು ಅದರ ಬಾಲವನ್ನು ಕೈಯಿಂದ ಹಿಡಿದು ಕೊಂಡು ಅದರ ಹೆಡೆಯ ಮೇಲೆ ತನ್ನ ಎರಡು ಕಾಲುಗಳನ್ನೂ ಊರಿ ಕುಣಿಯುವುದಕ್ಕಾರಂಭಿ 18 |