ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾವಣನ ದಿಗ್ವಿಜಯವು ಮೇಲಾದರೂ ದುರ್ವ್ಯಾಪಾರದಿಂದ ನಡೆಯದೆ ವಿನಯಾದಿಗುಣಗಳಿಂದ ಕೂಡಿ ಸುಖ ವಾಗಿ ಜೀವಿಸಿಕೊಂಡಿರೆಂದು ವಿವೇಕವನ್ನು ಬೋಧಿಸಿ ಸ್ಯಾಶ್ರಮವನ್ನು ಕುರಿತು ಹೊರಟುಹೋದರು. ಅನಂತರದಲ್ಲಿ ಕರನೂ ಮರ್ಖನೂ ಆದ ದಶಕಂಧರನು ಕಾರ್ತವೀರ್ಯಾ ರ್ಜುನನಿಂದ ತನಗಾದ ಮಾನಭಂಗವನ್ನು ಮನಸ್ಸಿನಲ್ಲಿ ಗಣಿಸದೆ ಕಿಕ್ಕಿಂಧಾಧಿಪತಿ ಯಾದ ವಾಲಿಯೆಂಬ ವಾನರಚಕ್ರವರ್ತಿಯೊಡನೆ ದ್ವಂದ್ವ ಯುದ್ಧ ವನ್ನು ಮಾಡಿ ಆತನನ್ನು ಜಯಿಸಬೇಕೆಂದು ಒಬ್ಬನೇ ಲಂಕೆಯಿಂದ ಹೊರಟು ಅರುಣೋದಯ ಕಾಲದಲ್ಲಿ ಕಿಕ್ಕಿಂಧಾಪಟ್ಟಣವನ್ನು ಸೇರಿ ಆತನ ಮಂತ್ರಿಯಾದ ತಾರನೆಂಬ ಕಪಿಶೇ ಷ್ಣನನ್ನು ಕಂಡು-ಎಲೈ ಕಪಿಯೇ, ನಿನ್ನ ಅರಸಾದ ದೊಡ್ಡ ಕೋತಿಯು ಎಲ್ಲಿ ? ನಾನು ಶೂರನಾದ ದಶಾನನನು, ನಿಮ್ಮರಸನೊಡನೆ ದ್ವಂದ್ವ ಯುದ್ಧ ವನ್ನು ಮಾಡುವು ದಕ್ಕಾಗಿ ಬಂದಿದ್ದೇನೆ. ಈ ವರ್ತಮಾನವನ್ನು ಅವನಿಗೆ ತಿಳಿಸೆಂದು ಹೇಳಲು ; ಅದಕ್ಕೆ ಆ ತಾರನು--ಪರಾಕ್ರಮಶಾಲಿಯಾದ ನಮ್ಮ ವಾಲಿಯು ಸ್ನಾನಾರ್ಥವಾಗಿ ಪೂರ್ವ ಸಮುದ್ರವನ್ನು ಕುರಿತು ಹೋಗಿದ್ದಾನೆ. ಒಂದು ಮುಹೂರ್ತಮಾತ್ರ ಇಲ್ಲಿರು. ಆತನು ಬರುವನು ಎಂದು ಹೇಳಲು ; ಆಗ ರಾವಣನು ಅಲ್ಲಿಗೇ ಹೋಗುವೆನೆಂದು ಹೇಳಿ ಕಿಪ್ಪಿಂಧೆಯಿಂದ ಹೊರಟು ಪೂರ್ವಸಮುದ್ರತೀರಕ್ಕೆ ಬಂದು ನೋಡಲು ; ಅಷ್ಟರೊಳಗೆ ವಾಲಿಯು ಸ್ನಾನ ಮಾಡಿ ಸಮುದ್ರತೀರದಲ್ಲಿ ಕುಳಿತು ಕಣ್ಣುಗಳನ್ನು ಮುಚ್ಚಿ ಕೊಂಡು ಮಂತ್ರ ಜಪವನ್ನು ಮಾಡುತ್ತಿದ್ದನು. ಇದೇ ಸಮಯದಲ್ಲಿ ಇವನನ್ನು ನನ್ನ ಇಪ್ಪತ್ತು ತೋಳುಗಳಿಂದಲೂ ಬಿಗಿದು ಹಿಡಿದು ಜಯಿಸಬೇಕೆಂದು ಅವನ ಹಿಂದು ಗಡೆಯಲ್ಲಿ ಅವನಿಗೆ ತಿಳಿಯದಂತೆ ಹೆಜ್ಜೆಯ ಮೇಲೆ ಹೆಜ್ಜೆಯನ್ನು ಇಡುತ್ತ ಬಂದು ತಾನು ಬರುವುದನ್ನು ಕಂಡೂ ಕಾಣದವನಂತೆ ಕುಳಿತಿರುವ ವಾಲಿಯ ಎರಡು ಕಂಕು ಳುಗಳ ಸಂದುಗಳಲ್ಲಿ ಯ ತ ಪ್ಪತ್ತು ತೋಳುಗಳನ್ನೂ ಚಾಚಲು, ಆಗ ವಾಲಿಯು ತನ್ನ ಎರಡು ಕಂಕುಳುಗಳಿಂದ ಅವನ ಇಪ್ಪತ್ತು ತೋಳುಗಳನ್ನೂ ಅಲುಗದಂತೆ ಜಪವು ಮುಗಿವ ವರೆಗೂ ಅಮುಕಿಕೊಂಡಿದ್ದು ಆ ಮೇಲೆ ಗರುಡನು ನಾಗರಹಾವನ್ನು ಕಚ್ಚಿ ಕೊಂಡು ಗಗನಾಂತರಾಳಕ್ಕೆ ಹಾರುವಂತೆ ಹಾರಿ ತೆಂಕಣಕಡಲಿಗೆ ಹೋಗಿ ಅಲ್ಲಿ ತನ್ನ ಹಿಂದುಗಡೆ ನೇತಾಡುತ್ತಿರುವ ರಾವಣನನ್ನು ಅದ್ದಿ ಅಲ್ಲಿಂದ ಪಡುವಣ ಕಡಲೆಡೆ ಗೋದಿ ಅವನನ್ನು ಅದರ ನೀರಿನಲ್ಲೂ ಅದ್ದಿ ತೆಗೆದು ಕೊಂಡು ಬಂದು ಕಿಕ್ಕಿಂಧಾಪಟ್ಟಿ ಣದ ಹೊರಗಿರುವ ಪೂದೋಟದ ಮೇಲ ಡೆಯ ಆಕಾಶದಲ್ಲಿ ನಿಂತು ಆ ವರೆಗೂ ತನ್ನ ವೇಗವನ್ನು ಸಹಿಸಲಾರದೆ ತಲೆ ತಿರುಗಿ ಕಂಗೆಟ್ಟಿರುವ ರಾವಣನನ್ನು ಕಂಕುಳೆ ಕೆಡವಿಬಿಟ್ಟು ತನ್ನ ಅಂತಃಪುರಕ್ಕೆ ಹೋಗಿ ಭೋಜನಾದಿಗಳನ್ನು ಮುಗಿಸಿಕೊಂಡು ತನ್ನ ಸಕಲಪರಿವಾರ ಸಮೇತನಾಗಿ ರಾವಣನು ಬಿದ್ದಿರುವ ಸ್ಥಳಕ್ಕೆ ಬರಲು ; ಬಹು ದೂರ ಪತನದಿಂದುಂಟಾದ ಮಹಾಘಾತದಿಂದ ಬಹುಮರ್ಛಯನ್ನು ಹೊಂದಿದ್ದು ಆಗತಾನೆ ಸ್ವಲ್ಪ ಚೇತರಿಸಿಕೊಂಡಿದ್ದ ರಾವಣನನ್ನು ನೋಡಿ ಕಾಣದವನಂತೆ.ಇದೇ ನೈಯ್ಯಾ ರಾಕ್ಷಸರಾಜನೇ, ಪರಿವಾರಜನರೊಬ್ಬರೂ ಇಲ್ಲದೆ ಈ ತೋಟದಲ್ಲಿ ಈ