ಪುಟ:ಕಥಾ ಸಂಗ್ರಹ - ಭಾಗ ೨.djvu/೪೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


32 ಕಥಾಸಂಗ್ರಹ-೪ ನೆಯ ಭಾಗ ರೀತಿಯಾಗಿ ಕಂಗೆಟ್ಟು ಬಿದ್ದಿದ್ದೀಯೆ ? ನಿನಗೆ ಇಂಥ ಪರಿಭವವ ಯಾರಿಂದುಂಟಾ ಯಿತು ? ನೀನು ದಿಕ್ಕಾಲಕರನ್ನೂ ತ್ರಿಲೋಕವನ್ನೂ ಜಯಿಸಿದ ಮಹಾವೀರನಲ್ಲಾ ! ಈ ವರ್ತಮಾನವು ನನಗೆ ಸ್ವಲ್ಪ ಮಾತ್ರ ಸೂಚಿತವಾಗಿದ್ದರೆ ನಾನು ಕೂಡಲೆ ಒಂದು ನನ್ನಿಂದ ಆದಮಟ್ಟಿಗೆ ನಿನಗೆ ಸಹಾಯವನ್ನು ಕೊಡುತ್ತಿದ್ದೆನಲ್ಲಾ! ನೀನು ಹಾಗೆ ತಿಳಿಸದೇ ಹೋದುದು ತಪ್ಪಲ್ಲ ವೇ ? ಎಂದು ಹಾಸ್ಯಗರ್ಭಿತವಾಗಿ ಮಾತಾಡಲು ; ರಾವಣನು ಈ ಮಾತುಗಳನ್ನು ಕೇಳಿ ನಾಚಿ ತಲೆವಾಗಿ--ಎಲೈ ಮಹಾಶೂರನೇ, ಲೋಕದಲ್ಲಿ ಪರಾಕ್ರಮದಲ್ಲೂ ವೇಗದಲ್ಲೂ ಶಕ್ತಿಯಲ್ಲೂ ನಿನಗೆ ಸಮಾನರಾದವ ರನ್ನು ಕಾಣೆನು, ನಾನು ನಿನ್ನಿಂದ ಪರಾಜಿತನಾದೆನು. ಇಂಥ ಶೂರಾಗ್ರೇಸರನಾದ ನಿನ್ನೊಡನೆ ಸ್ನೇಹವನ್ನು ಅಪೇಕ್ಷಿಸುವೆನು ಎಂದು ಕೇಳಿಕೊಳ್ಳಲು ; ವಾಲಿಯು ಅವನನ್ನು ತನ್ನ ಅರಮನೆಗೆ ಕರೆದು ಕೊಂಡು ಹೋಗಿ ಅಗ್ನಿ ಸಾಕ್ಷಿ ಯಾಗಿ ಸ್ನೇಹವನ್ನು ಮಾಡಿಕೊಂಡು ಒಂದು ತಿಂಗಳ ವರೆಗೂ ತನ್ನ ಮನೆಯಲ್ಲೇ ಇಟ್ಟು ಕೊಂಡಿದ್ದು ಬಹು ಮಾನಗಳನ್ನು ಮಾಡಿ ಲ೦ಕಾಪಟ್ಟಣಕ್ಕೆ ಕಳುಹಿಸಿಕೊಡಲು ; ರಾವಣನು ಲಂಕೆಗೆ ಬಂದು ಸುಖದಿಂದಿದ್ದನು. 2, RAMA'S BIRTH MARRIAGB, AND BANISHMENT TO THE WOREST. ೨, ಶ್ರೀ ರಾಮನ ಜನನ ವಿವಾಹ ವನವಾಸ ಇವುಗಳ ಕಥೆ ಬ್ರಹ್ಮ ನಿಂದ ವರವನ್ನು ಹೊಂದಿ ಮಹಾಗರ್ವಿತನಾಗಿ ಅಪಮಾನಗಳಿಗೆ ಹೇಸದೆ ಇಂದ್ರಾದಿ ಲೋಕಪಾಲಕರನ್ನೂ ಸ್ವರ್ಗ ಮರ್ತ್ಯ ಪಾತಾಳಗಳೆಂಬ ಲೋಕತ್ರಯ ವನ್ನೂ ಜಯಿಸಿ ಪರಭೀಕರನಾಗಿ ರಾಕ್ಷಸಚಕ್ರವರ್ತಿತ್ವವನ್ನು ಹೊಂದಿ ಲಂಕಾನಗ ರದಲ್ಲಿ ವಾಸಮಾಡಿಕೊಂಡಿದ್ದ ರಾವಣನು ಋಷಿಗಳು ಮಾಡುವ ತಪೋಯಜ್ಞಗಳನ್ನು ಕೆಡಿಸುತ್ತ ಸುಜನರನ್ನು ಬಾಧಿಸಿ ಬಡಿದಿಡುತ್ತ ಲೋಕಕಂಟಕನಾಗಿರಲು ; ಇಂದ್ರಾದಿ ಸಕಲ ದೇವತೆಗಳೂ ಅವನ ಬಾಧೆಯನ್ನು ತಡೆಯಲಾರದೆ ಸತ್ಯಲೋಕಕ್ಕೆ ಹೋಗಿ ಚತುರ್ಮುಖಬ್ರಹ್ಮನೊಡನೆ ಲೋಕಗಳಿಗೂ ತಮಗೂ ರಾವಣನಿಂದುಂಟಾಗುತ್ತಿರುವ ಮಹಾಹಿಂಸೆಯನ್ನು ಹೇಳಿಕೊಂಡು ಪ್ರಲಾಪಿಸಲು ; ಆಗ ಬ್ರಹ್ಮನು ದಯೆಯಿಂದ ಕೂಡಿದವನಾಗಿ ಆ ದೇವತೆಗಳನ್ನು ಕರೆದುಕೊಂಡು ಹೊರಟು ಇಂಗಡಲೆಡೆಗೈತಂದು ವಿಷ್ಣು ವಿನೊಡನೆ ಕೂರನಾದ ರಾವಣನ ಉಪದ್ರವವನ್ನೂ ದೌಷ್ಟವನ್ನೂ ಹೇಳಿ ಕೊಳ್ಳಲು ; ಆಗ ವಿಷ್ಣು ವು-ಎಲೈ ಕಮಲಸಂಭವನೇ, ನಾನು ಇನ್ನು ಕೆಲದಿನಗಳಿಗೆ ಭೂಲೋಕದಲ್ಲಿ ಅವತರಿಸಿ ಜನಹಿಂಸಕರಾದ ರಾವಣಾದಿ ರಾಕ್ಷಸರನ್ನು ಸಂಹರಿಸು ವೆನು, ಆ ವರೆಗೂ ನೀವೆಲ್ಲರೂ ಬಾಧೆಯನ್ನು ಸಹಿಸಿಕೊಂಡಿರಬೇಕೆಂದು ಅಭಯವಚ ನವನ್ನು ಹೇಳಲು ; ಆಗ ಅವರೆಲ್ಲರೂ ಸಂತುಷ್ಟರಾಗಿ ತಮ್ಮ ತಮ್ಮ ವಾಸಸ್ಥಾನ ಗಳಿಗೆ ಬಂದು ರಾವಣವಿನಾಶಕಾಲವನ್ನೇ ಸಂಕಲ್ಪಿಸುತ್ತಿದ್ದರು.