ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥೆ 33 ಇತ್ತ ಭೂಲೋಕದಲ್ಲಿ ಅಯೋಧ್ಯಾನಗರಾಧಿಪತಿಯಾದ ದಶರಥರಾಜನು ಬಹಳ ದಿವಸಗಳ ವರೆಗೂ ತನಗೆ ಪುತ್ರ ಸಂತಾನವಿಲ್ಲದೆ ಹೋದುದರಿಂದ ಬಹಳ ವ್ಯಸ ನಾಕ್ರಾಂತನಾಗಿದ್ದು ಕಡೆಗೆ ಋಷಿಗಳ ಉಪದೇಶದಿಂದ ಪತ್ರಕಾಮೇಷ್ಟಿಯಾಗವನ್ನು ಮಾಡಿ ಅದರ ಪರಿಶುದ್ಧವಾದ ಪ್ರಸಾದವನ್ನು ತನ್ನ ಮೂರು ಜನ ಪತ್ನಿಯರಿಗೂ ಕೊಡಲು; ಆಗ ಮೊದಲೇ ದುಷ್ಟಶಿಕ್ಷಾರ್ಥವಾಗಿ ಭೂಲೋಕದಲ್ಲಿ ಅವತರಿಸಬೇಕೆಂದಿದ್ದ ವಿಷ್ಣುವು ದಶರಥನ ಮೊದಲನೆಯ ಹೆಂಡತಿಯಾದ ಕೌಸಲ್ಯಯ ಗರ್ಭದಲ್ಲಿ ಅರ್ಧಾಂಶ ದಿಂದ ರಾಮನೆಂದೂ ಎರಡನೆಯ ಹೆಂಡತಿಯಾದ ಸುಮಿತ್ರೆಯ ಗರ್ಭದಲ್ಲಿ ಪಾದಾಂಶ ದಿಂದ ಅವಳಿಮಕ್ಕಳಾಗಿ ಲಕ್ಷ್ಮಣ ಶತ್ರುಘ್ನರೆಂದೂ ಕಿರಿಯ ಹೆಂಡತಿಯಾದ ಕೈಕೇಯಿ ಯ ಗರ್ಭದಲ್ಲಿ ಪಾದಾಂಶದಿಂದ ಭರತನೆಂದೂ ಅವತರಿಸಲು ; ಆಗ ದಿಕ್ಕುಗಳೆಲ್ಲವೂ ಶೋಭಿಸಿದುವು. ಕೆರೆ ತೊರೆ ಮೊದಲಾದುವುಗಳ ಜಲಗಳು ತಿಳಿಯಾದುವು. ಮಂದ ಮಾರುತವು ತೀಡಿತು. ಇತ್ಯಾದಿಶುಭಶಕುನಗಳು ಭೂಲೋಕದಲ್ಲಿ ಉಂಟಾದುವು. ಅನಂತರದಲ್ಲಿ ದಶರಥಮಹಾರಾಜನು ಪುತ್ರಸಂಪತ್ತನ್ನು ಹೊಂದಿ ಅಮ೦ದಾನಂದ ಸಂದೋಹಭರಿತನಾಗಿ ಮಕ್ಕಳಿಗೆ ಜಾತಕರ್ಮಾದಿಗಳನ್ನು ಮಾಡಿಸಿ ಕ್ರಮೇಣ ವೃದ್ಧಿ ಹೊಂದುತ್ತಿರುವ ಮಕ್ಕಳಿಗೆ ಚೌಲೋಪನಯನಗಳನ್ನು ಮಾಡಿಸಿ ವಿವಿಧವಿದ್ಯಾಭ್ಯಾಸ ಗಳನ್ನು ಮಾಡಿಸುತ್ತಿದ್ದನು, ಆ ಮೇಲೆ ಕೆಲದಿನಗಳೊಳಗೆ ನಾಲ್ಕು ಜನ ಕುಮಾರರೂ ಎಲ್ಲಾ ವಿದ್ಯೆಗಳಲ್ಲಿಯ ಪೂರ್ಣಪಾಂಡಿತ್ಯವನ್ನು ಹೊಂದಿ ಶೋಭಿಸುತ್ತಿರಲು ; ವಿಶ್ವಾ ಮಿತ್ರ ಮಹಾಮುನಿಯು ಯಜ್ಞವನ್ನು ಮಾಡುವುದಕ್ಕೆ ಮನಸ್ಸುಳ್ಳವನಾಗಿದ್ದರೂ ವಿಫ್ಟ್ ಕಾರಿಗಳಾದ ರಾಕ್ಷಸರ ಭಯಶಂಕಿತನಾಗಿ ದಶರಥನ ಬಳಿಗೆ ಬಂದು ಸತ್ತ ನಾಗಿ ತಾನು ಮಾಡುವ ಯಜ್ಞವನ್ನೂ ಅದಕ್ಕಿರುವ ರಾಕ್ಷಸರ ವಿಪ್ಪವನ್ನೂ ನಿಶಾ ಚರಭಯನಿವಾರಣಾರ್ಥವಾಗಿ ಶ್ರೀರಾಮನನ್ನು ಕಳುಹಿಸಿಕೊಡಬೇಕೆಂದು ಹೇಳಿ ದನು, ಆಗ ದಶರಥನು ಪುತ್ರನನ್ನು ಅಗಲಿರಲಾರದುದರಿಂದಲೂ ಇನ್ನೂ ಬಾಲಕನಾ ದುದರಿಂದ ಕೂರರಾದ ರಾಕ್ಷಸರೊಡನೆ ಯುದ್ಧ ಮಾಡಲಾರನೆಂಬ ಯೋಚನೆಯಿಂ ದಲೂ ಕಳುಹಿಸುವುದಕ್ಕೆ ಭಯಪಟ್ಟು ಒಪ್ಪದಿರಲು ; ಆಗ ತನ್ನ ಮಂತ್ರಿಯೇ ಮೊದ ಲಾದವರಿಂದ ಹೇಳಲ್ಪಟ್ಟಿವನಾಗಿ ರಾಮನನ್ನೂ ಲಕ್ಷ್ಮಣನನ್ನೂ ವಿಶ್ವಾಮಿತ್ರರ್ಷಿಯ ಸಂಗಡ ಕಳುಹಿಸಿಕೊಟ್ಟನು. ಈಗ ಪರಮಸಂತೋಷಭರಿತನಾದ ವಿಶ್ವಾಮಿತ್ರಮುನಿಯು ರಾಮನನ್ನೂ ಲಕ್ಷ್ಮಣನನ್ನೂ ಜತೆಯಲ್ಲಿ ಕರೆದುಕೊಂಡು ಬರುತ್ತೆ ಮಾರ್ಗದಲ್ಲಿ ವಿವಿಧ ದೇಶಗ ಳನ್ನೂ ವನಗಳನ್ನೂ ತೋರಿಸಿ ಅವುಗಳ ಚರಿತ್ರೆಗಳನ್ನು ಹೇಳುತ್ತ ಮಾರ್ಗಾಯಾಸವಿ ಲ್ಲದಂತೆ ಬರುತ್ತಿದ್ದನು, ಮತ್ತು ಶ್ರೀ ರಾಮನು ಮಾರ್ಗದಲ್ಲಿ ಬರುವ ರಾಕ್ಷಸರನ್ನು ಕೊಲ್ಲುತ ಕಡೆಗೆ ಮುನಿಯ ಅಪ್ಪಣೆಯಿಂದ ತಾಟಕೆ ಎಂಬ ನಿಶಾಚರಿಯನ್ನು ಕೊಂದು ಲೋಕೋಪಕಾರವನ್ನು ಮಾಡಿದನು. ಅನಂತರದಲ್ಲಿ ವಿಶ್ವಾಮಿತ್ರಮುನಿಯು ಕೃತ್ರಿಯಬಾಲಕರೊಡನೆ ತನ್ನ ಆಶ್ರಮಕ್ಕೆ ಬಂದು ಅವರನ್ನು ಉಪಚರಿಸಿ ಕೂಡಲೆ - ಯಜ್ಞಾರಂಭವನ್ನು ಮಾಡಲು ; ಅದನ್ನು ಕೆಡಿಸುವುದಕ್ಕಾಗಿ ರಾಕ್ಷಸರು ಬರಲು
ಪುಟ:ಕಥಾ ಸಂಗ್ರಹ - ಭಾಗ ೨.djvu/೪೩
ಗೋಚರ