ಪುಟ:ಕನ್ನಡದ ಬಾವುಟ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೫ ನಿನ್ನ , ಪಡೆಯ ಕತೆಯ ಕಡೆಯ ನುಡಿಯೆ ತಾಳಿಕೋಟೆಯು ? ಕಡಲಿನೊರತೆಗೊಳವೆ ಕೊರತೆ ? ಬತ್ತದು ನಿನ್ನೂ ಟೆಯು ! ಸೋಲ ಗೆಲ್ಲ ವಾರಿಗಿಲ್ಲ ? ಸೋತು ನೀನೆ ಗೆದ್ದೆ ಯಲ್ಲ ? ನಿನ್ನ ನಳಿವು ತಟ್ಟಲೊಲ್ಲ ! ತಾಳಿಕೋಟಿ ಸಾಸಿರಂ ಬಾಹುಬಲದಿ ಮನೋಬಲದಿ ತಾಯೆ ಗೆಲುವೆ ಭಾಸುರಂ! ಕುಗ್ಗದಂತೆ ಹಿಗ್ಗಿಪಂತೆ ನಿನ್ನ ಹೆಸರ ಟಕ್ಕೆಯಂ, ನೀಗದಂತೆ ಸಾಗಿಪಂತೆ ನಿನ್ನ ನುಡಿಯ ಢಕ್ಕೆಯಂ, ನಮ್ಮೆದೆಯಂ ತಾಯೆ ಬಲಿಸು, ಎಲ್ಲರ ಬಾಯಲ್ಲಿ ನೆಲಸು, ನಮ್ಮ ಮನಮನೊಂದೆ ಕಲಸು ! ಇದನೊಂದನೆ ಕೋರುವೆನಿನ್ನ ಮೂರ್ತಿ ಜಗತ್ತೀರ್ತಿ ಎಂದಿಗೆಮಗೆ ತೋರುವೆ ? ಮಂ. ಗೋವಿಂದ ಪೈ ೧೧. ತುಳುನಾಡ ರಾಣಿ ಕೊಡಲಿ ರಾಮನ ಸಿಡಿಲಿಗಳುಕಿ ಹಿಂದೋಡಿ ಕಡಲಾರೆ, - ನೀನಲೆಗಳನ್ನೊಡೆದು ಮೂಡಿ,ಪಡೆದ ಶಾಸನವಾದೆ ತುಳುನಾಡ ರಾಣಿ ! ಬೆಡಗಿಂದ ಧರೆಗಾದೆ ಕೊರಳ ಕಟ್ಟಾಣಿ ! ಗಟ್ಟಗಳ ಮೆಟ್ಟಲಿನ ಅಟ್ಟಳಿಗೆ ಏರಿ, ಸಾಟಿ ಇರದೊಡೋಲಗದ ಸೊಬಗು ಮಾರಿ, ಅಟ್ಟಹಾಸದ ಕಡಲು ಕಾಲ್ ತೊಳೆಯುತಿರಲು, ಒಟ್ಟಿರಿಸಿದಾ ಪುಣ್ಯ ರಜ ಎನಿಸೆ ಮಳಲು - ಮಳೆ ಮುಗಿಲ ವೇಣಿಯಲಿ, ಮಳೆಬಿಲ್ಲ ಹಾರಂ, ತಿಳಿಯ ಬೆಳದಿಂಗಳಿನ ಕವಚ ಸಿಂಗಾರಂ, ಹೋಲದ ಹಸುರುಡಿಗೆ, ನೇತ್ರಾವತಿಯ ಮಾಲೆ ಮಲೆಗಾಳಿಸಾರುತಿಹುದಿಂತು ತವಲೀಲೆ. ದುಡುಕಿದಾ ಸೂರೆಗರ ಹಾವಳಿಗೆ ನೊಂದೆ ! ಕಡಲಣುಗೆ! ಬಡವಾದೆ ಕಾವರಿತ್ತೆ೦ದೆ ! ಪಡುಗಡಲ ದಾಟಿ ಸೋದರಿಯೊದಗೆ ಮುನ್ನಾ ಕೆಡುಗಾಲ ಅಡಗಿ ಬೀಸಿತು ಶಾಂತಿ ಪವನಾ,