ಪುಟ:ಕನ್ನಡದ ಬಾವುಟ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೯ ಕೇಳಿರಿ ಕೇಳಿರಿ ಕೋಳಿಯ ಕೂಗನು ಕೇಳಿಸುವುದೆ ಬೆಳಗಿನ ಕಾಳಿ ? * ಏಳ್ಳೆ ಕನ್ನಡ ಭಾಗ್ಯ ವಿಧಾತನೆ ? ಎನುತೆ ಹಾಡುತಿಹ ವೈತಾಳಿ ; ಸುಳಿಯುತಿಹುದು ನಸುಕಿನ ಗಾಳಿ ; ಅಲಸಿಕೆಯುಳಿದೆಲ್ಲರು ಏಳಿ ! ಆನಂದಕಂದ ( ಕೃಷ್ಣಶರ್ಮ ಬೆಟಗೇರಿ)

  • ೧೫, ನಾಡಿನ ಹಾಡು ತಾರೆಗಳು ಮೇಳವಿಸಿ ಬಂದು ಬಿಟ್ಟಿಹ ಬೀಡು ನಮ್ಮ ಕನ್ನಡದ ನಾಡು ತಾರೆಗಳ ಒಡಹುಟ್ಟು, ತಾರೆಗಳ ಒಡನಾಡಿ, ನಮ್ಮ ಕನ್ನಡದ ಹಾಡು. ಭೂಪತಿಯು ಕವಿಯಾಗಿ ಕವಿ ಚಮ್ರಪತಿಯಾಗಿ ಮೆರೆದಿರುವ ನಮ್ಮ ನಾಡು, ಪತಿಯಿಲ್ಲದವಳಂತೆ ಗತಿಯಿಲ್ಲದಾಗಿಹುದು, ಹೀನವಾಗಿಹುದು ನೋಡು ! ಧವಲಗಿರಿ ಗಂಗೆಯನು ಆಮಂತ್ರಿಸಲು ನಡೆದ ನಮ್ಮ ಕನ್ನಡದ ತಾಯಿ ಕಳೆದುಕೊಂಡಿಹಳಿ೦ದು ಕೃಷ್ಣಗಿಹ ಸೌಹಾರ್ದವನ್ನು ಸಹ, ಇಲ್ಲ ಬಾಯಿ ! ಸಾಮ್ರಾಜ್ಯಗಳನಾಳಿ ಮೆಯ್ಯುಂಡ ಕನ್ನ ಡರು ಹೆಸರಾದ ಸಾಹಸಿಗರುಕೊಳೆಯುತಿ ಹರಿನೋ ! ಅಲ್ಲಲ್ಲಿ ಈಗಾಗಿ ಹೊರಮನೆಯ ಬಾಣಸಿಗರು ! ಸುಲಿದ ಹಣ್ಣಂತೆ ಮಧುಮಧುರವಾಗಿಹ ನುಡಿಯು ಸುಲಿದ ಹೆಣ್ಣಿಹುದು ನೋಡು ಸಲಿಗೆಯನು ಬೆಳೆಸುತ್ತ ಸುಲಿಗೆಯನು ಮಾಡಿದರು ಕನ್ನ ಡಕೆ ಬಂತು ಕೇಡು ! ಗ್ರೀಷ್ಮ ಕಿಹ ಮು೦ಬೆಳಗು ಸಹ ತೋರುತಿಹುದೀಗ ಮುಂಗಾರ ಸಂಜೆಯಂತೆ. ಭೀಷ್ಮರಂತಹ ಸುತರ ತಾಯಿ ಚಿಂತೆಯಲಿಹಳು ವಿಧವೆಯಿಹ ಬಂಜೆಯಂತೆ. ಚಿಂತೆಯಾ ಬೆಂತರವು ಬೇಡವ್ವ ನಾಯಿ ! ಈ ನಿನ್ನ ಅಧರದಲ್ಲಿ, ಮುತ್ತೊ೦ದು ಕಾಣುವುದು ದೇವನಿಹುದಿಂದು ಮತ್ತೆ ನಿನ್ನು ದರದಲ್ಲಿ. ಬೆಳಗುವುದು ಹೊಸಹುಟ್ಟು, ಬರಲಿಹನು ಸುಕುಮಾರ, ಬರಲಿಹನು

ಪರಮಪುರುಷ ! ಪುಲಕೇಶಿ ಮಾಧವರ ಬರವಿನ೦ತಾದೀತು ಮತ್ತಿನ್ನು ನಿನ್ನ ಹರುಷ ! ಅವನೊಂದು ಹೆಜ್ಜೆಯದು ಬಿಟ್ಟೆ, ಪದ ಸಂಪದವು, ಇನ್ನೊಂದು ಮುಕ್ತಿ ಪದವು ! ಒಂದಡಿಯು ಬಿಡುಗಡೆಯು, ಇನ್ನೊಂದು ಹತ್ತುಗಡೆ - ಇಂತಿಹುದು ಅವನ ಒದವು ! * ಕಣ್ ಕಾಮನ ರಕ್ಷಿ, ಬೆನೈ ಭೀಮನ ರಕ್ಷಿ, ಮುಂಗೈ ಮುರಾರಿ ರಕ್ಷಿಸಿ ಎಂದು ಸಂತಸವುಕ್ಕಿ ಒರೆಯುತಿದೆ ಹಾಲಕ್ಕಿ, ಹೇಳುವೆನು ನಿನ್ನ ಸಾಕ್ಷಿ!