ಪುಟ:ಕನ್ನಡದ ಬಾವುಟ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೦ ನಿನ್ನ ಬೇಸರ ಬೇನೆ ಬಲು ಹಿರಿದು ನಾಯಿ ! ಪಡೆವ ಫಲವದಕು ಹಿರಿದು. ಬಾಳೋಣ ಏಳಿನ್ನು ! ಅರಸಾಗಿ ಆಳೋಣ ! ಮನೆಮುರುಕರನ್ನು ಮುರಿದು ! ನಿನ್ನ ನಗೆಯೇ ಬೆಳ್ಳಿ, ನಿನ್ನ ಮೊಗ ಚಂದ್ರಮನು, ನಿನ್ನ ಮಗ ಸೂರ್ಯನಿರಲಿ ! ನಿನ್ನವರನುದ್ಧರಿಸಿ ಮನುವಂಶವನು ಹರಿಸಿ ಬೆಳಗುತಿಹ ಆರ್ಯನಿರಲಿ ! ವಿನಾಯಕ (ಸಿ. ಕೆ. ಗೋಕಾಕ್) - - ೧೬. ಕಾರ್ಗಾಲದ ವೈಭವ ಪಡುವಣತೀರದ ಕನ್ನಡ ನಾಡಿನ ಕಾರ್ಗಾಲದ ವೈಭವವೇನು ? ಚೆಲ್ಲಿದರನಿತೂ ತೀರದ ನೀರಿನ ಜಡದೇಹದ ಕರ್ಮುಗಿಲೇನು ? ಕೆರೆಗಳನುಕ್ಕಿಸಿ ತೊರೆಗಳ ಸೊಕ್ಕಿಸಿ ಗುಡ್ಡವ ಬೆಟ್ಟವ ಕೊರೆ ಕೊರೆದು ಕಡಲಿನ ತೆರೆಗಳ ರಿಂಗಣ ಗುಣಿಯುಸಿ ಮೊರೆ ಮೊರೆವುದದೊ ಸರಿ ಸುರಿದು. ಕುದುರೆಮೊಗದ ಕಡಿ ವಾಣದ ತೆರದಲಿ | ಮಿಂಚುಗಳವು ಥಳಥಳಿಸುವುವ. ಗೊರಸಿನ ಘಟ್ಟನೆ ಯಂತಿರೆ ಥಟ್ಟನೆ ಗುಡುಗುಗಳವು ಗುಡುಗಾಡಿಸುವ. ಆವೇಶದ ವೇ ಷವ ಬಿರುಸುಟ್ಟುರೆ ಊರೂರಲಿ ಹಾರೋಡುವುದು ಮರಗಳ ಕೀಳುತ ಬಂಡೆಯ ಹೋಳುತ ಜಗಜಟ್ಟ ಯ ತೆರನಾಡುವುದು.