ಪುಟ:ಕನ್ನಡದ ಬಾವುಟ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೨ ರಾಜನಿಷ್ಠೆ ಯಲಿ ಭಕ್ತಿಯಲಿ ವಿನಯದಲಿ ಸರಿದೊರೆಯಿಲ್ಲಿವರಿಗೆ ಸಾಮಂತರೋಳಿಯಲಿ ಕವಿ ಗಮಕಿ ವಾಗ್ರಿಗಳ ಗಡಣದಲಿ ನೆರೆದು ಸೊಡರುಗಳ ಸಡಗರದಿ ಗುಡಿಗಳಿಟ್ಟಣದಿ ಮರೆಯುತಿದೆಯೋಲಗವು ಒಮ್ಮನದಿ ಕಲೆತಿಹರು ವಿಧ ವಿಧದ ಭಾಷೆಗಳನಾಡುತಿಹ ಜನರು | ಕನ್ನ ಡ ತೆನುಗು ಮರಾಠಿ ನುಡಿಗಳು ಬೆಳೆದಿಲ್ಲಿ' ಬಲಗೊಂಡಿರುವುವು ಬೆಂಗಾಡ ಮಂಗಳವ ಮಸಗಿದುಸ್ಮಾನಿಯಾ ವಿದ್ಯಾನಿಲಯವು ವಾಣಿಗಾಡುಂಬೊಲವು ಭಾರತದಿ ತಾಯುಡಿಗಿದುವೆ ಮಾದಲ ತವರು ಚಿತ್ರದ ಬೆಸನದು - ಹೈದರಾಬಾದು ಹೊನ್ನಿನ ಹೊಳಪದು ಹೈದರಾಬಾದು ಕಂಗಳ ಬೆಳಕದು ಹೈದರಾಬಾದು ಮಂಗಳ ರೂಪವು ಹೈದರಾಬಾದು ಉಸ್ಮಾನಲಿಯದು ಹೈದರಾಬಾದು ಎಂತೆನಿತು ಎಮ್ಮ ಪ್ರಭುವಿನ ಭಾಗ್ಯವು ! ಡಿ. ಕೆ. ಭೀಮಸೇನರಾವ್ ೧೮, ಕೊಡಗು ಕೊಡಗು ಬೆಡಗಿನ ಬೀಡು ! ಸೌಂದರ್ಯವನ್ನು ತಮಂ ಕುಡಿಯಮೇಲೆ ಕಣ್ಣ ಳಿರ! ಇದೊ ಮಂಜು ಬಿತ್ತರಿಸಿ ಕಡಲವೋಲ್ ತೋರ್ದಪುದು ಮೇಲೆಳ ಗಿರಿಸಾನುಗಳ್ ದ್ವೀಪನಿವಹವಾಗೆ ಅಡಿಯಿಂದ ಮುಡಿವರಂ ಬೆಟ್ಟು ಗಳ ನೀಳ್ ಸೆವ ಗಿಡಗಳಿಂ ಪಸುರೇರಿ ಸೌ೦ದರ್ಯದಧಿದೇವಿ ಯೆಡೆಯಾಡುವೋಳ್ಳುವೆಡೆಗಳಾಗಿತ್ತಲಿದೊ ಸೊಗಯಿಪುವು ಸೊಂಪುವೆತ್ತು ಬಿಸಿಲೆಲೆಗಳೊಳಗಿರದೆ ಸೋಸಿ ಬರ್ಪುದು ಮತ್ತೆ ಪಸುರಮೇಲ್ ನೀರಮೇಲಲೆವೆಲರ್ ಸುಳಿದಪುದು ಬಿಸುಪಳಿಯ ಬಿರ್ದಪುದೆ ? ಕೊಡಗು ತಣ್ಣೆಳಲ ತವರೂರಲೇ ತಣ್ಣಿನಿಂಬು