ಪುಟ:ಕನ್ನಡದ ಬಾವುಟ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೩ ಪೊಸತೆರದ ಬಗೆವಗೆಯ ವಿಹಗಂಗಳೆತ್ತಲು೦ ಮಿಸುಪಮೇಯ್ ಬಣದಿಂ ಮನವೊಲಿಸ ಮಾಟದಿಂ ದೆಸೆದು ನುಣ್ಣನಿಗುಡುತ ನಲಿದವುವು ಮನವಿಲ್ಲಿ ನಲ್ವಗೆಗಳೆಡೆಯಾದುದು ಪರಿವ ಕಾಳುರದ ಮೆಲ್ಲುಲಿಯಿಂದ ಬಗೆಗೊಳಿಸ ದರಿಯಿತ್ತಳುತ್ತುಂಗಶಿಖರಂಗಳಿಂದೆಸೆವ ಗಿರಿಯತ್ತಲೇಂ ಪೆಂಪೊ ! ತಂಬೆಲರ ಸೊಗಯಿಸುವ ಸೋ೦ಕಿನಿಂ ಸೊಗಮಿದೆನಿತೋ ಬಿರಿವೂಗಳಿನಿಗಂಪಿಗೆನಿತೊಂದು ತುಂಬಿಗಳೊ ಸುರಯುವತಿಯರ್ ನಲ್ಲರೊಡನಿಲ್ಲಿ ಸಾರ್ತ೦ದು ಸರಸವಾಡಲುಚಿತವಾದ ನೆಲವಿದು ಕೊಡಗು ಕರುನಾಡ ಮುದ್ದು ಗೂಸು ಚೆಲುವಿನೀ ಕಡಲೊಳಗೆ ಸಾಲಿಡಿದು ಸೊಂಪೆಸೆವ ಮಲೆಗಳಿವು ಸವಿಕಂಪ ತರುರಾಜಿಗಳಿನದೇ ನಲೆವಲೆನ ತೆರೆಗಳಂತೆಸೆದಪುವೋ ! ನವವೃಷ್ಟಿ ಯಂ ಸೃಷ್ಟಿಗೇ೦ ಕಾಂತಿಯೋ ನೆಲಮಾಗಸಂ ದಿಕ್ಕುಗಳ್ ರಾಮಣೀಯಕದ ನಿಲಯ೦ಗಳಿವನೆನಿತು ನೋಡಿದೊಡನಕ್ಷೆಗಳ ತೊಲಗಲೊಲ್ಲವು ಮನಂ ತಣಿಯದೋ ಲಾಡಿಯಾ ಸೌಂದರ್ಯ ಜಳಧಿಯಲ್ಲಿ ಬಂದೆ ನಾನಿಲ್ಲಿಗೆನ್ನ ಕರದ ತಾಯ್ಕೆ ಲದ ಚೆಂದಮಂ ನೋಡುತುಂ ಶ್ರೀನಿವಾಸನ ನಿ ಯಿಂದ ಸುಖದಿಂದೆ ಸಂಚರಿಸುತುಂ ಬಹುಕಾಲದಿಚ್ಛೆ ಕೈಗೂಡಿತಿಂದು ಎಂದು ಕಣ್ಣು೦ಬೆ ಕರುನಾಡ ಚೆಲುವ ಕಾಣೆ ನೆಂದು ಮನದೊಳಗನಿಶಮಾಗೆ ಚಿಂತಿಸುತಿರ್ದೆ ನಂದು ತಿಳಿದಿರ್ದರಾರಿಂತು ಸೊಬಗಿನ ಸುಗ್ಗಿಯದಿರೆಳಾಂ ನಿಲ್ವೆನೆಂದು ಎನ್ನ ನಾಡಂದಮಿಂತೆಂದು ಭಾವಿಸಿದೆನಿ ಇನ್ನೆಗಂ ! ಭಾವನೆಗೆ ಚೆಂದವಿದು ನಿಲುಕುವುದೆ ? ನಿನ್ನ ಸೌಂದರ್ಯವಿದು ನಿನ್ನ ಪೆರ್ಮೆಯ ಕುರುಪು ! ಕರುನಾಡೆ, ಪುಣ್ಯಭೂಮಿ ! ಇನ್ನರಿವುದರಿದು, ನಿರ್ಮಳಾಂತಃಕರಣ ರನ್ನ ತಗುಣೋದಯರ್‌ ಮಂಗಳನಿಕೇತನ ನಿನ್ನೊಡಲೊಳೆಂತುದಯಿಸಿದರೆಂದು ! ಕರುನಾಡು ದೇವರಳ್ಳರಿನ ನಾಡು ದರಿಗಳಿರ, ಗಿರಿಗಳಿರ, ಝರಿಗಳಿರ, ಮೃಗಪಕ್ಷಿ ತರುಗಳಿರ, ಪೂಗಳಿರ, ತಂಬೆಲರೆ, ಬೆಳ್ಳಂಜೆ, ನುರಗಂಗೆ, ಇಂಚರವೆ, ಬೀಳೊಳೆನ್ನೆ ! ನಮೋ ! ನಿಮ್ಮ ಸೌಹಾರ್ದಮೆನಿತೊ