ಪುಟ:ಕನ್ನಡದ ಬಾವುಟ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

oces ಹೊಡೆದಟ್ಟುತ, ಕೋಲ್ ಮಿಂಚನು ಮಿರುಗಿಸಿ, ಗುಡುಗನು ಗುಡುಗಿಸಿ, ನೆಲವನು ನಡುಗಿಸಿ, ಸಿಡಿಲನು ತಾಳೆಗೆ ಬಾಳೆಗೆ ಎರಗಿಸಿ, ಜಡಿಮಳೆ ಸುರಿವೋಲ್, ಬಿರುಮಳೆ ಬರುವೋಲ್, ಕುಡಿ ನೀರನು ಒಣಗಿದ ನೆಲ ಕೆರೆಮೋಲ್ ಬಂತೈ ಬೀಸುತ! ಬೀಸುತ ಬಂತೆ ! ತೆಂಕಣ ಗಾಳಿಯು ಕೊಂಕಣ ಸೀಮೆಗೆ ಬಂತೈ ! ಬಂತೈ ! ಬಂತೈ ! ಬಂತೈ ! ಕವಿಶಿಷ್ಯ (ಪಂಜೆ ಮಂಗೇಶರಾವ್) ೨೨. ಹಾವಿನ ಹಾಡು ನಾಗರಹಾವೆ! ಹಾವೊಳು ಹೂವೆ ! ಬಾಗಿಲ ಬಿಲದಲಿ ನಿನ್ನಯ ಠಾವೆ ? ಕೈಗಳ ಮುಗಿವೆ, ಹಾಲನ್ನಿ ವೆ ಬಾ ಬಾ ಬಾ ಬಾ ಬಾ ಬಾ ಬಾ ಬಾ ಹಳದಿಯ ಹೆಡೆಯನು ಬಿಚೊ ಬೇಗಾ ಹೊಳಹಿನ ಹೊಂದಲೆ ತೂಗೋ, ನಾಗಾ ! ಕೊಳಲನ್ನೂ ಮನೆ ಲಾಲಿಸು ರಾಗಾ २९ ९ ९ ९ ९ ९ ९ ९ । ಎಲೆ ನಾಗಣ್ಣ, ಹೇಳೆಲೊ ನಿನ್ನಾ ತಲೆಯಲಿ ರನ್ನ ವಿಹ ನಿಜವನ್ನಾ ಬಲು ಬಡವಗೆ ಕೊಪ್ಪರಿಗೆಯ ಚಿನ್ನಾ ತಾ ತಾ ತಾ ತಾ ತಾ ತಾ ತಾ ತಾ ಬರಿಮೈ ತಣ್ಣಗೆ, ಮನದಲಿ ಬಿಸಿ ಹಗೆ, ಎರಡೆಳೆ ನಾಲಗೆ ಇದ್ದರು ಸುಮ್ಮಗೆ ಎರಗುವೆ ನಿನಗೆ, ಈಗಲೆ ಹೊರಗೆ ಪೋ ಪೋ ಪೋ ಪೋ ಪೋ ಪೋ ಪೋ ಪೋ ಕವಿಶಿಷ್ಯ ( ಪಂಜೆ ಮಂಗೇಶರಾವ್)