ಪುಟ:ಕನ್ನಡದ ಬಾವುಟ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೩, ಕೊಂಬು ಅರಳು ಮಲ್ಲಿಗೆ, ಮಲ್ಲಿಗೆವಾಳು, ಮಲ್ಲಿಗೇನಹಳ್ಳಿ ; ಸಿರಸಿ, ಸಂಪಿಗೆ, ಕೂಡುಮಲ್ಲಿಗೆ, ಹುಲ್ಲೆ ಹಳ್ಳಿ, ಹರವು. ಮೇಲು ಹುಲುವತಿ, ಕೀಳು ಹುಲುವತಿ ಮಾದಲ, ಮುತ್ತೊಣಿ ; ತಾಳಕುಂಟೆ, ತಾವರೆಕೆರೆ, ಹಿಪ್ಪಲ, ಕೂದವಳ್ಳಿ, ಕೊಪ್ಪ, ಸಿರಿಯೂರು, ಸಿರಿಯಂಗಳ, ಬೆಳವಲ, ಸೊಗದವಾಣಿ, ತೆರವಿ; ಮರಳವಾಡಿ, ಮಧುಗಿರಿ, ಬನವಾಸಿ, ಅಗಳಿ, ಅಮೃತೂರು. ಬೆಳಧರ, ಬೆಳ್ಳಿಯ ಬಟ್ಟಲು, ಬೆಳವಿ, ನೆಲಮಾವು, ಹಗರಿ : ತಳುಕು, ಬೆಳುಗೊಳ, ಕಿರಿಜಾಜಿಯರು, ಬಿಳಿಗೆರೆ, ಹೆಬ್ಬಾಲೆ ; ಪೂನಾಡು, ಸಿರಿವಾಸಿ, ಸಕ್ಕರೆ, ನಿಶನ, ತಿ೦ಗಳೂರು ; ಮಾಣಿಕಧರ, ಮಂಜೇಶ್ವರ, ಕೋಗಿಲೆ, ಎಸಳೂರು, ಕಳಸ. ಏನು ಹೆಸರು ಇವು, ನಮ್ಮ ತಾತದಿರು ನಾಡೋಳಿಟ್ಟ ಹೆಸರು ; ಜೇನಸರಿಯವೊಲು ಇನಿದು, ಬಲ್ಲವರ ಹಾಡಿನವೋಲು ಮೇಲಿತು. ಕೇಳುವ ಕಿವಿ ನಲಿಯುತಲಿದೆ, ನುಡಿಯುವ ನಾಲಗೆ ನಲಿಯುತಿದೆ : ಬಾಳೆ೦ತಿರೆ ಹೆಸರಿ೦ತಾಯೆಂಬೆನೆ ಸೋಲುತಲಿದೆ ನೆನಸು. ನಾಡೊಳ೦ದೊಗೆದ ಸೊಗದರವಿಂದದ ಮಾಧುರ ಮಕರಂದ