ಪುಟ:ಕನ್ನಡದ ಬಾವುಟ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

________________ (ಪರಿಶೀಲಿಸಲಾಗಿದೆ) ೧೨೧

ಇಲ್ಲಿದ್ ತಂಗಿ ಆಗ್ ವುಟ್ಟಿದ್ದು
ಪೂವಮ್ಮಾನೆ ನಂಗೆ ಮೊದಲು !
ತಂಗಿ ವುಟ್ಟಿದ್ ದಿವಸಾಂತೇಳಿ
ಆಡ್ಡೆ ಯೆಂಗೀಸ್ ಇಡದಂಗ್ ತಾಲಿ-
ಸೂರ ಮುಳಗಿದ್ ಕಾಣೆ !
ಯೆಂಡ ಬೇಕಂತ್ ಅನ್ನೆ !
ರತ್ನ
(ಜಿ. ಪಿ. ರಾಜರತ್ನಂ)

  • ೨೯,
  • ಕುಮಾರವ್ಯಾಸ(ಕವನ)

ಕುಮಾರವ್ಯಾಸನು ಹಾಡಿದನೆಂದರೆ,
ಕಲಿಯುಗ ದ್ವಾಪರವಾಗುವುದು !
ಭಾರತ ಕಣ್ಣಲಿ ಕುಣಿವುದು ; ಮೆಯ್ಯಲಿ
ಮಿಂಚಿನ ಹೊಳೆ ತುಳುಕಾಡುವುದು !
ಆ ಕುರುಭೂಮಿಯು ತೋರುವುದು ;
ಆ ರಣರಂಗದಲಿ,
ಆ ಸಂಗ್ರಾಮದಲಿ,
ಪಟುಭಟರಾರ್ಭಟ ಕೇಳುವುದು !
ಮೈ ನವಿರೇಳುವುದು !
ಹೊಳೆಯುವ ಕೈದುಗಳಾಟದಲಿ,
ಕಲಿಗಳ ಕದನದ ಕೂಟದಲಿ,
ತಾಗುವ ಗದೆಗಳ ಸಂಘಟ್ಟಣೆಯಲಿ,
ರಥಚಕ್ರಧ್ವನಿ ಚೀತ್ಕಾರದಲಿ,
ಸಾಯ್ಯರ ಶಾಪದಲಿ,
ಬೀಳ್ವರ ತಾಪದಲಿ
ನಸುಸೋತಿರುವರ ಕೋಪದಲಿ,
ನೆರೆ ಗೆದ್ದಿಹರಾಟೋಪದಲಿ,
ಕೆನೆಯುವ ಹಯಗಳ ಹೇಷಾರವದಲಿ,
ಕಿವಿ ಬಿರಿಯುವುದು !
ಎದೆ ಮುರಿಯುವುದು !
ಬಸಿಯುವ ಮಜ್ಜೆಯ ಪಂಕದೊಳೂಡಿ

Bschandrasgr (ಚರ್ಚೆ) ೧೦:೩೯, ೧೭ ಫೆಬ್ರುವರಿ ೨೦೨೧ (UTC)