ಪುಟ:ಕನ್ನಡದ ಬಾವುಟ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

________________ ೧೨೨ (ಕುಮಾರವ್ಯಾಸ - ಕವನ)

ಚಿಮ್ಮುವ ರಕ್ತನ ಬುಗ್ಗೆ ಯ ನೋಡಿ
ಕಣ್ಣೊಡೆಯುವುದು !
  ಮೈ ನಡುಗುವುದು !

ಕೇಳಿರಿ ! ಪಾರ್ಥನ ಸಾರಥಿಯು
   ರಣ ಗೀತೆಯನು,
   ರಣ ನೀತಿಯನು,
ಬೋಧಿಸುವನು ನಿರ್ಭೀತಿಯನು !
ಕುರುರಂಗದ ಶರಶಯ್ಕೆಯಲಿ |
  ಭೀಷ್ಮನು ಮಲಗಿಹನು !
ಹೆಣಗಳ ಬಣಬೆಯ ಮಂಚದಲಿ
  ದ್ರೋಣನು ಬಿದ್ದಿಹನು !
ನೆತ್ತರವೀ೦ಟುತಲಿರುವನು ಭೀಮನು
   ಅಯ್ಯೋ, ನೋಡಲ್ಲಿ !
ರಥದಿಂದುರುಳುತಲಿರುವನು ಕರ್ಣನು,
   ಹಾ! ಹಾ! ನೋಡಿಲ್ಲಿ !
ರಣಚಂಡಿಯು ಆ ಬೆಂಕಿಯ ಮಗಳು
ಹೆಣ್ಣಿನ ರೂಪದ ಬರಸಿಡಿಲವಳು !
  ಮುಗುಳ್ಳಗೆ ಬೀರುತ ನೋಡಲ್ಲಿ
  ನಿಂತಿರುವಳು ರಣರಂಗದಲಿ
    ದ್ರೌಪದಿ ಮುಡಿಗೆದರಿ !

ವೈಶಂಪಾಯನ ಸರಸಿಯ ತೀರದಿ *
  ತೋರುವರಾರಲ್ಲಿ !
ಕೌರವದೇವನು ಸಿಡಿಲಾಗಿರುವನು
  ಭೀಮನ ಸರಿಸದಲಿ !
ವೈರಿಯ ಎದೆಯನು
  ಒಡೆಯುವ ಗದೆಯನು
ಮೇಲೆತ್ತಿರುವನು ನೋಡಲ್ಲಿ !
  ಭೀಮನು ಬಿದ್ದನೆ!
   ಕೌರವ ಗೆದ್ದನೆ!
ಮುಂದಾಗುವುದನು ಕಾಣಲ್ಲಿ !
  ಇದಾವ ನ್ಯಾಯ !
   ಏನನ್ಯಾಯ !