ಪುಟ:ಕನ್ನಡದ ಬಾವುಟ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೭ ಕನ್ನ ಡ ದೇಶದೆ ದೊಡ್ಡವರಾದಿರಿ ಕನ್ನ ಡ ವಿದ್ಯೆಯ ಗಳಿಸಿದಿರಿ ಕನ್ನಡದಿಂದಲೆ ಸಿರಿವಂತರಾದಿರಿ ಕನ್ನಡ ದೇಶದೆ ಹೆಸರಾದಿರಿ. ಅನ್ಯ ಭಾಷೆಗಳಂತೆ ಕನ್ನಡ ಭಾಷೆಗೆ ಉನ್ನತಿಕೆಯ ತರಬೇಕೆಂದು | ಹೊನ್ನು ಕೂಡಿಸಲಿಕ್ಕೆ ಬಂದಿಹನಾತನು ಮನ್ನಿಸಿ ಹಣವನು ಕೊಡಿರಮ್ಮ. ಹೊಟ್ಟೆಗಿಲ್ಲದೆ ಬಂದ ದಾಸಯ್ಯನಿವನಲ್ಲ ಕೊಟ್ಟುದ ಬಿಟ್ಟು ಹೋಗುವನಲ್ಲವು ದಿಟ್ಟಿಸಿ ದಿಟ್ಟಿಸಿ ಕೊಡಬಂದ ಕೈಗಳ ನೊಟ್ಟುಗೂಡಿಸಿ ಪದ ಕಟ್ಟು ವನು. ಚಿನ್ನದ ಕಡಗದ ಕೈಕಾಸನಿಕ್ಕಿತು ರನ್ನದುಂಗುರದ ಕೈ ಇಲ್ಲೆಂದಿತು ಹೊನ್ನ ವಂಕಿಯ ಕೈ ಸುಮ್ಮನೆ ಕುಳಿತಿತು ಇನ್ನೊಂದು ಬಳೆಗೈ ಹಣಕೊಟ್ಟಿತು. ಕೊಟ್ಟರೆ ಹಿಗ್ಗುವ ಕೊಡದಿರೆ ಕುಗ್ಗುವ ಕೆಟ್ಟ ಮನದ ಗುರುತಿನಗಿಲ್ಲವು ಕೊಟ್ಟ ಕಾಸುಗಳೆಲ್ಲ ಹೆಡಿಗೆ ತುಂಬುವ ಹೊನ್ನು ಇಟ್ಟಂಥ ನಿಧಿ ಕೊಡದಿಹ ದ್ರವ್ಯವು. ಕಾಸಿಗಲ್ಲವು ನಿಮ್ಮ ಸೋಸಿಗೆ ಬೆಲೆಯಿದೆ ಕಾಸಲ್ಲವೇ ಕೋಟಿಯ ಮೂಲವು ಈ ಶಾಸ್ತ್ರವ ಶಾಂತವಿಟ್ಟಲನೋಳ್ ಕಲಿತನು ಸಾಸಿರವಿದರಂತೆ ತಂದಿಹನು. ೩೫. ತರುಣರ ದಸರೆ ಹೆಜ್ಜೆಯ ಹಾಕುತ ಬನ್ನಿರಿ ಮುಂದೆ ನೋಡಲು ದಸರೆಯ ಹಬ್ಬವನು ಉತ್ಸಾಹದ ಕಿರುಗೆಜ್ಜೆ ಯ ಕಟ್ಟಿ ಹಾಡಿರಿ ನಾಡಿನ ಕಬ್ಬವನು. - ಹಬ್ಬಗಳೆಲ್ಲಾ ದಸರೆಯ ಹಬ್ಬ ;